Advertisement

Month: April 2026

ಮನುಷ್ಯ ಮೃಗವಾಗುತ್ತಿರುವನೆ?: ಸುಮಾವೀಣಾ ಸರಣಿ

ವಾಹನಗಳ ವಿಚಾರಕ್ಕೆ ಬಂದಾಗ ಗಾಳಿ ಇದ್ದರೆ ಗಾಲಿ ಓಡಲು ಸಾಧ್ಯ ಅಲ್ವೆ! ಸ್ವಲ್ಪ ಗಾಳಿ ಹೆಚ್ಚಾದರೂ ವಾಹನಗಳಾಗಲಿ, ಮನುಷ್ಯನಾಗಲಿ ಇರುವುದಿಲ್ಲ. ಗಾಳಿ ಹೆಚ್ಚಾಗಿ ಸೈಕಲ್ ಬರ್ಸ್ಟ್ ಆಯಿತು. ಅದೇ ಗಾಳಿ ಇಲ್ಲದೆ ಹೋದರೆ ಅದು ಓಡುವುದೇ ಇಲ್ಲ ಪಂಚರ್ ಆಗುತ್ತದೆ. ಅಂತೆಯೇ ಮಾನವ ಉಸಿರುಗಟ್ಟಿ ಸಾಯುತ್ತಾನೆ. ಹೌದು! ಮಾನವನ ಬದುಕು ಉಸಿರು ಹೋದಾಗ ‘ಸತ್ತರು’, ‘ಅದು’, ‘ಇದು’, ‘ಶವ’ ಎಂಬುದಾಗಿ ಮಾತನಾಡುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ತೊಂದನೆಯ ಬರಹ ನಿಮ್ಮ ಓದಿಗೆ

Read More

ಅವ್ವಕ್ಕನೆಂಬ ಅಚ್ಚರಿ…: ಜ.ನಾ. ತೇಜಶ್ರೀ ಹೊಸ ಕಾದಂಬರಿಯ ಪುಟಗಳು

ಈಗ ಅವಳ ದೇಹ ಮೊದಲಿಗಿಂತ ಗಟ್ಟಿಯಾಗಿತ್ತು, ಸಲಾಕೆಯಂತೆ. ಮೇಲಿನ ಕೆಲಸಕ್ಕೆ ಕೆಲಸದವರಿದ್ದರೂ ಅವಳು ಮಾಮೂಲಿನಂತೆ ಎಲ್ಲ ಕೆಲಸ ಮಾಡುತ್ತಿದ್ದಳು. ಕೆಲಸ ಮಾಡಿದಷ್ಟೂ ಅವಳಲ್ಲಿ ಕಸುವು, ತಾಳಿಕೊಂಡಷ್ಟೂ ಸುಂದರವಾಗಿ ಕಾಣುವುದನ್ನು ದೊಡ್ಡಯ್ಯ ವಿಸ್ಮಯದಲ್ಲಿ ನೋಡುತ್ತಿದ್ದ. ಮಂಜುನಾಥ ಮೂರು ತಿಂಗಳಿಗೆ ಮಗುಚಿದ, ಆಮೇಲೆ ಅಂಬೆಗಾಲಿಟ್ಟ. ಷಣ್ಮುಖ ಬೆಳೆದಿದ್ದನ್ನು ಹತ್ತಿರದಿಂದ ಗಮನಿಸದ ದೊಡ್ಡಯ್ಯನಿಗೆ ಮಂಜುನಾಥನನ್ನು ನೋಡುವಾಗ ಎಲ್ಲ ಹೊಸದೆನಿಸುತ್ತಿತ್ತು. ತಾನೂ ಮಗುವಾಗಿದ್ದಾಗ ಹೀಗೇ ಮಾಡಿದೆನ ಅಂತ ಯೋಚಿಸುತ್ತಿದ್ದ.
ಜ.ನಾ. ತೇಜಶ್ರೀ ಹೊಸ ಕಾದಂಬರಿ “ಜೀವರತಿ” ಕೃತಿಯ ಪುಟಗಳು ನಿಮ್ಮ ಓದಿಗೆ

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಒಮ್ಮೆ ಹೀಗೆ ಬಿಡುವಿದ್ದಾಗ, ಐತಾಳರು ನನ್ನ ಹಿನ್ನೆಲೆ ಬಗ್ಗೆ ವಿಚಾರಿಸಿದಾಗ ಸುಳ್ಳು ಹೇಳಲು ಮನಸ್ಸಾಗದೆ ಎಲ್ಲ ಹೇಳಿಬಿಟ್ಟೆ. ಮನಸ್ಸು ಹಗುರಾಯಿತು. ಈವರೆಗೂ ಸಂಪೂರ್ಣ ಸತ್ಯ ಯಾರಿಗೂ ಹೇಳಿರಲಿಲ್ಲ. ಐತಾಳರು ಸ್ವಲ್ಪ ಹೊತ್ತು ನನ್ನ ಮುಖವನ್ನೇ ನೋಡಿದರು. ಕೆಲಸದ ವಿಷಯದಲ್ಲಿ ಅವರು ತುಂಬಾ ಸ್ಟ್ರಿಕ್ಟ್; ಆದರೆ ಹೆಂಗರಳು. ಕೆಲಸಗಾರರನ್ನು ಮಕ್ಕಳ ಹಾಗೆ ನೋಡಿಕೊಳ್ಳುವ ಸ್ವಭಾವ. “ಆದ್ರೂ ನೀ ಊರು ಬಿಟ್ಟು ಬರಬಾರದಿತ್ತು ಮಾರಾಯ, ನೀ ಎಣಿಸಿದ ಹಾಗೆ ಅಲ್ಲೇನು ಆಗಿರಲಿಕ್ಕಿಲ್ಲ. ಈ ಕಾಲದ ಜನ ಕಥೆ ಸಿನಿಮಾ ಧಾರಾವಾಹಿ ನೋಡಿ ಎಂತೆಲ್ಲಾ ಗ್ರಹಿಸಿ ಹೀಗೆ ಮಾಡಿಬಿಡೋದು ಹೌದಲ್ಲವನ!”
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಅನಿಕೇತನ” ನಿಮ್ಮ ಓದಿಗೆ

Read More

ಆಸ್ಟ್ರೇಲಿಯಾದ ಐತಿಹಾಸಿಕ ಮೈಲಿಗಲ್ಲು: ಡಾ. ವಿನತೆ ಶರ್ಮಾ ಅಂಕಣ

ಒಂದೆಡೆಯಿಂದ ಇನ್ನೊಂದು ಎಡೆಗೆ ಹೋಗುವ ದಾರಿಯ ಬಗ್ಗೆ ಹೇಳಲು ಕರಾರುವಾಕ್ಕಾದ ಸೂಚನೆಗಳನ್ನು ಹಾಡುಗಳಲ್ಲಿ ಅಡಕಿಸಿದ್ದಾರೆ. ಎಲ್ಲಿ ಕುಡಿಯಲು ನೀರು ಸಿಗುತ್ತದೆ, ತಿನ್ನಲು ಗೆಡ್ಡೆಗೆಣಸು, ತಂಗಲು ಸ್ಥಳ ಸಿಗುತ್ತದೆ, ಅನ್ನುವುದೂ ಈ ಹಾಡುಗಳಲ್ಲಿ ತಿಳಿಯುತ್ತದೆ. ಆಕಾಶದಲ್ಲಿ ಬೆಳಗಿನ ಸೂರ್ಯರಶ್ಮಿ ಇನ್ನೂ ಕೆಳಗಿರುವಾಗ ಈ ನೀರಿನ ತೊರೆಯಿಂದ ನಡೆಯುತ್ತಾ, ಓಡುತ್ತಾ ಹೊರಟು ಆ ದೊಡ್ಡ ಗಮ್ ಮರದ ಉತ್ತರಕ್ಕಿರುವ ಕುರುಚಲು ಪೊದೆಕಾಡು ದಾಟಿ ಬಿಸಿಲು ನಡುನೆತ್ತಿಯ ಮೇಲಿದ್ದಾಗ ಆ ಕಿರುದಿಣ್ಣೆ ಸಿಗುತ್ತದೆ. ಅದೇ ದಾರಿಯಲ್ಲಿ ಸೂರ್ಯನ ಇಳಿಬಿಸಿಲಿನ ಜಾಡನ್ನು ಹಿಂಬಾಲಿಸುತ್ತಾ ಹೋದರೆ ಬಂಡೆರಾಶಿ ಕಾಣುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಒಂದು ಕೊನೇ ರೌಂಡು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಸ್ವಾಮಿಗೆ ದುಃಖ ತಡೆದುಕೊಳ್ಳಲು ಆಗಲಿಲ್ಲ. ಮಣಿ, “ಕಾರ್ ಚೆನ್ನಾಗಿದೆ. ತಿಂಡಿ ತಿಂದ ಮೇಲೆ ನನ್ನನ್ನು ಒಂದು ರೌಂಡ್ ಹಾಕಪ್ಪ ಸ್ವಾಮಿ” ಎಂದಿದ್ದು ಸ್ವಾಮಿ, “ಅದೇನು ದೊಡ್ಡ ವಿಷಯ. ಒಂದಲ್ಲ ಎರಡು ರೌಂಡ್ ಹಾಕೋಣ ಬಿಡು” ಎಂಬ ಮಾತುಗಳು ಜ್ಞಾಪಕಕ್ಕೆ ಬಂದವು. ಸ್ವಾಮಿ ಕೈಕೈ ಹಿಸುಕಿಕೊಂಡು ನನ್ನಿಂದ ಅಪಾರಾಧ ನಡೆದು ಹೋಯಿತಲ್ಲ ಎಂದುಕೊಳ್ಳುತ್ತ.. ಸ್ವಾಮಿ, “ದೇವರೆ ಈ ದಿನ ಬೆಳಿಗ್ಗೆ ನನ್ನನ್ನು ಯಾಕಪ್ಪ ಇಲ್ಲಿಗೆ ಕರೆದುಕೊಂಡು ಬಂದೆ?” ಎಂದು ಅಳತೊಡಗಿದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಕೊನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ