Advertisement

Month: May 2024

‘ಆಲ್ ಈಸ್ ಕಾಮ್’ ಎನ್ನುವ ಕ್ರಿಸ್ಮಸ್ ಹಬ್ಬ

ಅದು ಚಳಿಗಾಲದಲ್ಲಿ ಬರುವ ಒಂದು ಸಂಕ್ರಮಣದ ದಿನ. ಆ ದಿನದಿಂದ ಸೂರ್ಯನ ಬೆಳಕು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ‘ಆಲ್ ಈಸ್ ಬ್ರೈಟ್’ ಎನ್ನುವ ಪದಗಳಿಗೆ ಹೊಸ ಅರ್ಥ ಹೊಳೆಯುತ್ತದೆ. ಹೊಸ ಬೆಳಕನ್ನ, ಸೂರ್ಯ ರಶ್ಮಿಯನ್ನ ತರುವ ಚೇತನವೊಂದು ಪ್ರಕೃತಿಯಲ್ಲಿ ಮೂಡಿತೇನೊ ಎನ್ನುವ ನಂಬಿಕೆ ಹುಟ್ಟುತ್ತದೆ. ರೋಮನ್ನರು ಆ ದಿನವನ್ನೇ ಪ್ರಶಸ್ತವೆಂದು ಆರಿಸಿಕೊಂಡರು. ಅವರು ‘ಧರ್ಮಬಾಹಿರ’ವೆಂದು ತಿಳಿದಿದ್ದ ಪೇಗನ್ ಸಂಸ್ಕೃತಿಯ ಹಬ್ಬಗಳ ಹುಟ್ಟಡಗಿಸಲು ಕೂಡ ಡಿಸೆಂಬರ್ ತಿಂಗಳನ್ನ….

Read More

ದಿವಿಜ ಕೆ ಎನ್.  ತೆಗೆದ ಈ ದಿನದ ಫೋಟೋ

ಕವಲೇದುರ್ಗದ ಈ ಫೋಟೋ ತೆಗೆದವರು ದಿವಿಜ ಕೆ ಎನ್. ಮೂಲತಃ ತೀರ್ಥಹಳ್ಳಿಯವರು, ಈಗ ಬೆಂಗಳೂರು ವಾಸಿ. ವೃತ್ತಿಯಲ್ಲಿ ಸಾಫ್ಟವೇರ್ ಎಂಜಿನಿಯರ್. ಫೋಟೋಗ್ರಫಿ ಹಾಗೂ ಓದುವುದು ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಉಪೇಂದ್ರನ ಹಾವಳಿ ಮತ್ತು ರಾಮಾಂಜಿ ಲವ್

ಸರ್ಕಾರದಿಂದ ನಡೆಯುವ ಯಾವುದೇ ಪರೀಕ್ಷೆಗಳನ್ನು ನಡೆಸಲು ನಮ್ಮ ಜೂನಿಯರ್ ಕಾಲೇಜಿನ ಕೊಠಡಿಗಳನ್ನ ಕಡ್ಡಾಯವಾಗಿ ತೆಗೆದುಕೊಳ್ಳುತ್ತಿದ್ದುದರಿಂದ ಆಗೆಲ್ಲ ನಮಗೆ ದೀರ್ಘ ರಜೆ ಸಿಗುತ್ತಿತ್ತು. ಚೆನ್ನಾಗಿ ಓದಬೇಕೆಂಬ ಕನಸು ಹೊತ್ತು ಬಂದಿದ್ದ ನಮಗೆ ಇಲ್ಲಿನ ವಿಪರೀತ ರಜೆಗಳಿಂದಾಗಿ ನಿರಾಸೆ ಉಂಟಾಗಿತ್ತು. ನಮಗೆ ಇತ್ತ ಕೆಲ ತಿಂಗಳು ಕಳೆದರೂ ಕಾಲೇಜು ಪ್ರಾರಂಭ ಆಗದೆ ಊರಲ್ಲೆ ಉಳಿದಾಗ, ಪಕ್ಕದ ಮನೆ ಕೇಸುದೊಡಪ್ಪ ‘ಎಲ್ಲೊ ಪೇಲಾಗವೆ ಅದ್ಕೆ ಹೋಗಿಲ್ಲ’ ಎಂದು ಅನುಮಾನ ಪಟ್ಟುಕೊಳ್ಳುತ್ತಿತ್ತು. ಗುರುಪ್ರಸಾದ್‌ ಕಂಟಲಗೆರೆ ಬರಹ.

Read More

ಕಾಲದ ಗಾಳಕ್ಕೆ ಸಿಕ್ಕ ಮೀನು

ಅವತ್ತು ಅಮ್ಮ, ಅಣ್ಣ ಮನೆಗೆ ಬಂದಾಗ, ತೇಜಸ್ವಿಯವರು ಮನೆಯ ಚಮಚೆ ಬಳಸಿ, ಸ್ಪಿನರ್ ತಯಾರಿಸಿದ ಬಗ್ಗೆ  ಸವಿವರವಾಗಿ ಹೇಳಿದೆ. ಅಮ್ಮ ಬೆಚ್ಚಿ ಬಿದ್ದರು. `ಅಲ್ಲೇ, ನೀನು ಕುವೆಂಪು ಎಂದು ಕೆತ್ತಿಸಿದ್ದ ಚಮಚ ಕೊಟ್ಟು ಬಿಟ್ಟೆಯಾ`?. ಈ ಚಮಚಗಳನ್ನು ಚಿತ್ರಕೂಟದ ಮನೆಗೆ ಒಕ್ಕಲು ಬರುವಾಗ ಕುವೆಂಪು ಹೆಸರು ಹಾಕಿಸಿ ಅಮ್ಮ ತಂದಿಟ್ಟವು. ಆಗ ನನ್ನ ಪಜೀತಿ ಏನೆಂದು ಹೇಳಲಿ. ಇವರು ಕೇಳಿದ ಮೇಲೆ ಕೊಡದೇ ಇರುವುದು ಹೇಗೆ ಸಾಧ್ಯ. ತಮಾಷೆಯಾಗಿದೆ ಅಲ್ವೆ. ಅಮ್ಮನಿಗೆ ಕುವೆಂಪು ಮುಖ್ಯ, ನನಗೆ ನನ್ನವರು ಮುಖ್ಯ.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರೆದ ಬರಹ. 

Read More

ನಿರೂಪಣೆಯ ಹೊಸತನವನ್ನು ಮೆರೆಯುವ ‘ಫೀ ಫೋ’

ಸಮಕಾಲೀನತೆಯ ಬಿಕ್ಕಟ್ಟುಗಳಿಗೆ ಯುವ ತಲೆಮಾರು ತಮ್ಮನ್ನು ತಾವು ಒಡ್ಡಿಕೊಳ್ಳುತ್ತ ಮುಂದೆ ಸಾಗಿರುವುದರಿಂದ ಹೊಸತಲೆಮಾರಿನ ಕತೆಗಾರರ ಜೀವನಾನುಭವದ ಸ್ವರೂಪ ಈಗ ಬೇರೆಯಾಗಿದೆ. ಅದಕ್ಕೆ ಇವರು ಇಲ್ಲಿ ಪುಸ್ತಕಕ್ಕೆ ಬಳಸಿದ ಶಿರೋನಾಮೆ ‘ಫೀಫೋ’ನೂ ಒಂದು ಸಣ್ಣ ಸಾಕ್ಷಿ. ಫೀಫೋ ಇದು ಕಂಪ್ಯೂಟರಿನ ಭಾಷೆ, ಫಸ್ಟ್ ಇನ್ ಫಸ್ಟ್ ಔಟ್. ನಮ್ಮ ನೆನಪುಗಳು ಮತ್ತು ಅನುಭವಗಳು ಸ್ಮೃತಿ ಪಟಲದಲ್ಲಿ ಸರತಿ ಸಾಲಿನಲ್ಲಿ ನಿಂತಿರುತ್ತವೆ, ಮೊದಲು ನಿಂತದ್ದು ಮೊದಲು ಹೊರಬರಲೇ ಬೇಕು.
ಮಧುಸೂದನ್ ವೈ.ಎನ್.‌ ಬರೆದ ‘ಫಿಫೋ’ ಕಥಾಸಂಕಲನದ ಕುರಿತು ಸುನಂದಾ ಪ್ರಕಾಶ್ ಕಡಮೆ ಬರೆದ ಬರಹ ಇಲ್ಲಿದೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ