Advertisement

Month: April 2026

ಫ್ರೆಂಚ್ ಹಸ್ತದಿಂದ ಮುಕ್ತವಾದ ಗಿಣಿ ಗಿನಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಈ ದೇಶದಲ್ಲಿ ತೀವ್ರವಾದ ಬಡತನವಿದೆ. ಯುವಜನತೆ ಹೆಚ್ಚಿರುವ ದೇಶವಾದ ಕಾರಣ ಜನಸಂಖ್ಯೆ ಈಚೀಚೆಗೆ ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿಯೂ ಸಹ ಗಿನಿಯಾ ದೇಶವು ಅರಣ್ಯ ಪ್ರದೇಶಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಗಿನಿಯಾ ದೇಶವು ವಿಸ್ತೃತವಾದ ಕರಾವಳಿ ಪ್ರದೇಶವನ್ನು ಹೊಂದಿದೆ. ಸುಮಾರು ಮುನ್ನೂರ ಇಪ್ಪತ್ತು ಕಿಲೋಮೀಟರ್‌ಗಳಷ್ಟು ಉದ್ದದ ಕರಾವಳಿಯನ್ನು ಹೊಂದಿದ ದೇಶವಿದು. ಇದರ ರಾಜಧಾನಿ ಕೊನಾಕ್ರಿ ನೆಲೆನಿಂತಿರುವುದೇ ಕರಾವಳಿಯಲ್ಲಿ. ಎಲ್ಲರ ಕಣ್ಮನ ಸೆಳೆಯುವ ಸುಂದರವಾದ ಕಡಲತೀರಗಳನ್ನು ಹೊತ್ತುನಿಂತಿದೆ ಕರಾವಳಿ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಗಿನಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

Read More

ನನ್ನ ಯಶೋಧೆ ನಾಗಮ್ಮ: ಸುಮಾ ಸತೀಶ್ ಸರಣಿ

ಇದು ನಂಗೆ ಬುದ್ಧಿ ಬಂದ ಮ್ಯಾಗ್ಳ ಕತೆ. ಅದ್ಕೂ ಮುಂಚೆ, ಐದಾರು ವರ್ಷ ಆದ್ರೂ ಎಳೆ ಕೂಸಿಗೆ ಕಾಲು ಮೇಲೆ ಅಡ್ಡಾಕ್ಕಂಡು ನೀರು ಹುಯ್ಯಲ್ವೇ ಅಂಗೇ ಮಾಡೋಳು. ನಮ್ಮಮ್ಮ ‌ಅಯ್ಯೋ ಅದೇನು ಸಣ್ಣ ಮಗೀನೆ ಬಿಡು ಅಂದ್ರೂ ಬಿಡವಲ್ಲಳು. ಮಗೀಗೆ ಮೈನೋವು ಅಂತ ಕಾಲಿನ ಮ್ಯಾಗಾಕ್ಕಂಡು ಕೈಕಾಲು ಹಿಸುಕಿ ಹಿಸುಕಿ, ಅಮ್ಮುಂಗೆ ನೀರು ಹುಯ್ಯೋಕೆ ಏಳೋಳು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ

Read More

ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ

“ದೂರದಲ್ಲಿದ್ದರೂ
ಸಂತೆಯ ಸುಡುಗಾಡಿನಲ್ಲೂ
ಚಿಂತೆಯ ಚಿತಾಗಾರದಲ್ಲೂ
ರಾತ್ರಿಯ ಕತ್ತಲೆಯಲ್ಲಿ
ತಲೆಯ ನೇವರಿಸಿದ ಕೈ,
ತಿಳಿಹೇಳಿದ ದನಿ

ಅಭಯಹಸ್ತ ಆಕೆಯದೆ” ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ

Read More

ಶೂನ್ಯ ಟಿಕೆಟ್’ನ ಒಂದು ಪ್ರಸಂಗ: ವಸಂತಕುಮಾರ್‌ ಕಲ್ಯಾಣಿ ಬರಹ

ಕಂಡಕ್ಟರ್ ಒಂದು ನಿರ್ಧಾರಕ್ಕೆ ಬಂದ. ಪೊಲೀಸರು ಬರಲಿ ಅವರೇ ನಿರ್ಧರಿಸಲಿ ಎಂದು ಬಸ್ ನಿಲ್ಲಿಸಲು ಡ್ರೈವರ್‌ಗೆ ಸೂಚಿಸಿದ. ಆದರೂ ಬಸ್ ನಿಲ್ಲಲಿಲ್ಲ. ಪೋಲೀಸರ ಪ್ರವೇಶ ಮಾತಿನಲ್ಲಿ ಆದದ್ದಕ್ಕೆ, ಈ ಮೂವರು “ಕರೆಸಯ್ಯ ನಾವು ನೋಡದೆ ಇರೋ ಪೋಲಿಸ್ರಾ… ಹೆದರಿಸ್ತೀಯಾ? ಕರೆಸೆ ಬಿಡು” ಎಂದು ದುಂಬಾಲು ಬಿದ್ದರು. (ಹಾಗೆ ನಟಿಸಿದರು) ಒಂದು ಸ್ಟಾಪ್ ಮುಂದೆ ಬಂದ ಬಸ್ ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು. ಐದು ನಿಮಿಷದಿಂದ ಯಾರಿಗೋ ಫೋನ್ ಮಾಡುತ್ತಾನೆ ಇದ್ದ ಕಂಡಕ್ಟರ್ “ಪೊಲೀಸರು ಬರ್ಲಿ; ಗೊತ್ತಾಗುತ್ತೆ” ಎನ್ನುತ್ತಾ. ಬಸ್ ಅನಿವಾರ್ಯವಾಗಿ ನಿಂತಿತು.
ವಸಂತಕುಮಾರ್ ಕಲ್ಯಾಣಿ ಬರೆದ ಶೂನ್ಯ ಟಿಕೇಟ್‌ ಒಂದರ ಪ್ರಸಂಗ ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಶುಭಾ ಎ. ಆರ್. ಕತೆ

ಈ ಆಟೋ ಹೀಗೇ ಓಡುತ್ತಲೇ ಇರಲಿ, ಮನೆ ಬರುವುದೇ ಬೇಡ ಎಂದು ಪ್ರಾರ್ಥಿಸುತ್ತಾ ಕುಳಿತವನಿಗೆ ಅಲ್ಲೂ ನಿರಾಶೆಯೇ ಕಾದಿತ್ತು. ಮೀಟರ್ ನೋಡದೆ ನೂರರ ನೋಟು ಆಟೋದವನ ಕೈಗೆ ತುರುಕಿದವನಿಗೆ ಮನದ ಮೂಲೆಯಲ್ಲೆಲ್ಲೋ ಆಸೆಯ ಬೆಳಕು. ಮಗಳೀಗಾಗಲೇ ಬಂದಿರುತ್ತಾಳೆ. ತಾನು ಅವಳನ್ನಪ್ಪಿ ತನ್ನ ಪ್ರೀತಿಯ ಋಣ ತೀರಿಸಲು ಕೇಳಿಕೊಳ್ಳಬೇಕು. ಸರಿಯಾಗಿ ಅರ್ಥೈಸಿದರೆ ಖಂಡಿತಾ ಕೇಳುತ್ತಾಳೆ ಎಷ್ಟೆಂದರೂ ನನ್ನ ಪ್ರೀತಿಯ ಮಗಳಲ್ಲವೇ ನೋಡಿಯೇ ಬಿಡುತ್ತೇನೆ… ನನ್ನೆಲ್ಲಾ ವಾತ್ಸಲ್ಯ, ಪ್ರೀತಿಯನ್ನು ಪಣಕ್ಕಿಟ್ಟರೆ ಸೋಲುವವಳು ಅವಳೇ ಎಂದುಕೊಂಡೇ ಮನೆಯೊಳಗೆ ಬಂದ.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಶುಭಾ ಎ. ಆರ್. ಕತೆ “ಲಿರ್”‌

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ