ಸುಧಾ ಆಡುಕಳ ಕಥಾಸಂಕಲನಕ್ಕೆ ಡಾ. ಎಲ್.ಸಿ. ಸುಮಿತ್ರಾ ಮಾತುಗಳು
“‘ಹೊಳೆ’ ಕಥೆಯಲ್ಲಿ ಕಾಡುನಾಶದಿಂದ ಹೊಳೆ ಬತ್ತಿಹೋಗುವ ಪರಿಸರದ ಚಿಂತನೆಯಿದೆ. ‘ಸತ್ಯದ ಬದುಕು’ ವ್ಯಕ್ತಿ ಸ್ವಾತಂತ್ರ್ಯವನ್ನು ಕೌಟುಂಬಿಕ ಸಂಬಂಧಗಳು ಮೊಟಕು ಮಾಡುವ, ನಿಯಂತ್ರಿಸುವ ರೀತಿಯನ್ನು ಹೇಳುತ್ತಲೇ ಅಲಕಾ ಎಂಬ ಹುಡುಗಿ ಮನೆಯಲ್ಲೂ, ಕೆಲಸ ಮಾಡುವ ಜಾಗೆಯಲ್ಲೂ ಹೇಗೆ ಒಂದು ಪರಿಕರವಾಗಿ ಬಳಸಲ್ಪಡುತ್ತಾಳೆ… ಕೊನೆಗೆ ಹೇಗೆ ಅವಳು ಭಾವನಾತ್ಮಕ ಬಂಧಗಳಿಂದ ಹೊರಬರುವ ಬಗೆಯನ್ನು ಚಿತ್ರಿಸುತ್ತದೆ. ‘ಕಥೆಯನ್ನರಸುತ್ತಾ’ ಎಂಬ ಕಥೆ ಹೊಸಬಗೆಯ ನಿರೂಪಣೆಯನ್ನು ಹೊಂದಿದೆ.”
ಸುಧಾ ಆಡುಕಳ ಅವರ ಚೊಚ್ಚಲ ಕಥಾಸಂಕಲನ ‘ಒಂದು ಇಡಿಯ ಬಳಪʼದ ಕುರಿತು ಡಾ. ಎಲ್.ಸಿ. ಸುಮಿತ್ರಾ ಅಭಿಪ್ರಾಯ