ರೊವಿನೇಮಿಯದಲ್ಲಿ ಸಾಂಟಾಕ್ಲಾಸ್ ಸಹವಾಸ
ಇಲ್ಲಿಂದ ಹಿರಿಯರು ಪೋಸ್ಟ್ ಮಾಡಿದ ಅಂಚೆ 2022ರ ಕ್ರಿಸ್ಮಸ್ ಹೊತ್ತಿಗೆ ಮಕ್ಕಳನ್ನು ತಲುಪುತ್ತೆ. ಆ ರೀತಿಯ ವ್ಯವಸ್ಥೆ ಇದೆ. ಎಲ್ಲ ಸ್ಟ್ಯಾಂಪ್ ಮೇಲೂ ಸಾಂಟಾ ಕ್ಲಾಸ್ ಇರುತ್ತಾನೆ. ನಾವು ಸಹ ಪೋಸ್ಟ್ ಕಾರ್ಡ್ ಪಡೆದು ನಮ್ಮ ಮನೆಗಳಿಗೆ ಪೋಸ್ಟ್ ಮಾಡಿದೆವು. ಇಲ್ಲಿಯ ಮತ್ತೊಂದು ವಿಶೇಷ ಎಂದರೆ ಪ್ರಪಂಚದಾದ್ಯಂತ ಮಕ್ಕಳು ಸಾಂಟಾ ಕ್ಲಾಸಿಗೆ ಕಳಿಸುವ ಅರಿಕೆಯ ಪತ್ರಗಳು ಇಲ್ಲಿ ಬಂದು ತಲುಪುತ್ತವೆ. ವರ್ಷಕ್ಕೆ ಸುಮಾರು ಐವತ್ತು ಲಕ್ಷ ಪತ್ರಗಳು! ಹಾಗಾಗಿ ರೊವಿನೇಮಿಯ ಸಾಂಟಾ ಕ್ಲಾಸ್ ವಿಲೇಜ್ ಕ್ರಿಸ್ಮಸ್ ತಾತನ ಅಧಿಕೃತ ಸ್ಥಳವಾಗಿದೆ.
ಶಿವನೆನ್ನಿ…. ಶಂಕರನೆನ್ನಿ.. ಎಲ್ಲವೂ ಅವನೇ!
ಶಿವ ಪಾರ್ವತಿಯರು ಸಪ್ತಪದಿ ತುಳಿದುದರ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಅದೇ ಅಗ್ನಿಯನ್ನು ಅಂದಿನಿಂದ ಈ ಘಳಿಗೆಯವರೆಗೂ ಆರದಂತೆ ಕಾಯುತ್ತಿರುವ ಭಕ್ತರ ನಂಬಿಕೆ ಮತ್ತು ಕೈಂಕರ್ಯಗಳು ಹಾಗು ಅಲ್ಲಿ ಆವರಿಸಿಕೊಂಡಿದ್ದ ಮುಡಿವಾಳದ ಘಮ. ಅಲ್ಲಿಂದ ಮುಖ ಮಾಡಿದ್ದೆ ಕೇದಾರನಾಥನ ತಪ್ಪಲಿಗೆ. ಕಪರ್ದಿಯ ದರ್ಶನಕ್ಕೆ ಮೊದಲು ಭಕ್ತರನ್ನು ಮೀಯಿಸಿ ಶುಚಿಗೊಳಿಸುವ ಬಿಸಿನೀರಿನ ಬುಗ್ಗೆಯ ಗೌರಿಕುಂಡ ಈ ತಪ್ಪಲಿಗೆ ಆತುಕೊಂಡಿದೆ. ರಸ್ತೆ ಯಾನ ಕೊನೆಯಾಗುವುದು ಇಲ್ಲೇ.
ಕೊಹಿಮಾದ ಟೆನ್ನಿಸ್ ಕೋರ್ಟ್ ನಲ್ಲಿ ಕಳೆದು ಹೋದವರ ಸ್ಮರಿಸುತ್ತ…
ನಾಗಾಲ್ಯಾಂಡ್ ಚಿಕ್ಕ ರಾಜ್ಯವದರೂ ಬಹು ವೈವಿದ್ಯಮಯ ನಾಡು. ಸುಮಾರು ೧೬ ವಿವಿಧ ಜನಾಂಗಗಳಿರುವ ಈ ರಾಜ್ಯದಲ್ಲಿ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಇಂಗ್ಲಿಷನ್ನು ಆಡಳಿತ ಭಾಷೆಯನ್ನಾಗಿ ಬಳಸುತ್ತಾರೆ. ನಾಗಾ ಜನಾಂಗಗಳ ಜೀವನ-ಸಂಸ್ಕೃತಿ ವರ್ಣ ರಂಜಿತ. ಅವರ ಉಡುಗೆ ತೊಡುಗೆಯಿಂದ ಹಿಡಿದು ಊಟದವರೆಗೂ ವಿಶಿಷ್ಟತೆ ಎದ್ದು ಕಾಣುತ್ತದೆ. ಬಹಳ ಜನ ನಾಗಾ ಗಳು ನಾಯಿ ತಿನ್ನುತ್ತಾರೆ. ಅರುಣಾಚಲದಲ್ಲಿ ಇಲಿ ತಿನ್ನುತ್ತಾರೆ ಎಂದು ಈಶಾನ್ಯ ರಾಜ್ಯದ ಜನರನ್ನು ಅಣಕಿಸುತ್ತಾರೆ. ಅದು ಶತಮಾನಗಳಿಂದ ಬೆಳೆದು ಬಂದ ಆಹಾರ ಪದ್ಧತಿ.
ಲ್ಯಾಪ್ಲ್ಯಾಂಡ್ ಕನಸು ನನಸಾದ ಕ್ಷಣಗಳ ಸುತ್ತ
ಇಷ್ಟೆಲ್ಲಾ ಬಟ್ಟೆ ಧರಿಸಿಕೊಂಡು ತಯಾರಾಗುವುದೇ ದೊಡ್ಡ ಸಾಹಸ. ಕೈ ಕಾಲುಗಳ ಸಲೀಸಾದ ಚಲನೆ ಇಲ್ಲದಂತಾಗಿ, ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವ ಭಾವನೆ. ತಯಾರಾಗಲು ಒಂದರ್ಧ ಘಂಟೆ ಹಿಡಿಯುತ್ತಿತ್ತು. ಮನೆಯ ಒಳಗೆ ಹೀಟರ್ ವ್ಯವಸ್ಥೆ ಇರುವುದರಿಂದ ಇಷ್ಟೆಲ್ಲಾ ತಯಾರಾಗುವ ಒಳಗೆ ಮೈ ಎಲ್ಲಾ ಬೆವರಲು ಶುರು. ಹೊರಗೆ ಕೊರೆಯುವ ಚಳಿ. ನನ್ನಷ್ಟೇ ಭಾರದ ಉಡುಗೆ ತೊಡುಗೆ ತೊಟ್ಟು ಹೊರ ನಡೆದರೆ ಎಲ್ಲೆಲ್ಲೂ ಹಿಮ. ಈ ರೀತಿ ತಯಾರಾಗಿದ್ದರೂ, ಆ ದಿನದ ಸುತ್ತಾಟ ಮುಗಿಯುವ ಹೊತ್ತಿಗೆ ಕಾಲು ಬೆರಳುಗಳು ಮರಗಟ್ಟಿ ಹೋಗಿರುತ್ತಿದ್ದವು.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್ ಪ್ರವಾಸದ ಮತ್ತಷ್ಟು ಅನುಭವಗಳನ್ನು…
ಒಬರಮೆರ್ಗಾವ್ ನಗರದಲ್ಲಿ ‘ಸಾತ್ವಿಕತೆ’ಯ ವ್ಯಾಖ್ಯಾನ
ಮೇರಿ ಮಾತೆಯ ಪಾತ್ರದಲ್ಲಿ ನಟಿಸಲು ಆಯ್ಕೆಯಾಗ ಬೇಕಾದರೆ ಆಕೆ ಕನ್ಯೆಯಾಗಿರಬೇಕು. ಗಂಡುಗಳ ಸ್ನೇಹ ಬೆಳೆಸದೆ, ಹೆಚ್ಚಿನ ಗೆಳತಿಯರೊಡನೆ ಸೇರದೆ, ನಾಟಕ ಸಿನೆಮಾಗಳನ್ನು ನೋಡದೆ, ಉಪ್ಪು ರಹಿತ ಊಟ ಮಾಡುತ್ತಾ, ಸದಾ ಕಾಲವೂ ಆಧ್ಯಾತ್ಮಿಕವಾಗಿ ಜೀವನ ನಡೆಸುತ್ತಾ, ಬೈಬಲ್ ಓದುತ್ತಾ, ರಸ್ತೆಗಳಲ್ಲಿ ನಡೆಯುವಾಗ ತಲೆಯೆತ್ತದೆ ಸಾತ್ವಿಕವಾಗಿ 10 ವರ್ಷಗಳನ್ನು ಕಳೆದರೆ ಆಕೆ ಆಯ್ಕೆ ಪ್ರಕ್ರಿಯೆಯ ಸರದಿಗೆ ಬರಲು ಅರ್ಹಳಾಗುತ್ತಾಳೆ.
ಶ್ರೀಕೃಷ್ಣ ದೇವರು ತಂದ ಪಾರಿಜಾತದ ಗಿಡವಿದು
ಲಕ್ನೋಗೆ ಹೊರಟು ನಿಂತಾಗ ಒಂದು ವಿಷಯವನ್ನು ಗೂಗಲ್ ಹೇಳಿತು: ಕೃಷ್ಣ ಸ್ವರ್ಗದಿಂದ ಸತ್ಯಭಾಮೆಗೆಂದೇ ಭೂಮಿಗೆ ತಂದ ಪಾರಿಜಾತದ ಗಿಡ ಈಗಲೂ ಇದೆ ಎಂದು ಸೂಚಿಸಿತು. ಲಕ್ನೋದಿಂದ ಕೇವಲ 40 ಕಿಲೋಮೀಟರ್ಗಳ ದೂರದಲ್ಲಿ ದೊಡ್ಡ ಬಲುದೊಡ್ಡ ಮರವಾಗಿ ಎಂದು ಗೊತ್ತಾಯಿತು. ಸರಿ ಮತ್ತೆ, ಇಬ್ಬರು ಹೆಂಡಿರ ಜಗಳದಲ್ಲಿ ಭೂಲೋಕಕ್ಕೆ ಇಳಿದು ಬಂದ ವಿಷಯ ಎಂದರೆ ಕುತುಹಲ ಇರದಿರಲು ಸಾಧ್ಯವೇ ? ಆ ಪುರಾತನ ಮರವನ್ನು ನೋಡಿದರೆ ಅದರ ಪಕ್ಕ ಸತ್ಯಭಾಮೆಯ ಮಂದಿರಕ್ಕೆ ಬದಲಾಗಿ ರುಕ್ಮಿಣಿದೇವಿ ಮಂದಿರವಿದೆ.
ಲ್ಯಾಪ್ಲ್ಯಾಂಡ್: ಒಂದು ಕನಸಿನ ಪಯಣ
ನೋಡನೋಡುತ್ತಿದ್ದಂತೆ ಲ್ಯಾಪ್ಲಾಂಡ್ ಪ್ರವಾಸದ ದಿನ ಬಂದೆ ಬಿಟ್ಟಿತು. ಮ್ಯುನಿಕ್ನಿಂದ ಹೆಲ್ಸಿಂಕಿಗೆ ವಿಮಾನ. ಫಿನ್ಲ್ಯಾಂಡ್ ರಾಜಧಾನಿಯಾದ ಹೆಲ್ಸಿಂಕಿ ಬಾಲ್ಟಿಕ್ ಸಮುದ್ರ ತೀರದ ಒಂದು ನಗರ. ಹೆಲ್ಸಿಂಕಿ ಹತ್ತಿರ ಹತ್ತಿರ ಬರುತ್ತಿದ್ದಂತೆ ಬಾಲ್ಟಿಕ್ ಸಮುದ್ರವೂ ಹೆಪ್ಪುಗಟ್ಟಿದ ದೃಶ್ಯಗಳು ವಿಮಾನದೊಳಗೆ ಕೂತಿದ್ದ ನನ್ನ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸಿತು! ದೊಡ್ಡ ಹಡಗೊಂದು ಹೆಪ್ಪುಗಟ್ಟಿರುವ ಹಿಮವನ್ನು ಸೀಳಿಕೊಂಡು ಮುನ್ನುಗ್ಗುತ್ತಿರುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಗುರುದತ್ ಅಮೃತಾಪುರ
ಬಾಬ್ಬಿ ಎಂಬ ಪ್ರೇಮದ ಕುರುಹನ್ನು ಹುಡುಕಿಕೊಂಡು…
ತಲೆಯೊಳಗೆ ಬಲ್ಬಿನ ಥಕಪಕ ಕುಣಿತ. ‘ಅರೆ, ಇವನು ಅವನೇ ಅಲ್ವಾ? ಎಲ್ಲಿದ್ದಾನೆ? ನಾನು ಯಾಕೆ ಅವನನ್ನು ನೋಡದೆಯೇ, ಭೇಟಿ ಮಾಡದೆ ವಾಪಸ್ಸು ಬಂದುಬಿಟ್ಟೆ? ಛೆ ಛೆ, ಅವನೂರಿಗೆ ಬಂದು ಅವನನ್ನು ಮುದ್ದು ಮಾಡದೆ, ಅಪ್ಪಿಕೊಳ್ಳದೆ… ಓಹ್…’ ಸ್ವಾಗತ ಕೊಠಡಿಗೆ ಕರೆ ಮಾಡಿದೆ. ಅವನ ವಿಳಾಸ ಸಿಕ್ಕಿತು. ಅಯ್ಯೋ, ಅವನನ್ನು ನೋಡದೆಯೇ ಆ ರಾತ್ರಿ ಕಳೆಯಬೇಕಿತ್ತು. ಸೂರ್ಯ ಕರೆಗಂಟೆ ಒತ್ತಿದ್ದೆ ತಡ, ಗಡಿಬಿಡಿಸಿಕೊಂಡು ಬೆಚ್ಚನೆಯ ಬಟ್ಟೆ ತೊಟ್ಟು ಅವನಲ್ಲಿಗೆ ಓಡತೊಡಗಿದೆ.
‘ಕಂಡಷ್ಟೂ ಪ್ರಪಂಚ’ ಅಂಕಣದಲ್ಲಿ ಬಾಬ್ಬಿ…
ಜೀವಂತ ಬೇರುಗಳ ಸೇತುವೆಯ ಮೇಲೆ ನಡೆಯುತ್ತಾ…
ಸದಾ ಮೇಲೆ ಅಲೆಯುತ್ತಿರುವ ಮೋಡ, ಕೆಳಗೆ ನೀರು ತುಂಬಿದ ಭೂಮಿ, ಬೀಳುವ ಸಮೃದ್ಧ ಮಳೆಯಿಂದಾಗಿ ದಟ್ಟವಾಗಿ ಬೆಳೆಯುವ ಕಾಡು ದೂರದಿಂದ ನೋಡಲು ರಮಣೀಯವೆನಿಸಿದರೂ ಅದರ ಸುತ್ತಲೂ ಜೀವನ ಕಟ್ಟಿಕೊಳ್ಳಲು ಕಠಿಣ ಸವಾಲೊಡ್ಡುತ್ತದೆ. ಆದರೆ ಮಾನವನ ಜೀವನ ಮಾಡುವ ತುಡಿತ ಎಂತಹ ಪ್ರಕೃತಿ ಸವಾಲುಗಳನ್ನೂ ಮೀರುತ್ತದೆ ಎನ್ನುವುದಕ್ಕೆ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಖಾಸಿ ಜನಾಂಗವೇ ಸಾಕ್ಷಿ. ಖಾಸಿಗಳ ಭಾಷೆ ಖಾಸಿ, ವಾಸಿಸುವ ಬೆಟ್ಟ ಖಾಸಿ.