ಆಟೋ ಕರೆಕ್ಷನ್: ಸುಮಾವೀಣಾ ಸರಣಿ
ಇಂಥ ಅದೆಷ್ಟೋ ಸನ್ನಿವೇಶಗಳನ್ನು ನೀವುಗಳೂ ಕೇಳಿರಬಹುದು. ಆಟೋಗಳಲ್ಲಿ, ಸಿಟಿ ಬಸ್‌ಗಳಲ್ಲಿ ಓಡಾಡುವಾಗ ಇಂಥ ಕೆಲವು ತುಣುಕುಗಳು ಯಾವುದೋ ಸಿನೆಮಾ ಟೀಸರ್‌ಗಳಂತೆ ನಮ್ಮ ಕಣ್ಣೆದುರು ಹಾದು ಹೋಗಬಹುದು. ತರಹೇವಾರಿ ಸಿನೆಮಾಗಳು ಬಂದಂತೆ ಪ್ರಯಾಣದ ಸನ್ನಿವೇಶಗಳೂ ಕೂಡ ಬಂದು ಬಂದು ಹೋಗುತ್ತವೆ. ಕೊರೊನಾ ನಂತರ ಥಿಯೇಟರಿನಲ್ಲಿ ಸಿನೆಮಾಗಳನ್ನು ನೋಡುವವರ ಸಂಖ್ಯೆ ಈಗ ಕುಸಿದಿದೆ. ಎಲ್ಲಾ ಓಟಿಟಿಯಲ್ಲಿ ನೋಡಿಬಿಡ್ತಾರೆ. ಈಗಂತೂ ‘ಡೌನ್ ಪೇಮೆಂಟೋ, ಇಲ್ಲಾ ಸೆಕೆಂಡ್ ಹ್ಯಾಂಡೋ ಮನೆಗ್ ಒಂದ್ ಕಾರ್ ಇರ್ಲಿ’ ಎಂದು ದುಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಆದರೂ ಸ್ವಂತ ವಾಹನ ಹೊಂದಿದ ಬದಲಾವಣೆಯಾಗಿದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ
ಅವಳಿ ನಗರಗಳ ದರ್ಶನ: ದರ್ಶನ್ ಜಯಣ್ಣ ಸರಣಿ
ಇದೆಲ್ಲಕ್ಕೆ ಶಿಕರಪ್ರಾಯದಂತೆ ಇದ್ದುದು ಅಲ್ಲಿನ ಆಲ್ ಕರಾ ಗುಹೆ. ನೋಡಲಿಕ್ಕೆ ನಮ್ಮ ಬದಾಮಿಯ ಗುಹೆಯ ಬಣ್ಣವಿರುವ ಇದು ಸಾವಿರಾರು ವರ್ಷಗಳ ಹಿಂದೆ ಇಲ್ಲಿದ್ದ ಸಮುದ್ರದಿಂದ ರೂಪುಗೊಂಡಿರುವುದಾಗಿಯೂ ಅದರ ಒಳಮೈಯಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಇರುವುದಾಗಿಯೂ ಅಲ್ಲಿನ ಗೈಡ್ ನಮಗೆ ಹೇಳಿದರು. ಅದರ ಎತ್ತರ ಆಕೃತಿ ನಮ್ಮ ಶಿರಸಿಯ ಯಾಣದಂತಿದೆಯಾದರೂ ಒಂದು ಲಾವಾದ ಪರಿಣಾಮದಿಂದ ಮತ್ತೊಂದು ಮರಳುಗಾಡಿನಲ್ಲಿ ಯಾವಾಗಲೋ ಬಿದ್ದ ಬೀಳುತ್ತಿದ್ದ ಮಳೆಯಿಂದ ಆಗಿರಬಹುದೆಂದು ನಂತರ ನಾನು ತಿಳಿದುಕೊಂಡೆ.
ಮಾಘಿಯ ಚಳಿಯಲ್ಲಿ, ಆಲೆಮನೆಯ ಘಮಲಲ್ಲಿ…: ರೂಪಾ ರವೀಂದ್ರ ಜೋಶಿ ಸರಣಿ
ಅಪ್ಪಯ್ಯ “ಯೇ ಹುಡುಗ್ರೇ ಏಳ್ರೇ. ಆಲೇಮನೀಗೆ ಹೋಗಿ ಹಾಲು ಕುಡೀರೇ.” ಎಂದು ಏಳಿಸುತ್ತಿದ್ದರು. ಹಸಿದ ಹೊಟ್ಟೆಗೆ ಕಬ್ಬಿನ ಹಾಲು ಕುಡಿದರೆ ಅದೆಲ್ಲ ರಕ್ತವೇ ಆಗಿಬಿಡುತ್ತದೆಯಂತೆ ಎಂದು ಅಪ್ಪಯ್ಯ ಯಾವಾಗಲೂ ಹೇಳುತ್ತಿದ್ದರು. ಅಪ್ಪಯ್ಯನ ದನಿಗೆ, ನಾವು ಹೊದಿಕೆ ಕಿತ್ತೊಗೆದು, ಮುಖ ತೊಳೆದ ಶಾಸ್ತ್ರಮಾಡಿ, ಆಲೆಮನೆಯತ್ತ ಓಡುತ್ತಿದ್ದೆವು. ಅಷ್ಟರಲ್ಲಿ ಅಪ್ಪಯ್ಯ ಒಳ್ಳೆಯ ಕಬ್ಬು ಹುಡುಕಿ, ಗಾಣಕ್ಕೆ ಕೊಡಿಸಿ, ನಮಗೆ ಕುಡಿಯಲು ಸವಿಯಾದ ಐಸ್ ಕೋಲ್ಡ್ ಹಾಲು ಹಿಡಿದು ಇಟ್ಟಿರುತ್ತಿದ್ದರು. ಮೊದಲೇ ಮಾಘ ಮಾಸದ ಛಳಿ. ಆ ಥಣ್ಣನೆಯ ಹಾಲು ಹೊಟ್ಟೆಗಿಳಿಯುತ್ತಿದ್ದಂತೆಯೇ, ದಂತ ಪಂಕ್ತಿಗಳು, ಮಸೆದುಕೊಳ್ಳುತ್ತ, ಕಟ ಕಟನೆ ಸಪ್ಪಳ ಮಾಡತೊಡಗುತ್ತಿದ್ದವು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ
ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ?: ಬಸವನಗೌಡ ಹೆಬ್ಬಳಗೆರೆ ಸರಣಿ
ಟಿಸಿಹೆಚ್ ಕಾಲೇಜಿನಲ್ಲಿ ಬಹುತೇಕರು ಇಷ್ಟಪಡುತ್ತಿದ್ದುದು ‘ಅಪುನಾ ಸರ್’ ಅವರನ್ನೇ. ಇವರನ್ನು ನಾವು ನಮ್ಮ ಕಾಲೇಜು ಮಿತಿಯಲ್ಲಿ ‘ನಡೆದಾಡುವ ವಿಶ್ವಕೋಶ’ ಎಂದೇ ಕರೆಯುತ್ತಿದ್ದೆವು. ಅವರು ಮೂಲತಃ ‘ಜೀವ ವಿಜ್ಞಾನ ಶಿಕ್ಷಕ’ ರಾಗಿದ್ದಾಗ್ಯೂ ನಮಗೆ ಅವರ ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ, ಸಮಾಜ ವಿಜ್ಞಾನದಲ್ಲಿ ಅವರಲ್ಲಿದ್ದ ಪಾಂಡಿತ್ಯ, ಪ್ರಖರ ದೇಶಪ್ರೇಮ, ಸಮಯಪ್ರಜ್ಞೆ, ನಾಯಕತ್ವ ಗುಣ, ಪಾಠವನ್ನು ಅರ್ಥೈಸುತ್ತಿದ್ದ ರೀತಿ ನಮ್ಮನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೈದನೆಯ ಕಂತು ನಿಮ್ಮ ಓದಿಗೆ
ಸರ್ಕಾರಿ ಸಿಬ್ಬಂದಿಯೊಂದಿಗೆ ನಡೆದ ಜಟಾಪಟಿ: ಎಚ್. ಗೋಪಾಲಕೃಷ್ಣ ಸರಣಿ
ಬೆಳಿಗ್ಗೆಯಿಂದ ಸುತ್ತಿದ್ದು, ಹಸಿವಿನ ಹೊಟ್ಟೆ, ನಾಲ್ಕು ಮಹಡಿ ಹತ್ತು ಎರಡು ಮಾಡಿ ಇಳಿ… ಬಿಪಿ ಏರಿತು ಕಾಣಿರಿ… ವಾಚಾಮಗೋಚರ ಪುಂಖಾನು ಪುಂಖವಾಗಿ ಬಾಯಿಂದ ಬೈಗುಳ ಹೆಂಗೆ ಯಾವ ಡೆಸಿಮಲ್‌ನಲ್ಲಿ ಉಕ್ಕಿತು ಅಂದರೆ ಮೇಲಿನ ಮಹಡಿ ಕೆಳಗಿನ ಮಹಡಿ ನಾನು ನಿಂತಿದ್ದ ಮಹಡಿ ಜನ ಸುತ್ತಲೂ ಸೇರಿಬಿಟ್ಟರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೆಂಟನೆಯ ಕಂತು
ಗಣಪನ ಸಂಗಡ ವ್ಯಾಕರಣ: ಸುಮಾವೀಣಾ ಸರಣಿ
ರುಚಿನೋಡಿ ರವೆಯನ್ನು ನೋಡುತ್ತಿದ್ದಂತೆ 12 ವರ್ಷದ ಮಗನ ನೆನಪಿಗೆ ಬಂದದ್ದೆ “ರವೆ ಉಂಡೆ ರವೆ ಉಂಡೆ ಬೀರಿನಲ್ಲಿ ಕಂಡೆ” ಎಂಬ ಶಿಶುಪದ್ಯದ ಸಾಲುಗಳು ಬಂದರೆ ನನಗೆಂತೂ ಆ ರವಮಂ ನಿರ್ಜಿತ ಕಂಠೀರವಮಂ ನಿರಸ್ತಘನ ರವಮಂ ಕೋಪಾರುಣ ನೇತ್ರಂ ಕೇಳ್ದಾ ನೀರೊಳಗಿರ್ದುಂ ಬೆಮರ್ತನ್ ಉರಗಪತಾಕಂ ಎಂಬ ರನ್ನನ ಕೃತಿಯ 6ನೇ ಸಂಧಿಯ 22 ನೆಯ ಪದ್ಯ. ಇದು ದುರ್ಯೋಧನನ್ನು ಆತನ ಕೋಪವನ್ನು ವಿವರಿಸುವ ಪದ್ಯ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ನಾಲ್ಕನೆಯ ಬರಹ ನಿಮ್ಮ ಓದಿಗೆ
ಪುಸ್ತಕ ಕೊಳ್ಳಲು ಹೋದವನಿಗೆ ಲೈಬ್ರರಿ ಕೊಟ್ಟವರು: ದರ್ಶನ್ ಜಯಣ್ಣ ಸರಣಿ
ಮಾತು ಕಥೆಯೆಲ್ಲ ಮುಗಿದಮೇಲೆ ಕಾರಿನ ಡಿಕ್ಕಿ ಮತ್ತೊಮ್ಮೆ ತೆಗೆಯಲು ಹೇಳಿದರು. ನಾನೂ ಹಾಗೆಯೇ ಮಾಡಲಾಗಿ ಸಾರಾ ಮತ್ತು ಆಲ್ವಿನ್ ದಂಪತಿಗಳು ತಮ್ಮ ಕಾರಿನಿಂದ ಹಲವು ಬ್ಯಾಗುಗಳಲ್ಲಿದ್ದ ನೂರಾರು ಪುಸ್ತಕಗಳನ್ನು ನಾನು ಕೇಳದೆಯೇ ಉಚಿತವಾಗಿ ನನ್ನ ಕಾರಿಗೆ ಸೇರಿಸಿದರು. ನಾನು ಇವೆಲ್ಲವನ್ನೂ ಯಾವಾಗ ಓದುವುದು ಎಂದು ಯೋಚಿಸುತ್ತಿದ್ದೆ! ಬೇಡವೆಂದರೂ ಅವರು ಕೇಳಲಿಲ್ಲ. ಹೀಗೆ ಪುಸ್ತಕ ಕೊಳ್ಳಲು ಹೊರಟವನಿಗೆ ಲೈಬ್ರರಿಯೇ ದೊರಕಿದ್ದು ಅತ್ಯಂತ ಚೇತೋಹಾರಿ ಸಂಗತಿ.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿ
ಗೌರಮ್ಮನ ಜತ್ಯಾಗೇ ಬರಾ ಗಣಪ್ಪ: ಸುಮಾ ಸತೀಶ್ ಸರಣಿ
ನಮ್ಮೂರಿನ್ ಗೌರೀಗೆ ಪೂಜೆ ಮಾಡ್ತಿದ್ದಿದ್ದು ವಸಿ ಜನ್ವೇಯಾ. ಆದ್ರೆ ಗಣೇಶುನ್ನ ಬಿಡಾಕೇಂತ್ಲೇ ಊರಿನ್ ಜನ್ವೆಲ್ಲಾ ಮೇಲ್ ಬಿದ್ದು ಕಾದ್ಕಂಡು ಕುಂತಿರ್ತಿದ್ವಿ. ಐದನೇ ದಿನ ಸಂಜೀ ಹೊತ್ನಾಗೆ, ಗೌರಮ್ಮುಂಗೆ ಮಡ್ಲು ತುಂಬಿ, ಮಗುನ್ನ ಮುಂದಿಟ್ಗಂಡು, ಅವ್ವನ್ನ ಹಿಂದ್ ಕುಂಡ್ರಿಸಿ ಮೆರೋಣಿಗೆ ಹೊಂಡುತಿತ್ತು. ರಾಮ ದ್ಯಾವ್ರ ಗುಡೀಗ್ಳಿಂದ ನಮ್ಮನೆ ಆಸಿ, ಕೆರೆ ಏರಿ ಕಡೆ ಊರ ಗಂಡಸರು, ಹೆಂಗಸರು, ಚಳ್ಳೆ ಪಿಳ್ಳೆಗ್ಳು ಜೈಕಾರ ಹಾಕ್ಕಂಡು ಗಣಪತಿ ಬಾಪ್ಪ ಮೋರ್ಯಾ ಅಂತ ಕಿರುಚ್ಕಂಡು ಅವುರ್ ಹಿಂದಿಂದ್ಲೇ ಸಾಗುಸ್ಕಂಡು ಹೋಗ್ತಿದ್ವಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಗಣೇಶ ಚತುರ್ಥಿಯ ಆಚರಣೆಯ ಕುರಿತು ಹೇಳುತ್ತಲೇ ಈ ಸರಣಿ ಇಲ್ಲಿಗೆ ಮುಕ್ತಾಯವಾಗುತ್ತದೆ
ಮಲೆನಾಡಿನ ಹಬ್ಬಗಳ ಸಂಭ್ರಮ: ರೂಪಾ ರವೀಂದ್ರ ಜೋಶಿ ಸರಣಿ
ಅಂಥ ಬಡತನದಲ್ಲೂ, ಅಪ್ಪಯ್ಯ ಉಮೇದಿಯಿಂದ, ಅದಕ್ಕೆ ಬೇಕಾಗುವ ವಿವಿಧ ಬಣ್ಣದ ಹಾಳೆ, ಝರಿ ಎಲ್ಲವನ್ನೂ ಕೊಂಡು ತರುತ್ತಿದ್ದರು. ಆಗೆಲ್ಲ ಈಗಿನಂತೆ ವಿದ್ಯುತ್ ಸೌಲಭ್ಯ ನಮ್ಮಲ್ಲಿ ಇರಲಿಲ್ಲ. ಆದರೂ ಅದೊಂದು ಬಗೆಯ ಬಣ್ಣದ ಹಾಳೆಗಳನ್ನು ಕಲಾತ್ಮಕವಾಗಿ ಕತ್ತರಿಸಿ ಅಂಟಿಸಿ, ಕೇವಲ ಎಣ್ಣೆಯ ದೀಪದಲ್ಲೂ ಆ ಮಂಟಪ ಝಗಮಗಿಸುವಂತೆ ಮಾಡುತ್ತಿದ್ದರು. ಕೈಲಿ ಹಿಡಿದರೆ, ಸಣ, ಸಣ ಎಂದು ಸದ್ದಾಗುವಂತಿದ್ದ ಆ ಬಣ್ಣದ ಕಾಗದವನ್ನು “ಸಂತ್ರ ತಗಡು” ಅಂತ ಕರೆಯುತ್ತಿದ್ದರು. ಅದನ್ನು ಕಲಾತ್ಮಕವಾಗಿ ಕತ್ತರಿಸಿ, ಗುಬ್ಬಿ ಮಾಡಿ, ಮಂಟಪದ ಕಂಬಕ್ಕೆ, ಅಕ್ಕ ಪಕ್ಕದ ಪಟ್ಟಿಗಳಿಗೆ ಅಂಟಿಸಿ, ಅದಕ್ಕೆ ಝರಿಯ ಪುಡಿಯನ್ನು ಅಂಟಿಸಿ, ನಮ್ಮಣ್ಣ ಅದ್ಭುತವಾದ ಝಗಮಗ ಮಂಟಪ ಮಾಡುತ್ತಿದ್ದ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ









