Advertisement

Month: April 2026

ದೇವರಾಜ್ ಹುಣಸಿಕಟ್ಟಿ ಬರೆದ ಗಜಲ್

“ಲೋಕದ ಅಳಲಿನ ಮುಂದೆ ನಮ್ಮದೆಂಥ ದುಃಖ..
ಇಷ್ಟಿಷ್ಟೇ ತಾಳ್ಮೆಯನ್ನೆ ಗುಣಿಸುವುದಿದೆ ಬದುಕಿನ ತುಂಬಾ

ಅಂಬೆಗಾಲಿಡುತ್ತಲೇ ಬರುತ್ತದೆ ಅಷ್ಟಷ್ಟೇ ನೋವು
ತುಸು ನಷ್ಟವನ್ನೇ ಹೊರುವುದಿದೆ ಬದುಕಿನ ತುಂಬಾ…” -ದೇವರಾಜ್ ಹುಣಸಿಕಟ್ಟಿ ಬರೆದ ಗಜಲ್

Read More

ವಿನಾಯಕ‌ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ ಶುರು

ಮೊದಲಿನಿಂದ ಖಾಲಿಯೇ ಇರುವ ಕುರ್ಚಿಗಿಂತ ನಡುವೆ ಒಂದಷ್ಟು ಹೊತ್ತು ಯಾರೋ ಕುಳಿತಿದ್ದು ಎದ್ದು ಹೋದ ಆಸನ ಹೆಚ್ಚು ಖಾಲಿಯಾಗಿ ಕಾಣುತ್ತದೆ. ನವ ಮಾಸ ತುಂಬಿದ ಬಳಿಕ ಜೀವದ ಬದಲಿಗೆ ಶೂನ್ಯವನ್ನು ಹಡೆದ ಒಡಲು ಹೊಸದಾದ ಖಾಲಿತನಕ್ಕೀಡಾಗುತ್ತದೆ. ಬಂದೇ ಬರುವನೆಂದು ನಂಬಿದ್ದ ಅತಿಥಿ.. ಬರಲೇ ಬೇಕಿದ್ದ ಅತಿಥಿ.. ಅವನ ಸ್ವಾಗತಕ್ಕೆ ಏನೆಲ್ಲ ತಯಾರಾಗಿತ್ತು! ತಂದಿಟ್ಟುಕೊಂಡ ಮಲ್ಲಿಗೆ ಮೆದುವಿನ ಟೊಪ್ಪಿಯಿತ್ತು. ಮೊಲದ ತುಪ್ಪಳದಂಥಾ ಅಂಗಿಯಿತ್ತು. ಅದರ ಅಂಚಲ್ಲಿ ಕೈಯಲ್ಲೇ ಹೊಲಿದ ಕಸೂತಿಯಿತ್ತು.
ವಿನಾಯಕ‌ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ, ಮಂಗಳವಾರಗಳಂದು, ಹದಿನೈದು ದಿಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ

Read More

ಮಾನವನ ವಿಕಾಸಕ್ಕೆ ಪ್ರಶ್ನಿಸುವುದೇ ಆಧಾರ: ನಮ್ರತಾ ಪೊದ್ದಾರ್‌ ಬರಹ

ಬಹಳ ಪೋಷಕರು ಮಕ್ಕಳ ಕುತೂಹಲಭರಿತ ಪ್ರಶ್ನೆಗಳಿಗೆ ನಕ್ಕು ಸುಮ್ಮನಾಗಿಯೋ ಅಥವಾ ಅರೆಬರೆ ಉತ್ತರ ಕೊಟ್ಟೋ ಜಾರಿಕೊಳ್ಳುತ್ತಾರೆ. ತಮ್ಮ ನಂಬಿಕೆಗಳಿಗೆ ಹಾಗೂ ಆಚಾರ, ವಿಚಾರಕ್ಕೆ ಸರಿಹೊಂದದೆ ಇರುವ ಪ್ರಶ್ನೆಗಳನ್ನು ಮಕ್ಕಳು ಕೇಳಿದಾಗ ಕಸಿವಿಸಿಗೊಂಡು ಕೋಪಿಸಿಕೊಳ್ಳುವುದನ್ನು ನೋಡಿದ್ದೇವೆ. ಯಾವುದೇ ವಿಷಯದ ಬಗ್ಗೆ ಗೊತ್ತಿಲ್ಲದಿರುವುದು ಅವಮಾನದ ಮಾತಲ್ಲ. ನಾವೇ ಏನೋ ಊಹೆ ಮಾಡಿಕೊಂಡು, ಖಾಲಿ ಇರುವ ಜಾಗದಲ್ಲಿ ಏನೋ ತುಂಬಿಕೊಂಡು ಸತ್ಯವನ್ನು ಹುಡುಕುವ ಗೋಜಿಗೆ ಹೋಗದಿರುವುದು ತಪ್ಪು.
ನಮ್ರತಾ ಪೊದ್ದಾರ್‌ ಬರಹ ನಿಮ್ಮ ಓದಿಗೆ

Read More

ಆಟೋ ಕರೆಕ್ಷನ್: ಸುಮಾವೀಣಾ ಸರಣಿ

ಇಂಥ ಅದೆಷ್ಟೋ ಸನ್ನಿವೇಶಗಳನ್ನು ನೀವುಗಳೂ ಕೇಳಿರಬಹುದು. ಆಟೋಗಳಲ್ಲಿ, ಸಿಟಿ ಬಸ್‌ಗಳಲ್ಲಿ ಓಡಾಡುವಾಗ ಇಂಥ ಕೆಲವು ತುಣುಕುಗಳು ಯಾವುದೋ ಸಿನೆಮಾ ಟೀಸರ್‌ಗಳಂತೆ ನಮ್ಮ ಕಣ್ಣೆದುರು ಹಾದು ಹೋಗಬಹುದು. ತರಹೇವಾರಿ ಸಿನೆಮಾಗಳು ಬಂದಂತೆ ಪ್ರಯಾಣದ ಸನ್ನಿವೇಶಗಳೂ ಕೂಡ ಬಂದು ಬಂದು ಹೋಗುತ್ತವೆ. ಕೊರೊನಾ ನಂತರ ಥಿಯೇಟರಿನಲ್ಲಿ ಸಿನೆಮಾಗಳನ್ನು ನೋಡುವವರ ಸಂಖ್ಯೆ ಈಗ ಕುಸಿದಿದೆ. ಎಲ್ಲಾ ಓಟಿಟಿಯಲ್ಲಿ ನೋಡಿಬಿಡ್ತಾರೆ. ಈಗಂತೂ ‘ಡೌನ್ ಪೇಮೆಂಟೋ, ಇಲ್ಲಾ ಸೆಕೆಂಡ್ ಹ್ಯಾಂಡೋ ಮನೆಗ್ ಒಂದ್ ಕಾರ್ ಇರ್ಲಿ’ ಎಂದು ದುಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಆದರೂ ಸ್ವಂತ ವಾಹನ ಹೊಂದಿದ ಬದಲಾವಣೆಯಾಗಿದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ವೇಣುಗೋಪಾಲ್ ಗಾಂವ್ಕರ್ ಕತೆ

ಅದರ ಚಿತ್ರವನ್ನೇ ಮನದಲ್ಲಿ ತುಂಬಿಕೊಂಡು ಮನೆಗೆ ವಾಪಸ್ಸಾದೆ. ಯಾವ ಜೀವ ವಿಜ್ಞಾನಿಗಳ ಕಣ್ಣಿಗೂ ಕಾಣಿಸಿಕೊಳ್ಳದೇ ನಿಗೂಢವಾಗಿದ್ದ ಈ ಪ್ರಾಣಿ, ಕಾಡು ಬಿಟ್ಟು ನನ್ನ ತೋಟಕ್ಕೆ ಬರಲು ಕಾರಣವೇನಿರಬಹುದೆಂದು ಚಿಂತಿಸುತ್ತಾ ಹಾಸಿಗೆಯ ಮೇಲೆ ಮಲಗಿದೆ. ಹಾಗೆಯೇ ಅದರ ಆಹಾರ ಪದ್ಧತಿಗಳನ್ನು ಜ್ಞಾಪಿಸಿಕೊಳ್ಳತೊಡಗಿದೆ. ಮಲಬಾರ್ ಸೀವೆಟ್ ಕೆಲ ಚಿಕ್ಕ ಪ್ರಾಣಿಗಳನ್ನೂ, ಮೊಟ್ಟೆಗಳನ್ನೂ ಇಷ್ಟಪಟ್ಟು ತಿನ್ನುತ್ತದೆಂದು ಎಲ್ಲೋ ಓದಿದ್ದು ನೆನಪಾಯಿತು. ಸಂಜೆ ಹೆಗ್ಗಾಲುವೆಯ ಬಳಿ ಕಟ್ಟ ಹಾಕಲು ಹೋಗಿದ್ದಾಗ ಒಂದೆರಡು ಹುಂಡುಕೋಳಿಗಳು ಸರ‍್ರೆಂದು ಸದ್ದು ಮಾಡುತ್ತಾ, ನನ್ನನ್ನೇ ಗಾಬರಿಗೊಳಿಸಿ ಓಡಿಹೋಗಿದ್ದವು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ವೇಣುಗೋಪಾಲ್ ಗಾಂವ್ಕರ್ ಕತೆ ‘ಅಡಿಯಪ್ಪ ಮತ್ತು ಸಿವೆಟ್’

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ