Advertisement

Month: May 2024

ಸಂಸ್ಕೃತಿ ಕಥನವೇ ಆಗಿಬಿಡುವ ಬಾಲ್ಯದ ನೆನಪುಗಳ ಹೊತ್ತಿಗೆ

”ಬಾಲ್ಯದ ಅನುಭವಗಳನ್ನು ಬಿಡಿಬಿಡಿ ಅನುಭವ ಕಥನಗಳ ಮೂಲಕ ಸಾದರಪಡಿಸುವ ಜೋಯಪ್ಪ, ಈ ಅನುಭವಗಳನ್ನು ಒಂದು ಸಂಸ್ಕೃತಿ ಕಥನದ ಮಟ್ಟಕ್ಕೆ ಏರಿಸಿಬಿಡುತ್ತಾರೆ. ಸಂದ ಕಾಲದಲ್ಲಿ ನೆಲೆ ಊರಿದ್ದ ಒಂದು ಭೌಗೋಳಿಕ ಚೌಕಟ್ಟಿನ ಬದುಕನ್ನು; ಇದು ಎಲ್ಲಾ ಕುಟುಂಬಗಳ ಕಥೆ ಎಂಬಂತೆ ಹರಳು ಕಟ್ಟಿದ ಕಥನಗಳ ಮೂಲಕ ಜೋಯಪ್ಪ ಕಟ್ಟುತ್ತಾರೆ”

Read More

ಡಾ. ಲಕ್ಷ್ಮಣ ವಿ.ಎ ಬರೆದ ಎರಡು ಹೊಸ ಕವಿತೆಗಳು

“ಈಗ ಗಂಧಕದ ಘಾಟಿನ ಪತ್ರ ತೆರೆಯಲು
ಧೈರ್ಯ ಸಾಲುತ್ತಿಲ್ಲ ಯಾರೊಬ್ಬರಿಗೂ
ಬಣ್ಣಗಳ ಕಲಿಸಿ ಕುಳಿತ ಪೋರನ
ಬಿಳಿ ಹಾಳೆಯ ಮೇಲೆ ದುರಂತ ನಾಟಕದ ಪರದೆಯ ಬಣ್ಣಗಳು”- ಡಾ. ಲಕ್ಷ್ಮಣ ವಿ.ಎ ಬರೆದ ಎರಡು ಹೊಸ ಕವಿತೆಗಳು

Read More

ವಿಪಿನ್ ಬಾಳಿಗ ತೆಗೆದ ಈ ದಿನದ ಚಿತ್ರ

ಐಟಿ ಕಂಪೆನಿಯ ಉದ್ಯೋಗಿಯಾಗಿರುವ  ವಿಪಿನ್ ಅವರಿಗೆ ಪರಿಸರ ಸಂರಕ್ಷಣೆ ಇಷ್ಟದ ವಿಷಯ. ಉಭಯಚರ ಪ್ರಾಣಿಗಳು ಹಾಗೂ ಕೀಟಗಳ ಛಾಯಾಗ್ರಹಣದಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಚಿಂಚುವಿನ ಪ್ರಾಣ ಹಿಂಡಿದ ಪೆರ್ಮಾರಿ: ಮುನವ್ವರ್ ಪರಿಸರ ಕಥನ

“ಮಲೆಗಳಲ್ಲಿ ಮದುಮಗಳು ಕಾದಂಬರಿಯ ಗುತ್ತಿಯ ಹುಲಿಯನಂತೆಯೇ ತಂಗಿಗೆ ಚಿಂಚುವೆಂದರೆ ಪ್ರಾಣ. ಅದರ ಜೊತೆ ತಿನ್ನುವುದೇನು, ಮಲಗುವುದೇನು. ಅದೂ ಹಾಗೆಯೇ ಹೊಂದಿಕೊಂಡು ಒಳ್ಳೆಯ ಸ್ವಭಾವವನ್ನೇ ಮೈಗೂಡಿಸಿಕೊಂಡಿತ್ತು. ಶೌಚಕ್ಕೆ ಹೊರಗಡೆಗೆ ಹೋಗುತ್ತಿತ್ತು.”

Read More

ಕಳೆದುಹೋಗುವ ಬೆಕ್ಕುಗಳ ಕುರಿತು:ಯೋಗೀಂದ್ರ ಮರವಂತೆ ಅಂಕಣ

”ಈ ದೇಶದಲ್ಲಿ ಕನಿಷ್ಠ ಬೆಕ್ಕುಗಳಿಗಂತೂ ಮನೆ ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಇರಲಿಕ್ಕಿಲ್ಲ ಬಿಡಿ. ಪ್ರಕರಣದ ಯಾರದೋ ಮನೆಯದಾಗಿದ್ದರೆ ರಸ್ತೆಯಲ್ಲಿ ನಿಂತು ಕುಳಿತು ಮಾತಾಡುವ ಇತರ ಬೆಕ್ಕುಗಳ ನಡುವೆ ಹೀಗೆಲ್ಲ ಊಹಾಪೋಹಗಳು ಹಬ್ಬುವುದು ಸಹಜವೇ. ಹೀಗೆ ಬೀದಿ ಬದಿಯಲ್ಲಿ ಗುಸುಗುಸು ಪಿಸಿಪಿಸಿ ಆದ ಮೇಲೆ ಯಾರ ಮನೆಯ ಒಳಕತೆಗಳ ಉಸಾಬರಿ ನಮಗೇಕೆ ಎನ್ನುತ್ತಾ ಬೆಕ್ಕುಗಳು ತಮ್ಮ ತಮ್ಮ ಮನೆಗೆ ತೆರಳುವುದೂ ಇದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ