Advertisement

Month: May 2024

ಅಭಿಷೇಕ ಬಳೆ ಮಸರಕಲ್ ಬರೆದ ಗಜ಼ಲ್

“ಮನದ ರಂಗಸಜ್ಜಿಕೆ ಮೇಲೆ ಅಭೂತಪೂರ್ವ ಕಲ್ಪನೆಗೆ ನೂರು ಭಾವ ಬಣ್ಣ
ಮಂದಿರ ಮಸೀದಿ ನಾದ ಒಂದಾಗುವಂತೆ ಧರ್ಮ ಧಿಕ್ಕರಿಸಿ ಕುಣಿದು ಬಿಡು ಸಖಿ”- ಅಭಿಷೇಕ ಬಳೆ ಮಸರಕಲ್ ಬರೆದ ಗಜ಼ಲ್

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ

ಕಂತುಗಳನ್ನು ಸರಿಯಾಗಿ ಕಟ್ಟಲಿಲ್ಲವೆಂದು ಮನೆಯನ್ನು, ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕಿನವರು ಬಂದಾಗ ಆಶ್ಚರ್ಯವೆಂಬಂತೆ ತಾನೇ ಮುಂದೆ ನಿಂತು ಅವನ್ನೆಲ್ಲಾ ಅವರಿಗೆ ಬಿಟ್ಟುಕೊಟ್ಟ. ಅಡ್ಡಬಂದ ಹೆಂಡತಿಗೆ, ‘ಇಲ್ಲಿಗೆ ಬರುವಾಗ ಏನನ್ನೂ ತಂದಿರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ..
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ “ಜೀ ಗಾಂಧಿ” ನಿಮ್ಮ ಓದಿಗೆ

Read More

‘ವಾಟ್ ದ ಹೆಕ್’ ಅಮ್ಮಾ…

‘ನೀವೇ ಸರಿ, ಅರವಿಂದರಾಯರೇ. ಮಕ್ಕಳನ್ನು ಬಹಳ ಚೆನ್ನಾಗಿ ಬೆಳೆಸಿದ್ದೀರಿ’ ಇನ್ನೂ ಅವರ ಮಾತು ಮುಗಿದಿಲ್ಲ. ಎಲ್ಲಿಂದ ಬಂತೋ ಒಂದು ದೊಡ್ಡ ಅಲೆ, ಅಲ್ಲಿ ಕೂತಿದ್ದವರನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿಬಿಟ್ಟಿತು. ಕಣ್ಣು ಮುಚ್ಚಿ ಬಿಡುವುದರಲ್ಲಿ ಎಲ್ಲ ಮರಳು, ಎಲ್ಲೆಲ್ಲೂ ನೀರು. ಜನರ ಕೂಗು, ಹಾಹಾಕಾರ. ಸುಕನ್ಯ ಕಣ್ಣು ಬಿಟ್ಟಾಗ ಹತ್ತಿರ ಯಾರೂ ಕಾಣುತ್ತಿಲ್ಲ. ‘ವಿನೂ, ವಿಶೂ’ ಜೋರಾಗಿ ಕೂಗುತ್ತಾ ಇಡೀ ಸಮುದ್ರದ ದಡದಲ್ಲಿ ಹುಚ್ಚು ಹಿಡಿದಂತೆ ಓಡುತ್ತಿದ್ದಾಳೆ.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆಯ ಕಂತು

Read More

ಇಷ್ಟುಕಾಲ ಒಟ್ಟಿಗಿದ್ದು….

ಅವಳು ಚಿಕ್ಕವಳಿದ್ದಾಗ ಎರಡು ಮೂರು ಸಲ ಈ ಕಥೆಯನ್ನು ಕೇಳಿದ್ದಳು. ಅವಳ ಅಜ್ಜನ ಅಜ್ಜನ ಅಜ್ಜನ ಅಜ್ಜನ ಮನೆಯಲ್ಲಿ ತಂದೆತಾಯಿ ಇಲ್ಲದ, ಸಂಬಂಧಿಕರ ಒಂದು ಹೆಣ್ಣು ಮಗಳಿದ್ದಳಂತೆ. ಆಶ್ರಯವಿಲ್ಲದೆ ಇವರ ಮನೆ ಸೇರಿದ್ದ ಹುಡುಗಿ ಅವಳು. ಆಗಿನ ಸಂಪ್ರದಾಯದಂತೆ ಮೈನೆರೆಯುವ ಮೊದಲು ಹೆಣ್ಣುಮಕ್ಕಳ ಮದುವೆ ಮಾಡಿಬಿಡಬೇಕು. ಹಾಗೊಂದು ವೇಳೆ ಮದುವೆಗೆ ಮೊದಲೇ ಹೆಣ್ಣು ಮಗು ನೆರೆದರೆ, ಮನೆತನಕ್ಕೆ ಕೆಟ್ಟದ್ದು ಎಂದು ಅವಳನ್ನು ಊರಾಚೆ, ಕಾಡಿನಲ್ಲಿ ಬಿಟ್ಟು ಬಂದುಬಿಡುತ್ತಿದ್ದರಂತೆ. ಆದರೆ ಅಷ್ಟು ಸುಲಭವೆ ಹೊಟ್ಟೆಯ ಕೂಸನ್ನು ಕಾಡಿನಲ್ಲಿ ಬಿಡುವುದು?
ಎನ್. ಸಂಧ್ಯಾ‌ ರಾಣಿ ಹೊಸ ಕಾದಂಬರಿ “ಇಷ್ಟುಕಾಲ ಒಟ್ಟಿಗಿದ್ದು” ಯಿಂದ ಆಯ್ದ ಭಾಗ ನಿಮ್ಮ ಓದಿಗೆ

Read More

ನಂಜುಂಡಿ ಕಲ್ಯಾಣವೂ ಮತ್ತು ‘ಮಿಲ್ಟ್ರೀ’ ಗ್ಯಾಂಗೂ

ಅಂತೂ ನಮ್ಮೂರಿಗೆ ನಂಜುಂಡಿ ಕಲ್ಯಾಣದ ಭಾಗ್ಯ. ಬರೋಬ್ಬರಿ ಒಂದು ವರ್ಷದ ನಂತರ. ಆದರೂ ನಮ್ಮ ಜನಕ್ಕೆ ಅದು ರಿಲೀಜ್ ಪಿಕ್ಚರ್. ಜಟಕಾ ಲೌಡ್ ಸ್ಪೀಕರ್ ಕಟ್ಟಿಕೊಂಡು ಸುತ್ತ ಹತ್ತೂರುಗಳಿಗೆ ಹೋಗಿ… “ಪ್ರೀಯ ಕಲಾಭಿಮಾನಿಗಳೆ.. ಕಲಾ ರಸಿಕರೆ.. ಒಮ್ಮೆ ನೋಡಿದರೆ ಮತ್ತೊಮ್ಮೆ ಮಗದೊಮ್ಮೆ.. ಮತ್ತೆ ಮತ್ತೆ ನೋಡಲೇಬೇಕಾದ ಸಿನೇಮಾ..” ಎನ್ನುತ್ತ.. “ಮರೆಯದಿರಿ.. ಮರೆತು ನಿರಾಶರಾಗದಿರಿ..…” ಎನ್ನುವ ನೊಟೀಸ್ ನೀಡಿ ಮರಳಿತು. ಸೈಕಲ್ ರಂಗ ಬಸ್ ಸ್ಟಾಪು ಸಲೂನು ಕೂಟು ಸರ್ಕಲ್‌ಗಳಲ್ಲಿ ಪೋಸ್ಟರ್ ಅಂಟಿಸಿದ.
ಲಿಂಗರಾಜ ಸೊಟ್ಟಪ್ಪನವರ ಬರೆದ ಪ್ರಬಂಧ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ