ಶ್ರೀ ಡಿ.ಎನ್. ಬರೆದ ಈ ಭಾನುವಾರದ ಕತೆ
ಹೋಗಿ ನೋಡಿ ಅಪ್ಪನೆಂದು ಗುರುತು ಹಿಡಿದ. ಆತನ ಮೇಲಿದ್ದ ಕೋಪ ಆರಿರಲಿಲ್ಲ. ಜೀವನವಿಡೀ ಬೇರೆಯವರ ಪಾಪ ಕಳೆಯಲು ದಾನಗಳು ತೆಗೆದುಕೊಂಡು ಜಪತಪಗಳಲ್ಲಿ ಕಾಲ ಕಳೆಯುತ್ತಿದ್ದ ಅಪ್ಪ, ತನ್ನ ಅಪರಕರ್ಮವೂ ಸರಿಯಾಗಿ ಆಗದೆ ಯಾವುದೋ ತಿಳಿಯದ ನಗರದಲ್ಲಿ ಅನಾಥ ಹೆಣದಂತೆ ಬೂದಿಯಾಗಿದ್ದ. ಯಾರದೋ ಸಾವಿಗೆ ಗರುಡ ಪುರಾಣ ಓದುತ್ತಿದ್ದ ಅಪ್ಪ ಸತ್ತಾಗ ಅವನಿಗಾಗಿ ಯಾರೂ ಅದನ್ನು ಓದದಂತೆ ರಮೇಶ ನೋಡಿಕೊಂಡ.
ಶ್ರೀ ಡಿ.ಎನ್. ಬರೆದ ಕತೆ “ಪಾಪ”
ದಡ ಮುಟ್ಟದ ದೋಣಿಗಳಲ್ಲಿ ಕೂತು…
ಒಂದಾದ ನಂತರ ಒಂದರಂತೆ ಮೂರು ಮಕ್ಕಳನ್ನು ಮಾಡಿಕೊಂಡು ನಂತರ ತಮ್ಮತಮ್ಮ ಕೆಲಸ, ಕಾರ್ಯಗಳ ಬಗ್ಗೆ ಗಮನ ಹರಿಸಬೇಕು ಎಂದು ಕೇವಲ ಒಂದು ದಿನದ ಹಿಂದೆ ಮಾತಾಡಿದ್ದಷ್ಟೇ ಅಲ್ಲ, ಮನೆಗೆ ಬಂದು ಸಹಾಯ ಮಾಡಬೇಕು ಎಂದು ನನ್ನನ್ನು ದುಂಬಾಲುಬಿದ್ದ ಅಪ್ಪಟ ಶ್ರೀಸಂಸಾರಿಯಂತೆ ಕಾಣುವ ವಿನಯ, ಅಲಿಶಾ ಜತೆ ನಿಜವಾಗಿಯೂ ಒಂದು ಬದ್ಧ ಸಂಬಂಧದಲ್ಲಿದ್ದಾನೆಯೇ?
ಗುರುಪ್ರಸಾದ್ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್ಗಿವಿಂಗ್”ನ ಆರನೆಯ ಕಂತು ನಿಮ್ಮ ಓದಿಗಾಗಿ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ
ಕಂತುಗಳನ್ನು ಸರಿಯಾಗಿ ಕಟ್ಟಲಿಲ್ಲವೆಂದು ಮನೆಯನ್ನು, ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕಿನವರು ಬಂದಾಗ ಆಶ್ಚರ್ಯವೆಂಬಂತೆ ತಾನೇ ಮುಂದೆ ನಿಂತು ಅವನ್ನೆಲ್ಲಾ ಅವರಿಗೆ ಬಿಟ್ಟುಕೊಟ್ಟ. ಅಡ್ಡಬಂದ ಹೆಂಡತಿಗೆ, ‘ಇಲ್ಲಿಗೆ ಬರುವಾಗ ಏನನ್ನೂ ತಂದಿರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ..
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ “ಜೀ ಗಾಂಧಿ” ನಿಮ್ಮ ಓದಿಗೆ
‘ವಾಟ್ ದ ಹೆಕ್’ ಅಮ್ಮಾ…
‘ನೀವೇ ಸರಿ, ಅರವಿಂದರಾಯರೇ. ಮಕ್ಕಳನ್ನು ಬಹಳ ಚೆನ್ನಾಗಿ ಬೆಳೆಸಿದ್ದೀರಿ’ ಇನ್ನೂ ಅವರ ಮಾತು ಮುಗಿದಿಲ್ಲ. ಎಲ್ಲಿಂದ ಬಂತೋ ಒಂದು ದೊಡ್ಡ ಅಲೆ, ಅಲ್ಲಿ ಕೂತಿದ್ದವರನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿಬಿಟ್ಟಿತು. ಕಣ್ಣು ಮುಚ್ಚಿ ಬಿಡುವುದರಲ್ಲಿ ಎಲ್ಲ ಮರಳು, ಎಲ್ಲೆಲ್ಲೂ ನೀರು. ಜನರ ಕೂಗು, ಹಾಹಾಕಾರ. ಸುಕನ್ಯ ಕಣ್ಣು ಬಿಟ್ಟಾಗ ಹತ್ತಿರ ಯಾರೂ ಕಾಣುತ್ತಿಲ್ಲ. ‘ವಿನೂ, ವಿಶೂ’ ಜೋರಾಗಿ ಕೂಗುತ್ತಾ ಇಡೀ ಸಮುದ್ರದ ದಡದಲ್ಲಿ ಹುಚ್ಚು ಹಿಡಿದಂತೆ ಓಡುತ್ತಿದ್ದಾಳೆ.
ಗುರುಪ್ರಸಾದ್ ಕಾಗಿನೆಲೆ ಬರೆದ ನೀಳ್ಗತೆಯ ಕಂತು
ಎ. ಬಿ. ಪಚ್ಚು ಬರೆದ ಈ ಭಾನುವಾರದ ಕತೆ
ಆ ರಾತ್ರಿ ಯಕ್ಷಗಾನ ಎಲ್ಲಾ ನೋಡಿ ಮುಗಿದು ಬೆಳಿಗ್ಗೆ ಮನೆಗೆ ತಲುಪಿದೆ. ಕಣ್ಣೀರಿನ ಹೊರತು ಆ ದಿನ ಸಮಜಾಯಿಷಿ ಕೊಡಲು ನನ್ನಲ್ಲಿ ಯಾವ ಮಾತುಗಳೂ ಇರಲಿಲ್ಲ. ನಿಜ ನಾನೇನು ತಪ್ಪು ಮಾಡಿರಲಿಲ್ಲ, ಆದರೆ ಯಾಕೋ ನನಗೆ ಅಮ್ಮನನ್ನು ಒಬ್ಬಳನ್ನೇ ಬಿಟ್ಟು ಹೋದ ಆ ತಪ್ಪಿತಸ್ಥ ಭಾವ ಆ ದಿನದಿಂದ ಬಹಳವಾಗಿ ಕಾಡಿತು ಮಹೇಶ. ಆ ನೋವಿನಿಂದಾಗಿ ಆ ದಿನದಿಂದ ನಾನು ಎಂದಿಗೂ ಯಕ್ಷಗಾನದತ್ತ ಕಣ್ಣು ಹಾಯಿಸಲೇ ಇಲ್ಲ.
ಎ.ಬಿ. ಪಚ್ಚು ಬರೆದ ಕತೆ “ಮೈಸಾಸುರ”
ನನ್ನ ನೆಲೆಯಾದರೂ ಯಾವುದು?
ಸುಕನ್ಯಾಳಿಗೆ ಅರವಿಂದನ ಇಂಥ ಮಾತುಗಳು, ನಿರ್ಲಿಪ್ತ ಸ್ಥಿತಿ ಕೆಲವೊಮ್ಮೆ ಬಹಳ ರೇಜಿಗೆ ತರಿಸಿಬಿಡುತ್ತಿತ್ತು. ಸಮಸ್ಯೆಗಳು ಬರುವಾಗಲೇ ಪರಿಹಾರವನ್ನೂ ತಮ್ಮ ಜತೆಗೇ ತಂದಿರುತ್ತವೆ ಎಂಬುದು ಅವನ ಯಾವತ್ತಿನ ನಂಬಿಕೆ. ಪರಿಹಾರ ಅನ್ನೋದು ಇಲ್ಲದಿದ್ದರೆ ಅದನ್ನು ಸಮಸ್ಯೆಯೇ ಅಲ್ಲ ಅನ್ನುತ್ತಿದ್ದ, ಆತ. ‘ಅನ್ನ ಮಾಡೊಕೆ ಅಕ್ಕಿ ಇಲ್ಲ ಅಂದರೆ ಅಂಗಡೀಗೆ ಹೋಗಿ ಅಕ್ಕಿ ತರಬೇಕು. ಅಕ್ಕಿಯೇ ಸಿಗದೇ ಇರೋ ಸಂದರ್ಭ ಬಂದಲ್ಲಿ ಅನ್ನ ಮಾಡುವ ಯೋಚನೆಯನ್ನೇ ಬಿಟ್ಟುಬಿಡಬೇಕು. ಗುರುಪ್ರಸಾದ್ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್ಗಿವಿಂಗ್”ನ ನಾಲ್ಕನೆಯ ಕಂತು ನಿಮ್ಮ ಓದಿಗಾಗಿ
ಡಾ. ಸುಭಾಷ್ ಪಟ್ಟಾಜೆ ಬರೆದ ಈ ಭಾನುವಾರದ ಕತೆ
ತುಸು ಹೊತ್ತಿನ ಬಳಿಕ ರಾತ್ರಿಯ ನೀರವವನ್ನು ಭೇದಿಸಿಕೊಂಡು ‘ಧಡ್’ ಎಂದು ಏನೋ ಬಿದ್ದ ಸದ್ದು. ಬೆನ್ನಿಗೇ ಕ್ಷೀಣವಾಗಿ, ಎದೆಯನ್ನೇ ಕೊರೆಯುವಂಥ ಬಿಕ್ಕಳಿಕೆ ಕೇಳಿಸಿದಾಗ ದಡಕ್ಕನೆ ಎದ್ದು ಕುಳಿತೆ. ಏನೂ ಅರ್ಥವಾಗಲಿಲ್ಲ. ಕಾಲುಗಳನ್ನು ನೆಲಕ್ಕಪ್ಪಳಿಸುತ್ತಾ ಹೊರಗಿಳಿದು ನಡೆಯುತ್ತಿರುವ ಅಣ್ಣನನ್ನು ಕಂಡಾಗ ಮನೆಯಲ್ಲಿ ಬೀಡುಬಿಟ್ಟಿದ್ದ ವಿಷಣ್ಣ ಭಾವ ನನ್ನೊಳಗೂ ತುಂಬತೊಡಗಿತು. ಹೊಸ ರವಿಕೆಯನ್ನು ಕಂಡ ಅಣ್ಣ ‘ಯಾರು ತಂದ್ಕೊಟ್ಟದ್ದು?’ ಎಂದು ಕೇಳಿರಬೇಕು. ಡಾ. ಸುಭಾಷ್ ಪಟ್ಟಾಜೆ ಬರೆದ ಕತೆ “ಗತಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಹೌದು.. ಇಡೀ ಜಗತ್ತೇ ಸ್ಮಾರ್ಟಾಗ್ತಾ ಇದೆ!
ಸೂರ್ಯ ಕೆಂಪಗಾಗುತ್ತಿದ್ದ. ಹಿಂದಿನ ಸುಮಾರು ಎರಡೂವರೆಕೆರೆ ಜಾಗದಲ್ಲಿ ಸಪಾಟಾಗಿಸಿದ ಹುಲ್ಲು. ಋತುಮಾನಕ್ಕನುಗುಣವಾಗಿ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತಿತ್ತು. ಅದರ ಹಿಂದೆ ನಿಂತ ನೂರೈವತ್ತು ಮೇಪಲ್ ಮರಗಳು. ಎಲ್ಲವೂ ಎಲೆಗಳನ್ನು ಕಳಕೊಳ್ಳುತ್ತಾ ಮುಂಬರುವ ಹಿಮವನ್ನು ಎದುರಿಸಲು ಬತ್ತಲಾಗುತ್ತಿದ್ದವು. ಕೆಳಗೆ ಬಿದ್ದ ಹಣ್ಣೆಲೆಗಳ ಮೇಲಿನ ಸಂಜೆಯ ತೇವ ವಾತಾವರಣಕ್ಕೆ ಕೊಟ್ಟಿದ್ದ ಒಂದು ಸಿಹಿಯಾದ, ಒಗರಾದ ವಾಸನೆ ಸನ್ರೂಮಿನ ಕಿಟಕಿಯ ಸೀಲುಗಳ ಮೂಲಕ ಮನೆಯೊಳಗೆ ಹಣಿಕಿಹಾಕಿತ್ತು.
ಗುರುಪ್ರಸಾದ್ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್ಗಿವಿಂಗ್”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಲ್ಲೇಶ್ ಕುಂಬಾರ್ ಬರೆದ ಕತೆ
ಪೂಜೇರಿ ಸಂಗಪ್ಪನ ಸಾವಿನಿಂದಾಗಿ ಕಂಗೆಟ್ಟಿದ್ದ ಕಪಿಲೆ, ಚಪ್ಪರದಿಂದ ಎದ್ದು ಹೋಗಿ ಆತನ ಮನೆಯ ಮುಂದೆ ನಿಂತಿತು. ಆಗ, ಹೊರಗೆ ಮನೆ ಮುಂದೆ ಗದಕಟ್ಟು ಕಟ್ಟಿ ಕೂಡ್ರಿಸಿದ್ದ ಪೂಜೇರಿ ಸಂಗಪ್ಪನ ಹೆಣವನ್ನು ಕಂಡು, ದುಃಖ ತಡೆಯಲಾಗದೆ ನೆರೆದ ಜನರ ನಡುಕ ತೂರಿಕೊಂಡು ಮುಂದೆ ಹೋಗಿ ಆತನನ್ನು ಮೂಸಿ ನೋಡಿ ತನ್ನ ಮರುಕ ವ್ಯಕ್ತಪಡಿಸಿತು. ಆಮೇಲೆ, ಅದು ಹಂಗೇ ಹಿಂದೆ ಸರಿದು ಜನರತ್ತ ಬಂದು ನಿಂತಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಲ್ಲೇಶ್ ಕುಂಬಾರ ಬರೆದ ಕತೆ “ಕಪಿಲೆ” ನಿಮ್ಮ ಈ ಭಾನುವಾರದ ಓದಿಗೆ