ನೀ ದೇಹದೊಳಗೋ, ದೇಹ ನಿನ್ನೊಳಗೋ: ರಾಮ್ ಪ್ರಕಾಶ್ ರೈ ಕೆ ಸರಣಿ
ಇನ್ನೇನು ಶ್ರದ್ಧಾಂಜಲಿಗೆ ಒಳಗಾದ ಎಂದು ಭಾವಿಸುವಾಗಲೇ, ವೈದ್ಯಕೀಯ ವಿಜ್ಞಾನದ ಎಲ್ಲಾ ಊಹೆಗಳ ಪೊರೆಯ ಸರಿಸಿ ಮತ್ತೆ ಎದ್ದು ಬರುತ್ತಾನೆ. ಆದರೆ ಆತ ತನ್ನ ಪೂರ್ವ ನೆನಪುಗಳೆಲ್ಲವನ್ನೂ ಕಳೆದುಕೊಂಡಿರುತ್ತಾನೆ. ತನ್ನ ಮಾತಾ ಪಿತರ ಸಹಿತವಾಗಿ. ವೈದ್ಯಕೀಯ ವಿಜ್ಞಾನವೇ ನಂಬಲಾರದಂತೆ ಆತ ಬದಲಾಗಿರುತ್ತಾನೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
ಹೌಡಿ ನೇಬರ್ಸ್!: ಗುರುಪ್ರಸಾದ ಕುರ್ತಕೋಟಿ ಸರಣಿ
“ನೀವು ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿದ್ದೀರಿ. ಇಷ್ಟು ರಾತ್ರಿಯಾಗಿದೆ. ನಿಮ್ಮ ಗಲಾಟೆಯಿಂದ ನನಗೆ ನಿದ್ದೆ ಕೂಡ ಬರುತ್ತಿಲ್ಲ. ನಿಮಗೆ ಅಷ್ಟು ಗೊತ್ತಾಗೋದಿಲ್ಲವೇ..” ಎಂಬ ಅರ್ಥದಲ್ಲಿ ಬೈದ. ನಮಗೆಲ್ಲ ಹಾಗೆ ಮಾಡಿದೆವಲ್ಲ ಎಂಬ ಪಾಪ ಪ್ರಜ್ಞೆ ಬಂತು. ಕ್ಷಮಿಸಿ ಅಂತ ಕೇಳಿದೆವು. ಆದರೆ ಅಲ್ಲಿಯ ನಾಗರಿಕನಾಗಿದ್ದ ಚಂದ್ರುಗೆ ತುಂಬಾ ಮರ್ಯಾದೆ ಹೋಗಿಬಿಟ್ಟಿತು. ಅವನಿಗೆ sorry ಹೇಳುತ್ತಾ, ಇಷ್ಟೆಲ್ಲಾ ಗದ್ದಲ ಹಾಕಬಾರದಿತ್ತು ನೀವು ಎಂಬಂತೆ ನಮ್ಮ ಕಡೆ ನೋಡಿದ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತನೆಯ ಬರಹ
ಬದುಕಿನ ವರ್ಷಕಾಲದ ವಸಂತೋತ್ಸವ: ಸುಮಾವೀಣಾ ಸರಣಿ
ಇಂಥ ಮಳೆಯಲ್ಲಿ ಶಾಲೆಗೆ ಹೋಗುವುದೇ ದೊಡ್ಡ ಸಮಸ್ಯೆ. ಎಂಥ ಚಿಕ್ಕ ಹೊಂಡವಿದ್ದರೂ ಸರಿ ಪೇಪರಿನ ದೋಣಿಗಳನ್ನು ತೇಲಿಬಿಡುವ ನಗರದ ಹುಡುಗರ ಆಟ ಒಂದೆಡೆಯಾದರೆ ಬೆಟ್ಟ ಗುಡ್ಡಗಳ ತಪ್ಪಲಲ್ಲಿ ಹಳ್ಳ ತೋಡಿನ ಪಕ್ಕದಲ್ಲಿ ತೋಟದ ಮನೆಗಳವರ ಕಷ್ಟ ಹೇಳತೀರದು. ರಭಸದ ಮಳೆ ಬಂದರೆ ಒಂದೋ ಗುಡ್ಡ ಕುಸಿಯುವ ಭೀತಿ. ಇಲ್ಲವೇ ಮಳೆ ನೀರು ಮನೆಗೆ ನುಗ್ಗುವ ಭೀತಿ ಸ್ವಲ್ಪ ಮಳೆ ಬಂದರೂ ಸೇತುವೆಗಳು ತೇಲುವ ಹಾಗಾಗುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ
ನಮ್ಮನು ಪ್ರಭಾವಿಸಿದ ಮೇಷ್ಟ್ರುಗಳಿವರು…: ಬಸವನಗೌಡ ಹೆಬ್ಬಳಗೆರೆ ಸರಣಿ
ಒಂದು ಮಗು ದಿನದ 24 ಗಂಟೆಯಲ್ಲಿ ಶಾಲೆಯಲ್ಲಿ ಬರೀ 8 ಗಂಟೆ ಇರುತ್ತಾನೆ. ಆದರೆ ಇನ್ನುಳಿದ 16 ಗಂಟೆ ಮನೇಲಿ ಇರುತ್ತಾನೆ. ಸಮಾಜದಲ್ಲಿರುವ ಉಳಿದವರೂ ಕೂಡ ಮಕ್ಕಳ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ‘ಸಂಗದಂತೆ ಬುದ್ಧಿ ಊಟದಂತೆ ಲದ್ಧಿ’ ಎಂಬಂತೆ ಸಹವಾಸವೂ ಕೂಡ ಮುಖ್ಯ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಬದುಕಲು ಕಲಿತೆವು: ರಂಜಾನ್ ದರ್ಗಾ ಸರಣಿ
ಕಿಚ್ಚಿನಲ್ಲಿ ಕೋಲ ಬೈಚಿಟ್ಟಾಗ ಎರಡೂ ಕೋಲುಗಳು ಕಿಚ್ಚಿನಿಂದಾಗಿ ನಿಗಿನಿಗಿ ಕೆಂಡಗಳಾಗುತ್ತವೆ. ಅವು ನಿಗಿನಿಗಿ ಕೆಂಡವಾದ ನಂತರ ಒಂದೇ ತೆರನಾದಂತೆ. ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿಕೊಂಡಾಗ ಆ ಎರಡೂ ದೀಪಗಳು ಒಂದೇ ರೀತಿಯ ಬೆಳಕು ಕೊಡುತ್ತವೆ. ಹೀಗೆ ಬಸವಣ್ಣನವರು ಗುರು-ಶಿಷ್ಯ ಸಂಬಂಧದ ಕುರಿತು ಹೇಳಿದ್ದಾರೆ. ಕೆಂಡಗಳ ಶಾಖ, ದೀಪಗಳ ಬೆಳಕು ಒಂದೇ ರೀತಿಯವು ಆಗುತ್ತವೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ನಾನಾ… ಸನ್ಯಾಸಿನಾ…!: ಎಚ್. ಗೋಪಾಲಕೃಷ್ಣ ಸರಣಿ
ಖಾದಿ ಬೋರ್ಡ್‌ಗೆ ಹೋಗೋದು, ಅಲ್ಲಿಂದ ಈ ಕೇಸರಿ ಅಥವಾ ಕಾವಿ ದಟ್ಟಿ ತರೋದು ಅದನ್ನು ಮೂರೂ ಹೊತ್ತು ಸುತ್ತಿಕೊಂಡು ಓಡಾಡೋದು. ಇದು ನಮ್ಮ ಅಮ್ಮನಿಗೆ ಇಷ್ಟ ಇಲ್ಲ. ಕಾರಣ ಇವನು ರಾಮಕೃಷ್ಣ ಆಶ್ರಮಕ್ಕೆ ಹೋಗಿದ್ದ, ಅಲ್ಲಿ ಪ್ರಭಾವ ಇವನೂ ಸನ್ಯಾಸಿ ಆಗಿಬಿಡ್ತಾನೆ ಎನ್ನುವ ಭಯ. ಇದನ್ನು ಅಮ್ಮ ನನ್ನ ಮದುವೆ ಆದ ಎಷ್ಟೋ ವರ್ಷದ ನಂತರ ತನ್ನ ಸೊಸೆಗೆ ಅಂದರೆ ನನ್ನ ಹೆಂಡತಿಗೆ ಹೇಳಬೇಕಾದರೆ ನನ್ನ ಕಿವಿಗೆ ಬಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಶುರು….
ಅಮ್ಮ ‘ಬೆಳಗಾರುತಿ ಬೆಳಗಾರತಿ ದತ್ತಾತ್ರೇಯನಿಗೆ’ ಎಂದು ಹಾಡುತ್ತಿದ್ದರೆ ಅದಕ್ಕೆಷ್ಟು ಅರ್ಥವಾಗಿತ್ತೋ… ಒಳಗೆ ಬರಲೊಲ್ಲೆ ಎಂಬಂತೆ ಹೊಸ್ತಿಲಿಗೆ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದ ಅದರ ಬಲಗಾಲನ್ನು ಎತ್ತಿ ಒಳಗೆ ಇಡಿಸಿದ್ದೆವು. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಅದು ಮನೆಯೊಳಗೆ ಓಡಾಡುವಾಗ ಅದನ್ನು ಎಷ್ಟು ನೋಡಿದರೂ ಸಾಲದು. ನಾವು ಕರೆದರೂ ಹತ್ತಿರ ಬರದೇ ಕುರ್ಚಿಯ ಅಡಿಗೆ ಹೋಗಿ ಮಲಗುತ್ತಿತ್ತು.
ತಮ್ಮ ಮುದ್ದು ನಾಯಿಯ ಕುರಿತು ಸಂಜೋತಾ ಪುರೋಹಿತ ಬರೆಯುವ ಹೊಸ ಸರಣಿ “ಕೂರಾಪುರಾಣ”
ಭಾಷೆಯ ಮುಖವಾಡಗಳನ್ನು ತೆಗೆಸುವ ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ
ಲೀಪ್ಸ್‌ಕರವರು ವಿಸ್ತಾರವಾದ ರೂಪಕಗಳು ಹಾಗೂ ಕಾವ್ಯಾತ್ಮಕವಾದ ಪರಿಕಲ್ಪನೆಗಳನ್ನು ಮುಕ್ತವಾಗಿ ಬಳಸತೊಡಗಿದರು, ಹಾಗೇ ಅವುಗಳ ಅರ್ಥಗಳನ್ನು ಕೂಡ ಸಂಕೀರ್ಣಗೊಳಿಸುತ್ತಾ ಹೋದರು. ಅವರ ಕವನಗಳಲ್ಲಿನ ಆಗುಹೋಗುಗಳು ಒಂದು ತರಹದ ಅತಿವಾಸ್ತವಿಕವಾದ ಸ್ವಪ್ನವ್ಯೋಮದಲ್ಲಿ ನಡೆಯುತ್ತದೆ. ಆದ್ದರಿಂದ ಕವನಗಳಲ್ಲಿ ಬರುವ ಪಾತ್ರಗಳಿಗೆ ಕಲ್ಪನೆಯೊಂದೇ ಬಿಡುಗಡೆಯ ಮಾರ್ಗವಾಗುತ್ತದೆ.
ಮದುವೆ ಎನ್ನುವ ಊರ ಸಂಭ್ರಮ: ಚಂದ್ರಮತಿ ಸೋಂದಾ ಸರಣಿ
ಈಗಿನಂತೆ ಅವರಪಾಡಿಗೆ ಅವರು ಮದುವೆಗೆ ಹೋಗುವ ರಿವಾಜಿರಲಿಲ್ಲ. ಎಲ್ಲರನ್ನೂ ಒಳಗೊಂಡು ಹೋಗುವುದಿತ್ತು. ಹೋಗುವಾಗ ಬರುವಾಗ ಹಾಡುಗಳ ಸ್ಪರ್ಧೆ ಇರುತ್ತಿತ್ತು. ಯಾರು ಎಷ್ಟು ಹಾಡನ್ನು ಹೇಳುತ್ತಾರೆ ಅಂತ. ಹೆಣ್ಣುಮಕ್ಕಳು ತಮ್ಮ ಹಾಡಿನ ಸಾಮರ್ಥ್ಯವನ್ನು ಒರೆಹಚ್ಚುವ ಅವಕಾಶವನ್ನು ಕಳೆದುಕೊಳ್ಳುತ್ತಿರಲಿಲ್ಲ. ಮದುಮಗನನ್ನು ಎದುರುಗೊಳ್ಳುವುದಿರಲಿ, ಸಭಾಪೂಜೆಯೋ, ವರಪೂಜೆ ಅಥವಾ ಧಾರೆ ಯಾವುದೇ ಸನ್ನಿವೇಶವನ್ನು ಬಿಡದೆ ಹಾಡುತ್ತಿದ್ದರು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ









