Advertisement

Month: May 2024

ಸದೃಢ ವ್ಯವಸ್ಥೆಯೊಂದರ ನಿರ್ಮಾಣಕ್ಕೆ ಸರಳತೆಯೇ ಅಡಿಪಾಯ

ಹಣವಿಲ್ಲದವರು ಸಿನಿಮಾ ನೋಡಲು ಮುಂದಗಡೆ ಸಾಲಿನಲ್ಲಿ ನೆಲದ ಮೇಲೆ ಕುಳಿತು ನೋಡುವ ವಿಭಾಗಕ್ಕೆ ಗಾಂಧಿ ಕ್ಲಾಸ್ ಎಂದೆ ಹೆಸರು. ಅದು ಮೊದ ಮೊದಲು ವ್ಯಂಗ್ಯ ಮಾಡುವ ಹಾಗೆ ಇದ್ದರೂ, ಈಗ ಅದೇ ನಿಜವಾಗಿ ಹೋಗಿದೆ. ಯಾರಾದರೂ ನ್ಯಾಯವಾದ ಮಾರ್ಗದಲ್ಲಿ ನಡೆದರೆ, ಗಾಂಧಿ ತರ ಆಡಬೇಡ ಎಂದು ಹಂಗಿಸುತ್ತಾರೆ. ದುಂದು ವೆಚ್ಚ ಮಾಡದೆ, ಸಾಧಾರಣ ಜೀವನ ನಡೆಸಿದರೆ ಅವರಿಗೆ ಗಾಂಧಿ ಎನ್ನುವ ಹಣೆಪಟ್ಟಿ ಹಚ್ಚಿ ನಗುತ್ತಾರೆ.

Read More

‘ದೇವ್ರು’ ಪದ್ಮನಾಭ ಭಟ್‌ ಹೊಸ ಕಾದಂಬರಿಯ ಕೆಲವು ಪುಟಗಳು

ಸುಬ್ಬಿ ಈಗ ಇದ್ದಿದ್ದರೆ ಏನು ಹೇಳುತ್ತಿದ್ದಳು? ಈ ಪುಟ್ಟ ಲಲಿತೆಯನ್ನು ಆ ದೇವ್ರುವಿನ ಎದುರಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದರೆ ಏನನ್ನಬಹುದು? ಹುಟ್ಟಾ ನೋಡೇ ಇರದ ಮನುಷ್ಯನನ್ನು ಅಣ್ಣ ಎಂದು ಹೇಳಿದರೆ ಒಪ್ಪಿಕೊಳ್ಳಬಹುದೇ? ದೇವ್ರು ಇವಳನ್ನು ನೋಡಿ ಹೇಗೆ ಪ್ರತಿಕ್ರಿಯಿಸಬಹುದು? ಹೀಗೆ ಹತ್ತು ಹಲವು ಆಲೋಚನೆಗಳು ಮನಸಲ್ಲಿ ಸುಳಿಯುತ್ತಲೇ ಇದ್ದವು. “ಅವ್ನ ಮತ್ತೆ ನನ್ನ ಋಣ ತೀರಿದೆ. ಇನ್ಮೇಲೆ ಅವ್ನಾಗೇ ಎದ್ರಿಗೆ ಬಂದ್ರೂ ನಾನು ಮಾತಾಡಿಸ್ಬಾರ್ದು’ ಎಂದುಕೊಂಡಳು. ಪದ್ಮನಾಭ ಭಟ್‌ ಶೇವ್ಕಾರ ಹೊಸ ಕಾದಂಬರಿ ‘ದೇವ್ರು’ ಅ.24ರಂದು ಬಿಡುಗಡೆ ಆಗಲಿದೆ. ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ವ್ಯಂಗ್ಯ ದರ್ಶನದ ಕವಿ ಪಾ.ವೆಂ. ಆಚಾರ್ಯ

ಪಾವೆಂ ಅವರ ನೆಚ್ಚಿನ ಸಾಹಿತ್ಯ ಪ್ರಕಾರ ಕಾವ್ಯ. ಪಾ. ವೆಂ. ಅವರು ನವೋದಯ ಪಂಥದಿಂದ ನವ್ಯಕ್ಕೆ ಬಂದ ಒಬ್ಬ ಪ್ರಮುಖ ಕವಿ. ಅವರ ಮೊದಲನೆಯ ಸಂಕಲನ `ನವನೀರವ’ ದಲ್ಲಿ ನವೋದಯ ಸಂವೇದನೆಯ ಕವಿತೆಗಳು ಮತ್ತು ಸಮಾಜದ ವಾಸ್ತವಗಳನ್ನು ಹೊಸ ಬಗೆಯಲ್ಲಿ ಹಾಸ್ಯ ದೃಷ್ಟಿಕೋನದಿಂದ ನೋಡಲಾರಂಭಿಸಿದ ಕವಿತೆಗಳಿವೆ. ಸಂಖ್ಯೆಯ ದೃಷ್ಟಿಯಿಂದ ಅವರು ಬರೆದ ಕವನಗಳು ಹೆಚ್ಚಿಲ್ಲ. ನವೋದಯ ಮತ್ತು ನವ್ಯ ಎರಡೂ ಬಗೆಯ ಕಾವ್ಯ ಪ್ರಕಾರಗಳಲ್ಲೂ ಅವರು ಕವನಗಳನ್ನು ರಚಿಸಿದ್ದಾರೆ.

Read More

ಕೆ.ವಿ. ತಿರುಮಲೇಶ್‌ ಅನುವಾದಿಸಿದ ಎಮಿಲಿ ಡಿಕಿನ್ಸನ್‌ಳ ಕವಿತೆಗಳು

ಅಮೆರಿಕದ ಕವಯಿತ್ರಿ ಎಮಿಲಿ ಡಿಕಿನ್ಸನ್ (೧೮೩೦-೮೬) ತುಂಬಾ ಸೆನ್ಸಿಟಿವ್ ಕವಿತೆಗಳನ್ನು ಬರೆದವಳು.  ಬದುಕಿನ ಸೂಕ್ಷ್ಮ ವಿಚಾರಗಳೇ ಹೆಚ್ಚಾಗಿ ಅವಳ ಕವನದ ವಸ್ತುಗಳಾಗಿದ್ದವು. ತನ್ನ ಜೀವಿತಕಾಲದಲ್ಲಿ ಅವಳು ಪ್ರಕಟಿಸಿದ್ದು ಆರೋ ಏಳೋ ಕವಿತೆಗಳನ್ನು ಮಾತ್ರ. ಚಿಕ್ಕ ಚಿಕ್ಕ ಕಾಗದದ ತುಂಡುಗಳಲ್ಲಿ ಅವಳು ಬರೆದು ಬಂಡಲುಗಳಾಗಿ ಇರಿಸಿದ ಕವಿತೆಯ ಕಟ್ಟುಗಳು ಅವಳ ಮರಣಾನಂತರ ಸಿಕ್ಕವು. ಇಂದು ಡಿಕಿನ್ಸನ್ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಸಿದ್ಧ ಹೆಸರು. ಡಿಕಿನ್ಸನ್ ಕವಿತೆಗಳಿಗೆ ಶೀರ್ಷಿಕೆಗಳಿಲ್ಲ.  ಆಕೆಯ ಎರಡು ಕವನಗಳನ್ನು ಹಿರಿಯ ಬರಹಗಾರ ಕೆ.ವಿ.ತಿರುಮಲೇಶ್ ಅನುವಾದಿಸಿದ್ದಾರೆ. 

Read More

ವಾರಂಟ್ ಎಂಬ ಮಾಯಾ ಬಜಾರ್

ಆಗ ರಸ್ತೆಗಳು ಅಷ್ಟು ಸರಿ ಇಲ್ಲದ್ದರಿಂದ ಮಡಿಕೇರಿಯಿಂದ ಬೆಂಗಳೂರಿಗೆ ಸಾಧಾರಣ ಏಳರಿಂದ ಎಂಟು ಗಂಟೆ ಸಮಯ ಬೇಕಿತ್ತು. ನಮ್ಮ ಸರಕಾರಿ ಕೆಂಪು ಬಸ್ಸಿನ ಪ್ರಯಾಣ ನಿಮಗೆಲ್ಲರಿಗೂ ಖಂಡಿತ ತಿಳಿದೇ ಇರುತ್ತದೆ. ಸೊಂಟ ಕುಲುಕಿಸಿಕೊಂಡು, ರಸ್ತೆಯ ಗುಂಡಿಗಳಲ್ಲಿ ಏಳುತ್ತಾ ಬೀಳುತ್ತಾ ಮುಂದೆ ಸಾಗಿದ ಬಸ್ಸನ್ನು ಮಂಡ್ಯದಲ್ಲಿ ತಿಂಡಿಗೆಂದು ನಿಲ್ಲಿಸಿದರು. ನಾನು ಕೆಳಗೆ ಇಳಿದು ಬಂದೆ. ಚಂದ್ರಶೇಖರನು ನನ್ನ ಜೊತೆಯಲ್ಲಿ ಬಂದು ನನ್ನ ಪಕ್ಕದಲ್ಲೇ ನಿಂತ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ