ತೀರಿಹೋದವರನ್ನು ಕುರಿತು ಮಾತು ಬೇಕೆ?
ತೀರಿಹೋದವರನ್ನು ಎಷ್ಟು ನೆನಸಿಕೊಳ್ಳಬೇಕು, ಹೇಗೆ, ಯಾವಾಗ ನೆನಸಿಕೊಳ್ಳಬೇಕು ಎಂಬುದು ಒಂದು ಕಲೆ, ವಿಜ್ಞಾನ ಮತ್ತು ಕೈಗಾರಿಕೆ. ಸದ್ಯವನ್ನೇ ತೆಗೆದುಕೊಳ್ಳಿ. ಗಾಂಧಿ, ನೆಹರು, ಸಾವರ್ಕರ್, ಟಿಪ್ಪು, ಇವರನ್ನೆಲ್ಲ ಹೇಗೆ, ಎಷ್ಟು ನೆನಸಿಕೊಳ್ಳಬೇಕು, ಎಷ್ಟು ಮರೆಯಬೇಕು, ಇವರ ಬಗ್ಗೆ ಎಷ್ಟು, ಯಾವ ಮಾತನಾಡಬೇಕು ಎಂದು ನಮಗೆಲ್ಲ ಪಾಠ ಹೇಳಿ ಕೊಡಲು ಜ್ಞಾನವಂತರ ಎಷ್ಟು ದೊಡ್ಡ ಪಡೆಯೇ ಇದೆ. ಶ್ರಾದ್ಧ ಕರ್ಮಗಳನ್ನು ಮಾಡಿಸುವ ಪುರೋಹಿತರ ಸಂಖ್ಯೆಗಿಂತ ಈ ಪಡೆಯಲ್ಲೇ ಹೆಚ್ಚು ಜನ ಉದ್ಯೋಗ ಪಡೆದಿದ್ದಾರೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿ
ಬದುಕೇ ಒಂದು ಓಟದ ಸ್ಪರ್ಧೆ…
ಚಿತ್ರಕ್ಕೆ ನಮ್ಮ ಪ್ರವೇಶ, ಗಡಿಯಾರವನ್ನು ತಲೆಯ ಮೇಲಿಟ್ಟುಕೊಂಡಿದ್ದ ಮರದ ಮುಖದ ಅಷ್ಟಾವಕ್ರ ಪ್ರಾಣಿ ಬಾಯಿ ತೆರೆದು ಉಂಟಾದ ಕತ್ತಲೆಯಲ್ಲಿ ಕ್ಯಾಮೆರಾ ಜೂ಼ಮ್-ಇನ್ ಮಾಡುವ ಮೂಲಕ. ಆಗ ಎದುರಾಗುತ್ತದೆ ಒಂದಕ್ಕೊಂದು ಸಂಬಂಧ ಮತ್ತು ಸಾತತ್ಯವಿರದ ಪ್ರಶ್ನೆ ಮತ್ತು ಉತ್ತರಗಳನ್ನು ಹುಡುಕಾಡುವುದೇ ಮನುಷ್ಯನ ಬದುಕು ಎನ್ನುವುದನ್ನು ಟಿ. ಎಸ್. ಎಲಿಯಟ್ ಮತ್ತು ಹೆರ್‌ಬರ್ಗರ್ ಅವರಿಂದ ಉದ್ಧರಿಸಿದ ಸಾಲುಗಳು ಮೂಡಿ, ಅಡ್ಡಾದಿಡ್ಡಿ ಓಡೋಡುತ್ತಲಿರುವ ಜನಜಂಗುಳಿ ಮರೆಯಾಗುತ್ತಿದ್ದಂತೆ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಟೆಲಿಫೋನ್ ಬೂತಿನಲ್ಲಿ ಮಾನಿ ಲೋಲಾಗೆ ಮಾತಾಡುವ ದೃಶ್ಯದಲ್ಲಿ ಘಟನೆಯ ಮೂಲಕ್ಕೆ ಪರಿಚಿತಗೊಳ್ಳುತ್ತೇವೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ ಸರಣಿ
ಒಳಾಂಗಣದ ಬದುಕು
ಒಳಾಂಗಣದ ಬದುಕು ಎಷ್ಟೇ ಚೆನ್ನಾಗಿದ್ದರೂ, ಸುಂದರವಾಗಿದ್ದರೂ ಅದೇ ಸರ್ವಸ್ವವಲ್ಲ. ಮನುಷ್ಯ ಕೊನೆಗೂ ಗೆಲ್ಲಬೇಕಾದ್ದು ಹೊರ ಜಗತ್ತನ್ನು, ಬದುಕಬೇಕಾದ್ದು ಕೂಡ ಹೊರ ಜಗತ್ತಿನಲ್ಲಿ. ಒಳಾಂಗಣದಲ್ಲೇ ಲೋಲುಪರಾಗಿ ಕಾಲ ಕಳೆಯುತ್ತಾ ಕೂರಬಾರದು. ಎರಡರ ಸಮನ್ವಯವಿರಬೇಕು. ಪರಸ್ಪರ ಚಲನೆಯಿರಬೇಕು. ಹುಲಿಕಲ್ಲು ನೆತ್ತಿಯ ಮೇಲಿನ ಒಳಾಂಗಣದ ಸುತ್ತ ಇರುವ ಅನಂತ ಕಾಲದ ಪ್ರಾಕೃತಿಕ ಶ್ರೀಮಂತಿಕೆಯ ಹೊರಾಂಗಣದ ಮಹತ್ವ ಕುವೆಂಪು ಭೇಟಿ ಮಾಡಿದ ಎಷ್ಟೋ ದಿನಗಳ ನಂತರ ನನಗೆ ಅರ್ಥವಾಯಿತು
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಎರಡನೇ ಪ್ರಬಂಧ ನಿಮ್ಮ ಓದಿಗೆ
‘ಕಾಲೇ ಕೋ ಜಿಂದಗಿ ನಹಿ’
ಎರಡನೇ ಮಹಾಯುದ್ಧದಲ್ಲಿ ಸ್ಟ್ಯಾಲಿನ್ ವಿಶಿಷ್ಟವಾದ ಯುದ್ಧತಂತ್ರಗಳಿಂದ ಫ್ಯಾಸಿಸ಼ಂ ಸೋಲಿಸಿದ್ದು ರೋಮಾಂಚನಕಾರಿಯಾಗಿದೆ. ಎಂಥ ಪ್ರಸಂಗದಲ್ಲೂ ಉತ್ಪಾದನೆ ನಿಲ್ಲಲಿಲ್ಲ. ಫ್ಯಾಸಿಸ್ಟ್ ಸೈನ್ಯ ದೇಶದೊಳಗೆ ನುಗ್ಗಿದಂತೆಲ್ಲ ಆ ಪ್ರದೇಶದಲ್ಲಿನ ಕಾರ್ಖಾನೆಗಳನ್ನು ಮೊದಲೇ ಮುಂದಿನ ಪ್ರದೇಶದಲ್ಲಿ ಶಿಫ್ಟ್ ಮಾಡಲಾಗುತ್ತಿತ್ತು. ಹೀಗಾಗಿ ವೈರಿಗಳಿಗೆ ಸಿಗದಂತೆ ಮತ್ತು ಉತ್ಪಾದನೆ ಸಂಪೂರ್ಣ ಸ್ಥಗಿತಗೊಳ್ಳದಂತೆ ಸ್ಟ್ಯಾಲಿನ್ ನೋಡಿಕೊಂಡಿದ್ದ. ಭಾರಿ ಹಿಮ ಬೀಳುವ ಸಂದರ್ಭದಲ್ಲೇ ಹಿಟ್ಲರನ ಸೈನ್ಯ ಮಾಸ್ಕೋ ಪ್ರವೇಶಿಸುವಂತೆ ಯೋಜನೆ ರೂಪಿಸಿದ್ದ. ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ʻದ ಮ್ಯಾಚ್ ಫ್ಯಾಕ್ಟರಿ ಗರ್ಲ್ʼ ನ ಕತೆ…
ಇಲ್ಲಿಯ ತನಕ ಅವನ ನಿರ್ದೇಶನದ ಹದಿನೆಂಟು ಚಿತ್ರಗಳಲ್ಲಿ ಸಮಾನವಾಗಿರುವ ಅಂಶವೆಂದರೆ ಆಯ್ದ ವಸ್ತುವಿಗೆ ತಕ್ಕ ಹಾಗೆ ಪಾತ್ರಗಳ ಬದುಕಿನ ವಿವರ ಮತ್ತು ಅದಕ್ಕೆ ಪೂರಕವಾಗುವ ವಾತಾವರಣಸೃಷ್ಟಿ. ಸ್ಥಳೀಯರ ಬದುಕಿನ ವಿವರಗಳನ್ನು ಅತ್ಯಂತ ಹತ್ತಿರವಾದ ರೀತಿಯಲ್ಲಿ ನಿರ್ಭಾವದಿಂದ ವಿಸ್ತೃತವಾಗಿ ನಿರೂಪಿಸುವ ವಿಧಾನ ಅವನದು.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಸರಣಿʼಯಲ್ಲಿ ಫಿನ್‌ಲ್ಯಾಂಡ್‌ನ ʻದ ಮ್ಯಾಚ್ ಫ್ಯಾಕ್ಟರಿ ಗರ್ಲ್ʼ ಸಿನೆಮಾದ ವಿಶ್ಲೇಷಣೆ
ಮುಸಲ್ಮಾನ ರಾಜರಿಂದ ಸಿಂಧಿನ ಆಕ್ರಮಣ
ಇಲ್ತುಮಿಷನು ಮರಣದ ಮೊದಲು ತನ್ನ ಮಕ್ಕಳಲ್ಲಿ ಒಬ್ಬಳಾದ ರಜಿಯಾಳು ಪಟ್ಟವನ್ನೇರಲು ತಕ್ಕವಳೆಂದು ಸೂಚಿಸಿದ್ದನು. ಅದರೆ ಅಧಿಕಾರಿಗಳು ಆತನ ಹಿರಿ ಮಗನಾದ ರುಕ್ನುದ್ದೀನ್ ಫಿರೋಜನನ್ನು ಪಟ್ಟದಲ್ಲಿ ಕುಳ್ಳಿರಿಸಿದರು.ಫಿರೋಜನು ವಿಲಾಸಿಯೂ, ಬುದ್ಧಿಹೀನನೂ ಅಗಿದ್ದುದರಿಂದ ಅವನ ತಾಯಿಯು ಹಿತಾಕಾಂಕ್ಷಿಯಾಗಿ ಕೆಲಸ ಮಾಡುತ್ತಿದ್ದಳು. ಕೆ.ವಿ. ತಿರುಮಲೇಶ್ ಬರೆಯುವ ಸರಣಿ
ಇವತ್ತಿನಿಂದ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು”
ಒಂದು ಭಾಷಣದ ಶೈಲಿಯಾಗಿ ಕೂಡ ಅಲವತ್ತುಕೊಳ್ಳುವಿಕೆ ಪರಿಣಾಮಕಾರಿಯಾದದ್ದು. ನೀವು ಸುಮ್ಮನೆ ಬೈದು ಭಾಷಣ ಮಾಡಿದರೆ, ವಿರೋಧಪಕ್ಷದ ನಾಯಕರಾಗಲು ಸಾಧ್ಯವಾಗುವುದಿಲ್ಲ. ದೇಶದ ಭವಿಷ್ಯ ಕುರಿತು, ಆಳುವಪಕ್ಷವನ್ನು ಕುರಿತು ಭೀಕರ ಭವಿಷ್ಯವನ್ನು ನುಡಿಯಬೇಕು.
ಕತೆಗಾರ ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಪ್ರಬಂಧಗಳ ಸರಣಿ
900 ದಿನ ಫ್ಯಾಸಿಸ್ಟರ ಮುತ್ತಿಗೆಯಲ್ಲಿ ನಲುಗಿದ ಲೆನಿನ್‌ಗ್ರಾಡ್
ಎರಡನೇ ಮಹಾಯುದ್ಧದಲ್ಲಿ ಫ್ಯಾಸಿಸ್ಟರು 90 ಲಕ್ಷ ರಷ್ಯನ್ನರನ್ನು ಯಾತನಾಶಿಬಿರಗಳಲ್ಲಿ ಕೊಂದಿದ್ದಾರೆ. ಜನರನ್ನು ಕೊಲ್ಲಲು ಅವರು ಗ್ಯಾಸ್ ಚೇಂಬರ್‌ಗಳನ್ನು ಬಳಸಿದರು. ಮೃತದೇಹಗಳ ಕೊಬ್ಬನ್ನು ಸಾಬೂನು ಮತ್ತು ಹದಗೊಳಿಸಿದ ತೊಗಲು ತಯಾರಿಸಲು ಉಪಯೋಗಿಸಲಾಯಿತು. ಕೂದಲಿನಿಂದ ಹಾಸಿಗೆ ಮತ್ತು ಕಾಲ್ಚೀಲಗಳು ತಯಾರಾದವು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಏಕಾಂಗಿಯ ಸ್ವಗತಗಳು…
ಪ್ರಕಾಶನ ಸಂಸ್ಥೆಯ ಸಹಾಯಕಿ ಅವನ ಬಗ್ಗೆ ಹಿತವಾದ ಭಾವನೆಯಿಂದ ಪ್ರತಿಕ್ರಿಯಿಸುತ್ತಾಳೆ. ಇಂಟವ್ಯೂ ಮುಗಿದ ಮೇಲೆ ಭೇಟಿಯಾಗಲು ಇಷ್ಟಪಡುತ್ತಾಳೆ. ಪ್ರಕಾಶನದ ಒಡೆಯನಿಗೆ ಮಾತು ಮುಂದುವರಿಸಲು ಇಷ್ಟವಿರುತ್ತದೆ. ಆದರೆ ಆಂಡರ್ಸ್‌ನ ಶಿಥಿಲವಾದ ಅಂತರಂಗ ಅವನನ್ನು ವಿಪರೀತವಾಗಿ ವರ್ತಿಸುವಂತೆ ಮಾಡುತ್ತದೆ. ಅವನಿಂದ ಸಿವಿಯನ್ನು ಕಸಿದುಕೊಂಡು ಹಠಾತ್ತನೆ ಹೊರಡುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ಸಿನಿಮಾದ ಸರಣಿ









