‘ವೈನು’ಗಾರಿಕೆಯ ಸೀಮೆಯಲಿ ಸುತ್ತಾಡುತಾ…
ಮಿನೋವನ್ ನಾಗರೀಕತೆಯನ್ನು ಯೂರೋಪ್ ಖಂಡದ ಮೊದಲ ಮುಂದುವರೆದ ನಾಗರೀಕತೆ ಎಂದು ಗುರುತಿಸಲಾಗಿದೆ. ಆಧುನಿಕ ಕಲೆ, ಸುಧಾರಿತ ಒಲೆ, ಎಲ್ಲಾ ಕಾಲಕ್ಕೂ ಸಲ್ಲುವ ಒಳಚರಂಡಿ ವ್ಯವಸ್ಥೆ, ತಮ್ಮದೇ ಆದ ಭಾಷೆ, ಲಿಪಿ, ವೈದ್ಯ ಪದ್ಧತಿ ಎಲ್ಲವನ್ನೂ ಹೊಂದಿದ್ದ ಜನ. ವಿಶೇಷತೆ ಎಂದರೆ ಅವರ ದ್ರಾಕ್ಷಿ ಮತ್ತು ಅಂಜೂರದ ಕೃಷಿ. ಕ್ರಿಸ್ತ ಪೂರ್ವದಿಂದಲೂ ಒಂದು ಜಾತಿಯ ದ್ರಾಕ್ಷಿ ಗಿಡದ ಬೇರನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಇಲ್ಲಿನ ಜನ. ಅದರಿಂದ ತಯಾರಿಸಿದ ವೈನ್ ಪೇಯ ಇಲ್ಲಿನ ವ್ಯಾಪಾರದ ಆಕರ್ಷಣೆ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ
ಮೋಡದ ಮೇಲೆ…. ತೇಲುತ್ತಾ ತೇಲುತ್ತಾ..
ರಸ್ತೆಗಳಲ್ಲಿ ಇಳಿಮುಖವಾಗಿ ಕಾರು ಚಲಿಸುತ್ತಿತ್ತು. ಸ್ವಲ್ಪ ದೂರ ಚಲಿಸಿದ ಮೇಲೆ ಒಂದು ಕಡಿದಾದ ತಿರುವು ದಾಟಿದ ತಕ್ಷಣ, ಕಣ್ಣ ಮುಂದೆ ಏನಿದೆ ಎಂದು ಅರ್ಥೈಸಲು ಸ್ವಲ್ಪ ಕಾಲಾವಕಾಶ ಬೇಕಾಯಿತು. ಒಂದು ಬಿಳಿಯ ಚಾದರ ಹಾಸಿದಂತೆ ಮೋಡಗಳು ಭಾಸವಾದವು. ಅದಕ್ಕಿಂತಲೂ ಎತ್ತರದ ಜಾಗದಲ್ಲಿ ನಾನು ಕಾರು ಓಡಿಸುತ್ತಿದ್ದರಿಂದ, ನಾವು ಮೋಡದ ಮೇಲೆ ಇರುವಂತೆ ಭಾಸವಾಯಿತು. ನನ್ನ ಪ್ರವಾಸದ ಅನುಭವಗಳಲ್ಲಿ ಅತ್ಯಂತ ಆಪ್ಯಾಯಮಾನವಾದ ದೃಶ್ಯ ಎಂದರೆ ಮೋಡದ ಸಾಲುಗಳ ಮೇಲಿಂದ ನಿಂತು ಮೋಡದ ಸಾಗರವನ್ನು ವೀಕ್ಷಿಸುವುದು.
ಲೆಚೆನ್ಸ್‌ಟೈನ್ ದೇಶದ ಪ್ರವಾಸದ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ
ಎಲ್ಲಿ ಹೋದರೇನು… ಮನ ಮರೆಯುವುದಿಲ್ಲ ನಿನ್ನನು
ಚಾಲಕ ಖಾನ್ ಅಲ್ಲಿಂದ ಒಂದು ಗಂಟೆ ಐದು ನಿಮಿಷಗಳ ಪ್ರಯಾಣದಲ್ಲಿ ತಲುಪಿಸಿದ್ದು ನೀರ್ದೇವನ ಪಾದಕ್ಕೆ. ಒಂದು ಬದಿ ಪ್ರಪಾತ ಮತ್ತೊಂದು ಬದಿ ಸಮುದ್ರ… ನಡುವೆ ಈ ನೀರ್ಮಕ್ಕಳ ಕಾಯ್ವ ದೇವನ ಪಳಿಯುಳಿಕೆ. ಸೂರ್ಯ ಮುಳುಗುತ್ತಿದ್ದ, ಬಂದಿದ್ದವರು ವಿಧವಿಧ ಭಂಗಿಯಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಜೋರು ಗಾಳಿ, ತಂಪು ಸಮಯ ಸಮುದ್ರ ನೋಡುತ್ತಾ ಕೂರಲು ಒಂಟಿ ನಿಂತ ಸಣ್ಣ ಬಂಡೆ. ಅದೆಷ್ಟು ಚಂದಿತ್ತು ಅಲ್ಲಿ ಕೂತು ಇಹಪರವನ್ನು ಮರೆತಿದ್ದು. ಸಾಯಂಕಾಲ 6 ಗಂಟೆಯ ನಂತರ ಅಲ್ಲಿ ಇರಲು ಬಿಡುವುದಿಲ್ಲ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಗ್ರೀಸ್ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ ಬರಹ
ಧೋಲ್ಕಲ್ ಗಣೇಶನಿಗಾಗಿ ಬೆಟ್ಟ ಹತ್ತಿಯೇಬಿಟ್ಟೆ!
ಅಲ್ಲಿಂದ ಸ್ವಲ್ಪ ದೂರ ಸೂರ್ಯನ ಕಿರಣ ಬಿದ್ದು, ಗಾಳಿಯೂ ಸೋಕಿ ತುಸು ದಣಿವು ಕಡಿಮೆಯಾಯಿತು. ಮತ್ತೆ ಮುಂದುವರೆದಂತೆ ತುಸು ಇಳಿಜಾರಿಗೆ ಸಾಗಿದ ದಾರಿ ಮತ್ತೆ ಸ್ವಲ್ಪ ಹೆಚ್ಚೇ ಏರುಹಾದಿಯಲ್ಲಿ ಕರೆದುಕೊಂಡುಹೋಯಿತು. ಅದು ತಲುಪಿದ್ದು ದೊಡ್ಡ ದೊಡ್ಡ ಬಂಡೆಗಳ ಬಳಿ. ಅಲ್ಲಿಂದ ಮುಂದೆ ಯಾವ ದಾರಿಯಿರಲಿಲ್ಲ. ಹತ್ತೋಕೆ ಆಗುತ್ತೋ ಇಲ್ವೋ ಅನ್ನೋ ಹಾಗಿದ್ದ ಬಂಡೆಗಳು. ಇಲ್ಲಿಂದ ಮುಂದೆ ಮುಂದಿನ ೨೦೦—೩೦೦ ಮೀಟರಿನ ದಾರಿ ತುಸು ಕಠಿಣವಾಗೇ ಇತ್ತು. ಹೆಜ್ಜೆ ಇಡೋದರಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಒಂದು ನಾಲ್ಕು ಮೂಳೆಗಳು ರಿಪೇರಿಗೆ ಹೋಗೋದು ಗ್ಯಾರಂಟಿ. ಅಲ್ಲಿಂದಲೂ ಗಣೇಶ ಏನೂ ಕಾಣಿಸುತ್ತಿರಲಿಲ್ಲ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’
ಸಾಧುಸಂತರ ಸಂಗಮದಲ್ಲಿ…..
ಇಂತಹ ಮಹಾಕುಂಭಮೇಳವನ್ನು ಪ್ರತ್ಯಕ್ಷವಾಗಿ ನೋಡಿ ಸಾಕ್ಷಿಯಾಗಿ ಅನುಭವಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಅಪರೂಪದ ಘಳಿಗೆ. ಇಲ್ಲಿ ಸಾಧುಗಳ ಸಂಖ್ಯೆ ಹೆಚ್ಚಿದ್ದರೂ ಸಾಧ್ವಿಗಳಿಗೂ ಕೊರತೆಯಿರಲಿಲ್ಲ. ಅಲ್ಲಿದ್ದ ನೂರಾರು ಸಾಧ್ವಿಯರಲ್ಲಿ ಒಬ್ಬರಿಗಿಂತ ಒಬ್ಬರು ಅದ್ಭುತ ಪ್ರವಚನಕಾರರು. ಜಪಾನಿನ ಯೋಗಮಾತಾ ಕಿಯೋಕೋ ಅಕೀವಾ ಅನ್ನುವ ಸಾಧ್ವಿಯೊಬ್ಬರು ದೀಕ್ಷೆತೊಟ್ಟು ಹಿಂದುಧರ್ಮದ ಅನುಯಾಯಿಯಾಗಿದ್ದು ಅಲ್ಲಿ ವರ್ಲ್ಡ್ ಪೀಸ್ ಕ್ಯಾಂಪೇನ್ ಕ್ಯಾಂಪ್ ಹಾಕಿದ್ದರು. ಆಕೆ ವಿಮೆನ್ ಪವರ್ ಎನ್ನುವ ಪ್ರವಚನದಲ್ಲಿ ಸಿದ್ಧ ಹಸ್ತೆ.
ಅಂಜಲಿ ರಾಮಣ್ಣ ಬರಹ
ಯೆಲ್ಲೋಸ್ಟೋನ್ : ಸತ್ಯಂ ಶಿವಂ ಸುಂದರಂ
ಇಲ್ಲಿನ ಬಿಸಿನೀರ ಬುಗ್ಗೆಯ ಅನುಭವವನ್ನು ಸ್ವಲ್ಪವಾದರೂ ಪಡೆದುಕೊಳ್ಳಬೇಕೆಂದಲ್ಲಿ ನೀವು ಈ ಪರೀಕ್ಷೆ ಉತ್ತರ ಬಾಗಿಲಿನ ಹೊರಗೆ ಅನತಿ ದೂರದಲ್ಲಿ ಹರಿವ ಗಾರ್ಡನರ್ ನದೀತೀರಕ್ಕೆ ನಡೆದುಕೊಂಡು ಹೋಗಬೇಕು. ಅಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ತಣ್ಣಗೆ ಹರಿವ ನದಿಗೆ ಪಕ್ಕದ ಭೂಮಿಯಾಳದೊಳಗಿಂದ ಬಿಸಿನೀರ ಬುಗ್ಗೆಯೊಂದು ಹರಿದು ಬಂದು ಸೇರಿಕೊಳ್ಳುತ್ತೆ. ಇಲ್ಲಿ ಕೂತರೆ ಸ್ನಾನದ ನೀರನ್ನು ಹದಮಾಡಿಕೊಳ್ಳುವಂತೆ ಬಿಸಿ ನೀರು ತಣ್ಣೀರು ಬೆರೆಸಿಕೊಳ್ಳುತ್ತ ಬೆಚ್ಚಗೆ ಕುಳಿತುಕೊಳ್ಳಬಹುದು.
ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ಅಮೆರಿಕಾದ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನದ ಕುರಿತು ಬರೆದಿದ್ದಾರೆ ವೈಶಾಲಿ ಹೆಗಡೆ
ಸ್ಥಬ್ಧ ತುಟಿಗಳು ಪಿಸುಗುಡುವ ಹೃದಯವೆಂಬ ರೂಪಕ
ನಾನು ಅಸ್ಸಾಮ್ ನ ಸಾಹಿತಿ ವೈ.ಡಿ ತೊಂಗ್ಚಿ ಅವರನ್ನು ಭೇಟಿ ಮಾಡಿದೆ. ಭಾಷೆಯ ಬಗ್ಗೆ ಅವರ ಮಾತುಗಳು ಬಹಳ ಮುಖ್ಯವಾದವು. ʻʻಇಲ್ಲಿನ ಶಾಲೆಗಳಲ್ಲಿ ಈಗ ಅಸ್ಸಾಮಿಸ್ ಭಾಷೆಯನ್ನು ಕಲಿಸುತ್ತಿಲ್ಲ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತ್ರ ಕಲಿಸಲಾಗುತ್ತಿದೆ. ಅರುಣಾಚಲದ ಎಲ್ಲಾ ಭಾಷೆಗಳು ನಶಿಸಿಹೋಗಿ ಹಿಂದಿ ಈ ರಾಜ್ಯದ ಭಾಷೆಯಾಗಿ ಬಿಡುವ ದಿನ ದೂರವಿಲ್ಲ” ಎನ್ನುತ್ತಲೇ ತೊಂಗ್ಚಿಯವರು, ಲಿಪಿ ಇರುವ ಭಾಷೆಗಳನ್ನೇ ಉಳಿಸಿಕೊಳ್ಳುವುದು ಕಷ್ಟವಾಗುತ್ತಿರುವ ಈ ಕಾಲದಲ್ಲಿ ಲಿಪಿ ಇಲ್ಲದ ಭಾಷೆಯನ್ನು ಉಳಿಸಿಕೊಳ್ಳುವುದು ಅಸಾಧ್ಯವೇ ಸರಿ. ಅಂಜಲಿ ರಾಮಣ್ಣ ಬರಹ
ಲಲಿತಾಸಹಸ್ರನಾಮ ಹುಟ್ಟಿದ್ದು ಈ ದೇವಾಯದಲ್ಲೇ
ಅಲ್ಲಿನ ಅರ್ಚಕರು ಒಂದು ಘಟನೆಯನ್ನು ಹೇಳಿದರು. ೧೯೯೯ ರಲ್ಲಿ ಬೆಂಗಳೂರಿನ ಒಬ್ಬ ಮಹಿಳೆಗೆ ಕನಸಿನಲ್ಲಿ ದೇವಿಯ ದರ್ಶನವಾಗಿ ತನಗೆ ಕಾಲ್ಗೆಜ್ಜೆ ನೀಡೆಂದು ತಿಳಿಸಿದಳಂತೆ. ಆದರೆ ಆ ದೇವಿ ಯಾರು, ದೇವಸ್ಥಾನ ಎಲ್ಲಿದೆ ಅನ್ನುವುದು ಆಕೆಗೆ ತಿಳಿದಿರಲಿಲ್ಲ. ಯಾವುದೋ ಪತ್ರಿಕೆಯಲ್ಲಿನ ಚಿತ್ರ ನೋಡಿ ಇದೇ ಕನಸಿನಲ್ಲಿ ಬಂದ ದೇವಿ ಎಂದು ಗುರುತಿಸಿ ತಿರುಮೀಯಚೂರಿಗೆ ಹೋಗುತ್ತಾಳೆ. ಅಲ್ಲಿ ಕಾಲ್ಗೆಜ್ಜೆಯನ್ನು ದೇವರಿಗೆ ತೊಡಿಸಿರೆಂದು ಕೇಳಿದಾಗ ಅರ್ಚಕರು ಹಾಗೆ ಹಾಕಲು ಆಗುವುದಿಲ್ಲ ಎನ್ನುತ್ತಾರೆ. ಆಕೆ ಪದೇ ಪದೇ ಕೇಳಿಕೊಂಡು ತನ್ನ ಕನಸನ್ನು ಹೇಳಿಕೊಂಡ ಮೇಲೆ ಪರಿಶೀಲಿಸಿದಾಗ ಕಾಲಿನ ಸುತ್ತ ಗೆಜ್ಜೆ ತೊಡಿಸಲು ಸಣ್ಣ ತೂತು ಇರುವುದು ಕಂಡುಬರುತ್ತದೆ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’
ಅಂದುಕೊಳ್ಳದ ಪವಾಡ ಹೇಗೆ ಸಂಭವಿಸಿತು?
ಬೆಳಗ್ಗೆ ನಾಲ್ಕಕ್ಕೇ ಆಶ್ರಮಕ್ಕೆ ಹೋದರೆ ಬಾಬಾರ ದರ್ಶನವಾಗುತ್ತೆ ಅಂತ ಅಲ್ಲಿ ಯಾರೋ ಹೇಳಿದರು. ಸರಿರಾತ್ರಿಯವರೆಗೂ ಬೀದಿ ಸುತ್ತಿ ಮೀನಖಂಡ ಮುನಿಸಿಕೊಂಡರೂ ನಿದ್ದೆಯ ಸುಳಿವಿಲ್ಲ. ನಾಲ್ಕಕ್ಕೆ ಎದ್ದೆ ಆದರೆ ಬಿಳಿಬಣ್ಣದ ಬಟ್ಟೆ ನನ್ನ ಬಳಿ ಇರಲಿಲ್ಲ. ಅಲ್ಲಿ ಬಾಬಾ ಭಕ್ತರೆಲ್ಲಾ ಬೆಳ್ಳಂಬಿಳಿ ಬಿಟ್ಟರೆ ಕೇಸರಿ ಬಟ್ಟೆನೇ ತೊಡುವುದು. ನಾನು ಹೇಗೂ ಭಕ್ತೆ ಅಲ್ಲವಲ್ಲ, ಹಾಗಾಗಿ ಹಸಿರಾದರೂ ಏನಂತೆ ಎಂದುಕೊಂಡು ಇದ್ದ ಒಂದು ಹಸಿರು ಬಣ್ಣದ ಚೂಡಿದಾರ್ ಹಾಕಿಕೊಂಡು ಹೊರಟೆ. “ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ