Advertisement

Month: May 2024

ನೀಲಿ ಬರೆಗಳ ಮುಟ್ಟಿ ಮುಟ್ಟಿ ನೋಡಿದ

ಅಂತೂ ಚಿಕ್ಕಪ್ಪ ಬಂದಿದ್ದ. ಯಾವತ್ತಿನಂತೆ ಎದ್ದು ನಿಂತು ಕೈ ಮುಗಿದೆ. ಬೀಗ ತೆಗೆದು; ‘ಐದು ನಿಮಿಷ ಇರಿ; ಪಲಾವ್ ತರ್ತೀನಿ’ ಎಂದು ಸೈಕಲೇರಿ ಹೋದ. ಪಲಾವ್ ಎನ್ನುವ ಹೆಸರನ್ನೆ ನಾನಾಗ ಕೇಳಿರಲಿಲ್ಲ. ಕೈಕಾಲು ಮುಖ ತೊಳೆದು ದೇವರಿಗೆ ಕಡ್ಡಿ ಹಚ್ಚು ಎಂದ ತಾತ. ಹಾಗೇ ಮಾಡಿದೆ. ಪಲಾವ್ ತಂದ ಚಿಕ್ಕಪ್ಪ. ಗಮ್ಮೆನ್ನುವ ಪೊಟ್ಟಣ. ತಾತನ ಮೆಲ್ಲಗೆ ‘ಇದೇನಪ್ಪಾ’ ಎಂದು ಕೇಳಿದ. ‘ಗಮುಲ್ದನ್ನ’ ಎಂದ. ಅಹಾ! ಅಂತಹ ಗಮಗಮಿಸುವ ಅನ್ನವ ನಾನೆಂದೂ ಉಂಡಿರಲಿಲ್ಲ. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹದಿನೈದನೆಯ ಕಂತು

Read More

ಆನೆಗಳ ಅನಾಥಾಶ್ರಮದಲ್ಲಿ ಮಂಡೋದರಿಯ ನೆನಪಾಯಿತು

ರಾಜೀವ್ ಗಾಂಧಿಯ ನಡೆಯನ್ನು ಕಂಡ ಈ ನೆಲದ ಜನರಿಗೆ ಭಾರತದ ವಿಸ್ತಾರತೆಯ ಬಗ್ಗೆ ಆಸ್ಥೆ ಏನಿಲ್ಲ, ಬೆಂಗಳೂರು ಗೊತ್ತಿಲ್ಲ ಮತ್ತು ಚೆನ್ನೈ ತಮ್ಮದು ಎನ್ನುವುದನ್ನು ಬಿಟ್ಟಿಲ್ಲ. ಎಲ್‌ಟಿಟಿಈ ಜೊತೆ ಸಂಬಂಧ ಇತ್ತು ಎಂದು ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿರುವವರು ಸಂಸದರಾಗಿದ್ದಾರೆ ಎಂದರೆ ನಾವೆಲ್ಲರೂ ಒಂದೇ ಎಂದು ಹಾಡಿಕೊಳ್ಳಲು ಅಡ್ಡಿಯಿಲ್ಲ ಎನ್ನಿಸಿತು. ನಮ್ಮಲ್ಲಿ ಸಿಗುವ ನಾಗಣ್ಣ ಸ್ಟೋರ್ಸ್, ಮಲ್ಲಪ್ಪನ ಅಂಗಡಿ ವಗೈರೆಗಳಂತೆ ಅಲ್ಲಿಯೂ ಗಲ್ಲಿಗಲ್ಲಿಗಳಲ್ಲಿ ಹೇರಳವಾಗಿ ಸಿಗುತ್ತವೆ ಕಾಕಾ ಅಂಗಡಿಗಳು ಮತ್ತು ಮ್ಯಾಗಿ ಮ್ಯಾಗಿ ಮ್ಯಾಗಿ ಟು ಮಿನಿಟ್ಸ್‌ನಲ್ಲೇ ಸಿಗುತ್ತವೆ. ಅಂಜಲಿ ರಾಮಣ್ಣ ಅವರ ಪ್ರವಾಸ ಕಥನ.

Read More

ಕನ್ನಡ ಕಾವ್ಯ ಮಾಲೆಯ ಕುಸುಮ: ಜೋಳದ ಝೋಕ್

“ಒಳ್ಳೆಯ ಮುತ್ತಿನ ಚೆಂಡಂತೆ ಮೋರಿ
ಬೆಳ್ಳಗೆ ಬೆಳಗುವ ಕಾಂತಿಯ ಬೀರಿ
ತೆಳ್ಳಗೆ ಹಸುರಿನ ಮೈಯದು ತೋರಿ
ಚೆಲುವಾದ ಕಳೆಯೇರಿ ವಲಿಯುವೆ ಭಾರಿ ॥೨॥”- ಜೋ. ದೊಡ್ಡನಗೌಡ  ಅವರು ಬರೆದ ಜೋಳದ ಝೋಕ್ ಕವನ  ಇಂದಿನ ಕನ್ನಡ ಕಾವ್ಯಮಾಲೆಯ ಕುಸುಮಗಳು ಸರಣಿಯಲ್ಲಿ ನಿಮ್ಮ ಓದಿಗಾಗಿ.

Read More

ಅಡಿಕೆ ಹೊತ್ತ ತಲೆಯ ಮೇಲೆ ಆನೆ ಕುಳಿತಾಗ

ದ್ವಿಚಕ್ರ ವಾಹನದಿಂದ ಬಿದ್ದು ಬಂದ ಒಬ್ಬರ ಹರಿದ ಗಾಯಕ್ಕೆ ಹೊಲಿಗೆ ಹಾಕಿ, ಮುರಿದ ಮೂಳೆಗೆ ತಾತ್ಕಾಲಿಕ ಪಟ್ಟಿ ಕಟ್ಟಿ ಆಗುವಷ್ಟರಲ್ಲಿ, ನಿದ್ರಾದೇವಿ ನಿನ್ನ ಸಹವಾಸ ನನಗೆ ಬೇಡ ಎಂದು ಬೇರೆಯವರನ್ನು ಅಪ್ಪಿಕೊಳ್ಳಲು ಹೋಗಿದ್ದಳು. ಅಷ್ಟರಲ್ಲೇ ಇನ್ನೊಂದು ಹುಡುಗಿ. ಆಗಷ್ಟೇ ಹೈಸ್ಕೂಲು ಮುಗಿಸಿದ ಆಕೆ, ತಾನು ಲವ್ ಮಾಡಿದ ಹುಡುಗನನ್ನು ಮದುವೆಯಾಗಲು ತಂದೆ ತಾಯಿ ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಮೇಟಾಸಿಡ್ ಕುಡಿದು ಬಂದಿದ್ದಳು. ಅವಳಿಗೆ ಚಿಕಿತ್ಸೆ ನೀಡಿದ ಬಳಿಕ ಇಬ್ರಾಹಿಂ ಎಂಬ ಮತ್ತೊಬ್ಬ ಪೇಷೆಂಟು ಬಂದಿದ್ದ. ಅವನ  ಸ್ಥಿತಿ ನೋಡಿ, ಯಾಕೋ  ಸಂಶಯ ಮೂಡಿತು. ಡಾ. ಕೆ.ಬಿ. ಸೂರ್ಯಕುಮಾರ್ ಬರಹ 

Read More

ಸಾಹಿತ್ಯ ಪುರವಣಿಗಳು ಅನುತ್ಪಾದಕವೇ?

ಕನ್ನಡ ಪತ್ರಿಕೋದ್ಯಮದಲ್ಲಿ ಸಾಹಿತ್ಯಪುರವಣಿಗಳು ಕ್ಷೀಣವಾಗಿವೆ, ಅಥವಾ ಕೆಲವು ಮಾಧ್ಯಮ ಸಂಸ್ಥೆಗಳು ಪುರವಣಿಯನ್ನೇ ನಿಲ್ಲಿಸಿಬಿಟ್ಟಿವೆ. ಎರಡು ವರ್ಷಗಳ ಹಿಂದೆ ಕೋವಿಡ್‍ ಸೋಂಕು ವ್ಯಾಪಿಸದಂತೆ ಹೇರಿದ್ದ ಲಾಕ್‍ ಡೌನ್‍ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಗಳು ನಷ್ಟವನ್ನು ಭರಿಸಿಕೊಳ್ಳಲು ಅನೇಕ ಪುಟಗಳನ್ನು ಕಡಿತ ಮಾಡಿದವು. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಲ್ಲಿದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ