ಸುಜಯ್ ಪಿ ಬರೆದ ಈ ಭಾನುವಾರದ ಕತೆ
ಭಾಗೀರಥನ ಕಾಲನ್ನು ಬಿಡಿಸಲು ಬೇಕಾಗಿ ಸಂಕದ ಎರಡು ಹಲಗೆಗಳನ್ನು ಕಡಿದು ತೆಗೆದು ಬೇರೆ ಹಲಗೆ ಹಾಕುವಷ್ಟರಲ್ಲಿ ಡೀಮಣ್ಣ ಕಡಿಮೆಂದರೂ ಹತ್ತರ ಮೇಲೆ ಬೀಡಿ ಸೇದಿದ್ದರು. ಬೀಡಿ ಸೇದಿದ ಮೇಲೆ ಉಳಿಯುವ ಬೀಡಿಯ ತುದಿಯನ್ನು ಕೂಡಾ ಜಗಿದು ತಿನ್ನುವ ಅಭ್ಯಾಸವಿದ್ದ ಡೀಮಣ್ಣ ಆವತ್ತು ಪ್ರತೀ ಬೀಡಿ ಮುಗಿಯುತ್ತಲೂ ಬಂಗಾಳದ ಭಾಗೀರಥನಿಗೆ ಬಯ್ಯದೆ ಅವನನ್ನು ಈ ಊರಿಗೆ ಕರೆದುಕೊಂಡು ಬಂದ ಮಣಿಕಂಠನಿಗೆ ಬಾಯಿ ಬಂದಂತೆ ಬಯ್ಯುತ್ತಲೇ ಇದ್ದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿ.ಆರ್.ಕಾರ್ಪೆಂಟರ್ ಬರೆದ ಕತೆ
ಅಲ್ಲೇ ನಿಂತು ಇವರ ಗೋಳಾಟಗಳನ್ನು ನೋಡುತ್ತ ಲೊಚಗುಟ್ಟುತ್ತಿದ್ದ ಮಾಸಲು ಬಣ್ಣದ ಖಾಕಿ ನಿಕ್ಕರಿನ ವ್ಯಕ್ತಿಯು ‘ಗೌಡರು ಸೇಟ್ಕೇಕ್ ಆಟ ಆಡಕ್ಕೆ ಮೈದಾನುಕ್ಕೆ ಹೋಗೌರೆ’ ಎಂದ. ಇಷ್ಟೊತ್ತೂ ಮನೆಯ ಒಳಗಿದ್ದು, ಕನ್ನಡಕದ ಮೂಲಕ ಜಗವ ನೋಡುತ್ತಿದ್ದ ಪದವಿಧರ ವ್ಯಕ್ತಿಯು, ಅವನ ಇಂಗ್ಲಿಷಿಗೆ ಜೋರಾಗಿ ನಗುತ್ತಾ ಹೊರಬಂದು, ‘ಸೇಟ್ಕೇಕ್ ಆಟ ಅಲ್ಲವೋ, ಅದು ಶೆಟಲ್ಕಾಕ್’ ಎನ್ನಲು ಖಾರದಪುಡಿ ಮೆತ್ತಿಸಿಕೊಂಡಿದ್ದ ಸಣ್ರಾಮ ‘ಕುಯ್, ಕುಯ್’ ಎನ್ನುವುದಕ್ಕೂ…
ಡಾ.ಕೆ. ಷರೀಫಾ ಬರೆದ ಈ ಭಾನುವಾರದ ಕಥೆ “ಹೀಗೊಂದು ಖುಲಾಹ್”
ಇತ್ತೀಚೆಗೆ ಅವನು ಯಾಕೆ ಮಾತು ಮಾತಿಗೆ ತಲ್ಲಾಖ್ ಕೊಡುತ್ತೇನೆಂದು ಹೆದರಿಸುತ್ತಲೇ ಇರುತ್ತಿದ್ದ. ನಾನೂ ಸುಮ್ಮನೇ ಮನೆಯಲ್ಲಿ ಸುಮ್ಮನೆ ಕೂಡುತ್ತಿರಲಿಲ್ಲ. ಟೇಲರಿಂಗ್ ಸೆಂಟರ್ನಲ್ಲಿ ಕೆಲಸ ಮಾಡಿ ಸಂಪಾದಿಸುತ್ತಿದ್ದೆ. ಅತ್ತೆಯವರು ಮಕ್ಕಳನ್ನು ನೋಡಿಕೊಳ್ಳತ್ತಿದ್ದರು. ಗಂಡ ಮಗಳು ಸಲ್ಮಾಗೆ ಒಳ್ಳೆಯ ಶಾಲೆಗೆ ಸೇರಿಸಿದ್ದನು. ಶೋಯೇಬ್ಗೆ ಇನ್ನೂ ಶಾಲೆಗೆ ಹಾಕಿರಲಿಲ್ಲ. ಮಾತು ಮಾತಿಗೆ ಹೊಡಿಬಡಿ ಮಾಡುವುದು, ಕೂಗಾಡುತ್ತಿದ್ದುದೇ ಅವಳಿಗೊಂದು ಸಮಸ್ಯೆಯಾಗಿತ್ತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಸು ಬೇವಿನಗಿಡದ ಬರೆದ ಕತೆ
ಅಳುತ್ತಿದ್ದ ಅವಳನ್ನು ಡಾಕ್ಟರ್ ಒಂದೆರಡು ಗುಳಿಗೆ ನುಂಗಿಸಿ ನೀರು ಕುಡಿಸಿ ಸಮಾಧಾನಪಡಿಸಿದರು. ಕೂಡಲೆ ಆಕೆ ನಿದ್ದೆಹೋದಳು. ಆಕೆಯ ಮನಸ್ಸು ಕೃಷ್ಣನ ಕಥೆಯಿಂದ ಘಾಸಿಗೊಂಡಿದೆಯೆಂದು ಅವರಿಗೆ ತಿಳಿಯಿತು. ‘ನಾಟಕದ ಕೃಷ್ಣ ಬಂದು ನಮ್ಮಣ್ಣನ ಸಾಯಹೊಡದು ನನ್ನ ಕರ್ಕೊಂಡು ಹೋಗ್ತಾನಂತ.’ ಎಚ್ಚರಾದಾಗ ವಿಮಲವ್ವ ಹೇಳಿದ ಮಾತಿಗೆ ಡಾಕ್ಟರ್ ನಕ್ಕರು. ‘ನಿಮ್ಮಣ್ಣ ದೊಡ್ಡ ಹುಲಿ ಅದಾನು. ಇಂವ ಅಡರ್ ಅಂದ್ರ ಕೃಷ್ಣನ ಕಿರೀಟ ಅಲ್ಲೇ ಬೀಳ್ತದ ತಗೋ. ನೀಯೇನೂ ಹೆದರಬ್ಯಾಡ’.
ಕಾರ್ತಿಕ್ ಆರ್. ಬರೆದ ಈ ಭಾನುವಾರದ ಕತೆ
ಇಷ್ಟೆಲ್ಲ ನಡೆಯತ್ತಿದ್ದಾಗ, ಅವನೆಲ್ಲಿದ್ದ? ಎಂದೇನಾದರೂ ಕೇಳಿದರೆ ತಾರಾಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ತಮ್ಮಿಬ್ಬರ ನಡುವೆ ಏನಿತ್ತು? ಇದ್ದದ್ದು ಎಷ್ಟು ಗಾಢವಾಗಿತ್ತು? ಸಾಧ್ಯವಾಗಿದ್ದರೆ ಅವನ ಜೊತೆ ಓಡಿ ಹೋಗುತ್ತಿದ್ದೇನೇ ತಾನು? ಕೇಳಿಕೊಳ್ಳುತ್ತಾಳೆ ಕೆಲವೊಮ್ಮೆ! ಕೆಲಕಾಲ ಬಿಟ್ಟಿರಲಾರದಂತೆ ಬೆಸೆದುಕೊಂಡಿದ್ದ ತಾವಿಬ್ಬರೂ, ಅದೆಷ್ಟು ಬೇಗ ಒಂದೇ ಊರಿನಲ್ಲಿದ್ದೂ ದಶಕಗಟ್ಟಲೇ ಅಜ್ಞಾತರಾಗಿ ಬದುಕಿ ಬಿಡುವಷ್ಟು ಬದಲಾಗಿ ಹೋದೆವು? ಮಾತಿನಲ್ಲಿ ನೂರಾರು ಚಂದದ ಕನಸುಗಳನ್ನು ಹೆಣೆದುಕೊಡುತ್ತಿದ್ದ ಅವನು…”
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಬಿದರಹಳ್ಳಿ ನರಸಿಂಹಮೂರ್ತಿ ಬರೆದ ಕಥೆ
ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಕಾನ್ಸ್ಟೇಬಲ್ಗೆ ರೈಫಲ್ಹಿಡಿದು ನಿಲ್ಲಲು ಸೂಚಿಸಿದೆ. ಮೊಬೈಲ್ ಫೋನಿನಲ್ಲಿ ತಹಶೀಲ್ದಾರರನ್ನು ಸಂಪಕಿಸಲು ನೋಡಿದೆ. ಶಿರಸ್ತೆದಾರ್ ಸಿಂಪಿಗೇರ್ ಸಿಕ್ಕ. ಎಲೆಕ್ಷನ್ ಡ್ಯೂಟಿಯಿಂದ ವಿನಾಯ್ತಿ ಕೇಳಿದ್ದಕ್ಕೆ ಬೇಕೆಂತಲೆ ನನ್ನನ್ನ ಈ ತರ್ಲೆಊರಿಗೆ ಪ್ರಿಸೈಡಿಂಗ್ ಆಫೀಸರ್ ಮಾಡಿಹಾಕಿಸಿದ್ದ ಮಹಾಶಯ ಅವ. ಪರಿಸ್ಥಿತಿ ವಿವರಿಸಿ ಹೆಚ್ಚೂಕಡಿಮೆ ಆದರೆ ಎಲೆಕ್ಷನ್ ರದ್ದುಮಾಡಬೇಕಾಗುತ್ತದೆ ಎಂದು ತಿಳಿಸಿದೆ. ಅರ್ಧಗಂಟೆಯಲ್ಲಿ ಪೋಲೀಸ್ ಜೀಪು ಬಂದಿತು. ಅದರಲ್ಲೆ ನ್ಯಾಮತಿಗೆ ಹೋಗಿ ಐವತ್ತು ರೊಟ್ಟಿ ಕಟ್ಟಿಸಿಕೊಂಡು…”
ನವೀನ ಗಣಪತಿ ಬರೆದ ಈ ಭಾನುವಾರದ ಕತೆ ಪ್ರಾಣಪಕ್ಷಿ
ಗಾರೇಜಿನಲ್ಲಿ ನೆರವಾಗುತ್ತಿದ್ದ ಪಿಟ್ಟನಿಗೆ ಆ ತಿಂಗಳ ಸಂಬಳ ಕೊಡುವುದಕ್ಕೇ ಸಾಧ್ಯವಾಗಲಿಲ್ಲ ಅಡಿಗರಿಗೆ. ಸಾಧು ಸ್ವಭಾವದವನಾದ, ಯಾವತ್ತೂ ಸಂಬಳಕ್ಕಾಗಿ ಹಾತೊರೆದು ಕೇಳದ ಪಿಟ್ಟ ಆರಂಭದಲ್ಲಿ ಏನೂ ಕೇಳಲಿಲ್ಲ. ಆದರೆ ಕೆಲದಿನಗಳಲ್ಲಿ, ‘ಸ್ವಲ್ಪ ಇದ್ದರೆ ಬೇಕಿತ್ತು’ ಎಂದು ಎರಡು ಮೂರು ಬಾರಿ ಕೇಳಿದ. ನಾಳೆ ಕೊಡುವ ಎಂದು ಅಡಿಗರು ಆಶ್ವಾಸನೆ ಕೊಟ್ಟರೂ, ಹಾಗೆ ಹಣ ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಈ ನಡುವೆ ಹುಶಾರು ತಪ್ಪಿದ ಪಿಟ್ಟ, ಆಗಸ್ಟ್ ತಿಂಗಳಲ್ಲಿ ಸಿದ್ಧಾಪುರದ ಆಸ್ಪತ್ರೆಗೆ ಸೇರಿದವನು, ತೀರಿಯೇ ಹೋದ ಸುದ್ದಿ ಬಂದಿತ್ತು.”
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಭದ್ರಪ್ಪ ಶಿ ಹೆನ್ಲಿ ಬರೆದ ಕಥೆ
ಕಣ್ಣುಮುಚ್ಚಿ ಒರಗಿದವನಿಗೆ ನಿದ್ರೆ ಬರಲಿಲ್ಲ. ಬಣ್ಣ ಬಣ್ಣದ ವೇಷ ತೊಟ್ಟ ಯಕ್ಷಗಾನದ ಪಾತ್ರಗಳು ರಿಂಗಣ ಹಾಕಲು ಪ್ರಾರಂಭಿಸಿದಂತೆ ಬದುಕಿನ ಭೂತಕಾಲ ಬೆತ್ತಲೆಯಾಗಿ ನಿಂತಿತು. ಅವನು ತನ್ನ ಅಮ್ಮಿಜಾನಳ ಹೊಟ್ಟೆಯಿಂದ ಈ ಪ್ರಪಂಚಕ್ಕೆ ಬಂದಾಗ ಅಪ್ಪ ಇರಲಿಲ್ಲ. ಅವನ ಅಪ್ಪ ಕಂಕನಾಡಿಯ ವಿಟ್ಟುಪೈಯವರ ಮಂಡಿಯಲ್ಲಿ ಉಪ್ಪು ಮೀನು ಪಡೆದು ಘಟ್ಟದ ಕಡೆಗೆ ಲಾರಿಯಲ್ಲಿ ಸಾಗಿಸಿ, ಮಾರಾಟ ಮಾಡಿ ಮನೆಗೆ ಮರಳಬೇಕಾದರೆ ವಾರವೆರಡು ಕಳೆಯುತ್ತಿದ್ದವು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಭದ್ರಪ್ಪ ಶಿ ಹೆನ್ಲಿ ಬರೆದ ಕತೆ ‘ಎದೆ ಹತ್ತಿ ಉರಿದೊಡೆ’
ನಾರಾಯಣ ಯಾಜಿ ಈ ಭಾನುವಾರದ ಕಥೆ
ಆತ ಹಿಂದಿಯಲ್ಲಿ “ಮಾಲು ಬೇಕಾ, ಪ್ರೆಶ್ ಇದ್ದಾರೆ” ಎಂದ. ಅನಂತ ಇಲ್ಲಾ ನಾವು ಇಲ್ಲಿ ನಮ್ಮೂರಿನ ಹೋಟೇಲಿನವರನ್ನು ಭೆಟ್ಟಿಯಾಗಲಿಕ್ಕೆ ಬಂದಿದ್ದೇವೆ. ಅಂತಹುದೇನೂ ನಮಗೆ ಆಸೆಯಿಲ್ಲ ಎಂದು ಅವನನ್ನು ಸಾಗಹಾಕಲು ನೋಡಿದ. ಆತನೂ ಬಿಡಲಿಲ್ಲ. “ಸಾಬ್ ನೋಡಿ ಹೋಗಿ, ಅದಕ್ಕೆ ಹಣಕೊಡಬೇಕಾಗಿಲ್ಲ.” ಎಂದು ಒತ್ತಾಯ ಮಾಡಲು ತೊಡಗಿದ. “ನಾವು ಅಂತವರಲ್ಲ ಮರಿ…” ಎಂದು ಮೂರ್ತಿ ಹೇಳುತ್ತಿರುವಂತೆ ಆತ ಮತ್ತೆ ತನ್ನ ವರಾತ ಹಚ್ಚಿ “ನೋಡಿ ಹೋಗಿ ಅವರೆಲ್ಲಾ ತನ್ನ ಅಕ್ಕಂದಿರು” ಎಂದ.