Advertisement

Month: May 2024

ಶಿವನೆನ್ನಿ…. ಶಂಕರನೆನ್ನಿ.. ಎಲ್ಲವೂ ಅವನೇ!

ಶಿವ ಪಾರ್ವತಿಯರು ಸಪ್ತಪದಿ ತುಳಿದುದರ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಅದೇ ಅಗ್ನಿಯನ್ನು ಅಂದಿನಿಂದ ಈ ಘಳಿಗೆಯವರೆಗೂ ಆರದಂತೆ ಕಾಯುತ್ತಿರುವ ಭಕ್ತರ ನಂಬಿಕೆ ಮತ್ತು ಕೈಂಕರ್ಯಗಳು ಹಾಗು ಅಲ್ಲಿ ಆವರಿಸಿಕೊಂಡಿದ್ದ ಮುಡಿವಾಳದ ಘಮ. ಅಲ್ಲಿಂದ ಮುಖ ಮಾಡಿದ್ದೆ ಕೇದಾರನಾಥನ ತಪ್ಪಲಿಗೆ. ಕಪರ್ದಿಯ ದರ್ಶನಕ್ಕೆ ಮೊದಲು ಭಕ್ತರನ್ನು ಮೀಯಿಸಿ ಶುಚಿಗೊಳಿಸುವ ಬಿಸಿನೀರಿನ ಬುಗ್ಗೆಯ ಗೌರಿಕುಂಡ ಈ ತಪ್ಪಲಿಗೆ ಆತುಕೊಂಡಿದೆ. ರಸ್ತೆ ಯಾನ ಕೊನೆಯಾಗುವುದು ಇಲ್ಲೇ.

Read More

ಕಾವ್ಯಮಾಲೆಯ ಕಾಣದ ಕುಸುಮ: “ನರಸಿಂಗ”ನಿಗೆ ಮರುಳಾದ ಮಗಳು

“ಇರುಳೂ ಹಗಲೂ ನೆನೆನೆನೆದೊರಲುತ
ತರುವಳೂ ನೈದಿಲೆ ಕಣ್ಣಿಗೆ ಹನಿಯ
ತೆರುವುದಿಲ್ಲ ನೀವಳಿಗಳು ಮುತ್ತುವ
ವರ ತುಳಸಿಯನಹ ಶುದ್ಧರ ಕೃಪೆಯೇ!”- ಕಾವ್ಯಮಾಲೆಯ ಕಾಣದ ಕುಸುಮ: ಪು.ತಿ.ನ. ಅವರ “ನರಸಿಂಗ”ನಿಗೆ ಮರುಳಾದ ಮಗಳು ಕವಿತೆ

Read More

ಮಕ್ಕಳಿಗೆ ಕಲಿಸುತ್ತಾ… ನಾವೂ ಕಲಿಯುತ್ತಾ…

ಶಾಲೆ ಪ್ರಾರಂಭವಾಗಿ ಸುಮಾರು ಮೂರು ತಿಂಗಳಿನಿಂದ ಅಧ್ಯಾಪಕರಿಲ್ಲದೇ ಕಾದಿದ್ದ ಅವರಿಗೆ ನಾನು ನಿರ್ಜನ ದಾರಿಯಲ್ಲಿ ದಾರಿ ಕೇಳಲು ಸಿಕ್ಕ ಏಕೈಕ ವ್ಯಕ್ತಿಯಂತೆ ಕಂಡಿರಬೇಕು. ಪಾಠಪುಸ್ತಕ, ನೋಟ್ಸ್‌ ಪುಸ್ತಕ, ಪೆನ್ನು, ಕಂಪಾಸ್‌ ಹಿಡಿದು ತಯಾರಾಗಿ ಕುಳಿತಿದ್ದರು. ಬಹಳ ಆಸಕ್ತಿಯಿಂದಲೇ ಪಾಠಕೇಳಿದರು. ನನಗೆ ಆ ವರೆಗೂ ದೊಡ್ಡ ತರಗತಿಗೆ ಪಾಠಮಾಡಿ ಅಭ್ಯಾಸ ಇತ್ತು. ಈ ತರಗತಿ ಮೊದಲಿಗೆ ಖಾಲಿ ಖಾಲಿ ಅನಿಸಿದರೂ ಮಕ್ಕಳ ಆಸಕ್ತಿಯ ಮುಂದೆ ಮಧ್ಯಾಹ್ನದವರೆಗೂ ಸಮಯ ಹೋದದ್ದೇ ತಿಳಿಯಲಿಲ್ಲ.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಬರಹ

Read More

ಕೃಷ್ಣ ದೇವಾಂಗಮಠ ತೆಗೆದ ಈ ದಿನದ ಫೋಟೋ

ಈ ದಿನದ ಚಿತ್ರ ತೆಗೆದವರು ಕೃಷ್ಣ ದೇವಾಂಗಮಠ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಮಧ್ಯಮಾವತಿಯ ಅಂತರಂಗದಲ್ಲಿ ‘ಅವನು’

ಈ ಕವನಸಂಕಲನದಲ್ಲಿ , ಪೂರ್ಣಿಮಾ ಸುರೇಶ್ ಕಟ್ಟಿಕೊಡುವ ಅಂತರಂಗದ ಈ “ಅವನು” ಅನ್ನುವ ಪಾತ್ರ ಬಹಳ ಕಾಡುತ್ತದೆ. ಅದು ‘ಅವಳು’ ಎಂಬುದಾಗಿ ಬದಲಾಗಲೂ ಆಗಬಹುದು. ಅಂತರಂಗದ ‘ಅವನು’  ಬಹಳಷ್ಟು ಪ್ರಶ್ನೆ ಕೇಳುತ್ತಾನೆ. ಯಾವುದೋ ನಮ್ಮ ಸಮಸ್ಯೆಗಳಿಗೆ ಪರಿಹಾರವಾಗುತ್ತಾನೆ. ಎಷ್ಟೋ ಸಲ ಅರ್ಥವಾಗದೇ ಸತಾಯಿಸುತ್ತಾನೆ. ಯಾವುದೋ ಅರ್ಥವಾಗದ ಅಚ್ಚರಿಯನ್ನು ನಮ್ಮಲ್ಲಿ ಉಳಿಸುತ್ತಾನೆ. ಅಕಾಲದ ಮಳೆಯ ಹಾಗೆ. ಹಾಗೆಂದು ಇಲ್ಲಿ ರೂಪಕಗಳ ಮೂಲಕ ಮಾತನಾಡುವ ಕವಿತೆಗಳು ಎಲ್ಲವನ್ನೂ ಬಿಟ್ಟುಕೊಡಲೂ ತಯಾರಿಲ್ಲ.   ಪೂರ್ಣಿಮಾ ಸುರೇಶ್‍ ಹೊಸಕವನ ಸಂಕಲನ ‘ಮಧ್ಯಮಾವತಿ’ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಅನಿಸಿಕೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ