ವೃದ್ಧಾಪ್ಯ ಮತ್ತು ಸಮಾಜ: ಗುರುಪ್ರಸಾದ ಕುರ್ತಕೋಟಿ ಸರಣಿ
ಅಜ್ಜಿಯರು ತಮ್ಮ ಮಕ್ಕಳ ಮೇಲಿನ ಅಕ್ಕರೆಯಿಂದ ವಿವಿಧ ಕೆಲಸ ಮಾಡಿಕೊಂಡು, ಮೊಮ್ಮಕ್ಕಳ ಚಾಕರಿ ಮಾಡಿಕೊಂಡೊ ಅಲ್ಲಿ ಸಮಯ ಕಳೆಯುತ್ತಿದ್ದರು. ಆದರೆ ಅಜ್ಜಂದಿರಿಗೆ ಅಲ್ಲಿ ಬೇಜಾರಾಗುತ್ತಿತ್ತು. ಕೆಲವರು ಅಲ್ಲಿನ ಜೀವನ ಶೈಲಿಯನ್ನು ಇಷ್ಟಪಡುತ್ತಿದ್ದರು ಕೂಡ. ಮತ್ತೆ ಕೆಲವರು ಅಲ್ಲಿಯೇ ಹಲವಾರು ಚಟುವಟಿಕೆಗಳನ್ನು ಮಾಡಿಕೊಂಡು ಖುಷಿಯಾಗಿ ಇರುತ್ತಿದ್ದರು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ
ಮರೆಯಲಿ ಹೆಂಗೇ ಸೀನಿಯರ್ ಗಳ ಸಹಕಾರ?: ಬಸವನಗೌಡ ಹೆಬ್ಬಳಗೆರೆ ಸರಣಿ
ಗಣಿತ ವರ್ಕ್ ಮಾಡಲಿಕ್ಕೆ, ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆಂದು ಬಂದವರ ಬಳಿ ‘ನಾನು ಹಂಚುತ್ತೇನೆ’ ಎಂದು ಹಿಂಬದಿ ಖಾಲಿ ಇರುತ್ತಿದ್ದ ಪಾಂಪ್ಲೀಟ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ. ಅವನ್ನೆಲ್ಲಾ ಸೇರಿಸಿ ಒಂದು ಬುಕ್ ರೀತಿ ಮಾಡಿಕೊಂಡು ಖಾಲಿ ಬದಿಯ ಹಾಳೆಯನ್ನು ಬರೆಯಲಿಕ್ಕೆ ಬಳಸುತ್ತಿದ್ದೆ. ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ
ಮರೆಯಲಾಗದ ಮಾತೆ: ರಂಜಾನ್ ದರ್ಗಾ ಸರಣಿ
ಮಾತಾಜಿಯವರು ಸ್ಪಷ್ಟವಾದ ಧ್ವನಿಯಲ್ಲಿ ಹೇಳುತ್ತಿದ್ದರು. ಆಗ ಅವರು ಮಾತನಾಡುತ್ತಿದ್ದುದು ಮಹಿಳಾ ಜಗದ್ಗುರುಗಳ ವಿಚಾರವಾಗಿತ್ತು. ಅವರು ಹೇಳುವ ಶೈಲಿ ವೀರೋಚಿತವಾಗಿತ್ತು. ಯೌವನದ ಉತ್ಸಾಹದಿಂದ ಕೂಡಿದ ಸಾತ್ವಿಕ ಸೌಂದರ್ಯ ಮತ್ತು ಅಧ್ಯಾತ್ಮದ ಮೆರಗು ಮೇಳೈಸಿದ ಅವರ ಮಾತು, ಮಹಿಳೆಯ ಅಸ್ಮಿತೆಯ ಬಗೆಗಿನ ದೃಢನಿರ್ಧಾರದ ಧ್ವನಿಯಾಗಿತ್ತು. ಅವರ ಮಾತಿನಿಂದ ಸಭೆಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಮಹಿಳೆ ಜಗದ್ಗುರುವಾಗುವುದೆಂದರೇನು? ಅದು ಹೇಗೆ ಸಾಧ್ಯ?
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 82ನೇ ಕಂತು ನಿಮ್ಮ ಓದಿಗೆ
ನೆನಪಿನಲ್ಲಿ ಉಳಿಯುವ ಸಾಮಾನ್ಯರು: ಚಂದ್ರಮತಿ ಸೋಂದಾ ಸರಣಿ
ಒಮ್ಮೆ ವಾಕಿಂಗಿಗೆ ಹೋಗುವಾಗ ಸರ್ಕಲ್ಲಿನಲ್ಲಿ ಅವಳು ಸೊಪ್ಪು ಮಾರುವುದನ್ನು ಗಮನಿಸಿದೆ. ಒಂದು ದಿನ ಅವಳು ನನ್ನನ್ನು ಕರೆದು ʻಸೊಪ್ಪು ತಕಳಿ. ಈ ಸೊಪ್ಪು ಬಾರಿ ಚೆನಾಗದೆʼ ಅಂತ ಕೊಟ್ಟಳು. ಇನ್ನೂ ಮೊಬೈಲ್ ಕೈಯಲ್ಲಿ ಇಲ್ಲದ ಕಾಲ. ʻದುಡ್ ತಂದಿಲ್ಲʼ ಅಂದೆ. ʻನಾಳೆ ಕೊಡಿʼ ಅಂದಳು. ʻನಾಳೆ ಬರದಿದ್ದರೆ?ʼ ಅಂದಿದ್ದಕ್ಕೆ ʻಯಾವತ್ತೋ ಕೊಡಿ ಹೋಗಿʼ ಅಂದಳು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ತೆರಡನೆಯ ಕಂತು
ಬೆಂಗಳೂರು ಮತ್ತು ರಾಜಕಾರಣ: ಎಚ್. ಗೋಪಾಲಕೃಷ್ಣ ಸರಣಿ
ಜೇಪೀ ನಿಧಾನಕ್ಕೆ ತಮ್ಮ ಭಾಷಣ ಶುರು ಮಾಡಿ ಅಂದಿನ ಸರ್ಕಾರ ಹೇಗೆ ದೇಶವನ್ನು ಹಾಳು ಮಾಡಿದೆ ಎಂದು ವಿವರಿಸಿದರು. ಯುವಜನತೆ ಸಿಡಿದು ಬೀಳಬೇಕು. ನಮ್ಮ ಕಾನೂನು ಪರಿಪಾಲಕರು ನ್ಯಾಯಬದ್ಧವಲ್ಲದ ಆದೇಶ ಪಾಲಿಸಬಾರದು. ನಮ್ಮ ಸೈನಿಕರೂ ಸಹ ಅವರ ಬುಕ್ ಆಫ್ ಲಾ ಮೀರಿದ ಆದೇಶ ತಿರಸ್ಕರಿಸಬೇಕು….
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ
ಹೊಳೆಸಾಲಿಗೆ ಕರೆಂಟ್ ಶಾಕ್: ಸುಧಾ ಆಡುಕಳ ಅಂಕಣ
ಇದಾಗಿ ವಾರದೊಳಗೆ ನಡುರಾತ್ರಿಯಲ್ಲಿ ಪಕ್ಕದ ಮನೆಯಿಂದ ಅರಚಿದ ಶಬ್ದಕ್ಕೆ ನೀಲಿಯ ಮನೆಯವರೆಲ್ಲರೂ ಎಚ್ಚೆತ್ತರು. ಅಕ್ರಮವಾಗಿ ಎಳೆದ ಕರೆಂಟು ವೈಯರಿನ ಹೊರಗಿನ ಕವಚವನ್ನು ಇಲಿಯೊಂದು ಕತ್ತರಿಸಿಬಿಟ್ಟಿದ್ದರಿಂದ ನಡುರಾತ್ರಿಯಲ್ಲಿ ಸ್ವಿಚ್ ಹಾಕಲು ಕೈಹಾಕಿದ ನಾಗಿ ಶಾಕ್ ಹೊಡೆದು ಮಾರುದೂರ ಹೋಗಿ ಬಿದ್ದಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿಮೂರನೆಯ ಕಂತು ನಿಮ್ಮ ಓದಿಗೆ
ಕೂರಾಪುರಾಣ ೨: ಏನೆಂದು ಹೆಸರಿಡುವುದು ಈ ಚೆಂದದ ಕೂಸಿಗೆ?
ಹಾಸಿಕೊಳ್ಳುತ್ತಿದ್ದ ಹಾಸಿಗೆಗಳನ್ನು ಅದಕ್ಕೆಂದು ಹಾಸಿ ಮೆತ್ತನೆಯ ಹಾಸಿಗೆ ಸಿದ್ಧವಾಯಿತು. ಅದನ್ನು ಅದರೊಳಗೆ ಕಳಿಸಿ ಹೊರಗಿನಿಂದ ಚಿಲಕ ಹಾಕಿದರೆ ಎಷ್ಟೊತ್ತು ಮಲಗಲೇ ಇಲ್ಲ! ನಮ್ಮನ್ನೇ ನೋಡುತ್ತ ಕೂತು ಬಿಟ್ಟಿತ್ತು. ನಾವು ಮಲಗುವ ಕೋಣೆಯಲ್ಲಿ ಎರಡು ಕಣ್ಣುಗಳು ನಮ್ಮ ಮೇಲೆಯೇ ನೆಟ್ಟಿವೆ ಎಂದರೆ ನಮಗೆ ನಿದ್ದೆಯಾದರೂ ಹೇಗೆ ಬಂದೀತು? ಅದೂ ಕತ್ತಲಲ್ಲಿ ಹೊಳೆಯುವ ಅದರ ಕಣ್ಣುಗಳು!
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ
ಮಕ್ಕಳು ಟೀಚರ್ ಆಗಬಲ್ಲರು: ಅನುಸೂಯ ಯತೀಶ್ ಸರಣಿ
ನನ್ನ ಮುಖ ಅವರ ಖುಷಿಗೆ ಸಾಕ್ಷಿ ಹಾಕುತ್ತಿತ್ತು. ಯಾಕೆ? ಮಿಸ್ ಲೇಟ್ ಆಯ್ತು ಅಂದರು. ಬಸ್ ಸಿಗ್ಲಿಲ್ಲ ಕಣ್ರೋ ಅಂದೆ. ಅದು ಸರಿ ಇದುವರೆಗೂ ನೀವು ಏನು ಮಾಡುತ್ತಿದ್ದೀರಿ ಅಂದಾಗ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ
‘ಮಾಡರ್ನಿಸ್ಟ್’ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ
ಒಕಾರ-ರು ಮೂಲಭೂತವಾಗಿ ಒಬ್ಬ ಭಾವಗೀತಾತ್ಮಕ ಕವಿಯಾಗಿದ್ದರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ನೈಜೀರಿಯಾ ದೇಶದ ಕವಿ ಗೇಬ್ರಿಯಲ್ ಒಕಾರಾ-ರವರ (Gabriel Okara, 1921-2019) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ









