Advertisement

Month: April 2026

ಧಮನಿ-ಧಮನಿಯೊಳಗೇನಿದು ಮಾಯೆ!: ಕ್ಷಮಾ ವಿ.ಭಾನುಪ್ರಕಾಶ್ ಕಥಾ ಸರಣಿ

“ಕಾವ್ಯಕ್ಕಾ, ಗಿಡಗಳ ಒಳಗೆ ಇರೋ ಆಹಾರವಾಹಕ – ಜಲವಾಹಕಗಳ ಹಾಗೆ ನಮ್ಮೊಳಗೆ ಇರೋ ‘ಪೈಪ್’ಗಳ ಬಗ್ಗೆ ತಿಳ್ಸ್ತೀನಿ ಅಂದಿದ್ಯಲ್ಲ?” ಎಂದಳು. “ಜಾಣೆ ವಿಭಾ, ಮರ್ಯೋದೇ ಇಲ್ಲ ಅಲ್ವಾ? ಹೇಳ್ತೀನಿ ಕೇಳು. ಏನ್ಮಾಡೋದು, ನಾವು ಗಿಡ ಮರಗಳ ಹಾಗೆ ನಮ್ಮೊಳಗೇ ‘ಬೆಳಕಡುಗೆ’ ಅಂದ್ರೆ ‘ಫೋಟೋಸಿಂಥೆಸಿಸ್’ ಮಾಡಿ ಆಹಾರ ತಯಾರು ಮಾಡ್ಕೊಳ್ಳಕ್ಕಾಗಲ್ವಲ್ಲ? ಅದಕ್ಕೆ ದಿನವಿಡೀ ಅಡುಗೆ-ತಿಂಡಿ ಅದೂ ಇದೂ ಅಂತ ಮಾಡ್ತಾ ಇರ್ಬೇಕು!” ಎಂದು ಮಾತು ಮುಂದುವರಿಸುವಾಗ ವಿಭಾ “ಹೇ ಹೋಗಕ್ಕಾ! ನಮ್ಮೊಳಗೇ ನಾವು ಗಿಡಗಳ ಹಾಗೆ ಊಟ ರೆಡಿ ಮಾಡಿಕೊಂಡ್ಬಿಟ್ರೆ, ರುಚಿಯಾದ ಚುರುಮುರಿ, ಪಾನಿಪೂರಿ ಎಲ್ಲಾ ಮಿಸ್ ಆಗಲ್ವಾ? ನೀನೊಳ್ಳೆ! ಇವಾಗಿರೋದೇ ಸರಿಯಾಗಿದೆ ನೋಡು!” ಎಂದಳು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ಎರಡನೆಯ ಕತೆ

Read More

ಡಾ. ದಿಲೀಪ್‌ ಎನ್ಕೆ ಬರೆದ ಈ ಭಾನುವಾರದ ಕತೆ “ಭೈರೂಪ”

ಎದ್ದು ಬಿದ್ದು ತಕಥೈ ಕುಣಿದು, ನೆಗೆದು, ಹತ್ತಿರ ಸುಳಿದು ಒಂದೊಂದೂ ಒಂದೊಂದು ಆತ್ಮಗಳಂತೆ ಪೀಡಿಸುತ್ತಿರುವ ವಂದನಾಳ ಬಟ್ಟೆಬರೆಗಳು, ದಿನೋಪಯೋಗಿ ವಸ್ತುಗಳು, ಆಕೆಯ ಸಹಜವಾದ ವಿವಿಧ ಭಂಗಿಗಳು…… ತಲೆಯನ್ನು ಆ್ಯಸಿಡ್‌ಗೆ ಅಜ್ಜಿದಂತೆ. ಅಸಂಖ್ಯ ಸುತ್ತಿಗೆಗಳು ಹೃದಯಕ್ಕೆ ಗುಕ್ಕು ಗುಕ್ಕನೆ ಗುದ್ದಿದಂತೆ. ಯಪ್ಪಾ… ಎನ್ನುತ್ತಾ ರೆಪ್ಪೆಯನ್ನು ಬಿಗಿಹಿಡಿದು ಅಭಿ ಹೊರಳಾಡಿದ. ಆದರೇನು? ವಂದನಾಳ ಮಾತುಕತೆಗಳು, ನಗು-ರಾಗ-ರಗಳೆಗಳು ಈ ಎಲ್ಲಕ್ಕೂ ರೆಕ್ಕೆ ಬಂದು ಅವು ಅಭಿಯ ಸುತ್ತ ಗಸ್ತು ಹೊಡೆಯುತ್ತಲೇ ಇದ್ದವು.
ಡಾ. ದಿಲೀಪ್‌ ಎನ್ಕೆ ಕತೆ “ಭೈರೂಪ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಛಡಿ ಚಂ ಚಂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಗಂಟಲಿನಿಂದ ಅದೆಷ್ಟೇ ಉಸಿರೆಳೆದರೂ, ನಾಲಗೆಯನ್ನು ಹೊರಳಿಸಿ ಉರುಳಿಸಿದರೂ ಊಹೂಂ, ಹಾಲು ಹಣ್ಣು ಬರಲೊಲ್ಲದು. ಅವರೂ ಹಿಡಿದ ಪಟ್ಟು ಬಿಡುವಂತೆ ಕಾಣಲಿಲ್ಲ. ಪಕ್ಕದಲ್ಲಿ ಪುಂಡಿ ಸೊಪ್ಪನ್ನು ಬಿಡಿಸಿಟ್ಟಿದ್ದರು. ಆ ಪುಂಡಿ ಕೋಲು ದಪ್ಪವಾಗಿರುತ್ತದೆ. ಮುಂದೇನು ಆಗಿರಬಹುದು ಹೇಳಿ? ಅನುಮಾನವೇ ಬೇಡ, ಬೆನ್ನಿಗೆ ಎರಡೇಟು ಬಾರಿಸಿದರು. ಚುರ್ ಎಂದು ಬಿದ್ದ ಏಟಿಗೆ ಕಣ್ಣಲ್ಲಿ ನೀರು ಜಿನುಗಿಸಿತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಏಳನೆಯ ಕಂತು

Read More

ಪುಸ್ತಕ ಪ್ರಕಟಣೆಯ ಪ್ರಸಂಗಗಳು: ಎಚ್. ಗೋಪಾಲಕೃಷ್ಣ ಸರಣಿ

ಪುಸ್ತಕಕ್ಕೆ ಹೆಸರು ಇಡಬೇಕಿತ್ತಲ್ಲ. ಮುಖಪುಟ ಬರೆದಾಗ ಪುಸ್ತಕದ ಹೆಸರೂ ಕೊಟ್ಟರೆ ಕಲರ್ ಕಾಂಬಿನೇಷನ್‌ಗೆ ಉತ್ತಮ ಎನ್ನುವ ಅಭಿಪ್ರಾಯ ಬಂದಿತ್ತು. ನನ್ನ ಕತೆಗಳ ಹಸ್ತಪ್ರತಿಯ ಒಂದು ಕತೆ ಹೆಸರು ವೈಶಾಖ ಎಂದು. ಈಗಾಗಲೇ ಚದುರಂಗ ಅವರು ವೈಶಾಖ ಎನ್ನುವ ಕಾದಂಬರಿ ಬರೆದು ಅದು ಪ್ರಖ್ಯಾತವಾಗಿತ್ತು. ನನ್ನ ಸಂಕಲನಕ್ಕೂ ವೈಶಾಖ ಹೆಸರು ಇಟ್ಟರೆ ಓದುಗರು ಕನ್ಫ್ಯೂಸ್ ಮಾಡಿಕೊಳ್ಳುವ ಸಂಭವ ಹೆಚ್ಚಿರುತ್ತೆ ಅನಿಸಿತು. ಆದರೂ ಚದುರಂಗರ ವೈಶಾಖ ಕಾದಂಬರಿಯು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೬ನೇ ಬರಹ ನಿಮ್ಮ ಓದಿಗೆ

Read More

ವಿಫುಲ ರೂಪ ಧಾರಿಣಿ ಹುಡುಕಾಡುತಿದೆ ಮನುಷ್ಯ ಪ್ರೀತಿಗಾಗಿ….: ಡಾ. ರಾಜೇಂದ್ರಕುಮಾರ್  ಕೆ. ಮುದ್ನಾಳ್ ಬರಹ

ಇಂದಿನ ಆಧುನಿಕ ತಂತ್ರಜ್ಞಾನ ಕೃತಕ ಬುದ್ಧಿಮತ್ತೆಯಲ್ಲಿ ನಿಸರ್ಗದ ಚೈತನ್ಯವನ್ನು ನೋಡುವುದನ್ನು ಮರೆತುಬಿಟ್ಟಿದ್ದೇವೆ. ಗುಬ್ಬಿ ಗೂಡು ಕಟ್ಟುವುದನ್ನು,ಸೂರ್ಯೋದಯ ಚಂದ್ರೋದಯಗಳ ನಯನ ಮನೋಹರ ದೃಶ್ಯವನ್ನು, ಕರು ಆಕಳ ಕೆಚ್ಚಲನ್ನು ಹುಡುಕುವ ಹೊತ್ತನ್ನು ಮರೆತುಬಿಟ್ಟಿದ್ದೇವೆ. ಆಕಾಶದಿಂದ ಜಾರುವ ಮಳೆ, ಕಾಮನಬಿಲ್ಲು, ಇಬ್ಬನಿಯ ರೂಪ, ಪ್ರೀತಿ -ವಿರಹಗಳ ನಡುವಿನ ಬಾಂಧವ್ಯ, ಮೌನ ರಹಸ್ಯಗಳ ನಡುವಿನ ವಿಸ್ಮಯ. ಇವುಗಳ ನಡುವಿನ ಪ್ರೀತಿಯನ್ನು ಗಳಿಸುವ, ಬೆಳೆಸುವ, ಉಳಿಸುವ ದಾಹ ನಮ್ಮದಾಗಲಿ ಎಂಬ ಆಶಯ ವಿಫುಲ ರೂಪ ಧಾರಣಿಯದು. ಏಕೆಂದರೆ ‘ದಾರಿ ನೂರಾರಿವೆ ಬಿಡುಗಡೆಯ ಬೆಳಕಿನ ಅರಮನೆಗೆ’ ಎಂಬ ಸಾಲುಗಳು ನಮ್ಮಲ್ಲಿ ಪ್ರೀತಿಯ ಬುಗ್ಗೆ ಚಿಮ್ಮುವಂತಾಗಲಿ.
ಜಿ.ಎಸ್.‌ ಶಿವರುದ್ರಪ್ಪನವರ ಕವಿತೆಗಳನ್ನು ಆಧರಿಸಿದ ‘ವಿಫುಲ ರೂಪ ದಾರಿಣಿ’ ಕಾವ್ಯ ಅಭಿನಯದ ಕುರಿತು ಡಾ. ರಾಜೇಂದ್ರಕುಮಾರ್ ಕೆ. ಮುದ್ನಾಳ್ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ