Advertisement

Month: May 2024

ರಂಗಸ್ಥಳದಲ್ಲೀಗ ಸಮಯಮಿತಿಯ ವಾಗ್ವಿಲಾಸ

1985 ಕ್ಕಿಂತ ಮುಂಚೆಯೇ  ಇಡಗುಂಜಿ ಮೇಳ ವಿವಿಧ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಕಾಲಮಿತಿಯ ಯಕ್ಷಗಾನ  ಪ್ರದರ್ಶನವನ್ನು ಆರಂಭಿಸಿತ್ತು. 1968 ರಲ್ಲಿ ಮತ್ತು 1971ರಲ್ಲಿ ದೆಹಲಿಯಲ್ಲಿ ಜರಾಸಂಧವಧೆ, ಕರ್ಣಪರ್ವ ಮುಂತಾದ ಪ್ರಸಂಗಗಳನ್ನು ಕಾಲಮಿತಿಯಲ್ಲಿ ಪ್ರದರ್ಶಿಸಿತ್ತು. ಆ ಸಂದರ್ಭದಲ್ಲಿ ಜನರ ಮನಸ್ಸು ಇನ್ನು ಸಮಯಮಿತಿಗೆ ಒಗ್ಗಿಕೊಳ್ಳದ ಸಂದರ್ಭವಾದರೂ, ಸುಮಾರು 75ಕ್ಕೂ ಮಿಕ್ಕಿ ಪ್ರದರ್ಶನ ನಡೆಯಿತು. ಹಾಗೆ ನೋಡಿದರೆ ಜಗತ್ತಿನ ಯಾವ ರಂಗಭೂಮಿಗೊ, ನಾಟ್ಯಪ್ರಕಾರಕ್ಕೋ ʻಕಾಲಮಿತಿʼ ಎಂಬುದು ಒಂದು ಚರ್ಚಿಸಬೇಕಾದ ವಿಷಯವೇ ಅಲ್ಲ ಎನ್ನುವ  ಹಿರಿಯ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅವರು ಮೇಳವನ್ನು ನಡೆಸುವವರೂ ಹೌದು. ಹಿರಿಯ ಕಲಾವಿದರೂ ಹೌದು. ಅವರು ಬರೆದ ಲೇಖನ ಇಂದಿನ ಓದಿಗಾಗಿ. 

Read More

ಜಯರಾಮಚಾರಿ ಬರೆದ ಈ ದಿನದ ಕವಿತೆ

“ನೀನಿರಬೇಕಿತ್ತು,
ನಾ ಬರುವ ದಿಕ್ಕ ಕಾದು ನಡುರಾತ್ತಿಯಲ್ಲೂ ಗಕ್ಕನೆ ಕದ ತೆರೆಯಲು,
“ಏನು ತಿಂದೆ?” ಎಂಬ ಕೊನೆಯೇ ಕಾಣದ ಪ್ರಶ್ನೆ ಕೇಳಲು,
ನಾ ನಿನಗೆ ಸೀರೆ ತಂದ ದಿನ ಕಣ್ತುಂಬಿ
ಅಪ್ಪನ ನೆನಸಿ ಕೆನ್ನೆಗೆ ಮುತ್ತಿಡುವಾಗ ಬಿಸಿ ಕಣ್ಣ ಹನಿಯಾಗಲು”- ಜಯರಾಮಾಚಾರಿ ಬರೆದ ಈ ದಿನದ ಕವಿತೆ

Read More

ಕಾಡುವ ಕತೆಗಳ ರೂವಾರಿ….

ಆ ಕಾಲಘಟ್ಟ ಬಂಗಾಳದ ಮಟ್ಟಿಗೆ ಅದೊಂಥರಾ ವಿಚಿತ್ರ ಪರಿಸ್ಥಿತಿ. ಅತ್ಯಂತ ವಿದ್ಯಾವಂತ, ಬುದ್ಧಿವಂತರಾದ ಜನಸಮುದಾಯ. ಆದರೆ ಅಷ್ಟೇ ಕರ್ಮಠ ಆಚರಣೆಗಳಿಂದ ಜರ್ಜರಿತವಾಗುತ್ತಾ ಇದ್ದ ಸಮುದಾಯ. ಅತ್ತ ಶ್ರೀಮಂತ ಜಮೀನುದಾರರು ಮತ್ತು ಬಡ ಕೂಲಿ ಕಾರ್ಮಿಕರು ಹಾಗೂ ಗೇಣಿದಾರರು. ಧನಾತ್ಮಕ ಮತ್ತು ಋಣಾತ್ಮಕ ಎರಡೂ ಅಂಶಗಳಲ್ಲಿ ಅತಿರೇಕದ ತುದಿಗಳಲ್ಲಿದ್ದ ಸಮಾಜ. ಇದನ್ನು ಸುಧಾರಿಸಲು ದೊಡ್ಡ ಸಂಖ್ಯೆಯಲ್ಲೇ ಹುಟ್ಟಿಬಂದ ಸುಧಾರಣಾವಾದಿಗಳು. ಆಂಗ್ಲ ಶಿಕ್ಷಣದಿಂದ ಬಹಳ ಕ್ಷಿಪ್ರವಾಗಿ ಪ್ರಸರಣಗೊಂಡ ಪಾಶ್ಚಾತ್ಯ ಜ್ಞಾನ. ಆಂಗ್ಲರು ಕೂಡಾ ಪ್ರಭಾವಿತಗೊಳ್ಳುವಷ್ಟರ ಮಟ್ಟಿಗಿನ ಬುದ್ಧಿಮತ್ತೆ.

Read More

ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ

ನಾವಿದ್ದ ಅಪಾರ್ಟ್‌ಮೆಂಟಿನ ಮನೆಯನ್ನು ಸ್ವಚ್ಛ ಮಾಡಲು ಬರುತ್ತಿದ್ದ ಹದಿನೈದೋ ಹದಿನಾರೋ ಪ್ರಾಯದ ಬೆಂಗಾಲಿ ಹುಡುಗಿಯ ಬದುಕುವ ದರ್ದಿಗೆ ನಾನು ಬೆರಗಾಗಿದ್ದೆ. ಮಾತನಾಡಿಸಿದರೆ ಏನೊಂದೂ ಮಾತನಾಡದ, ಏನಾದರೂ ಪ್ರಶ್ನೆ ಕೇಳಿದರೆ ಸುಮ್ಮನೆ ನಕ್ಕುಬಿಡುತ್ತಿದ್ದ ಆ ಹುಡುಗಿ ತನ್ನ ತಾಯಿಯ ಜೊತೆಗೆ ಇಬ್ಬರು ತಂಗಿಯರನ್ನೂ ಬಂಗಾಳದ ಯಾವುದೋ ಹಳ್ಳಿಯಿಂದ ಕರೆದುಕೊಂಡು ಬಂದು ತಾನೊಬ್ಬಳೇ ದುಡಿಯುತ್ತಾ ಅವರನ್ನೆಲ್ಲಾ ಸಾಕುತ್ತಿದ್ದ ಪರಿ ನನ್ನಲ್ಲಿ ಸೋಜಿಗ ಹುಟ್ಟಿಸುತ್ತಿತ್ತು. ಮುಂಬೈಯಂತಹ ನಗರಗಳಲ್ಲಿ ಒಂಟಿ ಮಹಿಳೆಯರು ಒಂಟಿ ಹುಡುಗಿಯರು ಜೀವ ಕೈಯಲ್ಲಿ ಹಿಡಿದೆ ದುಡಿಯುತ್ತಿರುತ್ತಾರೆ.
ʻತಳಕಲ್‌ ಡೈರಿʼಯಲ್ಲಿ ಮುಂಬೈ ಮಹಾನಗರಿಯ ಬೆರಗಿನ ದಿನಗಳನ್ನು ಹಂಚಿಕೊಂಡಿದ್ದಾರೆ ಇಸ್ಮಾಯಿಲ್‌ ತಳಕಲ್‌

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ