ಪೂಜಿಸಿದರೆ…
ವಿಭೂತಿ ಹಚ್ಚಿ, ಹಾರ ಹಾಕಿ,
ಧೂಪ ದೀಪ ಬೆಳಗಿ, ಫೋಟೋ
ಪೂಜಿಸಿ, ಪ್ರತಿ ವರ್ಷ
ತರತರ ಖಾದ್ಯ ತಯಾರಿಸಿ,
ನೈವೇದ್ಯ ಹಿಡಿದು, ಕಣ್ಣೀರಲಿ ಮಿಂದು
ಹೋದವರ ನೆನಸಿ
ತೊಲಾಡಿ ಹಳೇ ನೆನಪುಗಳ ಜ್ವಾಲಾಮುಖಿ ಉಳಿಸಿಕೊಳ್ಳಲಾರದ ಘಟನೆಗಳು
ಹಿಂಸಿಸಿ, ದುಃಖ ಹೆಚ್ಚಿಸಿ
ಯಾವ ಧೂಪ ದೀಪ ಶಕ್ತಿ
ಮರಳಿಸಬಹುದು ಗೋರಿಗಳ ಜೀವ
ಅಳಿಸಬಹುದು ಸತ್ತ ನಂತರ
ಆದ ತೊಂದರೆಗಳ
ಸಮವಯಸ್ಕರು ಇನ್ನೂ
ಅಡ್ಡಾಡುವ, ಕಣ್ಣು ತಾಕದಿರಲಿ
ಅಪ್ಪನಿದ್ದಿದ್ದರೆ……..
ಶಪಿಸಿ ಕರ್ಮಗಳ
ಆ ಖಾಲಿತನ…
ಆ ನೋವು…
ಭರಿಸಲಾರರು
ಯಾರೂ……
ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ