Advertisement

Month: April 2026

ಸುಧಾ ಆಡುಕಳ ಬರೆದ ಈ ಭಾನುವಾರದ ಕತೆ “ಆರೂವರೆ ಅಡಿಯ ಮನುಷ್ಯ”

ನಾನು ಗುರುವೆಂದು ಭಾವಿಸಿದ ಫುಲೆ ದಂಪತಿಗಳು ಹೇಳಿದ್ದೂ ಇದೇ ಮಾತುಗಳನ್ನು. ಪುಟ್ಟ ಬಾಲಕಿಯರಿಂದ ಹಿಡಿದು, ಮದುವೆಯಾಗಿ ವಿಧವೆಯರಾದ ಹೆಣ್ಣುಗಳವರೆಗೆ ಎಲ್ಲರ ಕೈಯ್ಯಲ್ಲಿಯೂ ಅಕ್ಷರದ ದೀವಿಗೆಯನ್ನು ಹಿಡಿಸಬೇಕೆಂದು ಅವರು ಶ್ರಮಿಸಿದ ಮಾರ್ಗ ನನ್ನೆದುರು ತೆರೆದುಕೊಂಡಿತ್ತು. ಅವರು ಹುಟ್ಟುಹಾಕಿದ ಅರಿವಿನ ಸಸಿಯಿಂದು ಆರೈಕೆಯಿಲ್ಲದೇ ಸೊರಗಿ ಸಾಯುವ ಸ್ಥಿತಿಯಲ್ಲಿತ್ತು. ವಾಸ್ತವ ಸತ್ಯವನ್ನರಿಯಲು ನಾನು ರಾಜ್ಯದ ತುಂಬೆಲ್ಲ ಸಂಚರಿಸತೊಡಗಿದೆ.
ಸುಧಾ ಆಡುಕಳ ಬರೆದ ಕತೆ “ಆರೂವರೆ ಅಡಿಯ ಮನುಷ್ಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ನ್ಯಾಯದೇವತೆಯ ತಕ್ಕಡಿಯಲ್ಲಿ ಹೊಸ, ಹಳೆ ಅಹವಾಲು: ವಿನತೆ ಶರ್ಮ ಅಂಕಣ

ಇದೆಲ್ಲವನ್ನೂ ನೋಡುತ್ತಿರುವಾಗ ಇಗೋ ಜನವರಿ ೨೬ ಬರುತ್ತಿದೆ. ಅಂದು ಆಸ್ಟ್ರೇಲಿಯಾ ಡೇ – ಕ್ಯಾಪ್ಟನ್ ಜೇಮ್ಸ್ ಕುಕ್ ಸಿಡ್ನಿ ಸಮುದ್ರತೀರಕ್ಕೆ ಬಂದು, ಅವನ ಹಡಗು ಅಲ್ಲಿ ಲಂಗರು ಹಾಕಿ, ಓಹೋ ಈ ಜಾಗದಲ್ಲಿ ಯಾರೂ ಮನುಷ್ಯರು ಇಲ್ಲ, ಆದ್ದರಿಂದ ಇದು ತಮಗೆ ಸೇರಿದ್ದು, ಬ್ರಿಟಿಷರಿಗೆ ಸೇರಿದ ನಾಡು, ಎಂದು ಘೋಷಿತವಾದ ದಿನ. ಅಲ್ಲಿಂದ ಹೊಸ ಆಸ್ಟ್ರೇಲಿಯದ ಹುಟ್ಟು, ಬೆಳವಣಿಗೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಉನ್ನತ ವಿಜ್ಞಾನ ಶಿಕ್ಷಣದಲ್ಲಿ ಕನ್ನಡ ಭಾಷೆ: ಡಾ.ಎಲ್.ಜಿ.ಮೀರಾ ಅಂಕಣ

ಮಾತೃ಼ಭಾಷೆ/ಪ್ರಾದೇಶಿಕ ಭಾಷೆಯಲ್ಲಿನ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ – 2020 ಈ ವಿಷಯದಲ್ಲಿ ಹೊಸ ಬಾಗಿಲುಗಳನ್ನು ತೆರೆಯುವ ಸಾಧ್ಯತೆಯನ್ನು ತೋರಿಸಿದೆ. ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾಲಯ (ವಿಟಿಯು)ದ ಉಪಕುಲಪತಿಗಳಾದ ಡಾ.ಕರಿಸಿದ್ಧಪ್ಪನವರ ಮುಂಚೂಣಿಯಲ್ಲಿ ಯಂತ್ರಜ್ಞಾನಗಳ (ಇಂಜಿನಿಯರಿಂಗ್) ವಿಷಯಗಳಲ್ಲಿ ಕನ್ನಡ ವಿಜ್ಞಾನ ಬೋಧನೆಯ ಪ್ರಯತ್ನಗಳು ಪ್ರಾರಂಭವಾಗಿವೆ. ಇಲ್ಲಿನ ಮೊದಲನೆಯ ವರ್ಷದ ಯಂತ್ರಜ್ಞಾನ ಶಿಕ್ಷಣದ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯಪುಸ್ತಕಗಳನ್ನು ಮುತುವರ್ಜಿ ವಹಿಸಿ ತಯಾರಿಸುತ್ತಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಪಾತ್ರ ಪುರಾಣ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಅಕ್ಷರಶಃ ದೀಪವಾರಿದ ಮೇಲಿ ನಿಂಕ ದೀಪದ ಮಲ್ಲಿಯಾದಳು ಶಕುಂತಲೆ. ಅಷ್ಟು ದುರ್ಬಲವೇ ನಮ್ಮ ಪ್ರೇಮ? ಯಾವುದೋ ವಸ್ತುವಿನ ಅವಶ್ಯಕತೆ ಅನಿವಾರ್ಯ ಆಗುವಷ್ಚು? ದಿಕ್ಕುತಪ್ಪಿದಳು, ಏಕಾಂಗಿಯಾದಳು.ಶಕುಂತಲೆಗೆ ದುಷ್ಯಂತನ ಪರಿಚಯವಿತ್ತು.ಸಂಧಿಸಿದ ಕೂಡಲೇ ತನ್ನ ಗುರುತು ಹಿಡಿಯುವನೆಂಬ ಅಪಾರ ಆತ್ಮವಿಶ್ವಾಸವೂ ಇತ್ತು. ಅದಕ್ಕಾಗಿಯೇ, ಅವಳಿಗೆ ದುಷ್ಯಂತ ಗುರುತಿಗಾಗಿಯೇ ಕೊಟ್ಟಿದ್ದ ಉಂಗುರವನ್ನು ಅವಳು ಅಷ್ಟೊಂದು ಮಹತ್ವದ್ದಾಗಿ ಪರಿಗಣಿಸಲೇ ಇಲ್ಲ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಆರನೆಯ ಬರಹ

Read More

ಹಕ್ಕಿಗಳ ವಿವಿಧ ಅಂಗಗಳ ವಿಕಾಸ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಇತರ ಪ್ರಾಣಿಗಳಿಗಿರುವಂತೆ ಪಕ್ಷಿಗಳಿಗೆ ಹಲ್ಲುಗಳಿಲ್ಲ. ಮೇಲ್ದವಡೆ-ಕೆಳದವಡೆ ಸೇರಿ ಕೊಕ್ಕಾಗಿದೆ. ಈ ಕೊಕ್ಕು ಬೇಟೆಯನ್ನು ಹಿಡಿಯಲು ಅಥವಾ ಆಹಾರವನ್ನು ಸೇವಿಸಲು ಮತ್ತು ಆತ್ಮರಕ್ಷಣೆಗಾಗಿ ಬಳಸಲ್ಪಡುತ್ತವೆ. ಉದಾಹರಣೆಗೆ, ಹಲವಾರು ಜಾತಿಯ ಹಕ್ಕಿಗಳಿಗೆ ಕೀಟ, ಹುಳಗಳನ್ನು ತಿನ್ನುವ ಸ್ವಭಾವ. ಆದರೆ ಅವುಗಳನ್ನು ಹಿಡಿಯುವ ವಿಧಾನ ಬೇರೆ ಬೇರೆ. ನೊಣಹಿಡುಕ, ಜೇನುಮಗರೆಗಳು ಹಾರುತ್ತಿರುವ ಕೀಟಗಳನ್ನು ಅಟ್ಟಿಸಿಕೊಂಡು ಹೋಗಿ ಹಿಡಿದರೆ, ಮೈನಾ, ಚಂದ್ರಮುಕುಟಗಳು ನೆಲದ ಮೇಲಿಂದ ಹೆಕ್ಕಿ ತಿನ್ನುತ್ತವೆ ಹಾಗೂ ಮರಕುಟ್ಟಿಗಗಳು ಮರದ ತೊಗಟೆಯನ್ನು ಕುಕ್ಕಿ ಅದರೊಳಗಿಂದ ಕೀಟಗಳನ್ನು ಆರಿಸಿಕೊಳ್ಳುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಹಕ್ಕಿಗಳ ವಿವಿಧ ಅಂಗಗಳ ವಿಕಾಸದ ಕುರಿತ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ