Advertisement

Month: April 2024

ನ್ಯಾಯದ ಹಾದಿಯಲ್ಲಿ ನಡೆಯಲಾಗದೇಕೆ?

ನಿರ್ಗತಿಕರಿಗೆ, ಅಸಹಾಯಕರಿಗೆ, ಹಿಂದುಳಿದವರಿಗೆ, ಅವಕಾಶವಂಚಿತರಿಗೆ ಸರಿ ಸಮಾನವಾದ ಹಕ್ಕು ಸಿಗಲೆಂದು ಹೋರಾಡಿದ ಅಂಬೇಡ್ಕರ್, ಅವರೇ ರಚಿಸಿದ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡ ರಾಜಕಾರಣಿಗಳಿಂದ ಇವತ್ತಿಗೂ ಬಹು ದೊಡ್ಡ ವರ್ಗ ನಿರ್ಗತಿಕರಾಗಿ, ಅಸಹಾಯಕರಾಗಿ, ಅವಕಾಶವಂಚಿತರಾಗಿ ಬದುಕುತ್ತಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣವಾಗಿ ಬಂಡೆಯಂತೆ ಕುಳಿತಿರುವುದು ಲಂಚವೆನ್ನುವ ಭೂತ. ಜೈ ಭೀಮ್ ನಲ್ಲೂ ಕಾಣಬರುವುದು…

Read More

ಎ.ಎನ್. ಪ್ರಸನ್ನ ಅವರ ಕಥನ ಕಲೆ ಮತ್ತು ಕಥಾ ಜಗತ್ತು

ಇಲ್ಲಿನ ಎಲ್ಲಾ ಕಥೆಗಳಲ್ಲಿ ಪಾತ್ರಗಳ ದಿನನಿತ್ಯದ ಬದುಕಿನ ಲಯಗಳನ್ನು ಸೂಕ್ತ ವಿವರಗಳ ಮೂಲಕ ನಿರೂಪಿಸಲಾಗಿದೆ. ಪ್ರಸನ್ನ ಅವರದೇ ಆದ ಒಂದು ನಿರೂಪಣಾ ವಿಶೇಷತೆ ಎಂದರೆ, ಅವರು ಪಾತ್ರಗಳನ್ನು ಸುತ್ತುವರಿದಿರುವ ಗಾಳಿ, ಬೆಳಕು ಮತ್ತು ಪೀಠೋಪಕರಣಗಳು ಹಾಗೂ ಇತರ ವಸ್ತುವಿಶೇಷಗಳ ಮೂಲಕವೂ ಪಾತ್ರಗಳ ಮಾನಸಿಕ ಏರುಪೇರುಗಳನ್ನು ಪ್ರತಿಫಲಿಸುವುದು. ಈ ಮಾತುಗಳಿಗೆ `ಹುಡುಕಾಟ’ ಕಥೆಯ ನಾಯಕಿ ಸುಕೃತಾಳ ಬಗೆಗೆ ದಿನದ ವಿವಿಧ ಹಂತಗಳಲ್ಲಿ, ವಿವಿಧ ಆವರಣಗಳಲ್ಲಿ ಅವಳ ವಿವಿಧ ಮಾನಸಿಕ ಸ್ಥಿತಿಗಳನ್ನು ಕಟ್ಟಿಕೊಟ್ಟಿರುವ ಈ ನಿರೂಪಣೆಗಳನ್ನು ಗಮನಿಸಬಹುದು.
ಎ.ಎನ್. ಪ್ರಸನ್ನ ಹೊಸ ಕಥಾ ಸಂಕಲನ ‘ಬಿಡುಗಡೆ’ಗೆ ಗಿರೀಶ್ ವಿ. ವಾಘ್ ಬರೆದ ಮುನ್ನುಡಿ ನಿಮ್ಮ ಓದಿಗೆ

Read More

‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಮೊಗಳ್ಳಿ ಆತ್ಮ ಕಥಾನಕದ ಮೊದಲ ಕಂತು

ನನ್ನ ಅಪ್ಪ ಕ್ರೂರವಾಗಿದ್ದರು. ಬರ್ಬರತೆಯ ಪ್ರಚಂಡ ವ್ಯಕ್ತಿಯಾಗಿದ್ದರು.  ಅವರ ಹಂಗಿನಲ್ಲಿದ್ದರು ಕೇರಿಯ ಜನರೆಲ್ಲ. ಬಹಳವೇ ಪಾಳೇಗಾರಿಕೆ ಮಾಡುತ್ತಿದ್ದರಿಂದ, ಅವರನ್ನು ನೋಡಿದಾಗ ಒಂದು ರೀತಿಯ ಭಯವೂ ಆವರಿಸಿದಂತೆ ಅನಿಸುತ್ತಿತ್ತು. ಅವರ ಕುರಿತು ಬರೆಯುವ ನೆಪದಲ್ಲಿ ನಾನು ನನ್ನ ಪೂರ್ವಿಕರನ್ನೆಲ್ಲ ತುಂಬಿಕೊಂಡು ಹೀಗೊಂದು ಆತ್ಮಕತೆಯನ್ನು ಬರೆಯಲು ಹೊರಟಿದ್ದೇನೆ.

Read More

ಎದೆಯಲ್ಲಿ ಅವಲಕ್ಕಿ ಕುಟ್ಟಿದ ಎಸ್‌ಎಸ್‌ಎಲ್‌ಸಿ ಫಲಿತಾಂಶ…

ವಾರವೆಲ್ಲ ಕೆಲಸವಿಲ್ಲದೆ ಬಿಟ್ಟಿ ಊಟ ತಿಂದುಕೊಂಡು ವಾಹನ ದಟ್ಟಣೆಯ ತುಮಕೂರಿನಲ್ಲಿ ಓಡಾಡಿದ್ದು ಮನಸ್ಸಿಗೆ ಹಿಡಿಸದಾಗಿ ಮಂಕು ಕವಿಯತೊಡಗಿತು. ಆ ಮಂಕಿನೊಳಗೆ ಊರಿನ ನೆನಪುಗಳು ಬಾದಿಸತೊಡಗಿದವು. ಪರಿಣಾಮವಾಗಿ ದುಡಿಯದಿದ್ದರೂ ಸರಿಯೆ ಊರು ಹೋಗೆನ್ನುವಂತೆಯೂ ಕಾಡು ಬಾ ಎನ್ನುವಂತೆಯೂ ಕರೆದಂತಾಯಿತು. ಇದಕ್ಕೆ ಒತ್ತುಕೊಡುವಂತೆ ಎಸ್‌ಎಸ್‌ಎಲ್‌ಸಿ ಫಲಿತಾಂಶದ…

Read More

ಐಬಿಲ್ಲದ ಕೊಲೆ ಯಾವುದೂ ಇಲ್ಲಾ..

 ರೈಲು ಹಳಿಯ ಮೇಲಿದ್ದ ಗೋಣಿ ಚೀಲದಲ್ಲಿನ ಶವ ಮಮ್ಮಿಫೈಡ್ ಸ್ಥಿತಿಯಲ್ಲಿತ್ತು. ತೆರೆದು ನೋಡುವಾಗ ಶರೀರದಲ್ಲಿ ಯಾವ ವಾಸನೆಯು ಕೂಡ ಇರಲಿಲ್ಲ. ಶರೀರದಲ್ಲಿ ಅಲ್ಲಲ್ಲಿ ಒಣಗಿದ ಮರಳು ಸಿಕ್ಕಿಕೊಂಡಿದ್ದು, ಶರೀರವನ್ನು ಕೆಲವು ದಿನಪತ್ರಿಕೆಗಳಿಂದ ಸುತ್ತಲಾಗಿತ್ತು. ಎಲ್ಲಾ ಬಿಡಿಸಿ ನೋಡುವಾಗ ಶವವು ಸಾಧಾರಣ ನಲವತ್ತರಿಂದ ಐವತ್ತು ವರ್ಷದ ಒಳಗಿನ ಒಬ್ಬ ಗಂಡಸಿನ ಶರೀರವಾಗಿತ್ತು. ಮೈಯ ಮೇಲೆ ಪೈಜಾಮ ಮತ್ತು ಕಮರಿ ಆಂಗ್ರಖಾ ಎನ್ನುವ ಬಟ್ಟೆಗಳು ಇದ್ದವು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ