Advertisement

Month: May 2024

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ದಾಕ್ಷಾಯಣಿ ಯಡಹಳ್ಳಿ ಕತೆ

ಗಂಡಗ ಹ್ಯಾಂಗ್ ಹೇಳ್ಳಿ ಅನ್ನ ಚಿಂತ್ಯಾತು. ಕೂಸು ಅತ್ತತ್ತ್ ತೊಡಿ ಮ್ಯಾಲೆ ಮಕ್ಕೊಂತು. ಅಕಿನೂ ಅತ್ತತ್ತ್ ಹೈರಾಣಾಗಿದ್ಲು. ಗಲ್ಲದ್ ಮ್ಯಾಲೆ ಕೈ ಇಟ್ಗೊಂಡು ಚಿಂತೀ ಮಾಡ್ಕೊಂತ ಕುಂತ್ಲು. ಹಂಗ ಕಣ್ಣ್ ಮುಚ್ಚಿದ್ವು. ಬಾಗ್ಲಾ ತಗದು ಪರಪ್ಪ ಒಳ್ಗ ಬಂದಾ. `ಯಾಕ್ ಮಕ್ಕೊಂಡಿಯಲೇ ಏನಾಗೇತಿ, ಗಲ್ಲಕ್ಕ್ ಕೈ ಹಚ್ಚೀದಿ ಗುಡ್ಡ್ ಬಂದು ತೆಲಿ ಮ್ಯಾಲೆ ಬಿದ್ದೈತೇನಂದ”. ಸುಮ್ನ ಇದ್ಲು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ದಾಕ್ಷಾಯಣಿ ಯಡಹಳ್ಳಿ ಬರೆದ ಕತೆ ‘ವರ್ತುಲ’ ನಿಮ್ಮ ಈ ಭಾನುವಾರದ ಓದಿಗೆ

Read More

ಎಮರ್ಜೆನ್ಸಿನಾ… ಎಲ್ಲಿ…?

ಕೆನಡಾದಿಂದ ಅಮೇರಿಕಾಗೆ ಓಡಾಡುವ ಟ್ರಕ್ ಗಳ ಸಂಖ್ಯೆ ದೊಡ್ಡದಿದೆ. ಆರ್ಥಿಕವಾಗಿ ಕೆನಡ ಮತ್ತು ಅಮೇರಿಕಾ ಮಧ್ಯೆ ಬಹಳ ದೊಡ್ಡ ಒಡನಾಟವಿದೆ. ಪ್ರಪಂಚಕ್ಕೆ ಗೊತ್ತಿರುವಂತೆ ಅತೀ ಹೆಚ್ಚು ಕೊರೋನ ಸೊಂಕಿತರನ್ನು ಕಂಡ ದೇಶ ಅಮೇರಿಕಾ. ಹಾಗಾಗಿ ಸುಮಾರು ಒಂದು ವರ್ಷಕ್ಕಿಂತ ಜಾಸ್ತಿ ಸಮಯ ಆಮೇರಿಕಾ ಮತ್ತು ಕೆನಡಾದ ರಸ್ತೆ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಕೇವಲ ಸರಕು ಸಾಗಾಣಿಕೆಗೆ ಸಣ್ಣ ಪ್ರಮಾಣದ ಓಡಾಟ ಇತ್ತು. ಇತ್ತೀಚಿಗೆ ಎರಡೂ ದೇಶಗಳ ಮಧ್ಯೆ ಓಡಾಟ ತೆರೆಯಲಾಗಿದ್ದ ಕಾರಣ, ಟ್ರಕ್ ಚಾಲಕರಿಗೆ ಒಂದು ನಿಯಮವನ್ನು ಮಾಡಿದರು.
ಪ್ರಶಾಂತ್‌ ಬೀಚಿ ಬರೆಯುವ ಅಂಕಣ

Read More

ನಾವೆಲ್ಲರೂ ಜೊತೆಯಾಗಿದ್ದೀವಿ ಎನ್ನುವ ಈ ಹೊತ್ತು

ಕಳೆದ ಭಾನುವಾರ ಬೆಳಗ್ಗೆ ವಾರದ ದಿನಸಿ ಕೊಳ್ಳಲು ಮನೆಯಿಂದ ಹೊರಟ ನಮ್ಮ ಸಂಸಾರ ಅರ್ಧಂಬರ್ಧ ಖಾಲಿಯಾಗಿದ್ದ ಸೂಪರ್ ಮಾರ್ಕೆಟ್ಟಿನಿಂದ ಹಿಂದಿರುಗುವಷ್ಟರಲ್ಲಿ ಅಂದರೆ ಸುಮಾರು ಒಂದೂವರೆ ಗಂಟೆಯಲ್ಲಿ ನಾವು ಹೊರಟಿದ್ದ ರಸ್ತೆಗಳಲ್ಲಿ ಪ್ರವಾಹದ ನೀರು ತುಂಬಿಕೊಂಡು ಮನೆ ಸೇರಿಕೊಳ್ಳಲು ನಾವು ಆ ಇಳಿ ಮಧ್ಯಾಹ್ನ ಕಷ್ಟಪಡಬೇಕಾಯಿತು. ಕೊನೆಗೆ ಗೂಡು ಸೇರಿದಾಗ ಜೀವದ ಮೇಲೆ ಗೌರವವುಂಟಾಗಿತ್ತು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಒಡಲ ಕುಡಿಯ ಕಿತ್ತುಕೊಂಡವರಿಗೆ ಎಷ್ಟು ಸುಖವೋ

ನಾನಾಗ ಎಷ್ಟು ಪರಿಚಿತ ಆಗಿದ್ದೆ ಎಂದರೆ… ಯಾವತ್ತೂ ಅತ್ತು ಅತ್ತೂ; ಕಣ್ಣೀರ ಬರೆ ಇಳಿದು ಉಳಿದು ಉಳಿದು ಮಚ್ಚೆಯಂತೆ ಕೆನ್ನೆ ಮೇಲೆ ಬರೆಯ ಗುರುತು ಇರುತ್ತಿತ್ತು. ನಾವಾಗ ಮುಖ ತೊಳೆವುದೆಲ್ಲಿತ್ತು. ಕಣ್ಣೀರೇ ಅಂಟಿರುತ್ತಿದ್ದವು. ನನ್ನ ತಾಯ ಸಂಗಡವೇ ನನಗೆ ಸಿಗುತ್ತಿರಲಿಲ್ಲ. ಸದಾ ಯಾವತ್ತೂ ಕಸಮುಸುರೆಯ ಕೆಲಸದ ಜೀತದವಳಂತಿದ್ದಳು. ನನ್ನ್ ತಮ್ಮನ ಅವರು ದತ್ತು ತೆಗೆದುಕೊಂಡು ಹೋದ ನಂತರ ಮತ್ತೂ ಮೆತ್ತಗಾಗಿ ಬಿಟ್ಟಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಹತ್ತನೇಯ ಕಂತು.

Read More

ಮಹನೀಯ ಮದ್ಲೆಗಾರರ ಪ್ರಭಾವಲಯ

ಯಕ್ಷಗಾನ ಭಾಗವತಿಕೆಯಲ್ಲಿ ಮದ್ದಳೆಯದ್ದು ಪ್ರಧಾನ ಪಾತ್ರ. ಬಲಿಪ ನಾರಾಯಣ ಭಾಗವತರಿಗೆ ಭಾಗವತಿಕೆ ಕಲಿಯುವುದಕ್ಕೆ ನೆರವಾದ ಮದ್ದಳೆಗಾರರು ಪ್ರಮುಖರೇ.  ಮದ್ದಳೆಗಾರರಾದ  ದಿವಂಗತ ಕುದುರೆಕೋಡ್ಲು ರಾಮ ಭಟ್ಟರು ಮತ್ತು ದಿವಂಗತ ಕೆಮ್ಮಣ್ಣು ನಾರ್ಣಪ್ಪಯ್ಯ ಅವರ ಪ್ರೋತ್ಸಾಹ, ತಿದ್ದುವಿಕೆಯು ಬಲಿಪರ ಭಾಗವತಿಕೆ ಶೈಲಿಯ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಪ್ರಸ್ತುತ ಸರಣಿಯಲ್ಲಿ ಆ ಬಗ್ಗೆ ಬಲಿಪರು ಹೇಳಿಕೊಂಡಿದ್ದಾರೆ. ‘ಬಲಿಪ ಮಾರ್ಗ’ದಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ ಬರಹ  ಇಲ್ಲಿದೆ. 

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ