Advertisement

ಸಂಪಿಗೆ ಸ್ಪೆಷಲ್

ಅಣ್ಣನೆಂಬ ಅಕ್ಕರೆಯ ಅಪ್ಪ….

ಅಣ್ಣನೆಂಬ ಅಕ್ಕರೆಯ ಅಪ್ಪ….

ಈಗಿನಂತೆ ಬೀದಿ ದೀಪಗಳು, ಕೈಯಲ್ಲೊಂದು, ಜೇಬಲ್ಲೊಂದು ಟಾರ್ಚು ಇಲ್ಲದ ದಿನಗಳವು. ಅಣ್ಣ ನನ್ನ ಕೈಯನ್ನು ಹಿಡಿದುಕೊಂಡೆ ಮೆಲ್ಲಗೆ ಸಾಗತೊಡಗಿದ. ನನಗೆ ಇದ್ದ ಅತಿ ಮುಖ್ಯ ಭಯವೆಂದರೆ ಹಾವಿನದ್ದು. ಒಂದೆರಡು ದಿನಗಳ ಹಿಂದೆ ಎಮ್ಮೆ ಕಾಯಲು ಹೋದಾಗ ಹನುಮಪ್ಪನ ನಾಲಿನಲ್ಲಿ ನನ್ನ ಕಾಲಿನ ನಡುವೆ ಸರ ಸರನೆ ಹಾದು ಹೋಗಿ ಹೆಡೆ ಎತ್ತಿ ಆಡಿದ್ದ “ನಾಗರಾಜ”ನನ್ನು ನೆನೆದು ನಾನು ಇನ್ನಷ್ಟು ಭಯಭೀತನಾಗಿದ್ದೆ, ಮತ್ತು ಈಗ ಹೆಚ್ಚೇ ಎನ್ನುವಷ್ಟು ಜೋರಾಗಿ ಅಳತೊಡಗಿದೆ. ನನ್ನನ್ನು ಸುಮ್ಮನಾಗಿಸಲು ಹರ ಸಾಹಸ ಪಟ್ಟ ಅಣ್ಣ, ನನ್ನ ಅಳುವಿಗೆ ನೈಜ ಕಾರಣ ತಿಳಿದುಕೊಂಡ.
ಸಾವನ್ ಕೆ ಸಿಂಧನೂರು ಬರಹ

read more
ರೂಪಾಂತರದ ಆಯಾಮಗಳು

ರೂಪಾಂತರದ ಆಯಾಮಗಳು

ಮಾನವರು ಯಕ್ಷರಾಗುವ ಪ್ರಕ್ರಿಯೆ ನಮ್ಮೊಳಗೆ ಅಡಕವಾಗುತ್ತ ನಡೆದಾಗಲೂ ಕೆಲವೊಮ್ಮೆ ಭ್ರಮೆ ಮತ್ತು ವಾಸ್ತವಗಳು ಮನಸ್ಸಿನಲ್ಲಿ ತಾಡಿಸುತ್ತಲೇ ಇರುತ್ತಿದ್ದವು. ದುಃಶ್ಶಾಸನನ ವೇಷ ತೊಟ್ಟ ಅಪ್ಪ, ಭೀಮನಿಂದ ಪೆಟ್ಟುತಿಂದು ಯುದ್ಧರಂಗದಲ್ಲಿ ಓಡುತ್ತಿರುವಾಗ ಅವನೆಲ್ಲಾದರೂ ಅಪ್ಪನನ್ನು ಗದೆಯಿಂದ ಹೊಡೆದು ಕೊಂದಾನೆಂಬ ಭ್ರಮೆಯಲ್ಲಿ ‘ಬೇಡಾ’ ಎಂದು ಕಿರುಚಿದ್ದೂ ಇತ್ತು. ಕೌರವನನ್ನು ಬೆನ್ನಟ್ಟುವ ರೌದ್ರ ಭೀಮನ ಕಣ್ಣಿನ ಕೆಂಪಿಗೆ ಹೆದರಿ, ಅವನೆಲ್ಲಿಯಾದರೂ ಕೌರವನ ವೇಷಧಾರಿಯಾದ ನನ್ನಪ್ಪನ ತೊಡೆಯನ್ನೇ ಮುರಿದಾನೆಂದು ಚಡಪಡಿಸುತ್ತಿದ್ದುದು ಅತ್ತೆಗೆ ಇರಿಸುಮುರಿಸು ಮಾಡುತ್ತಿತ್ತು.
ಮನುಷ್ಯ ಹೊಂದಬಹುದಾದ ರೂಪಾಂತರಗಳ ಕುರಿತು ಸುಧಾ ಆಡುಕಳ ಬರಹ ನಿಮ್ಮ ಓದಿಗೆ

read more
ಕಣ್ಣೊರಿಸಿಕೊಂಡ ಪುಟ್ಟ ದೇವರು…

ಕಣ್ಣೊರಿಸಿಕೊಂಡ ಪುಟ್ಟ ದೇವರು…

ತರಗತಿಯಿಂದ ತರಗತಿಗೆ ಹಾರಿ ಅದೇ ಶಾಲೆಯಲ್ಲಿ ಕೂತವರಿಗೆ ಒಂದು ರೂಮಿನ ಬದಲಾವಣೆ ಅಷ್ಟೇ.. ತರಗತಿಯಿಂದ ಉಸಿರು ಬಿಗಿ ಹಿಡಿದು ಹಾರಿ ಜಿಗಿದು ಮತ್ತೆಲ್ಲೊ ಮತ್ಯಾವ ಶಾಲೆ, ಕಾಲೇಜಿನ ರೂಮಿನಲ್ಲೊ ಇಲ್ಲಿ ಕಿತ್ತುಕೊಂಡು ಬಂದ ಓದಿನ ಗಿಡವನ್ನು ಅಲ್ಲಿ ನೆಟ್ಟು ಪೋಷಿಸಬೇಕು. ಕಿತ್ತು ನಡೆಯುವ ಹೊತ್ತಲ್ಲಿ ಗಂಟಲಿಗೆ ಬಂದು ಆತು ಕೂತುಕೊಳ್ಳುತ್ತಲ್ಲಾ ಆ ದುಃಖ ಮತ್ತು ಅದನ್ನು ನುಂಗಿ ಸಾಯಿಸಿ ಸಾಯಿಸಿ ನಗಬೇಕಲ್ಲ ಆ ಸಂಕಟ, ಮತ್ತು ಪಿಳಿಪಿಳಿ ಕಣ್ಣುಗಳಿಂದ ಬಂದೇ ಬಿಡುತ್ತಲ್ಲ ಆ ಪವಿತ್ರ ಕಣ್ಣೀರು.. ಓ ಎಂತ ಪಾಪಿಷ್ಟ ಗಳಿಗೆ ಅದು.
ಸದಾಶಿವ ಸೊರಟೂರು ಬರೆದ ಪ್ರಬಂಧ ನಿಮ್ಮ ಓದಿಗೆ

read more
ಕನ್ನಡಕ್ಕೆ ಮತ್ತೊಂದು ಗರಿ ʻಹದಿನೇಳೆಂಟುʼ

ಕನ್ನಡಕ್ಕೆ ಮತ್ತೊಂದು ಗರಿ ʻಹದಿನೇಳೆಂಟುʼ

ಹರಿ ಒಬ್ಬ ಸದ್ಗುಣ ಯುವಕನೇ ಆಗಿದ್ದರೂ ಅರಿವಿನ ಕೊರತೆಯಿಂದ ಆ ವಿಡಿಯೋವನ್ನು ತನ್ನ ಸ್ನೇಹಿತರಿಗೆ ತೋರಿಸಿ ಅದು ತನ್ನ ಸಾಧನೆ ಎಂಬಂತೆ ಬಿಂಬಿಸಿಕೊಂಡ. ಅಲ್ಲಿಗೆ ಸುಮ್ಮನಾಗದೇ, ತನ್ನ ಮೇಲೆ ನಂಬಿಕೆ ವಿಶ್ವಾಸವಿಟ್ಟು ತನ್ನ ದೇಹವನ್ನೇ ಹಂಚಿಕೊಂಡ ದೀಪಾಳಿಗೆ ಅದರಿಂದ ಏನಾದೀತು ಎನ್ನುವ ಸಾಮಾನ್ಯ ವಿವೇಚನೆಯನ್ನೂ ಮಾಡದೇ ಆ ವಿಡಿಯೋವನ್ನು ಒಬ್ಬ ಫೇಸ್‌ಬುಕ್‌ಸ್ನೇಹಿತನೊಂದಿಗೆ ಹಂಚಿಕೊಂಡ!
ಈ ವರ್ಷದ ಪನೋರಮಕ್ಕೆ ಆಯ್ಕೆಯಾದ ಮತ್ತೊಂದು ಚಲನಚಿತ್ರ ʻಹದಿನೇಳೆಂಟುʼ ಕುರಿತು ಕುಮಾರ ಬೇಂದ್ರೆ ಬರಹ

read more
ಮುದ್ದೆಯಾದ ಕಾಗದ!

ಮುದ್ದೆಯಾದ ಕಾಗದ!

ಮರುದಿನ ಅಜ್ಜಿಯ ಆರೋಗ್ಯ ಮತ್ತಷ್ಟು ಹದೆಗೆಟ್ಟಿತು. ಅವಳಿಗೆ ಎದ್ದು ತಿರುಗಾಡಲು ಆಗಲಿಲ್ಲ. ಮಲಗಿದ್ದಲ್ಲೇ ಮಲಗಿ ಒಂದೇ ಸವನೆ ನರಳತೊಡಗಿದಳು. ಆಗಲೂ ಅಮ್ಮನ ಮನಸ್ಸು ಕರಗಲಿಲ್ಲ. ಊಟ ತಿಂಡಿಯೂ ಹಾಕಲಿಲ್ಲ. ಇವಳಿಗೆ ಮನೆಯಲ್ಲಿಟ್ಟುಕೊಂಡರೆ ನಮಗೂ ರೋಗ ಬರಬಹುದು ಅಂತ ಯೋಚಿಸಿ ಮನೆಯ ಅಂಗಳದಲ್ಲಿ ಮಲಗಲು ಖಡಕ್ಕಾಗಿ ಸೂಚಿಸಿ ಅವಳ ಹಾಸಿಗೆ ಹೊಚ್ಚಿಗೆ ತಾಟು ತಂಬಿಗೆ ಎಲ್ಲವೂ ಬೇರ್ಪಡಿಸಿ ಕೈ ತೊಳೆದುಕೊಂಡಳು. ಈ ಎಲ್ಲ ದೃಶ್ಯಾವಳಿ ನೋಡಿ ರಾಜೂನ ದುಃಖ ಉಕ್ಕಿ ಬಂದಿತು. ಮಲ್ಲಿಕಾಳ ಕರುಳು ಹಿಂಡಿದಂತಾಯಿತು.
ಶರಣಗೌಡ ಬಿ ಪಾಟೀಲ ತಿಳಗೂಳ ಪ್ರಬಂಧ

read more
ನೆನಪಿನ ಮಳೆ ಹನಿಗಳು…

ನೆನಪಿನ ಮಳೆ ಹನಿಗಳು…

ಬದುಕು ಎಲ್ಲವನ್ನು ಮರೆಸುತ್ತದೆ ನೆನಪಿಸುತ್ತದೆ ಕೂಡ. ಭೂಮಿ ಗುಂಡಾಗಿದೆ ಅಲ್ಲವೇ. ತಿರುಗುವ ಭೂಮಿಯಲ್ಲಿ ಒಬ್ಬರಿಗೊಬ್ಬರು ಸಂದಿಸಲೇಬೇಕು. ನಮ್ಮಿಬ್ಬರ ಬೇಟಿಯಾಗಿ ಎರಡು ವರ್ಷಗಳು ಕಳೆದಿರಬೇಕು ಆಕಸ್ಮಿಕವಾಗಿ ಬಸ್ಸಿನಲ್ಲಿ ಸಿಕ್ಕಾಗ ಇಬ್ಬರು ಒಬ್ಬರಿಗೊಬ್ಬರು ನೋಡಿದರೂ ನೋಡಿಲ್ಲವೆಂಬಂತೆ ದೃಷ್ಟಿ ಬದಲಿಸಿದ್ದು ಬದುಕಿನಲ್ಲಿ ಹೀಗೂ ನಡೆಯಬಹುದು ಅನ್ನಿಸಿದ್ದು ನಿಜ. ನನ್ನೊಳಗಿನ ಮನಸ್ಸು ಯೋಚನೆಯಲ್ಲಿ ಮುಳುಗಿತ್ತು ಇಬ್ಬರಲ್ಲೂ ಗುರುತು ಸಿಗಲಾರದಷ್ಟು ಬದಲಾವಣೆಗಳೇನು ಆಗಿರಲಿಲ್ಲ.
ಮಾರುತಿ ಗೋಪಿಕುಂಟೆ ಬರಹ

read more
ಮಗಳು ಇಂದಿರಾಗೆ ನೆಹರೂ ಬರೆದ ಮೂರು ಪತ್ರಗಳು

ಮಗಳು ಇಂದಿರಾಗೆ ನೆಹರೂ ಬರೆದ ಮೂರು ಪತ್ರಗಳು

ನಗರಗಳು ಬೆಳೆಯುತ್ತಾ ಹೋದಂತೆ, ಪಟ್ಟಣಗಳು ಮತ್ತು ದೇಶಗಳು ರೂಪುಗೊಳ್ಳತೊಡಗಿದವು. ಒಂದೇ ದೇಶದಲ್ಲಿ ಹತ್ತಿರ ವಾಸಿಸುವ ಜನರು ಪರಸ್ಪರರನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳತೊಡಗಿದರು. ಅವರು ತಮ್ಮಿಂದ ದೂರದಲ್ಲಿ ಬೇರೆ ದೇಶಗಳಲ್ಲಿ ವಾಸಿಸುವ ಜನರಿಗಿಂತ ತಾವೇ ಶ್ರೇಷ್ಟರು ಎಂದು ಯೋಚಿಸತೊಡಗಿದರು. ಜವಾಹರಲಾಲ್‌ ನೆಹರೂ ತಮ್ಮ ಮಗಳು ಇಂದಿರಾಗಾಂಧಿಗೆ ಬರೆದಿದ್ದ ಪತ್ರಗಳನ್ನು ಸುಧಾ ಆಡುಕಳ ಕನ್ನಡಕ್ಕೆ ಅನುವಾದಿಸಿದ್ದು, ಮಕ್ಕಳ ದಿನಾಚರಣೆಯ ಈ ದಿನ ಅವುಗಳಲ್ಲಿನ ಮೂರು ಪತ್ರಗಳು ನಿಮ್ಮ ಓದಿಗೆ ಇಲ್ಲಿವೆ…

read more
ಕನಕದಾಸರು ಕಟ್ಟಿದ ‘ಕಲ್ಯಾಣ’

ಕನಕದಾಸರು ಕಟ್ಟಿದ ‘ಕಲ್ಯಾಣ’

ಗುಣ ಕರ್ಮಕ್ಕೆ ಅನುಸಾರಿಯಾಗಿ ವರ್ಣ ಸೃಷ್ಟಿಯಾಗಿದೆ ಅನ್ನುತ್ತದೆ ಭಗವದ್ಗೀತೆ. ಆದರೆ ಇಲ್ಲಿ ಗುಣ ಕರ್ಮ ಹುಟ್ಟುವ ಮೊದಲೇ ನಿಶ್ಚಯವಾಗಿರುತ್ತದೆ, ಎಂಬುದನ್ನು ಕಾಣಿಸಿಕೊಟ್ಟ ವಚನ ಚಳುವಳಿ ಇದಕ್ಕೊಂದು ಹೊಸ ಭಾಷ್ಯ ಬರೆಯಿತು. ‘ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ’ ಎನ್ನುತ್ತ ಜಾತಿ ಸಾಂಸ್ಥಿಕತೆಗೆ ಪ್ರತಿಭಟನೆ ತೋರಿತು. ‘ಉಳ್ಳವರು ಶಿವಾಲಯ ಮಾಡುವರು’ ಎನ್ನುತ್ತ ಸಾಂಸ್ಕೃತಿಕ ರೂಪದ ಪ್ರತಿಭಟನೆಯನ್ನೂ ರೂಪಿಸಿತು. ‘ಕೊಲುವವನೆ ಮಾದಿಗ’ ಎನ್ನುತ್ತ ಪಂಪನಕಾಲದ ಕುಲದ ಮರು ವ್ಯಾಖ್ಯಾನವನ್ನು ಮುಂದುವರಿಸಿತು.
ಕನಕ ಜಯಂತಿಯಂದು ಡಾ. ಶ್ರೀಪಾದ ಭಟ್ ಬರಹ

read more
ನಡುಗನ್ನಡ ಕಾಲದ ಶತಕ ಸಾಹಿತ್ಯ ಸಮೀಕ್ಷೆ

ನಡುಗನ್ನಡ ಕಾಲದ ಶತಕ ಸಾಹಿತ್ಯ ಸಮೀಕ್ಷೆ

ಶತಕಸಾಹಿತ್ಯವು ಪ್ರಾಕೃತ ಸಾಹಿತ್ಯದಲ್ಲಿ ಉದಯಗೊಂಡು ಸಂಸ್ಕೃತ ಸಾಹಿತ್ಯದಲ್ಲಿ ಸರ್ವತೋಮುಖವಾಗಿ ಬೆಳೆದು ದ್ರಾವಿಡ ಭಾಷೆಗಳಲ್ಲಿ ತನ್ನ ತಣಿಯಾದ ಫಲಗಳನ್ನು ನೀಡಿದೆ. ಸಂಸ್ಕೃತ ಶತಕಗಳ ಪ್ರೇರಣೆಯಿಂದ ಉಭಯಭಾಷಾವಿಶಾರದರಾದ ಕನ್ನಡದ ಅನೇಕ ಮಹಾಕವಿಗಳು ಶತಕಗಳನ್ನು ಬರೆದು ಇದಕ್ಕೊಂದು ಮೆರುಗು ಕೊಟ್ಟಿದ್ದಾರೆ. ಸಂಸ್ಕೃತ ಸಾಹಿತ್ಯದಲ್ಲಿ ಶತಕಗಳು ಕೇವಲ ವೃತ್ತ ರೂಪದಲ್ಲಿ ಕಾಣಿಸಿಕೊಂಡಿವೆ.
ನಡುಗನ್ನಡ ಕಾಲದ ಶತಕ ಸಾಹಿತ್ಯದ ಕುರಿತು ಡಾ. ರಾಜಶೇಖರ ಜಮದಂಡಿ ಬರಹ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ