ಪಾತಕಿಯ ಆರ್ತ ಕರೆಯಲ್ಲಿ ಕರುಣೆಯೇ
ಅಪ್ಪನ ನಡವಳಿಕೆ ನಿಗೂಢವಾಗಿತ್ತು. ಎಲ್ಲೂ ಹೋಗ ಕೂಡದು ಎಂದು ಅವ ಕಟ್ಟಪ್ಪಣೆ ವಿಧಿಸಿದ್ದ. ದುಷ್ಟನ ಸಹವಾಸ ಬೇಡ ಎಂದು ಅಪ್ಪ ನಿರ್ಧರಿಸಿರಬಹುದೇ ಎಂದು ಯೋಚಿಸಿದೆ. ಅನುಮಾನವಾಯಿತು. ಅಪ್ಪ ನನ್ನನ್ನು ಕತ್ತಲೆ ಮನೆಯೊಳಗೆ ಕೂಡಿ ಹಾಕಿದ್ದ. ಪಾತಕಿಯ ಬಗ್ಗೆ ಹತ್ತಾರು ಪ್ರಶ್ನೆ ಕೇಳಿದ್ದ. ಅಪ್ಪ ಕೇಳುತ್ತಿದ್ದ ದಾಟಿಗೆ ಹೆದರಿ ಏನೇನೊ ಹೇಳಿದ್ದೆ. ತಾತನ ಹೋಟೆಲಲ್ಲಿ ಜನ ಗಿಜಿಗುಟ್ಟುತ್ತಿದ್ದ ಸದ್ದು ಕೇಳಿಸುತ್ತಿತ್ತು. ತಾತನಿಗೆ ಮೊದಲು ಈ ಸುದ್ದಿ ತಿಳಿಸಬೇಕಿತ್ತು ಎಂದುಕೊಂಡೆ. ಕೈ ಮೀರಿತ್ತು. ಕತೆಗಾರ ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಬರಹ
ಅರವಿಂದ ಕುಡ್ಲ ಬರೆಯುವ ಹೊಸ ಅಂಕಣದಲ್ಲಿ ಶಾಲೆಯ ಕಲರವ
ಶಾಲೆಯೆಂಬುದು ಕಲಿಕೆಯ ತಾಣ. ಆದರೆ ಅದು ಕೇವಲ ಮಕ್ಕಳಿಗಷ್ಟೇ ಕಲಿಕೆಯ ತಾಣವಲ್ಲ. ದೊಡ್ಡವರೂ ಕಲಿಯುವ ಎಷ್ಟೊ ಪಾಠಗಳು ಅಲ್ಲಿವೆ. ಆ ಪಾಠಗಳೋ, ತರಗತಿಯೊಳಗೆ, ಕರಿ ಬೋರ್ಡುಗಳಲ್ಲಿ ಬರೆದ ಅಕ್ಷರಗಳಲ್ಲಷ್ಟೇ ಅಡಗಿಲ್ಲ. ಕುತೂಹಲ ಮತ್ತು ನಿಷ್ಕಲ್ಮಶ ನೋಟದಲ್ಲಿ ಜಗತ್ತನ್ನು ನೋಡುವ ಮಕ್ಕಳ ಕಣ್ಣುಗಳಲ್ಲಿಯೂ ಅಡಗಿದೆ ಎಂದು ನಂಬಿದವರು ಗಣಿತ ಅಧ್ಯಾಪಕ ಅರವಿಂದ ಕುಡ್ಲ. ತಾನು ನಿಸರ್ಗದ ನಿರಂತರ ವಿದ್ಯಾರ್ಥಿ ಎಂದು ನಂಬಿದ ಅವರು, ತಮ್ಮ ಅನುಭವಗಳ ಡೈರಿಯಿಂದ ಕೆಲವು ವಿಚಾರಗಳನ್ನು ಹೆಕ್ಕಿ ಕೆಂಡಸಂಪಿಗೆಯಲ್ಲಿ ಬರೆಯಲಿದ್ದಾರೆ.
ತುಡುಗುತನಕ್ಕಂಟಿದ ನಂಬಿಕೆಯ ಲೋಕ
ಈ ಕತೆ ಸಿಕ್ಕಿದ್ದು ಬಾಲೆಹೊಸೂರಿನಲ್ಲಿ. ಇದರ ವಿವರಗಳನ್ನು ನೋಡಲಾಗಿ ಈ ಊರಿನಲ್ಲಿಯೇ ‘ದ್ಯಾಮವ್ವ’ ಪೂಜೆಗೊಳ್ಳುತ್ತಾಳೆ. ಹೀಗಾಗಿ ಇಲ್ಲಿನ ತುಡುಗು ಮಂದಿಯೇ ಈ ಕಥೆಯ ನಾಯಕರಿರಬಹುದು. ಇದು ಸೃಷ್ಟಿ ಕತೆಯಲ್ಲ ಆದರೆ ಈಗಾಗಲೇ ಇರುವ ಸಮುದಾಯದ ಪ್ರವೃತ್ತಿಯನ್ನು ಬೆಂಬಲಿಸಿ ಪಾರುಮಾಡುವ ಕತೆಯಾಗಿದೆ. ಅಂತೆಯೇ ಸಮುದಾಯ ದೈವಗಳ ಜತೆ ಹೊಂದಿದ್ದ ಅವಿನಾಬಾವ ಸಂಬಂಧವನ್ನು ಕೂಡ ಸೂಚಿಸುತ್ತದೆ. ಅಂತೆಯೇ ದ್ಯಾಮವ್ವ ತಮ್ಮನ್ನು ಪೊರೆಯುತ್ತಾಳೆ…
ʻಲಿಟಲ್ ಮಿಸ್ ಸನ್‌ಶೈನ್ʼ: ಕನಸು ವಾಸ್ತವಗಳ ಜುಗಲ್ ಬಂದಿ
ಮನೆಯಲ್ಲಿ ಉಳಿದವರ ಆಲೋಚನೆ ಬೇರೆಯ ರೀತಿ. ಕನಸುಗಳನ್ನೇ ನೇಯುವ ಅವರಿಗೆ ಮನೆಯ ಪುಟಾಣಿಯೂ ಕನಸು ಕಾಣುತ್ತಿರುವುದು ವಿಶೇಷವೆನಿಸುತ್ತದೆ. ಜೊತೆಗೆ ತಮ್ಮ ಕನಸಿನ ಜಂಜಾಟದಿಂದ ಕೊಂಚ ತಪ್ಪಿಸಿಕೊಳ್ಳಲು ಹೊರದಾರಿಯೊಂದು ಸಿಕ್ಕಿತೇನೋ ಎನ್ನುವ ಕಾರಣದಿಂದ ಅವಳ ಕನಸನ್ನು ಬೆಂಬಲಿಸುತ್ತಾರೆ. ಮುಖ್ಯವಾಗಿ ಅವಳ ತಂದೆ ರಿಚರ್ಡ್. ಅಪ್ಪನಿಂದ ಮಿಸ್ ಲಿಟಲ್ ಸನ್ ಶೈನ್ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಒಪ್ಪಿಗೆ ಸಿಕ್ಕಿದ್ದರಿಂದಲೇ ನೆಲದಿಂದ ನೆಗೆದು ಹಾರಾಡುವಂತಾಗುತ್ತದೆ ಆಲಿವ್‌ಗೆ.
ಹಲವು ಮೇಳಗಳಲ್ಲಿ ಭಾಗವತರಾಗಿ ಬಲಿಪರು
ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳದಲ್ಲಿ ಬಲಿಪ ನಾರಾಯಣ ಭಾಗವತರು ನಾಲ್ಕು ವರುಷಗಳ ತಿರುಗಾಟವನ್ನು ಮಾಡಿದರು. ಮುಂದೆ ತಮ್ಮ ಮೇಳ ತಿರುಗಾಟದ ಕೊನೆಯವರೆಗೂ ಶ್ರೀ ಕಟೀಲು ಮೇಳದಲ್ಲೇ ಇದ್ದರು. ಹಣಕಾಸಿನ ಮುಗ್ಗಟ್ಟು, ಮೇಳ ನಡೆಸಲು ಎದುರಾದ ಕಷ್ಟಗಳನ್ನು ದಾಟುತ್ತ ಬದುಕು ಸಾಗಿದರೂ, ಭಾಗವತಿಕೆಯೆಂಬ ಪ್ರೀತಿ ಅವರಿಂದ ದೂರಾಗಲಿಲ್ಲ. ಕೃಷ್ಣ ಪ್ರಕಾಶ ಉಳಿತ್ತಾಯ ಬರೆಯುವ ‘ಬಲಿಪ ಮಾರ್ಗ’ ಸರಣಿಯಲ್ಲಿ ಹೊಸ ಬರಹ.
ಇಲ್ಲದ ಸಲ್ಲದ ಭ್ರಮೆಗಳು ಮತ್ತು ಸ್ವಯಂ ಚಿಕಿತ್ಸೆ ತಂದೊಡ್ಡುವ ಆಪತ್ತುಗಳು
ಟಿವಿಯಲ್ಲಿ ಕೆಲವು ಖಾಯಿಲೆಯ ಕುರಿತಾಗಿ ಬರುವ ಮಾತುಗಳನ್ನು, ಪೇಪರಿನಲ್ಲಿ ಬರುವ ವಿಷಯಗಳನ್ನು ಓದಿ ಮತ್ತು ಗೂಗಲ್ ಸರ್ಚ್‌ನಲ್ಲಿ ಬರುವ ವಿವರಗಳನ್ನು ನೋಡಿಕೊಂಡು ತಮಗೆ ಆ ಕಾಯಿಲೆ ಇದೆ ಮತ್ತು ಈ ರೋಗ ಇದೆ ಎಂದು ತಪ್ಪಾಗಿ ನಿಶ್ಚಯಿಸಿಬಿಡುವ ಬೃಹಸ್ಪತಿಗಳು ಕೂಡ ನಮ್ಮಲ್ಲಿ ಇದ್ದಾರೆ. ಅಷ್ಟೇ ಅಲ್ಲ, ಕೆಲವೊಮ್ಮೆ ಕಾಯಿಲೆಗಳಿಗೆ ಸ್ವಯಂ ಔಷಧಿ ಸೇವಿಸುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ ಡಾ. ಕೆ.ಬಿ. ಸೂರ್ಯಕುಮಾರ್ ಬರಹ
ನನ್ನನ್ನು ಹುಡುಕಿಕೊಳ್ಳುವ ದಾರಿಯಲ್ಲಿ ಸಿಕ್ಕ ಹೊಳಹುಗಳು
ಕನಕ ದಾಸರು “ನಾನು ಹೋದರೆ ಹೋದೇನು” ಎಂದಾಗ, ಅವರೆಂದದ್ದು ಸತ್ತ ನಂತರ ಸ್ವರ್ಗ ಸೇರುವ ಮಾತಲ್ಲ – ಮಕ್ಕಳಿಗಾಗಿ ಆ ಕತೆಯನ್ನು ನಾವು ಹೇಳಿದರೂ. ಅವರೆಂದದ್ದು ಪೂರ್ಣ ಧ್ಯಾನದಲ್ಲಿ ತೊಡಗಿಕೊಂಡಾಗ ಈ “ನಾನು” ಎಂಬ ಭಾವ “ಹೋಗುವ” ವಿಷಯ. ಆಸಕ್ತಿಕರ ವಿಷಯವೆಂದರೆ, ಆಧುನಿಕ ನ್ಯೂರೋಸೈನ್ಸ್ ಸಹ ಅದನ್ನೇ ಹೇಳುತ್ತಿದೆ. ಧ್ಯಾನದಲ್ಲಿ ತೊಡಗಿಕೊಂಡವರ ಮಿದುಳನ್ನು ಪರಿಶೀಲಿಸಿದಾಗ, ಮಿದುಳಿನ “ನಾನು ಕೇಂದ್ರ”ಗಳು ಸ್ಥಬ್ಢವಾಗುವುದನ್ನು ಗಮನಿಸಿದ್ದಾರೆ. ಶೇಷಾದ್ರಿ ಗಂಜೂರು ಬರೆದ ಲೇಖನ..
ಗಂಟಿಚೋರರೇ ನೆನಪಿಟ್ಟುಕೊಂಡ ಕಥನಗಳಲ್ಲಿದೆ ಚರಿತ್ರೆ
ಸೇಟ್‌ಜೀ ಒಬ್ಬರು ಬೆಂಗಳೂರಿನಿಂದ ಮುಂಬೈಗೆ ಹೆಚ್ಚುವರಿ ಗೋಲ್ಡ್ ಬಿಸ್ಕೆಟ್ ಸಾಗಿಸುವ ಮಾಹಿತಿ ಸಂಗ್ರಹಿಸಿ ಪ್ಲಾನ್ ಮಾಡಿದಂತೆ ಅವರೆಲ್ಲ ಸೇರಿ ‘ರಾಬರಿ’ ಮಾಡಿದರು. ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಿತು, ಆದರೆ ತಪ್ಪಿಸಿಕೊಳ್ಳುವಾಗ ಈ ಟೀಮಿನ ಇಬ್ಬರು ಸಿಕ್ಕಿಹಾಕಿಕೊಂಡರು. ಮರುದಿನ ದೊಡ್ಡ ಸುದ್ದಿಯಾಯಿತು. ಸಿಕ್ಕಿಹಾಕಿಕೊಂಡ ಸದಸ್ಯರು ಕಳ್ಳತನದ ಕುರಿತು ಬಾಯಿಬಿಡಲಿಲ್ಲ. ಆಗ ಪೊಲೀಸರೊಂದು ಉಪಾಯ ಮಾಡಿ, ಬಂಧಿತರನ್ನು ಬಿಡುಗಡೆ ಮಾಡಲು ನಿರ್ಧರಿಸಿದರು. ಮುಂದೇನಾಯಿತು ?
‘ಗಂಟಿಚೋರರ ಕಥನಗಳು’ ಸರಣಿಯಲ್ಲಿ ಡಾ.ಅರುಣ್ ಜೋಳದ ಕೂಡ್ಲಿಗಿ ಬರಹ.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಯೋಗೀಂದ್ರ ಮರವಂತೆ ಸರಣಿ ಶುರು
ಇಂದಿನ ಲಂಡನ್ನಿನ ವೈಶಿಷ್ಟ್ಯವನ್ನು ವಲಸಿಗರ ಕಣ್ಣಲ್ಲಿ ಸರಳವಾಗಿ ವ್ಯಾಖ್ಯಾನಿಸುವುದಾದರೆ, ಬ್ರಿಟಿಷರಲ್ಲದ ಬಿಳಿಯರಲ್ಲದ ಜನರು ಅತ್ಯಂತ ವೇಗವಾಗಿ, ಹೆಚ್ಚೇನೂ ಅಡೆತಡೆ ಇಲ್ಲದೆ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಸ್ವೀಕೃತರಾಗುವ ತಾಣ ಎನ್ನಬಹುದು. ಹೀಗೆ ಲಂಡನ್ ನಗರದ ಆದಿಪುರಾಣದೊಂದಿಗೆ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಎಂಬ ಹೊಸ ಸರಣಿಯನ್ನು ಆರಂಭಿಸಿದ್ದಾರೆ ಲೇಖಕ ಯೋಗೀಂದ್ರ ಮರವಂತೆ.









