ಅಡ್ಮಿನ್ ಸೂತ್ರಧಾರಿ, ನಾವ್ ಪಾತ್ರಧಾರಿ
ಸಮಾನ ಮನಸ್ಕರ ನಡುವೆ ಸಂವಹನ ಸಾವಧಾನವಾಗಿ ಆದಾಗ ಒಳ್ಳೆಯದೆ ಆಗುತ್ತದೆ. ಅಲ್ಲಿಯೇ ಆರೋಗ್ಯಕರ ಚರ್ಚೆಗಳು ಪ್ರಾಂಭವಾಗುತ್ತವೆ. ಗುಂಪಿನಲ್ಲಿ ನಡೆಯುವ ಚರ್ಚೆಗಳು ಅನ್ಯ ಗುಂಪಿಗೂ ಹರಿಯಬಹುದು. ಪರಸ್ಪರ ಅಭಿನಂದನೆಗಳಿಗೆ ಧನ್ಯವಾದಗಳು ಒಂದು ಹಂತಕ್ಕೆ ಇದ್ದರೆ ಚಂದ ಅತಿಯಾದರೆ ಅಸಹ್ಯ! ಕ್ಷಮಿಸಿ ‘ಅಸಹ್ಯ’ ಎಂದರೆ ‘ಹೊಲಸು’ ಎಂದಲ್ಲ ಇತ್ತೀಚೆಗೆ ಹೀನಾರ್ಥ ಪಡೆದುಕೊಂಡಿರುವುದು ಅ-ಸಹ್ಯ ಎಂದರೆ ಸಹಿಸಲು ಸಾಧ್ಯವಾಗದೆ ಇರುವುದೆಂದು. ಸಂದೇಶಗಳು, ಸುತ್ತೋಲೆ, ಜ್ಞಾಪಕ ಇದ್ದಂತೆ, ಏಕ ಕಾಲಕ್ಕೆ ಅನೇಕರಿಗೆ ಸಂದೇಶ ರವಾನೆಯಾಗುತ್ತದೆ ಉದಾಹರಣೆಗೆ, ಸರಕಾರದ ಆದೇಶ ಮದುವೆ ದಿನಾಂಕ, ಕೆಲಸಗಾರರಿಗೆ ಏಕ ಕಾಲದಲ್ಲಿ ಸಂದೇಶ ತಲುಪಿಸಲು ಬಹಳ ಅನುಕೂಲವಾಗಿದೆ ಇತ್ಯಾದಿ.
ಸುಮಾವೀಣಾ ಬರಹ ನಿಮ್ಮ ಓದಿಗೆ.
ಭಾವಗೀತೆಗಳ ಭಾವಗುಚ್ಛ….
ರಾಜಕೀಯ ಭಾಷಣಗಳ ಮುನ್ನ ಜನರನ್ನು ಮೈದಾನಗಳಿಗೆ ಕರೆತರುತ್ತಿದ್ದುದೇ ಈ ಜೋರಾಗಿ ಕೇಳಿಸುತ್ತಿದ್ದ ಹಾಡುಗಳು. ಎಲ್ಲೆಲ್ಲೂ ಈ ಹಾಡುಗಳು ಮೊಳಗುತ್ತಿದ್ದವು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಎಲ್ಲಿಯಾದರೂ ಉತ್ಸವಗಳಲ್ಲಿ ಹಾಡಲು ಬಂದಾಗ ಈ ಗೀತೆಗಳನ್ನು ಹಾಡಲಿ ಎಂದು ಜನ ಅಪೇಕ್ಷೆ ಪಡುತ್ತಿದ್ದರು. ಸಿ. ಅಶ್ವಥ್ ಅವರ ಸಂಗೀತ ಮತ್ತು ವೈದ್ಯನಾಥನ್ ಅವರ ವಾದ್ಯಸಂಯೋಜನೆಯಲ್ಲಿ ಮೂಡಿ ಬಂದ ಭಾವಗೀತೆಗಳು ಇವು. ಒಂದು ರೀತಿ ಸಿನಿಮಾ ಗೀತೆಗಳು ಭಾಸವಾಗುತ್ತಿದ್ದವು.
ಕವಿ ದೊಡ್ಡರಂಗೇಗೌಡರ ಕವಿತೆಗಳನ್ನಿಟ್ಟುಕೊಂಡು ಸುಚೇಂದ್ರ ಪ್ರಸಾದ್ ನಿರ್ದೇಶಿಸಿರುವ ಸಿನಿಮಾ “ಮಾವು ಬೇವು” ಕುರಿತು ಬಿ.ಕೆ. ಸುಮತಿ ಬರಹ
ಹೆತ್ತವರು ನೆಂಟರಾದಾಗ….
ಬೇಸಿಗೆ ರಜೆ ಬಂದರೆ ಸಾಕು ನಾನು ಅಮ್ಮನ ತವರೂರಿಗೆ ದೌಡಾಯಿಸುತ್ತಿದ್ದೆ. ಅಂಥದ್ದೇ ಒಂದು ಬೇಸಿಗೆ ರಜೆಯಲ್ಲಿ ತಿಂಗಳೆಲ್ಲ ಅಲ್ಲೇ ಟಿಕಾಣಿ ಹೂಡಿದ್ದ ನನ್ನ ಬಿಟ್ಟಿರಲಾಗದ ಅಪ್ಪ ಅಚಾನಕ್ಕಾಗಿ ನೋಡಲೆಂದು ಊರಿಗೆ ಬಂದಿದ್ದಾರೆ. ತಾತ ಮಾವಂದಿರು ಹೊಲಕ್ಕೆ ಹೋಗಿದ್ದು ಮನೆಯಲ್ಲಿದ್ದು ಅವ್ವ ಮಾತ್ರ. ಅಲ್ಲೇ ಹಜಾರದ ಬಾಗಿಲ ಬಳಿ ಮೊರದಲ್ಲಿ ರಾಗಿ ಕೇರುತ್ತಾ ಕುಳಿತಿದ್ದ ಅಳಿಯನ ನಿರೀಕ್ಷೆ ಇಲ್ಲದವಳ ಮುಂದೆ ಪ್ಯಾಂಟ್ ತೊಟ್ಟ ಎರಡು ಕಾಲುಗಳು ಕಾಣಿಸಿಕೊಂಡಿವೆ. ಮನೆಯ ಹೊಸಲು ಸ್ಪರ್ಶಿಸುವ ಪ್ಯಾಂಟುಧಾರನ ಪಾದಗಳೆಂದರೆ ಅದು ಅಳಿಯನೊಬ್ಬನದ್ದೆ ಎಂಬುದನ್ನು ಗ್ರಹಿಸಿದ ಅವಳು ತಲೆಯೆತ್ತಿಯೂ ನೋಡದೆ ಕೈಯಲ್ಲಿದ್ದ ಮೊರವನ್ನು ಗಾಬರಿಯಿಂದ ಬಿಸಾಡಿ ಓಡಿ ಹೋಗಿ ನಡುಮನೆಯನ್ನು ಸೇರಿಕೊಂಡಿದ್ದಳು.
ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ
ಹಲವು ಹೃದಯಗಳ ಮುಟ್ಟಿದ ಚಲನಚಿತ್ರೋತ್ಸವ..
ಮೂರನೇ ಅತ್ತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ ʻಫೋಟೋʼ ಚಿತ್ರದ್ದು ಬೇರೆಯದೇ ರೀತಿಯ ಛಾಪು. ಚಿತ್ರೋತ್ಸವದ ಎರಡನೇ ದಿನ 4ನೇ ಪರದೆಯಲ್ಲಿ ಮೊದಲ ಪ್ರದರ್ಶನ ಕಂಡ ಈ ಚಿತ್ರ ನೋಡಲು ಪ್ರೇಕ್ಷಕರು ಕಿಕ್ಕಿದು ತುಂಬಿದ್ದರು. ಆಸನಗಳು ಸಾಲದಕ್ಕೆ ಚಿತ್ರಮಂದಿರದ ನಿಯಮವನ್ನೂ ಮುರಿದು ಮೆಟ್ಟಿಲುಗಳ ಮೇಲೆ ಕುಳಿತು ಸಹ ಹಲವರು ಚಿತ್ತ ಬದಲಿಸದೇ ನೆಟ್ಟ ದೃಷ್ಟಿಯಲ್ಲೇ ಚಿತ್ರವನ್ನು ವೀಕ್ಷಿಸಿದರು.
‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ನೋಡಿದ ಸಿನಿಮಾಗಳ ಕುರಿತು ಕುಮಾರ ಬೇಂದ್ರೆ ಬರಹ
ಕಣ್ಣ ಹನಿ ಜಿನುಗಿಸುವ ಫೋಟೋ…
ಸಿನಿಮಾದ ಆರಂಭ ಮುಂಜಾನೆಯಿಂದ ಕ್ಯಾಮೆರಾ ಮೇಲಿಂದ ಕೆಳಗೆ ಪ್ಯಾನ್ ಆದರೆ ಸಿನಿಮಾದ ಅಂತ್ಯದಲ್ಲಿ ಮುಸ್ಸಂಜೆ ಮುಗಿದು ಕತ್ತಲು ಹರಿದು ದೀಪವೊಂದು ಆರಿ ಕತ್ತಲಾಗುತ್ತದೆ. ಕ್ಯಾಮೆರಾ ನಿಧಾನಕ್ಕೆ ಮೇಲಕ್ಕೆ ಪ್ಯಾನ್ ಆಗಿ ನಿಲ್ಲುತ್ತದೆ. ಕತೆ ಎಲ್ಲಿ ಶುರುವಾಯ್ತೊ ಅಲ್ಲೇ ಕೊನೆಯಾಗಿದೆ. ಫೋಟೋ ತೆಗೆಸಲು ಹೊರಟ ದುರ್ಗ್ಯಾ ನಮ್ಮೆಲ್ಲರಲ್ಲೂ ಕೂತುಬಿಡುತ್ತಾನೆ. ಇದು ನಿರ್ದೇಶಕರ ಮೊದಲ ಸಿನಿಮಾ ಅಂದಾಗ ಎಲ್ಲರಿಂದ ಓಹ್! ಎಂಬ ಉದ್ಘಾರ…
ಉತ್ಸವ್ ಗೋನವಾರ ನಿರ್ದೇಶನದ “ಫೋಟೋ” ಸಿನಿಮಾದ ಕುರಿತು ಜಯರಾಮಾಚಾರಿ ಬರಹ
ಏನೋ ಹೇಳಬೇಕು…
ನೂರಾರು ಪ್ರಶ್ನೆಗಳೊಂದಿಗೆ, ಮಗ್ಗಲು ಬದಲಿಸುವ ಬದುಕಿನ ಬದುವಿನಲ್ಲಿ ಹುಡುಕಾಟ ತೀವ್ರಗೊಂಡ ನೆಲೆಯಲ್ಲಿ ಆಧ್ಯಾತ್ಮದ ಗವಿಯೊಳಗೆ ಬೆಳಕು ಕಾಣಲು ಹಂಬಲಿಸಿ, ಬದುಕನ್ನು ಭಿನ್ನ ಪಾತಾಳಿಯಲ್ಲಿ ಕಾಣುವ ಹಠಕ್ಕೆ ಬಿದ್ದವನಿಗೆ ಈ ಕವಿತೆಗಳ ಕಡೆ ಅದೇನೋ ತದೇಕ ಸೆಳೆತ ಮತ್ತು ದಿನದಿಂದ ದಿನಕ್ಕೆ ಎಲ್ಲರಿಂದಲೂ ಬಹುದೂರ ಸಾಗುತ್ತಿದ್ದೇನೆ ಅನಿಸಿದರೂ; ನನಗೆ ನಾನು ತುಂಬಾ ಹತ್ತಿರವಾಗುತ್ತಿದ್ದೇನೆ ಎಂದೆನಿಸಿದೆ. ದ್ರುತಗತಿಯ ಹಾದಿ ತುಳಿಯದೇ ಒಂದೊಂದಾಗಿ ಕಳಚಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದೇನೆ. ಸುಮಿತ್ ಮೇತ್ರಿ ಬರಹ
ಎಮ್ಮೆಎಮ್ಮೆಯೆಂದೇಕೆ ಬೀಳುಗಳೆವಿರಿ?
ಕೆಲವು ಎಮ್ಮೆಗಳು ಬಹಳ ಸೂಕ್ಷ್ಮ. ಎಮ್ಮೆ ಕರುಹಾಕಿ ನಂತರದಲ್ಲಿ ಒಬ್ಬರೇ ಹಾಲು ಕರೆಯುತ್ತಿದ್ದರೆ ಅದು ಕೆಲವು ದಿನಗಳ ನಂತರ ಇನ್ನೊಬ್ಬರಿಗೆ ಹಾಲನ್ನು ಕೊಡುವುದಿಲ್ಲ. ಸೊರವು ಬಿಡದೆ ಸುಮ್ಮನೆ ನಿಂತಿರುತ್ತದೆ. ಮೊಲೆಗಳನ್ನು ಎಷ್ಟೇ ಜಗ್ಗಿದರೂ ಮೊಲೆಗೆ ಹಾಲು ಇಳಿಸುವುದೇ ಇಲ್ಲ. ಇದನ್ನು ನಮ್ಮೂರಕಡೆ ಕೈಮರ್ಚಲು ಎನ್ನುತ್ತಾರೆ. ಇನ್ನೊಬ್ಬರು ಹಾಲು ಕರೆಯಬೇಕೆಂದರೆ ಸಾಕಷ್ಟು ಸರ್ಕಸ್ ಮಾಡಬೇಕಾಗುತ್ತದೆ.
ಎಮ್ಮೆಯ ಕುರಿತು ಹಲವು ಕುತೂಹಲಕರ ಪ್ರಸಂಗಗಳನ್ನು ಬರೆದಿದ್ದಾರೆ ಚಂದ್ರಮತಿ ಸೋಂದಾ
ಏಕೆ ಕುಣಿವೆ ತೂಕ ತಪ್ಪಿ ಸಾಕು ಕಾಲ ಭೈರವ
ಗೇರುಹಣ್ಣನ್ನು ತಿಂದು ಬೀಜವನ್ನು ಎಲ್ಲರೂ ಸೇರಿ ಒಂದೆಡೆ ಕೂಡಿಡುತ್ತಿದ್ದೆವು. ನೂರು ಬೀಜಗಳಾದ ಮೇಲೆ ಅದನ್ನು ಕಮ್ತೀರ ಅಂಗಡಿಗೆ ಕೊಟ್ಟರೆ ಅವರು ನಮಗೆಲ್ಲ ಒಂದೊಂದು ಆಯ್ಸ್-ಕ್ಯಾಂಡಿ ಕೊಡುತ್ತಿದ್ದರು. ತಂಪಾಗಿರುವ ಅದನ್ನು ತಿನ್ನುತ್ತಾ ಅದಕ್ಕೆ ಹಾಕಿರುವ ಕೆಂಪನೆಯ ಬಣ್ಣ ನಮ್ಮ ಬಾಯಿಯ ಸುತ್ತಮುತ್ತ ಚಂದದ ಪ್ರಭಾವಳಿಯನ್ನು ರಚಿಸುತ್ತಿತ್ತು. ನಮ್ಮ ಈ ಘನಂದಾರಿ ನಡೆ ಅದು ಹೇಗೋ ಪರಮಜ್ಜನಿಗೆ ಗೊತ್ತಾಗಿಬಿಡುತ್ತಿತ್ತು. ನಾರಾಯಣ ಯಾಜಿ ಬರಹ
ಹಕ್ಕಿನ ಒಕ್ಕೊರಲ ಕೂಗು…
ಪ್ರತಿಯೊಬ್ಬರ ಮನೆಯಲ್ಲಿ ಸಂವಿಧಾನ ಇರಬೇಕು. ಇಂದು ನಾವು ಸಂವಿಧಾನವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಚಿತ್ರದಲ್ಲಿ ತೋರಿಸಿದ ಹಾಗೆ ಒಂದು ಹೋರಾಟಕ್ಕೆ ಮಾಧ್ಯಮ ಮತ್ತು ಸಂಘಟನೆಗಳು ತುಂಬಾ ಅವಶ್ಯಕ. ಈ ಎರಡು ಪ್ರಾಮಾಣಿಕವಾಗಿದ್ದರೆ ಯಶಸ್ಸು ಶತಸಿದ್ಧ. ಇಂದಿನ ಹೋರಾಟವು ದಾರಿ ತಪ್ಪುವುದಕ್ಕೆ ಕಾರಣ ಕೇವಲ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕಾಗಿ ಹೋರಾಟದ ದಿಕ್ಕನ್ನೇ ಬದಲಿಸುತ್ತಿರುವುದನ್ನು ಕಾಣುತ್ತೇವೆ.
ಮಂಸೋರೆ ನಿರ್ದೇಶನದ “19.20.21” ಚಲನಚಿತ್ರದ ಕುರಿತು ವಿಜಯಲಕ್ಷ್ಮೀ ದತ್ತಾತ್ರೇಯ ದೊಡ್ಡಮನಿ ಬರಹ









