Advertisement

Month: April 2026

ದರ್ಶನ್‌ ಜಯಣ್ಣ ಹೊಸ ಸರಣಿ “ಸೌದಿ ಡೇಟ್ಸ್” ಇಂದಿನಿಂದ….

ನಾನಿಲ್ಲಿ ಇಲ್ಲಿಯತನಕ ಆರು ವರ್ಷ ನಾಲ್ಕು ತಿಂಗಳುಗಳನ್ನ ಕಳೆದಿದ್ದೇನೆ. ನನ್ನ ಕುಟುಂಬದ ಜೊತೆ, ಗೆಳೆಯರ ಜೊತೆ ಈ ದೇಶ ಸುತ್ತಾಡಿದ್ದೇನೆ. ಇಲ್ಲಿನ ಬೃಹತ್ ಕಾರ್ಖಾನೆಗಳನ್ನು ಸ್ವತಃ ನೋಡಿದ್ದೇನೆ. ಇಲ್ಲಿನ ರಣ ಬಿಸಿಲಿನ ಜೊತೆಗೆ ತಂಪಾದ ಹವೆಯನ್ನೂ ಅನುಭವಿಸಿದ್ದೇನೆ. ಮರಳ ಮಳೆ, ನಿಜದ ಮಳೆ ಎರಡಕ್ಕೂ ಸಾಕ್ಷಿಯಾಗಿದ್ದೇನೆ. ಅರಬ್ಬರ ಜೊತೆ ಕೆಲಸ ಮಾಡಿ, ಓಡಾಡಿ ಚರ್ಚಿಸಿದ್ದೇನೆ. ಅವರ ಕನಸು, ವಿಚಾರ, ಜೀವನ ಕ್ರಮ, ಸ್ನೇಹವನ್ನು ಅನುಭವಿಸಿದ್ದೇನೆ.
ಸೌದಿ ಅರೇಬಿಯಾದ ವಾಸಿಯಾದ ದರ್ಶನ್‌ ಜಯಣ್ಣ ಅಲ್ಲಿನ ವಾಸದ ಹಾಗೂ ಆ ದೇಶದ ಕುರಿತು ತಮ್ಮ ಅನುಭವಗಳನ್ನು “ಸೌದಿ ಡೇಟ್ಸ್”‌ ಹೆಸರಿನಲ್ಲಿ ಶನಿವಾರಗಳಂದು, ಹದಿನೈದು ದಿನಗಳಿಗೊಮ್ಮೆ ಬರೆಯಲಿದ್ದಾರೆ

Read More

ಇನ್ನು ಮೇಲೆ ನಾವು ಮೂವರೇ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕೋಮಲ ಮನೆಯಲ್ಲಿ ಇಲ್ಲದ ಸಮಯದಲ್ಲಿ ಸೆಲ್ವಿ ತನ್ನ ಅತ್ತೆ ಕನಕಳಿಗೆ ಎಲ್ಲವನ್ನೂ ವಿವರಿಸಿ ಹೇಳಿದಳು. ಕನಕ ತನ್ನ ತವರೂರಿಗೆ ತನ್ನ ಮೊಮ್ಮಗಳನ್ನು ಕೊಡುತ್ತಿರುವುದಕ್ಕೆ ಸಂತೋಷವಾಗಿ ಹುಡುಗ ಕೂಡ ಒಳ್ಳೆಯವನು ಎಂದು ಹೇಳಿದಳು. ಅದೇ ಮಾತುಗಳನ್ನು ಮತ್ತೆ ಸೆಲ್ವಿ, ಮಣಿ ಜೊತೆಗೆ ಕನಕಳ ಮುಂದೆ ಇನ್ನೊಂದೆರಡು ಸಲ ಮಾತನಾಡಿದ ಮೇಲೆ ಅಂತಿಮವಾಗಿ ಕೋಮಲಳನ್ನು ಆರ್ಮುಗಮ್ ಕರೆದುಕೊಂಡುಬಂದಿದ್ದ ಯುವಕ ಸಂತೋಷ್‌ಗೆ ಕೊಟ್ಟು ಮದುವೆ ಮಾಡುವುದಾಗಿ ತೀರ್ಮಾನ ತೆಗೆದುಕೊಂಡರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ

Read More

ಚಂದ್ರಮ್ಮನ್ನ ಹುಯ್ಯೋದು: ಸುಮಾ ಸತೀಶ್ ಸರಣಿ

ಏಸೊಂದು ಸೆಂದಾಕಿ ಪದ ಬಿಡುತ್ತಿದ್ದರು. ‘ಏಳ್ರಮ್ಮಣ್ಣಿದೀರಾ ನಿದ್ದೆ ಬತ್ತಾ ಐತೆ’ ಅಂಬ್ತ ಗಂಡಸರು ಯೋಳೋತಂಕ ಅಲ್ಲಿಂದ ಅಲ್ಲಾಡಿದ್ರೆ ಸೈ. ತಂಬಿಟ್ಟು ನಂಗೆ ಇಷ್ಟ ಅಂತ ವಸಿ ತುಪ್ಪ ಜಾಸ್ತಿ ಹಾಕಿ ಉಂಡೆ ಕಟ್ಟಿ ನಂಗೇಂತ ಮನೆಯ ನಿಲುವಿನಲ್ಲಿ ಮಕ್ಕಳಿಗೂ ಕಾಣದಂಗೆ ಬಚ್ಚಿಕ್ಕಿ ತಿನ್ನಿಸುತ್ತಿದ್ದ ನಾಗಮ್ಮ ನನ್ನ ಪಾಲಿನ ಯಶೋದೆಯೇ ಸೈ. ಎಡವಿ ಬಿದ್ದರೆ ಮನೆ ಸಿಗುತ್ತಿದ್ದರೂ ನಡುರಾತ್ರಿ ಮಗೀನ ಒಂದುನ್ನೇ ಕಳಿಸಕಾಯ್ತದಾ ಅಂತ ಕರೆತಂದು, ಮನೆ ಬಾಗಿಲು ತೆರೆದು, ‘ಅಮ್ಮಣ್ಣಿ, ಬಿಡ್ಡ ವಚ್ಚಿಂದಿ, ಪಂಡೇಯಮ್ಮೋ’ ಅಂತ ಹೇಳಿಯೇ ಹೋಗುತ್ತಿದ್ದಳು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಕಾವ್ಯದಿಂದ ಏನನ್ನು ನಿರೀಕ್ಷಿಸುತ್ತೇವೆ?: ಕಮಲಾಕರ ಕಡವೆ ಕೃತಿಗೆ ಸಿರಾಜ್‌ ಅಹಮದ್‌ ಮುನ್ನುಡಿ 

‘ಮುಗಿಯದ ಮಧ್ಯಾಹ್ನʼ ಸಂಕಲನದಲ್ಲಿ ಸೂಚಿಸುವ ಹಾಗೆ ನಿಧಾನ ನಿಧನದತ್ತ ಸಾಗಿರುವ ಸುತ್ತಲಿನ ಜಗತ್ತಿನ ಬಗೆಗೆ ಕವಿ ಬಹಳ ವ್ಯಾಕುಲನಾಗಿದ್ದಾನೆ. ಇನ್ನೊಂದು ಬಗೆಯಲ್ಲಿ ಇದರಿಂದ ಅವನ ಅಂತರಂಗವೂ ಕ್ರಮೇಣ ವಿಕೃತಗೊಂಡಿರುವ ಸೂಚನೆಗಳು ಇಲ್ಲಿ ಸಿಗುತ್ತವೆ. ಹಕ್ಕಿ ಕಂಡರೂ ಅದು ಏರುವ ವಿಸ್ತಾರವನ್ನು ಕಾಣದ ಅದರ ಹಾರಾಟವನ್ನು ಶಂಕಿಸುವ ಮನಸುಗಳಿಗೆ ಮೊದಲು ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗಿ ಹೋಗುವ ದುರಂತವನ್ನು ಕವಿ ಕಾಣಿಸುತ್ತಾನೆ.
ಕಮಲಾಕರ ಕಡವೆ “ವಲಸೆ ಹಕ್ಕಿಗಳ ಹುಯಿಲು” ಕವನ ಸಂಕಲನಕ್ಕೆ ‌ಎಸ್ ಸಿರಾಜ್‌ ಅಹಮದ್‌ ಮುನ್ನುಡಿ

Read More

‘ಮೀಸೆಯ ಮಹಿಮೆ’ ಎಂಬ ವಿಷಯದ ಬಗ್ಗೆ ನಾನೇಕೆ ಬರೆದೆ?!: ಬಸವನಗೌಡ ಹೆಬ್ಬಳಗೆರೆ ಸರಣಿ

ಅಂದಿನಿಂದ ಮೇಡಂ ಜೊತೆ ನಾನು ಅಷ್ಟಾಗಿ ಮಾತನಾಡಿಸುತ್ತಿರಲಿಲ್ಲ. ಪಾಠ ಮಾಡುವಾಗ ವಾದಗಳು ನನ್ನಿಂದ ಇರುತ್ತಿತ್ತು. ಒಮ್ಮೆ ಪೋಷಕರಿಗೆ ಹೆಣ್ಣು ಅಥವಾ ಗಂಡು ಎಂಬ ಲಿಂಗ ನಿರ್ಧಾರವಾಗಲು ಯಾರು ಕಾರಣ? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟರು. ಆಗ ಕಾಲೇಜಿನ ನಮ್ಮ ಸೆಕ್ಷನ್‌ನಲ್ಲಿದ್ದ 60 ರಲ್ಲಿ 59 ಪ್ರಶಿಕ್ಷಣಾರ್ಥಿಗಳು ಹೆಣ್ಣೇ ಕಾರಣ ಎಂದರು. ನಾನೊಬ್ಬ ಮಾತ್ರ ಒಬ್ಬ ವ್ಯಕ್ತಿಯ ಲಿಂಗ ನಿರ್ಧಾರಕ್ಕೆ ಗಂಡೇ ಕಾರಣ ಎಂಬುದನ್ನು ಸಕಾರಣ ಸಹಿತ ತಿಳಿಸಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತಾರನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ