Advertisement

Month: April 2026

ಕೋಡೀಹಳ್ಳಿ ಮುರಳೀಮೋಹನ್ ಅನುವಾದಿಸಿದ ತೆಲುಗಿನ ಎಸ್.ವಿ. ಕೃಷ್ಣ ಕತೆ

“ಏಕೆಂದರೆ.. ಒಂಟಿತನ! ಯಾರೂ ನನ್ನ ಜೊತೆ ಮಾತನಾಡುವುದಿಲ್ಲ. ಯಾರೂ ನನ್ನನ್ನು ನೋಡಲು ಸಹ ಬಯಸುವುದಿಲ್ಲ. ನಾನು ಒಂಟಿತನಕ್ಕೆ ರೂಢಿಯಾಗಿದ್ದೇನೆ. ಹೇಗೋ ‘ಏಕಾಂತತೆ’ಯಂತೆ ಭಾಸವಾಗುವ ಈ ಮನಸ್ಥಿತಿಗೆ ನಾನು ರೂಢಿಸಿಕೊಂಡಿದ್ದೇನೆ. ಈ ಸ್ಥಿತಿ.. ಈ ಒಂಟಿತನ.. ಈ ಏಕಾಂತತೆಯಲ್ಲಿ ಮಾತ್ರ ನಾವು ಶಾಂತಿಯಿಂದ ಇರಲು ಸಾಧ್ಯ. ಯಾರೂ ನಮ್ಮನ್ನು ನೋಡುವುದಿಲ್ಲ, ಯಾರೂ ನಮ್ಮ ಬಳಿಗೆ ಬರುವುದಿಲ್ಲ, ಯಾರೂ ನಮ್ಮನ್ನು ನೋಯಿಸುವುದಿಲ್ಲ, ಯಾರೂ ಕೋಪಗೊಳ್ಳುವುದಿಲ್ಲ..”
ಕೋಡೀಹಳ್ಳಿ ಮುರಳೀಮೋಹನ್ ಅನುವಾದಿಸಿದ ತೆಲುಗಿನ ಎಸ್.ವಿ. ಕೃಷ್ಣ ಬರೆದ ಕತೆ “ಅಂತರ್ ನೇತ್ರ” ನಿಮ್ಮ ಈ ಭಾನುವಾರದ ಓದಿಗೆ

Read More

ರವಿಶಂಕರ ಪಾಟೀಲ ತೆಗೆದ ಈ ದಿನದ ಫೋಟೋ

ಈ ದಿನದ ಚಿತ್ರ ತೆಗೆದವರು ರವಿಶಂಕರ ಪಾಟೀಲ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದವರಾದ ರವಿಶಂಕರ ಅವರು ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರು. ಸಣ್ಣಕತೆ ಪದ್ಯ ಅವರ ಆಸಕ್ತಿಯ ಸಾಹಿತ್ಯ ಪ್ರಕಾರಗಳು. “ದೃಷ್ಟಿಕೋನ” (2012) ಇವರ ಪ್ರಕಟಿತ ಕಥಾ ಸಂಕಲನ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಪುಸ್ತಕ ಕೊಳ್ಳಲು ಹೋದವನಿಗೆ ಲೈಬ್ರರಿ ಕೊಟ್ಟವರು: ದರ್ಶನ್‌ ಜಯಣ್ಣ ಸರಣಿ

ಮಾತು ಕಥೆಯೆಲ್ಲ ಮುಗಿದಮೇಲೆ ಕಾರಿನ ಡಿಕ್ಕಿ ಮತ್ತೊಮ್ಮೆ ತೆಗೆಯಲು ಹೇಳಿದರು. ನಾನೂ ಹಾಗೆಯೇ ಮಾಡಲಾಗಿ ಸಾರಾ ಮತ್ತು ಆಲ್ವಿನ್ ದಂಪತಿಗಳು ತಮ್ಮ ಕಾರಿನಿಂದ ಹಲವು ಬ್ಯಾಗುಗಳಲ್ಲಿದ್ದ ನೂರಾರು ಪುಸ್ತಕಗಳನ್ನು ನಾನು ಕೇಳದೆಯೇ ಉಚಿತವಾಗಿ ನನ್ನ ಕಾರಿಗೆ ಸೇರಿಸಿದರು. ನಾನು ಇವೆಲ್ಲವನ್ನೂ ಯಾವಾಗ ಓದುವುದು ಎಂದು ಯೋಚಿಸುತ್ತಿದ್ದೆ! ಬೇಡವೆಂದರೂ ಅವರು ಕೇಳಲಿಲ್ಲ. ಹೀಗೆ ಪುಸ್ತಕ ಕೊಳ್ಳಲು ಹೊರಟವನಿಗೆ ಲೈಬ್ರರಿಯೇ ದೊರಕಿದ್ದು ಅತ್ಯಂತ ಚೇತೋಹಾರಿ ಸಂಗತಿ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿ

Read More

ನೇತಾಜಿ ಸುಭಾಷರ ಲೋಕದಲ್ಲಿ ನಮ್ಮದೊಂದು ಹೆಜ್ಜೆ: ನಾರಾಯಣ ಯಾಜಿ ಬರಹ

ರಾಮಾಯಣವನ್ನು ಹೊಸ ಇತಿಹಾಸದೊಂದಿಗೆ ನೇತಾಜಿ ಸುಭಾಶ್‌ಚಂದ್ರ ಬೋಸ್ ಅವರು ಇಂಗ್ಲೀಷಿನಲ್ಲಿ ಬರೆದ ಆತ್ಮಕಥೆಯನ್ನು “ಭಾರತೀಯ ಹೋರಾಟ” ಎನ್ನುವ ಹೆಸರಿನಲ್ಲಿ ಹೊರತಂದಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ, ಗಾಂಧಿ ಒಂದು ಕಡೆ, ಅದಕ್ಕೆ ಪ್ರತಿಯಾಗಿ ನೇತಾಜಿ ಸುಭಾಶ್ ಬಾಬು ಎನ್ನುವ ಸುದ್ದಿ ಯಾವತ್ತಿನಿಂದಲೂ ಕೇಳುತ್ತಲೇ ಇದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ 1915 ರಿಂದ 1921ರ ತನಕ ಮಹತ್ವದ ತಿರುವು ಕಂಡ ದಿನಗಳು.
ಪ್ರೊ. ಕೆ.ಇ. ರಾಧಾಕೃಷ್ಣ ಅನುವಾದಿಸಿರುವ ಸುಭಾಶ್‌ಚಂದ್ರ ಬೋಸರ ಕೃತಿ “ಭಾರತೀಯ ಹೋರಾಟ”ದ ಕುರಿತು ನಾರಾಯಣ ಯಾಜಿ ಬರಹ, ನಿಮ್ಮ ಓದಿಗೆ

Read More

ಶ್ರಾವಣ ಬಂತೂ ನಾಡಿಗೆ….: ಮಹಾಲಕ್ಷ್ಮೀ ಕೆ. ಎನ್. ಬರಹ

ಈ ಹಸಿರ ಬಸಿರ ತಿಳಿಗಾಳಿಯನ್ನು ಉಸಿರಾಡುವವರು ನಾವುಗಳು. ಜೀವರಾಶಿಗಳ ಚಟುವಟಿಕೆಗಳು ಕೂಡ ಹೆಚ್ಚಾಗುತ್ತವೆ. ಪ್ರಕೃತಿ ಮತ್ತು ಜೀವಿಗಳ ನಡುವಿನಲ್ಲಿ ನಡೆಯುವ ಭಾವನಾತ್ಮಕ ಸಂವಾದ ಹೆಚ್ಚಾಗುತ್ತದೆ. ಭೂಮಿಯನ್ನು ಚುಂಬಿಸುವ ಮಳೆರಾಯ, ಅವಕಾಶ ಸಿಕ್ಕಾಗ ಮಳೆಯಲ್ಲೇ ಚೂರು ಬಂದು ಹೋಗುವ ಸೂರ್ಯ. ಅದ್ಭುತ ಋತುಚಕ್ರ. ನಿಸರ್ಗದ ಕಲಾತ್ಮಕತೆಗೆ ಜೀವವೈವಿಧ್ಯದ ಸಂಗಮಕ್ಕೆ ಕಾರಣವಾಗಿದೆ ಈ ಶ್ರಾವಣ ಮಾಸ. ಪ್ರಕೃತಿಯ ಹೃದಯಧ್ವನಿಯ ಹಬ್ಬ. ಮರದ ರೆಂಬೆ ಕೊಂಬೆಗಳಲ್ಲಿ ಅಳಿಲುಗಳು ಮಾತಿಗಿಳಿಯುತ್ತವೆ, ಕೆಲವೊಮ್ಮೆ ಕೀಟಗಳು ಬಂದು ಇಣುಕಿ ಹೋಗುತ್ತವೆ.
ಶ್ರಾವಣ ಸಂದರ್ಭದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಗಳ ಕುರಿತು ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ