Advertisement

Month: May 2024

ಗಿರಣಿವಡ್ಡರ್ ಮತ್ತು ಬಾವಿ ತೋಡುವ ಗಂಟಿಚೋರರು

‘ಈಗೀಗ ಗಿರಣಿ ಕೆಲಸದ ಬಗ್ಗೆ ಬೇಸರ ಬರುತ್ತಿತ್ತು. ಶ್ವಾಸಕೋಶದಲ್ಲಿ ಹತ್ತಿ ಸೇರಿ ಕಾರ್ಮಿಕರ ಆರೋಗ್ಯ ಹದಗೆಡುತ್ತಿತ್ತು. ಹಾಗಾಗಿ ಈ ಗಿರಣಿ ಕೆಲಸ ಬಿಡುವ ಮನಸ್ಸಾಗುತ್ತಿತ್ತು. ಸೂಪರ್ವೈಸರ್  ಹೆಂಡತಿಗೆ ಹೊಡೆದಂತೆ  ನಮಗೆ ಹೊಡೆಯುತ್ತಿದ್ದ. ಅಶ್ಲೀಲವಾಗಿ ಬೈಯುತ್ತಿದ್ದ. ಮಶೀನು ಹೊಲಸಾದರೆ ಬಡಿದು ಕೆಲಸದಿಂದ ಅರ್ಧಕ್ಕೆ ಕಳಿಸುತ್ತಿದ್ದ. ಊಟ ಮುಗಿಸಿಕೊಂಡು ಬರಲು ತಡವಾದರೆ ಹಸಿ ಬರಲಿನಿಂದ ಥಳಿಸುತ್ತಿದ್ದ. ಇಂಥಹ ಎಷ್ಟೋ ಅನ್ಯಾಯಗಳು ನೂಲಿನ ಗಿರಣಿಯಲ್ಲಿ ನಡೆಯುತ್ತಿದ್ದವು. ಒಂದು ಸಂಘಟನೆ ಕಟ್ಟಿ ಈ ಅನ್ಯಾಯ ತಡೆಗಟ್ಟಬೇಕೆಂದು ಅನ್ನಿಸುತ್ತಿತ್ತು.

Read More

ದೊಡ್ಡವರಿಗೆ ಬುದ್ಧಿ ಹೇಳಬಲ್ಲ ಹಾರುವ ಕುದುರೆ

ಮಕ್ಕಳ ಮನೋಭಾವವನ್ನು ಗ್ರಹಿಸಿ ರಚಿಸಿರುವ ಈ ಸಂಕಲನದಲ್ಲಿ  ಸಾಮಾನ್ಯ ಕಥೆಗಳೂ ಇವೆ. ಜೊತೆಗೆ ಅಸಾಮಾನ್ಯ ಫ್ಯಾಂಟಸಿ ಕಥೆಗಳೂ ಇವೆ. ಕಲ್ಪನೆಯನ್ನು ಇಷ್ಟಪಡುವ ಮಕ್ಕಳಿಗೆ ಫ್ಯಾಂಟಸಿ ಇಷ್ಟವಾಗುತ್ತದೆ. ಅವರ  ಇಷ್ಟವನ್ನು ಗ್ರಹಿಸಿ , ಅವರು ಕಥೆಗಳನ್ನು ಪೋಣಿಸಿದ್ದಾರೆ. ಫ್ಯಾಂಟಸಿ ಕಥೆಗಳನ್ನು ಹೇಳಲು ಕಾಲ್ಪನಿಕ ಅಜ್ಜನೊಬ್ಬನನ್ನು ಸೃಷ್ಟಿಸಿಕೊಂಡಿದ್ದಾರೆ.   ನಾಗರಾಜ್ ಎಂ ಹುಡೇದ  ಬರೆದ ‘ಅವತಾರ್ ಮತ್ತು ಹಾರುವ ಕುದುರೆ’ ಕಥಾಸಂಕಲನದ ಕುರಿತು ಪ.ನಾ.ಹಳ್ಳಿ ಹರೀಶ್‍ ಕುಮಾರ್ ಅವರ ಅಭಿಪ್ರಾಯ  ಇಲ್ಲಿದೆ.

Read More

ಸುದ್ದಿಗಾರ ಕೆಂಪಣ್ಣ…

ಕೆಂಪಣ್ಣ ಭಜನೆಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ಅವನ ಭಜನೆಯ ಬೈಠಕ್ ಒಂದು ರೀತಿ ಮತ್ತೇರಿಸುತ್ತಿತ್ತು. ಅವನು ಹಾಡಲು ಸುರುಮಾಡಿದರೆ ಹಿಮ್ಮೇಳದವರು ತಲಿ ಕೆರೆದುಕೊಳ್ಳುತ್ತಿದ್ದರು. ಏಕೆಂದರೆ ಅವನು ಹೇಳಿದ ಪದಗಳನ್ನು ಹಾಡುವುದು ಅಷ್ಟು ಸುಲಭವಾಗಿರಲಿಲ್ಲ. ಅವನ ಪದಗಳೋ ರೈಲು ಬಂಡಿಯಂತೆ ಉದ್ದವಾಗಿರುತ್ತಿದ್ದವು. ‘ಬೆಳ್ಳನೇ ಎರೆಡೆತ್ತು ಬೆಳ್ಳಿಯ ಬಾರುಕೋಲು ಕೇರಿಯ ದಂಡಿಯ ಹೊಲಕ್ಕೆ… ಕೆರೆಯ ದಂಡೆಯ ಹೊಲಕ್ಕೆ… ‘ ಎಂದು ಚೆಂದವಾಗಿ ಪದ ಹಾಡಹತ್ತಿದರೆ ಬಸವಣ್ಣನ ಗುಡಿಯೊಳಗಿನ ಕಲ್ಲಿನ ಬಸವನು ಕೂಡಾ “ಕೆಂಪಣ್ಣ ಹೊಲಕ್ಕೆ ನಾನು ಬರ್ತೀನಿ” ಅಂತಾ ಜೊತೆಯಾಗುತ್ತಿತ್ತು.

Read More

ಆಶಾ ಜಗದೀಶ್‌ ಬರೆದ ಈ ದಿನದ ಕವಿತೆ…

“ನಿನ್ನ ದೇಹವನ್ನು ನಾನು ಸ್ವಲ್ಪ ಹೊತ್ತು
ಹೊದ್ದು ನಡೆಯುವಂತಿದ್ದಿದ್ದರೆ…
ನನ್ನ ದೇಹವನ್ನು ನಿನಗೆ ನೀಡಿ
ಸ್ವಲ್ಪ ಸುಧಾರಿಸಿಕೊ ಎನ್ನುವಂತಿದ್ದಿದ್ದರೆ…”- ಆಶಾ ಜಗದೀಶ್‌ ಬರೆದ ಈ ದಿನದ ಕವಿತೆ

Read More

ಸಬೀನಾ ಎ. ತೆಗೆದ ಈ ದಿನದ ಫೋಟೋ

ಸಬೀನಾ ಮೈಸೂರಿನವರು. ಪ್ರವಾಸ, ಚಾರಣಗಳಲ್ಲಿ ಆಸಕ್ತಿ ಇದ್ದು,  ಫೋಟೊಗ್ರಫಿ ಇವರ ಹವ್ಯಾಸವಾಗಿದೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ