ಬಹುಮಾನವಾಗಿ ಸಿಕ್ಕ ಆನೆಮರಿಯೊಂದರ ಜೀವನಗಾಥೆ
ಕೊರೆಯುವ ನೆಲದ ಮೇಲೆ ಕಾಲಿಡುತ್ತಿದ್ದ ಆನಾಬೆಲ್ಳ ಪಾದಗಳಲ್ಲಿ ಗಾಯವಾಗತೊಡಗಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಆನೆಗಳಲ್ಲಿ, ಪಾದಗಳೂ ನಮ್ಮ ಕಿವಿಯೊಳಗಿನ ಇಯರ್-ಡ್ರಂಗಳಂತೆ ಕೆಲಸಮಾಡುತ್ತವೆ. ವಿಜ್ಞಾನಿಗಳು ಹೇಳುವಂತೆ, ಆನೆಯ ಗುಂಪೊಂದು ನಡೆಯುತ್ತಿದ್ದರೆ, ಆ ಗುಂಪಿನಿಂದ ಇಪ್ಪತ್ತು ಮೈಲಿ ದೂರದಲ್ಲಿರುವ ಆನೆಯೊಂದು, ಆ ಆನೆಗಳ ನಡೆತದಿಂದಾಗುವ ಕಂಪನಗಳನ್ನು ತನ್ನ ಪಾದದ ಮೂಲಕವೇ ಗುರುತಿಸಬಲ್ಲದಂತೆ.
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿಯಲ್ಲಿ ಆನೆಮರಿಯ ಬದುಕಿನ ಕತೆಯೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ
ಕನಸುಗಾರ್ತಿಯೊಬ್ಬಳು ಬೇಹುಗಾರ್ತಿಯಾದ ಕತೆ
ಹಿಂದೆ ಇದ್ದ ಅಬಿಂಗ್ಡನ್ ಪ್ರಾಂತ್ಯದ ಮನೆಯಲ್ಲಿ ವ್ಯರ್ಥವಾದ ಸಮಯವನ್ನು ಇಲ್ಲಿ ತುಂಬಿಸಿಕೊಳ್ಳುತ್ತಿದ್ದೇನೆ. ನೀನು ಮರಳುವಾಗ ಬಹುಶಃ ಇಲ್ಲೇ ಇರುತ್ತೇನೆ” ಎಂದು ಬರೆದಿದ್ದಳು. ಮುಂದೊಂದು ದಿನ ತಾನು ಜರ್ಮನಿಯಲ್ಲಿ ಸೆರೆಯಲ್ಲಿರುವುದನ್ನು ಅಂದು ಅವಳು ಊಹಿಸರಲಿಲ್ಲ, ಆದರೆ ಹಾಗೆ ಸೆರೆಯಲ್ಲಿರುವಾಗ, ಊಟದ ತಟ್ಟೆಯ ಮೇಲೆ ತನ್ನ ಹೆಸರನ್ನು “ನೋರಾ ಬೇಕರ್, ರೇಡಿಯೋ ನಿರ್ವಾಹಕಿ” ಎಂದು ಕೆತ್ತಿ ಜೈಲಿನಲ್ಲಿರುವ ಸಹವಾಸಿಗಳೊಡನೆ ಸಂಪರ್ಕಿಸುತ್ತಿದ್ದಳು.
ಯೋಗೀಂದ್ರ ಮರವಂತೆ ಬರೆಯುವ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯ ಹೊಸ ಬರಹ
ನಾವು ಎತ್ತ ಸಾಗಿದ್ದೇವೆ?
ಈ ಜಾತ್ರೆಯಲ್ಲಿ ಬಡಿಗೆಗಳನ್ನು ಕೊಳ್ಳುವುದೊಂದು ವಿಶೇಷ. ಹಿಡಿಯಲು ಅನುಕೂಲವಾಗುವಷ್ಟು ದಪ್ಪನೆಯ ಬೆತ್ತದ ಬಡಿಗೆಗಳಿಗೆ ಕೇರಿನ ರಸದಿಂದ ಡಿಸೈನ್ ಮಾಡಿ ಸಿಂಗರಿಸುತ್ತಿದ್ದರು. ಈ ಜಾತ್ರೆಯಲ್ಲಿ ಮನೆಗೆ ಮತ್ತು ಒಕ್ಕಲುತನಕ್ಕೆ ಬೇಕಾದ ಎಲ್ಲ ವಸ್ತುಗಳು ಕೂಡ ಸಿಗುತ್ತಿದ್ದವು. ಎತ್ತುಗಳ ಆಲಂಕಾರಿಕ ವಸ್ತುಗಳು ರೈತರ ಮನಸೂರೆಗೊಳ್ಳುತ್ತಿದ್ದವು. ತಮ್ಮ ದನಕರುಗಳನ್ನು ಸಿಂಗರಿಸುವುದೆಂದರೆ ರೈತರಿಗೆ ಎಲ್ಲಿಲ್ಲದ ಖುಷಿ. ಅವರು ಆ ಪರಿಯಿಂದ ಕಾಳಜಿ ವಹಿಸಿ ತಮ್ಮ ಮಕ್ಕಳ ಸಿಂಗಾರ ಮಾಡಿದ್ದನ್ನು ನಾನು ಹಳ್ಳಿಯಲ್ಲಿ ನೋಡಲಿಲ್ಲ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ
ಅನಾದಿ ವೇದಾಂತ
ವ್ಯಾಪಾರಿಯ ಜೊತೆ ನಾಳೆ ಲೋಡು ಎಷ್ಟು ಬರುತ್ತೆ, ಎಷ್ಟೊತ್ತಿಗೆ ಎಂದೆಲ್ಲ ಕೇಳಿದ. ಬೇಗನೆ ಎದ್ದಿದ್ದೆವು. ಹಣ್ಣಿನ ಬುಟ್ಟಿಗಳ ಇಳಿಸಿ ಹತ್ತಾರು ಅಂಗಡಿಗಳಿಗೆ ಹೊತ್ತೊಯ್ದು ಇಟ್ಟೆವು. ಇಡೀ ದಿನವೆಲ್ಲ ಹಗುರಾದ ಕೆಲಸಗಳನ್ನು ಮಾಡಿಸಿದ. ತರಕಾರಿ ಮೂಟೆಗಳನ್ನು ತಾನೇ ಹೊತ್ತು ಸಹಕರಿಸಿದ. ಜೋಡಿಸಿ ಇಡುವುದಷ್ಟೆ ನನ್ನ ಕೆಲಸವಾಗಿತ್ತು. ಮಧ್ಯಾನ್ಹವಾಗಿತ್ತು. ಶಿವರಾಂಪೇಟೆಯ ಸಂದಿಯ ಮಾಂಸದ ಹೋಟೆಲಿಗೆ ಕರೆದೊಯ್ದ. ಅಲ್ಲೆಲ್ಲ ನಮ್ಮಂತವರೇ ಇದ್ದರು. ನಿತ್ಯ ಕೂಲಿಗಳು. ಅದೇ ನರಕದಲ್ಲಿ ಸ್ವರ್ಗ ಕಾಣುವವರು. ದುಡಿಮೆಯ ಸಡಗರದಲ್ಲಿ ಅವರಾಗಲೇ ಕುಡಿದು ಅಮಲಾಗಿದ್ದರು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಹೊಸ ಬರಹ
ಮೂನ್ ಲೈಟ್ ನಲ್ಲಿ ಬೆನ್ನೆಲುಬಿನ ನೇಯ್ಗೆ
ಅಮ್ಮ ಪೌಲಾಳ ವಿಷಯದಲ್ಲಿ ವ್ಯತ್ಯಾಸವಿಲ್ಲ. ಅವಳು ಇನ್ನಷ್ಟು ಅತಿರೇಕದಿಂದ ವರ್ತಿಸುತ್ತಾಳೆ. ಹೀಗಾಗಿ ಅವನ ಅಂತರಂಗದಲ್ಲಿ ಒತ್ತಡಗಳು ಒಗ್ಗೂಡಲು ಪ್ರಾರಂಭಿಸುತ್ತವೆ. ಜೊತೆಗೆ ಸ್ಕೂಲಿನಲ್ಲಿ ಉಳಿದವರು ರೇಗಿಸುವುದು ಮುಂದುವರಿಯುತ್ತದೆ. ಇದರಿಂದ ಅವನಿಗೆ ತಾನು ಯಾವ ರೀತಿಯಲ್ಲಿಯೂ ಪ್ರತಿಕ್ರಿಯಿಸದೆ ನಿಷ್ಕ್ರಿಯನಾಗುತ್ತಿರುವುದಕ್ಕೆ ನಾಚಿಕೆಯ ಜೊತೆ ಬೇಸರವೂ ಅವನನ್ನು ಮುತ್ತುತ್ತದೆ. ತಡೆಯಲಾಗದೆ ರೋಷದಿಂದ ಸ್ಕೂಲಿಗೆ ಹೋಗಿ ಒಬ್ಬನೆ ಅಬ್ಬರಿಸಿ ಗಲಾಟೆ ಮಾಡುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಅಮೆರಿಕದ ʻಮೂನ್ಲೈಟ್ʼ ಸಿನಿಮಾದ ವಿಶ್ಲೇಷಣೆ
ಅವರ ಬದುಕು ಅರ್ಥವಾಗದೆ ನಮ್ಮ ಬದುಕು ವ್ಯರ್ಥ
ನನ್ನ ತಂದೆಯ ಕಡೆಯಿಂದ ಹಣ ಪಡೆದು ಏನೋ ತರಲು ನನ್ನ ತಾಯಿ ತಿಳಿಸುತ್ತಿದ್ದಳು. ನಾನು ಮರೆಗುಳಿಯಾಗಿದ್ದರಿಂದ ಅಂಗಿಯ ಕೆಳಗೆ ಗಂಟು ಹಾಕಿ ಕಳಿಸುತ್ತಿದ್ದಳು. ಶ್ರೀ ಸಿದ್ಧೇಶ್ವರ ರಸ್ತೆಯ ಮರಗಳ ಸಾಲಿನ ನೆರಳಲ್ಲಿ ನನ್ನ ತಂದೆಯ ಬಳಿ ಹೋಗುವ ಮೊದಲೆ ಅಂಗಿಯ ಗಂಟು ಹಾಕಿದ ವಿಚಾರವೇ ಮರೆತುಹೋಗುತ್ತಿತ್ತು! ಹೀಗೇಕೆ ಗಂಟು ಹಾಕಿಕೊಂಡಿರುವೆ ಎಂದು ನನಗೆ ನಾನೇ ಬೇಸರಪಟ್ಟುಕೊಂಡು ಅದನ್ನು ಬಿಚ್ಚುತ್ತಿದ್ದೆ. ನನ್ನ ತಂದೆ ಕೆಲಸ ಮಾಡುವ ಅಡತಿ ಅಂಗಡಿಗೆ ಹೋದಾಗ ಸೇಂಗಾ ಕೊಡಿಸಲು ಹೇಳುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿ
ಬಿಕಾರಿಯ ಮನುಷ್ಯತ್ವದ ಗುರುತುಗಳು
ಅಪನಂಬಿಕೆಗಳಲ್ಲೇ ಮನುಷ್ಯ ಎಷ್ಟೊಂದು ನಂಬಿಕೆಗಳ ಹುಟ್ಟಿಸುವನಲ್ಲಾ… ಆದರೆ ದೇವರ ನಂಬಿಕೆಗಳಲ್ಲಿ ಎಷ್ಟೆಲ್ಲ ಅಪನಂಬಿಕೆ ಅಂತರ ತಾರತಮ್ಯಗಳಿವೆಯಲ್ಲಾ… ಇಂತಹ ದ್ವಂದ್ವಗಳಲ್ಲಿ ಬದುಕು ಸವೆದ ಎಕ್ಕಡವಾಗಿರುತ್ತದೆಯೇ. ಜೋಪಾನ ಮಾಡಿದ್ದ ಎಕ್ಕಡ ಕೊನೆಗೆ ಎಲ್ಲಿ ಹೋಗಿ ಬೀಳುತ್ತದೆ? ಹೆಗಲ ಮೇಲೆ ಕೈ ಹಾಕುವಷ್ಟು ಸಲಿಗೆ ಬಂದುಬಿಟ್ಟಿತಲ್ಲ ಇವನಿಗೆ… `ಬೀಡಿ ಸೇದುವೆಯಾ’ ಎಂದ? `ಹೂಂ; ಕೊಡು’ ಎಂದು ಜೊತೆಗೆ ಸೇದಿದೆ. ಯಾರ ವಯಕ್ತಿಕ ವಿವರವನ್ನೂ ಕೇಳುವವನಲ್ಲ ನಾನು. ಹಾಗೆಯೆ ಯಾರಾದರೂ ನನ್ನ ಬಗ್ಗೆ ಕೇಳಿದರೆ ಸರಿ ಉತ್ತರ ನೀಡಲಾರೆ. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’
ಆಯಾ, ಮೇಂಸಾಹಿಬ್ ಮತ್ತು ಮಕ್ಕಳು
ಒಮ್ಮೆ ಬ್ರಿಟನ್ ತಲುಪಿದ ಮೇಲೆ ಕೆಲವು ಆಯಾಗಳು ಯಜಮಾನರ ಬಂಧುಗಳ ಮನೆಯನ್ನು ಭೇಟಿ ಮಾಡುವಾಗ ಜೊತೆಗೆ ಹೋಗುವ ಸಾಧ್ಯತೆ ಇತ್ತು. ಮತ್ತೆ ಕೆಲವರನ್ನು ವಾಪಸು ಕಳುಹಿಸಲಾಗುತ್ತಿತ್ತು. ಅಂತಹ ಆಯಾಗಳು, ತಮ್ಮ ಅಗತ್ಯ ಇರುವ, ಭಾರತಕ್ಕೆ ಮರಳುವ ಬ್ರಿಟಿಷ್ ಕುಟುಂಬಗಳಿಗೋಸ್ಕರ ಕಾಯಬೇಕಿತ್ತು. ಇಂತಹ ಆಯಾಗಳಲ್ಲಿ ಕೆಲವರು ಬ್ರಿಟನ್ನಿಗೆ ಹಲವು ಭೇಟಿ ಮಾಡಿದವರೂ ಇದ್ದರು. ಹೆಚ್ಚಿನವರಿಗೆ ವಾಪಸು ಹೋಗುವ ಟಿಕೇಟು ನೀಡಲಾಗುತ್ತಿತ್ತು. ಆದರೆ ಎಲ್ಲರಿಗೂ ಅಲ್ಲ. ಬಹಳ ಆಯಾಗಳನ್ನು ಅವರನ್ನು ಬ್ರಿಟನ್ನಿಗೆ ಕರೆತಂದ ಕುಟುಂಬದವರು ಬಿಟ್ಟುಬಿಡುತ್ತಿದ್ದರು.
ಯೋಗೀಂದ್ರ ಮರವಂತೆ ಬರಹ
ಗೋಳಗುಮ್ಮಟದ ಸುತ್ತಮುತ್ತ
ಸೇಂಗಾ, ಹುರಿಗಡಲೆ, ಮಸಾಲೆವಠಾಣಿ, ಪೆಪ್ಪರಮೆಂಟ್ ಮುಂತಾದವುಗಳನ್ನು ಮಾರುವ ಮಧ್ಯ ವಯಸ್ಕನೊಬ್ಬ ಆ ಚಿಕ್ಕ ಕಟ್ಟಡದಲ್ಲಿ ಆರಂಭದಲ್ಲೇ, ನೆಲದ ಮೇಲೆ ಹಾಸಿಕೊಂಡು ಕುಳಿತಿರುತ್ತಿದ್ದ. ಆ ಬಡ ವ್ಯಕ್ತಿಯ ಬದುಕು ಆನಂದಮಯವಾಗಿತ್ತು. ಸದಾ ಹಸನ್ಮುಖಿಯಾಗಿ ಇರುತ್ತಿದ್ದ. ಖಾಕಿ ಹಾಫ್ ಪ್ಯಾಂಟ್ ಮತ್ತು ಹಾಪ್ ಷರ್ಟ್ ಆತನ ‘ಯೂನಿಫಾರ್ಮ್’ ಆಗಿತ್ತು. ಆ ಪುಟ್ಟ ವ್ಯಾಪಾರದಲ್ಲಿ ಎಷ್ಟು ಗಳಿಸುತ್ತಿದ್ದನೋ ದೇವರೇ ಬಲ್ಲ. ಆದರೆ ಆತನ ಜೀವನ್ಮುಖಿ ಬದುಕು ಆದರ್ಶಪ್ರಾಯವಾಗಿತ್ತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿ









