Advertisement

Month: April 2026

ಮನೆಯವರ ಮನಗಳಲ್ಲಿ ಸಾಯುವವರ ಕತೆ: ರೂಪಶ್ರೀ ಕಲ್ಲಿಗನೂರ್‌ ಬರಹ

ಜೊತೆಯಲ್ಲಿ ಯಾರೂ ಇಲ್ಲದ್ದರಿಂದ, ಅವರ ಜೋಬಿನಲ್ಲಿದ್ದ ಮೊಬೈಲ್‌ ತೆಗೆದುಕೊಂಡು ಅದಕ್ಕೆ ಬಂದ-ಹೋದ ಒಂದಷ್ಟು ನಂಬರ್‌ಗಳಿಗೆ ಕಾಲ್‌ ಮಾಡಿ ವಿಷಯ ತಿಳಿಸಿದ್ದರು. ನಂತರ ಮೃತದೇಹವನ್ನು ಊರಿಗೆ ತರಿಸಿಕೊಂಡು ಎಲ್ಲ ಕಾರ್ಯಗಳನ್ನು ಮಾಡಿ ಮನೆಗೆ ಹೋಗುವಾಗ ಯಾರ ಕಣ್ಣಲ್ಲೂ ಹನಿ ನೀರುಕಾಣಲಿಲ್ಲ… ಅವರರ್ಯಾರ ಮುಖದಲ್ಲಿ ಅಯ್ಯೋ ತಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡೆವಲ್ಲ ಎನ್ನುವ ನೋವು ಕಾಣಿಸುತ್ತಿರಲಿಲ್ಲ.. ಬದಲಾಗಿ ಅಕ್ಕ-ತಂಗಿಯರಾಗಿ ಎಲ್ಲರೂ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡಿ-ಮುಗಿಸಿದೆವಲ್ಲ… ದೇವರಿಗೆ ನಮ್ಮ ಮೇಲೆ ಸ್ವಲ್ಪವಾದರೂ ಕರುಣೆ ಇದೆಯಪ್ಪ.. ಎನ್ನಿಸಿತ್ತು. ಅಷ್ಟೇ.
ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ

Read More

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“‘ನನ್ನ ನೋವು’ ದೊಡ್ಡ ರಸ್ತೆ
‘ನಿನ್ನದು’ ಬರಿ ಚಿಕ್ಕ ಗಲ್ಲಿ
ಹೋಲಿಕೆಗಳ ಮಾಲೆ ಒಬ್ಬರನ್ನೊಬ್ಬರು
ನೋಯಿಸಿದರೆ ಮತ್ತೆ ಉಕ್ಕುವ ಪ್ರವಾಹದ
ನೋವು ಇಬ್ಬರಿಗೂ” -ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಉದ್ಯಾವರ ಮಾಧವ ಆಚಾರ್ಯ ಕತೆ

ಹಳ್ಳಿಕೊಂಪೆಯ ಮೂಲಮನೆಯ ಕಾಲ ಗರ್ಭದ ಹಿಂದಿನ ದಿನಗಳಲ್ಲಿ ಯಾರ‍್ಯಾರೋ ಹಿರಿಯರು ಕಾಲವಾದಾಗ ಹೇಳಿಸುತ್ತಿದ್ದ ಗರುಡಪುರಾಣದ ವಿವರಗಳೆಲ್ಲ ಇಲ್ಲಿ ಈಗ ಜೀವನದಲ್ಲಿ ಮೊದಲ ಅನುಭವವಾಗಿ ಬಾಲ್ಕನಿಯಲ್ಲಿ ನಿಂತು ಹೊಸ ಬದುಕಿನ ಹುಡುಕಾಟವನ್ನು ನಡೆಸುತ್ತಿದ್ದ ಗಂಗಮತ್ತೆಯ ನೆನಪಿಗೆ ಬಂದು ನಿಜವೆನಿಸತೊಡಗುತ್ತಿದ್ದಂತೆ ಒಂದು ದಿನ ಪಕ್ಕದ ಫ್ಲಾಟಿನ ವಿರಸ ದಾಂಪತ್ಯದ ಸಾಫ್ಟ್ವೇರ್ ಉದ್ಯೋಗದ ಎಳೆಯ ತರುಣಿ ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿ ಅಂತ್ಯವನ್ನು ಕಂಡಾಗ….
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಉದ್ಯಾವರ ಮಾಧವ ಆಚಾರ್ಯ ಕತೆ “ಮಹಾಪ್ರಸ್ಥಾನ”

Read More

ಸೌದಿಯ ಹೊಸ ಮೆಗಾ ಪ್ರಾಜೆಕ್ಟ್‌!: ದರ್ಶನ್‌ ಜಯಣ್ಣ ಸರಣಿ

ಆತ “ದುಬೈ ನಲ್ಲಿ ಏನಿದೆ? ಒಂದು ಐದಾರು ಶಾಪಿಂಗ್ ಮಾಲ್‌ಗಳು, ಎರಡು ಮುಖ್ಯ ರಸ್ತೆ, ಎರಡು ಹೋಟೆಲ್ಲು ಮತ್ತು ಬಹು ಮಹಡಿ ಕಟ್ಟಡ ಅಷ್ಟೇ ತಾನೇ?! ನಮ್ಮದು ಅದಕ್ಕಿಂತ ದೊಡ್ಡ ಯೋಜನೆ ಮತ್ತು ಹತ್ತು ಪಟ್ಟು ಹಿರಿದಾದದ್ದು” ಎಂದುಬಿಟ್ಟ. ಪ್ರಶ್ನೆ ಕೇಳುತ್ತಿದ್ದವರು ಕಕ್ಕಾ ಬಿಕ್ಕಿ. ಈ ಉತ್ತರ ಕೆಲವು egoistic ಸೌದಿಗಳಿಗೆ ಅಪ್ಯಾಯವಾಗಬಹುದು; ಆದರೆ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ದುಬೈ ನಗರ ಅಥವಾ ಯುಎಇ ದೇಶ ಈ ಎಲ್ಲವನ್ನೂ 50 ವರ್ಷ ಮುಂಚಿತವಾಗಿ ಮಾಡಿ ಗೆದ್ದಿದೆ. ಆಗಲೇ ಅವರ ದೃಷ್ಟಿಕೋನ ಹಾಗಿತ್ತು ಎಂಬುದನ್ನು ಯಾರೂ ಮರೆಯಬಾರದು.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಐದನೆಯ ಬರಹ

Read More

ಬಾಗಿಲಿಗೆ ಬಂದ ಸ್ನೇಹಿತ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಹೊರಗೆ ಕುಳಿತಿದ್ದ ಸ್ವಾಮಿ, ಮಣಿ ಮತ್ತು ಕಾರ್‌ಅನ್ನು ರಸ್ತೆಯಲ್ಲಿ ಬರುವವರು ಹೋಗುವವರು ವಿಚಿತ್ರವಾಗಿ ನೋಡಿಕೊಂಡು ಹೋಗುತ್ತಿದ್ದರು. ಹತ್ತಿರದಲ್ಲಿ ನೀರಿನ ಟ್ಯಾಂಕ್ ಬರುವುದಕ್ಕೆ ಮುಂಚೆ ಮಹಿಳೆಯರು ಸರತಿಯಲ್ಲಿ ನಿಂತುಕೊಂಡು ಪ್ಲ್ಯಾಸ್ಟಿಕ್ ಬಿಂದಿಗೆಗಳೊಂದಿಗೆ ಜಗಳವಾಡುತ್ತಿದ್ದರು. ಸ್ವಾಮಿ, “ಮಣಿ ನಿನಗೆ ಎಷ್ಟು ಜನ ಮಕ್ಕಳು?” ಎಂದ. ಮಣಿ, “ಸ್ವಾಮಿ ಒಬ್ಬ ಮಗ, ಒಬ್ಬಳು ಮಗಳು. ಹುಡುಗ ಕಾಲೇಜ್ ಓದ್ತಾ ಇದ್ದಾಗಲೇ ಸತ್ತೋಗಿಬಿಟ್ಟ. ನಿನಗೆ ಸುಳ್ಳೇನು ಹೇಳುವುದು. ನನಗೆ ಗೊತ್ತಿಲ್ಲದೆ ಪೋಕರಿ ಹುಡುಗರ ಜೊತೆಗೆ ಸೇರಿಕೊಂಡು ಗಣಿಯಲ್ಲಿ ಕಳ್ಳತನ ಮಾಡುವುದಕ್ಕೋಗಿ ಅಪಘಾತದಲ್ಲಿ ಸತ್ತೋದ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೆಂಟನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ