Advertisement

Month: May 2024

ನಿಂಬೆಗಿಡಕ್ಕೇನು ಮನಸ್ಸಿದೆಯೇ?

ಆ ಭವ್ಯ ಮನೆಗೆ ಇಸ್ರೇಲಿನ ರಕ್ಷಣಾ ಮಂತ್ರಿಯ ಜೊತೆಗೆ ಅವನ ಹೆಂಡತಿ ಮೀರಾ ನವಾನ್‌  ಮತ್ತು ಅವನ ಅಧಿಕಾರಿ ವರ್ಗದಲ್ಲಿ, ರಕ್ಷಣಾ ಮಂತ್ರಿಯಲ್ಲಿ ಅನುರಾಗದಲೆಗಳನ್ನು ಹುಟ್ಟಿಸುವ ಸುಂದರಿಯೊಬ್ಬಳು ಇರುತ್ತಾಳೆ. ಜೊತೆಗೆ ಹತ್ತಾರು ಜನ ಸಹಾಯಕ ವರ್ಗದವರು. ನೋಡನೋಡುತ್ತಿದ್ದಂತೆ ತಾನು ಅತ್ತಿತ್ತ ಓಡಾಡಿ ಇಟ್ಟಿದ್ದ ಹೆಜ್ಜೆಗಳ ಮೇಲೆ ಬೇರೆ ಬೇರೆ ಹೆಜ್ಜೆಗಳು ಕಾಣುತ್ತವೆ. ಜೊತೆಗೆ ಅಷ್ಟುದ್ದಕ್ಕೂ ಬೇಲಿ ಹಬ್ಬಲು ಪ್ರಾರಂಭವಾಗುತ್ತದೆ. ಇಸ್ರೇಲಿನ ಸೀಕ್ರೆಟ್‌ ಪೊಲೀಸ್‌ನವರು ರಕ್ಷಣಾ ಮಂತ್ರಿಯ ಹಿತ ದೃಷ್ಟಿಯಿಂದ ಮತ್ತು ಉಗ್ರರ ಆಕ್ರಮಣದ ಸಂಭಾವ್ಯದ ಕಾರಣ ಇಡೀ ನಿಂಬೆ ಗಿಡದ ತೋಟವನ್ನು ಕಡಿಯಬೇಕೆಂದು ಯೋಚಿಸುತ್ತಾರೆ.

Read More

ನಿಜಾರ್ಥದಲ್ಲಿ ಯಾರಿಗೂ ಗೆಲುವಿಲ್ಲ ಯುದ್ಧದಲ್ಲಿ…

ಮಾಸ್ಕೋ ಸಮೀಪದ ಬೊರೊದಿನೊ ಎಂಬ ಗ್ರಾಮದಲ್ಲಿ ನೆಪೊಲಿಯನ್ ಬೊನಾಪಾರ್ಟೆ ಸೈನ್ಯದ ವಿರುದ್ಧ ನಡೆದ ಯುದ್ಧದಿಂದ ಆ ಗ್ರಾಮ ಹೇಗೆ ನಾಶವಾಯಿತು ಎಂಬುದನ್ನು ರಷ್ಯನ್ ಪನೋರಮಾದಲ್ಲಿ ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಸೃಷ್ಟಿಸಲಾಗಿದೆ. ದಾಳಿಗೊಳಗಾಗಿ ಸಾಯುತ್ತಿರುವ ಸೈನಿಕರು, ಬಿದ್ದು ಒದ್ದಾಡುತ್ತಿರುವ ಯುದ್ಧ ಕುದುರೆಗಳು, ಸುಡುತ್ತಿರುವ ಮನೆಗಳು, ಸುಟ್ಟು ಹೊಗೆಯಾಡುತ್ತಿರುವ ಪ್ರದೇಶಗಳು, ಹಾಹಾಕಾರದ ವಾತಾವರಣ ಹೀಗೆ ಎಲ್ಲವೂ ನಮ್ಮ ಮುಂದೆ ನಡೆಯುತ್ತಿರುವ ಹಾಗೆ ಅನಿಸುತ್ತದೆ. ನೆಪೊಲಿಯನ್ ಬೋನಾಪಾರ್ಟೆ ವಿನಾಶಕಾರಿ ಯುದ್ಧನೃತ್ಯ ಮಾಡುತ್ತಿರುವ ಹಾಗೆ ಅನಿಸುತ್ತದೆ. ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿ

Read More

‘ಸುದರ್ಶನ’: ಧ್ಯೇಯ ಆದರ್ಶಗಳ ದರ್ಶನ

ಸುದರ್ಶನನು ದೀನಾನಂದನಾಗಿ ಗಳಿಸಿದ ಜನಪ್ರಿಯತೆ, ಯಶಸ್ಸು, ನಿರ್ಲಿಪ್ತತೆ ಮತ್ತು ನೈತಿಕ ಕಟ್ಟುಪಾಡುಗಳಿಗೆ ಒಗ್ಗಿದ ಬದುಕಿನ ಕಡೆಗೆ ಕಾದಂಬರಿಯು ಗಮನವನ್ನು ಹರಿಸಿದ್ದರೂ ಇದನ್ನು ಕೇವಲ ಸುದರ್ಶನನ್ನು ಕುರಿತ ಕಾದಂಬರಿಯನ್ನಾಗಿ ಓದಲಾಗದು. ಆತನು ಕಾದಂಬರಿಯ ಪ್ರಧಾನ ಪಾತ್ರವಾದರೂ ಇವನೊಂದಿಗೆ ವೈದೃಶ್ಯದಲ್ಲಿ ನಿಲ್ಲಬಲ್ಲ ಹಲವು ಪಾತ್ರಗಳು ಇವೆ. ಆ ಪಾತ್ರಗಳು ಸೂಚಿಸುವ ಬಹುಮುಖೀ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಕಾದಂಬರಿಯನ್ನು ಗ್ರಹಿಸಬೇಕಾಗುತ್ತದೆ. ಆನಂದಕಂದರ ‘ಸುದರ್ಶನ’ ಕಾದಂಬರಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಬರಹ ನಿಮ್ಮ ಓದಿಗೆ

Read More

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ಹೀಗಳೆಯಿರಿ ಕಡು ನಿಶಾಂತ ಕವಿಯನ್ನೊ
ಎಣಿಸಿರಿ ಕಡು ಕವಿಯ ಗಾಯಗಳನ್ನೊ
ಹಾಡಿರಿ ಹಾಡ ಕಡು ಸರಳುಗಳೊ ಹೂವಾದ ಗಳಿಗೆಯನ್ನ
ತುಂಬಿಸಿಕೊಳ್ಳಿರಿ ಉಡಿಯಲ್ಲಿ ಕಡು ಕಿಡಿಗಳನ್ನ”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಈ ಭಾನುವಾರದ ಕತೆ

ಮಜೀದ್ ಕ್ಯಾಷಲ್‌ನ ಭಾರಕ್ಕಿಂತಲೂ ಭಾರವಾದ ಹೃದವನ್ನಿಟ್ಟುಕೊಂಡು ನಾನು ಬಾಳುತ್ತಿರುವುದನ್ನು ಅವರಿಗೆ ಹೇಳಲು ಆಗುತ್ತಿಲ್ಲ. ಮುಂದೆ ಹೇಳದಲೆ ಹೋಗಬಹುದು. ಅವರು ಅದನ್ನು ನಂಬುತ್ತಾರೋ ಇಲ್ಲವೋ. ನಾನು ಯಾರು ಎಂಬುದನ್ನು ಅಷ್ಟಾಗಿ ವಿಚಾರಿಸಲೂ ಹೋಗಲೇ ಇಲ್ಲ. ಅವರೊಂದಿಗೆ ನಾನು ಇರಲು ಅಷ್ಟು ಸಹಜವಾಗಿ ಒಪ್ಪಿಕೊಂಡುಬಿಟ್ಟರು. ನಾನು ಪ್ರಾಗ್‌ನಿಂದ ಬರುವ ಮುನ್ನ ಅವರೊಂದಿಗೆ ಬಾಂಬೆಯ ನಜ್ಮಾ ಎಂಬ ಚಾಕರಿಯವಳು ಮತ್ತು ಅವಳ ಸಂಸಾರ ಇತ್ತು.
ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಕತೆ “ಪಾತ್ರ” ನಿಮ್ಮ ಭಾನುವಾರದ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ