Advertisement

Month: April 2026

ಎ.ಎನ್.‌ ಪ್ರಸನ್ನ ಬರೆದ ನಾಲ್ಕು ಅತಿ ಸಣ್ಣ ಕತೆಗಳು

ಇದು ಅವರ ಊಹೆಯನ್ನು ಮೀರಿ ನೂರಾರು ಬಗೆಯಲ್ಲಿ ಹಬ್ಬಿತು. ನಾಲಗೆ ಒಳಗೊಂದು ಮೂಳೆ ಇದೆ. ಅದಕ್ಕೆ ಘಾತವಾದರೆ ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವ ಅಭಿಪ್ರಾಯ ಇನ್ನಿಲ್ಲದಷ್ಟು ಬೆಳೆಯಿತು. ಜನರು ಪರಸ್ಪರ ಮಾತನಾಡುವಾಗ ಏನು ಮಾತನಾಡುತ್ತಿದ್ದಾರೆ ಎನ್ನುವುದಕ್ಕಿಂತ ಹೇಗೆ ಮಾತನಾಡುತ್ತಿದ್ದಾರೆ, ತಾವು ಮಾತನಾಡುವುದೂ ಅದೇ ಬಗೆಯಲ್ಲಿದೆಯೇ ಅಥವ ಭಿನ್ನವಾಗಿದೆಯೇ… ಹೀಗೆ ಹಲವು ಆಲೋಚನೆಗಳಿಗೆ ಆಸ್ಪದ ಉಂಟಾಯಿತು. ಒಮ್ಮೆ ಅನುಮಾನ ಉಂಟಾದರೆ ಸುಮ್ಮನೆ ಒಂದಿಲ್ಲೊಂದು ನೆಪದ ಕಾರಣ ತೆಗೆದುಕೊಳ್ಳಬೇಕಾದ ಕ್ರಮವನ್ನು ಮುಂದೆ ಹಾಕಲು ಯಾರಿಗೂ ಇಷ್ಟವಾಗುವಂತಿರಲಿಲ್ಲ.
ಎ.ಎನ್.‌ ಪ್ರಸನ್ನ ಬರೆದ ಅತಿ ಸಣ್ಣ ಕತೆಗಳ ಸಂಕಲನ “ಅದೊಂದು ದಿನ” ಕೃತಿಯ ನಾಲ್ಕು ಸಣ್ಣ ಕತೆಗಳು ನಿಮ್ಮ ಓದಿಗೆ

Read More

ಖಾದ್ರಿಗಳು ಮತ್ತು ಅವರ ಬದುಕು!: ದರ್ಶನ್‌ ಜಯಣ್ಣ ಸರಣಿ

“ನಮ್ಮ ಮನೆಯಲ್ಲಿ ನಾನೇ ಚಿಕ್ಕವನು ಮತ್ತು ಓದಿದ್ದು ನಾನೊಬ್ಬನೇ, ನನ್ನೆಲ್ಲಾ ಒಡಹುಟ್ಟಿದವರು ತೀರಿಹೋಗಿದ್ದಾರೆ. ಹರೆಯದರಲ್ಲೇ ಇಲ್ಲಿಗೆ ಬಂದದ್ದರಿಂದ ಯಾರೊಟ್ಟಿಗೂ ಅಂತಹಾ ಗೆಳೆತನವೂ ಉಳಿದಿಲ್ಲ. ನಮಗೆ ಮಕ್ಕಳಿಲ್ಲವಾದುದರಿಂದ ನನ್ನ ಹೆಂಡತಿಗೂ ಇಲ್ಲಿನ ಜೀವನ, ಅನಾಮಿಕತೆ, ಬೇಡದ ವಿಷಯಗಳಲ್ಲಿ ತಲೆಹಾಕುವ ಜನಗಳ ಕಿರಿ ಕಿರಿ ಯಾವುದೂ ಇಲ್ಲ ಮತ್ತು ಬೇಡವಾಗಿದೆ. ಅವಳಿಗೂ ಅಲ್ಲಿ ಹೇಳಿಕೊಳ್ಳುವ ಬಂಧು- ಬಂಧ ಎರಡೂ ಇಲ್ಲ. ಇಲ್ಲೂ ಇಲ್ಲ ಅನ್ನಿ, ಆದರೆ ನಾವಿಲ್ಲಿಗೆ ಒಗ್ಗಿ ಹೋಗಿದ್ದೇವೆ! ನಾನು ಬದುಕಿರುವವರೆಗೂ ನನ್ನ ವೀಸಾದಲ್ಲಿ ಅವಳಿಲ್ಲಿ ಇರಬಹುದು. ಆಮೇಲಿನದ್ದು ‘ಅಲ್ಲಾಹುವಿನ’ ಇಚ್ಛೆ. ಸತ್ತರೇ ಅವನದ್ದೇ ಮಣ್ಣಿನಲ್ಲಿ ಹೂಳುತಾರೆ. ಮತ್ತೇನು ಬೇಕು?”
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿ

Read More

ಮಾಲಾ. ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ಮೊದಲಿನಂತ ಚಲ್ಲು ಚಲ್ಲು ಸಲ್ಲ
ಗಂಭೀರವದನೆಯಾಗಿ
ಯಾರಲ್ಲೂ ಸಲುಗೆ ನಿಷಿದ್ಧ ಸಲಹೆ
ಆಗಾಗ ನಡೆಯುವ ಕಂದಮ್ಮಗಳ
ಅತ್ಯಾಚಾರ ಭಯ ಹುಟ್ಟಿಸಿ
ಮಗಳ ಜವಾಬ್ದಾರಿ ನಿದ್ದೆಗೆಡಿಸಿ” -ಮಾಲಾ. ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ರಾಜಲಕ್ಷ್ಮಿ ಎನ್. ರಾವ್ ಬರೆದ ಕತೆ “ಆಗಸ್ಟ್ ಹದಿನೈದು”

ಎಲ್ಲಿಂದಲೋ ಸಿನೆಮಾ ಹಾಡು ಕೇಳಿ ಬಂತು. ಕಡೆಯ ಆಟ ಮುಗಿಯಿತೇನೋ ‘ತಾರಾ ಗಗನಮೇ…’ ತಲೆಯೆತ್ತಿ ನೋಡಿದ. ಆಕಾಶದಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ. ಲಕ್ಷೋಪಲಕ್ಷ ನಕ್ಷತ್ರಗಳು, ಬೊಂಬಾಯಿನಲ್ಲಿ ವಿದ್ಯುದ್ದೀಪಮಾಲೆಗಳ ನಡುವಿನಲ್ಲಿ ಇವುಗಳನ್ನು ಗಮನವಿಟ್ಟು ನೋಡಿರಲಿಲ್ಲ. ಇಲ್ಲಿ ನಿಸರ್ಗಕ್ಕೆ ಮಾನವನ ಸ್ಪರ್ಧೆಯಿಲ್ಲ. ಬೊಂಬಾಯಿನಲ್ಲಿ ವಿದ್ಯುದ್ದೀಪಗಳ ಗೊಂದಲಕ್ಕೆ ಸಿಕ್ಕಿ ಆಕಾಶ ಕೆಂಪಾಗಿತ್ತು.
ಹಿರಿಯ ಕತೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಬರೆದ ಸಮಗ್ರ ಕತೆಗಳನ್ನು ಚಂದನ್‌ ಗೌಡ “ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಈ ಸಂಕಲನದ “ಆಗಸ್ಟ್ ಹದಿನೈದು” ಕತೆ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ