Advertisement

Month: May 2024

ದೌರ್ಬಲ್ಯಗಳಿಲ್ಲದ ಸ್ವಾಭಿಮಾನಿ ನನ್ನಪ್ಪನೇ ನನಗೆ ಮಾದರಿ

ಅಂದು ನನ್ನ ತಂದೆ ಸಂಭ್ರಮಿಸಿದ್ದು ಒಂದು ರೂಪಕವಾಗಿ ಮನದಲ್ಲಿ ಉಳಿದಿದೆ. ಅವರೆಲ್ಲ ಚೂಡಾ ತಿಂದ ಮೇಲೆ ಲಿಂಗಾಯತರಾದ ಶಿವಪ್ಪನವರಿಗೆ ಸಮೀಪದ ಲಿಂಗಾಯತರ ಮನೆಯಿಂದ ನೀರು ತಂದು ಕೊಟ್ಟ ನಂತರ ಅವರು ನೀರು ಕುಡಿದರು! ಆದರೆ ತಾಯಿ ಮಾಡಿಕೊಟ್ಟ ಚಹಾವನ್ನು ಎಲ್ಲರ ಜೊತೆ ಶಿವಪ್ಪ ಅವರೂ ಕುಡಿದರು. ಇದೆಲ್ಲ ನನಗೆ ವಿಚಿತ್ರ ಎನಿಸಿತು. ಅದೇ ನಳದ ನೀರು. ಲಿಂಗಾಯತರ ಮನೆಗೆ ಹೊಕ್ಕಾಗ ಅದು ಹೇಗೆ ಶುದ್ಧವಾಗುವುದು? ಆ ‘ಶುದ್ಧ’ ನೀರನ್ನು ನನ್ನ ತಂದೆ ತರುವಾಗ ಅಶುದ್ಧವಾಗುವುದಿಲ್ಲವೆ?

Read More

ಸಂಘಮಿತ್ರೆ ನಾಗರಘಟ್ಟ ಬರೆದ ಈ ದಿನದ ಕವಿತೆ

“ನನಗೂ ಅಕ್ಷರವ ಕಂಡಾಗ-
ನಿಮ್ಮಂತೆ ಓದುವ ಆಸೆಯಾಗುತ್ತಿತ್ತು,
ನನಗೂ ಊರ ಜಾತ್ರೆಯಲಿ-
ನಿಮ್ಮಂತೆ ತೇರ ಎಳೆಯಬೇಕೆಂಬಾಸೆಯಾಗುತ್ತಿತ್ತು,”- ಸಂಘಮಿತ್ರೆ ನಾಗರಘಟ್ಟ ಬರೆದ ಈ ದಿನದ ಕವಿತೆ

Read More

ಇದೆಲ್ಲದಕ್ಕೂ ಒಂದು ಅರ್ಥ ಬೇಕಲ್ಲ!

ಮನುಕುಲ ಕಂಡ ಘೋರ ದುರಂತಗಳ ಹಸಿ ಹಸಿ ವಿವರಗಳು ಓದುಗರ ಗಂಟಲು ಕಟ್ಟಿಸುತ್ತವೆ. ಅಧಿಕಾರ ಮಾತ್ರದಿಂದ ಒಂದು ಜನಾಂಗಕ್ಕೆ ಸೇರಿದ ಜನರೆಲ್ಲರ ಹೆಸರು, ವಿದ್ಯೆ, ಊರುಗಳನ್ನೆಲ್ಲ ತೊಡೆದು ಹಾಕಿ ಸಂಖ್ಯೆಯೊಂದರಿಂದ ಮಾತ್ರ ಅವರನ್ನೆಲ್ಲ ಸಾಮೂಹಿಕವಾಗಿ ಗುರುತಿಸುವ ಈ ಜಾಗದಲ್ಲಿ ಇರಬೇಕಾಗಿ ಬಂದವರು ಬದುಕನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದರು ಎಂಬ ಬಗ್ಗೆ ಜ್ವಲಂತ ವಿವರಣೆಗಳಿವೆ. ಈ ಪುಸ್ತಕದ ಮೊದಲ ಭಾಗದಲ್ಲಿ ಆಸ್ವಿಚ್ ಎಂಬ ಕುಖ್ಯಾತ ನಾಜಿ ಕ್ಯಾಂಪಿನಲ್ಲಿ ಲೇಖಕರನ್ನು ಬಂಧಿಸಿಟ್ಟಾಗ ಅವರು ಅವರ ಸಹಚರರೊಂದಿಗೆ…

Read More

ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ

ಬೀಡಾಡಿ ದನವೊಂದು ನೆಟ್ಟಿದ್ದ ತರಕಾರಿ ಸಾಲಿಗೇ ಬಾಯಿ ಹಾಕಿ ಕುತ್ತಿಗೆ ಆಡಿಸುತ್ತಾ ಮೇಯುತ್ತಿದ್ದುದನ್ನು ನೋಡಿ ಅಲ್ಲೇ ಬಿದ್ದಿದ್ದ ಕೋಲೊಂದನ್ನು ತೆಗೆದುಕೊಂಡು `ಹೋಯ್ ಹೋಯ್’ ಎಂದು ಬೊಬ್ಬೆ ಹೊಡೆದುಕೊಂಡು ದಣಪೆಯಿಂದ ಹೊರಗಟ್ಟಲು ಪ್ರಯತ್ನಿಸಿದಳು. ನಾಲಗೆಯಿಂದ `ಹಡಬೆ ದನ’ ಎನ್ನುವ ಬೈಗಳೂ ಸುಲಭವಾಗಿ ಬಂದು ಹೋಯ್ತು. ಇಡೀ ಅಂಗಳ ಓಡಾಡಿಸಿಕೊಂಡು ನೆಟ್ಟಿದ್ದ ಪ್ರೀತಿಯ ಅಬ್ಬಲಿಗೆ ಸಾಲನ್ನೂ ಮೆಟ್ಟಿಕೊಂಡು ಗಿಡಗಳನ್ನು ಧರಾಶಾಯಿಯಾಗಿಸುತ್ತಾ ಕೊನೆಗೂ ದಣಪೆಯಿಂದ ಹೊರಗೆ ಹೋದಾಗ ಅದರ ಬೆನ್ನಿಗೆ…

Read More

ಬೆನ್ನುಬಿದ್ದ ಭೂತ ಇವನು!

ಈ ಕೊನೆಯ ಅಂಶದ ಕಾರಣದಿಂದ ಮಾರ್ಫಾ ಮನಸ್ಸಿಗೆ ಬಹಳ ಸಮಾಧಾನ ಆದಹಾಗಿತ್ತು. ಅವಳು ಜಾಣೆ. ನಾನು ಬರಿಯ ಹೆಣ್ಣು ಹುಚ್ಚಿನವನು, ಲಂಗದ ಅಂಚು ಕಂಡರೆ ಆಸೆ ಪಡುವವನು, ಗಂಭೀರವಾದ ಪ್ರೀತಿ ನನ್ನ ಮಟ್ಟಿಗೆ ಸಾಧ್ಯವೇ ಇಲ್ಲ ಅಂದುಕೊಂಡಿದ್ದಳು. ಜಾಣೆ ಹೆಂಗಸು, ಹೊಟ್ಟೆಯ ಕಿಚ್ಚಿನ ಹೆಂಗಸು ಇಬ್ಬರೂ ಬೇರೆ ಬೇರೆ. ಅದೇ ದೊಡ್ಡ ತಾಪತ್ರಯ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ