Advertisement

Month: May 2024

ಮಮತಾ ಅರಸೀಕೆರೆ ಬರೆದ ಈ ದಿನದ ಕವಿತೆ

“ಚಳಿಯ ಅಲೆಗಳನ್ನು ಎಷ್ಟೆಂದು
ಸಹಿಸೀತು ತನು ಪದರ
ಬಯಸುವ ಮಗು ಮನಸಿಗೆ
ನಿನ್ನದೇ ನೆನಪಿನಾಧಾರ
ದೇಹದ ಇಕ್ಕೆಲಗಳ ಬಿಸಿಗೆ
ಪದೇಪದೇ ಅದೇ ಕನವರಿಕೆ”- ಮಮತಾ ಅರಸೀಕೆರೆ ಬರೆದ ಈ ದಿನದ ಕವಿತೆ

Read More

ಅಂದಿನ ಬೆಂಗಳೂರು ಮತ್ತು ಬಸವನಗುಡಿಯ ಚಿತ್ರಣ

ಬಸವನಗುಡಿಯ ಎರಡು ಹೆಗ್ಗುರುತಗಳು ಬಸವನ ದೇವಸ್ಥಾನ ಮತ್ತು ಪೊಲೀಸ್ ಸ್ಟೇಷನ್. ಬಸವನಗುಡಿ ಯನ್ನು ಬೆಳೆಸಿದವರು ಹಲವಾರು ಜನರಿದ್ದಿರಬೇಕು. ಅವರಲ್ಲಿ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಮುಖ್ಯರು. ಅನೇಕ ಆಸಕ್ತಿಗಳಿದ್ದ ವೆಂಕಟನಾರಾಯಣಪ್ಪನವರು ಭೌತ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ವಿಜ್ಞಾನ ಸಂವಹನೆಯ ಕಾರ್ಯದಲ್ಲೂ ಪ್ರಾತಃಸ್ಮರಣೀಯರು; ಕನ್ನಡದಲ್ಲಿ ಎರಡು ವರ್ಷ ಕಾಲ ವೈಜ್ಞಾನಿಕ ಮಾಸಿಕ ಪತ್ರಿಕೆಯನ್ನು ನಡೆಸಿಕೊಂಡು ಬ೦ದರು.

Read More

ದೊರೆ ಆರನೇ ಜಾರ್ಜ್ ಜೀವನದ ಒಂದು ಕತೆ ʻದ ಕಿಂಗ್ಸ್ ಸ್ಪೀಚ್ʼ

ದೊರೆಯ ಉಗ್ಗು ನಿವಾರಣೆ ಕುರಿತ ಪ್ರಯತ್ನಗಳು ಮುಂದುವರಿದ ಹಾಗೆ ಚಿತ್ರದಲ್ಲಿ ದೃಶ್ಯಗಳ ಒಟ್ಟಾರೆ ಭಾವದಲ್ಲಿ ತೀವ್ರತೆ ಹೆಚ್ಚಾಗುತ್ತದೆ. ಅವುಗಳಲ್ಲಿ ದೊರೆಯ ತಲ್ಲಣ, ತಳಮಳಗಳಿರುತ್ತವೆ, ತನ್ನ ಸಾಮರ್ಥ್ಯದ ಬಗ್ಗೆಯೇ ಅನುಮಾನ ಮತ್ತು ಹಿಂಜರಿಕೆಗಳಿರುತ್ತವೆ. ಅಷ್ಟೇ ಅನುಮಾನ ಹಾಗೂ ರೋಷ ಉಗ್ಗಿನ ದೋಷ ನಿವಾರಣೆಗೆ ಪ್ರಯತ್ನಿಸುವ ಡಾಕ್ಟರ್ ಜೆಫ್ರಿ ರಶ್ಲಿ ಬಗ್ಗೆ ಇರುತ್ತದೆ. ಈ ಜೆಫ್ರಿಯಾದರೋ ಸಾಂಪ್ರದಾಯಿಕ ವಿದ್ಯೆ ಹೊಂದಿದ ಡಾಕ್ಟರಲ್ಲ. ಅವನ ಹಿನ್ನೆಲೆಯೇ ಬೇರೆ.

Read More

ಜಯಂತ ಕಾಯ್ಕಿಣಿ ಅನುವಾದಿಸಿದ ಐಸಾಕ್‌ ಬಾಶೆವಿಸ್‌ ಸಿಂಗರ್‌ನ ಕಥೆಯನ್ನಾಧರಿಸಿದ ನಾಟಕ “ಮಳ್ಳ ಗಿಂಪೆಲ್”

ಜಯಂತ ಕಾಯ್ಕಿಣಿ ಅನುವಾದಿಸಿದ ಐಸಾಕ್‌ ಬಾಶೆವಿಸ್‌ ಸಿಂಗರ್‌ನ ಕಥೆಯನ್ನಾಧರಿಸಿದ ನಾಟಕ “ಮಳ್ಳ ಗಿಂಪೆಲ್”‌

ಕೃಪೆ: ಸಂಚಿ ಫೌಂಡೇಷನ್

Read More

ಮಾತು ಮೀರಿದ ಕ್ರಿಯಾರೂಪ: ಬರಗೂರು ರಾಮಚಂದ್ರಪ್ಪ

ಪ್ರಜಾಸತ್ತಾತ್ಮಕ ಸಮಾಜವೊಂದರಲ್ಲಿ ನಡೆಯುತ್ತಿರುವ ಸ್ಥಿತ್ಯಂತರದ ಸಂಕಟಗಳನ್ನು, ಅಲ್ಲೀವರೆಗೆ ಅಜ್ಞಾತವಾಗಿದ್ದ ಸಮುದಾಯಗಳ ಬದುಕಿನ ಮೂಲಕ ಪರಿಶೀಲಿಸುವ ಪ್ರತಿಭಟನಾ ಪ್ರತೀಕಗಳನ್ನೂ ಕಾಣಬಹುದು. ಈ ಮಾದರಿಯ ರಚನೆಗಳಲ್ಲಿ ಚಲನಶೀಲತೆಯ ಒರತೆ ಉಕ್ಕುವುದುಂಟು. ಈ ಒರತೆಯನ್ನು ಕೃತಿಕಾರರು ತಂತಮ್ಮ ಬೊಗಸೆಯಲ್ಲಿ ಎಷ್ಟೆಷ್ಟು ಮತ್ತು ಹೇಗೆ ಹೇಗೆ ತುಂಬಿಕೊಳ್ಳುತ್ತಾರೆಂಬ ಆಧಾರದಲ್ಲಿ ಕೃತಿಯ ವಸ್ತು-ವಿನ್ಯಾಸಗಳು ಕಟ್ಟಿಕೊಳ್ಳುತ್ತವೆ. ಬದಲಾವಣೆಯ ಬೊಗಸೆಯನ್ನು ತನ್ನದಾಗಿಸಿಕೊಳ್ಳುವ ವಿಧಾನದಲ್ಲೇ ನೆಲೆ-ನಿಲುವುಗಳು ರೂಪುಗೊಳ್ಳುತ್ತವೆ; ಸಮಕಾಲೀನವಾಗುತ್ತವೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ