Advertisement

Month: April 2026

ದಾದಾಪೀರ್‌ ಜೈಮನ್‌ ಅನುವಾದಿಸಿದ ಅನಿತಾ ತಂಪಿ ಕವಿತೆ ‘ಪ್ರೇತಂ’

“ಮಣ್ಣಲ್ಲಿ ಈವರೆಗೆ ಹುಟ್ಟಿದ ಎಲ್ಲಾ ಹೆಣ್ಣುಗಳು 
ಮುಖಕ್ಕೆ ಬಣ್ಣ ಬಳಿದುಕೊಂಡು 
ಮುಡಿಗೆ ಮಲ್ಲಿಗೆ ಮುಡಿದುಕೊಂಡು
ವಯ್ಯಾರ ಮಾಡಿಕೊಂಡು 
ದಾರಿಯ ತುಂಬುತ್ತಾ 
ಪ್ರಚಂಡ ಮಹಾಭೋಗಕ್ಕೆ ಆಹ್ವಾನಿಸುವುದನ್ನು ಕಂಡು  
ದಿಗ್ಭ್ರಮೆಗೊಂಡು ಉದ್ರೇಕಗೊಂಡು
ಎಣಿಸಲಾರದಷ್ಟು ತುಟಿಗಳು ಮೊಲೆಗಳು 
ಗುಪ್ತಾಂಗದಿಂದ ಧುಮ್ಮಿಕ್ಕಿ ಬಂದ 
ಅಗಾಧ ನೀರಿನೊಳಗೆ 
ಮುಳುಗಿ, ಮೇಲೆದ್ದು, ಮತ್ತೆ ಮುಳುಗಿ
ಸತ್ತ 
ಉಬ್ಬಿ 
ದಡಕ್ಕೆ ಬಿದ್ದ”- ದಾದಾಪೀರ್‌ ಜೈಮನ್‌ ಅನುವಾದಿಸಿದ ಅನಿತಾ ತಂಪಿ ಕವಿತೆ ‘ಪ್ರೇತಂ’

Read More

“ಭುಜಂಗ”: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕಾಜಾಣ ಹಕ್ಕಿಗಳು ಒಂದು ರೀತಿಯಲ್ಲಿ ಕಾಡಿನ ಕಾವಲುಗಾರರೆಂದೇ ಹೇಳಬಹುದು. ಹಿಂದಿ ಭಾಷೆಯಲ್ಲಿ ಈ ಹಕ್ಕಿಗಳನ್ನು ಕೋತ್ವಾಲ್ ಅಂದರೆ ಪೊಲೀಸ್ ಎಂದೇ ಕರೆಯುತ್ತಾರೆ! ಅಂತೆಯೇ ಭುಜಂಗ ಒಂದು ನಿರ್ಭಯ ಹಕ್ಕಿ; ಎಷ್ಟೋ ಸಾರಿ ಇತರ ಹಕ್ಕಿಗಳು ಹಿಡಿದ ಬೇಟೆಯನ್ನು ಬೆದರಿಸಿ ದರೋಡೆ ಮಾಡುತ್ತವೆ. ಅಲ್ಲದೆ ತಮ್ಮ ತಂಟೆಗೆ ಬಂದ ಯಾವುದೇ ಜೀವಿಯನ್ನೂ ಅಟ್ಟಿಸಿಕೊಂಡು ಹೋಗಿ, ಹೊಡೆದೋಡಿಸುವುದರಲ್ಲಿ ಬಹಳ ನಿಷ್ಣಾತ! ಭುಜಂಗನಲ್ಲಿ ಈ ಎದೆಗಾರಿಕೆ ಮತ್ತು ನಿರ್ಭೀತಿಯ ಗುಣವನ್ನು ಮನಗಂಡಿರುವ, ಎಷ್ಟೋ ಸಣ್ಣಪುಟ್ಟ ದುರ್ಬಲ ಹಕ್ಕಿಗಳು ಅದೇ ಮರದಲ್ಲಿ ತಮ್ಮ ಗೂಡನ್ನು ಕಟ್ಟಿಕೊಂಡು ರಕ್ಷಣೆ ಪಡೆಯುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಭುಜಂಗ ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ಕನಕ ದಾಸರಲ್ಲಿನ ಜೀವನ ವಿವೇಕ ವ್ಯಾಪ್ತಿ; ಕನ್ನಡಿಗರ ಪ್ರಾಪ್ತಿ: ಎಲ್. ಜಿ. ಮೀರಾ ಅಂಕಣ

ಇವತ್ತಿಗೆ ಕನಕದಾಸರು ಹೇಗೆ ಪ್ರಸ್ತುತ ಎಂದು ನಾವು ನೋಡುವುದಾದರೆ, ಜಾತಿ ಕುಲ ಆಚಾರವನ್ನು ಮೀರಿದ ವಿವೇಕ ಮನುಷ್ಯನಿಗೆ ಮುಖ್ಯ ಎಂದು ಅವರು ಹೇಳಿದ ಮಾತು ಎಲ್ಲ ಕಾಲಕ್ಕೂ ಯೋಗ್ಯ. ನಂದಾದೀಪದಂತಹ ಮಾತು ಅದು. ಇಂದಿನ ಸಾವಯವ ಆಹಾರದ ಕಸರತ್ತು ಅವರು ಎಂದೋ ಹೇಳಿದ `ರಾಮಧಾನ್ಯಚರಿತ್ರೆ’ಯನ್ನು ನೆನಪಿಸುವುದಿಲ್ಲವೇ? ಚೆಲುವ ಕನ್ನಡ ನುಡಿಯ ಲಯಗಾರಿಕೆಯನ್ನು ಅರಿತು ಅವರು ಬಳಸಿದ ಪದಗಳು, ಹಾಡಿದ ಪದ್ಯಗಳು ಇಂದು ಗಾದೆ ಮಾತುಗಳಂತೆ ಬಳಕೆಯಾಗುತ್ತಿವೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಬದುಕಿನ ಬಣ್ಣಗಳು: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಆದರೆ ಈ ಸಮುದ್ರವನ್ನು ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಿಲ್ಲ ಅನ್ನುವ ಅರಿವು ನನಗೆ ಯಾವತ್ತೋ ಆಗಬೇಕಿತ್ತು. ಸುಮ್ಮನೆ ದಡದಲ್ಲಿ ಕಾಯುತ್ತಾ ಕುಳಿತೆ. ಅವಳಿಗೆ ಕನಸಿತ್ತು ಸ್ಪಷ್ಟವಾದ ಗುರಿಯಿತ್ತು. ತನ್ನ ಸುತ್ತ ಇರುವ ಮಿತಿಗಳನ್ನು ಮೀರುವ ತುಡಿತವಿತ್ತು. ಅವಳ ಪಾತ್ರ ವಿಶಾಲವಿತ್ತು. ನಾನು ಒಡ್ಡಿದ ಬೊಗಸೆಗೆ ಹೆಚ್ಚು ಹೊತ್ತು ನಿಲ್ಲಲಾರಲು ಅನ್ನುವುದು ಗೊತ್ತಾಗಬೇಕಿತ್ತು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಎಂಟನೆಯ ಬರಹ

Read More

ಅಕ್ಕ ಕೇಳವ್ವ, ನಾನೊಂದು ಕನಸು ಕಂಡೆ!: ಸುಕನ್ಯಾ ಕನಾರಳ್ಳಿ ಅಂಕಣ

ಗಂಡಸು-ಸಮಾಜ ಹೆಣ್ಣಿಗೆ ತನಗೆ ಬೇಕಾದ ಕನಸನ್ನು ಕಾಣಲೂ ಸುಲಭವಾಗಿ ಬಿಡುವುದಿಲ್ಲ. ಅವಳ ತನ್ಮಯತೆಯೂ ಆವನಿಗೆ ಅಪಾಯದಂತೆಯೇ ಕಾಣಿಸುತ್ತದೆ. ಅವನು, ಅವನು ಕಟ್ಟಿದ ಮನೆ, ಅವನಿಂದ ಹುಟ್ಟಿದ ಮಕ್ಕಳು, ಇತ್ಯಾದಿಗಳ ಸುತ್ತಲೇ ಅವಳ ಬದುಕು ಗಿರಕಿ ಹೊಡೆಯುತ್ತಿರಬೇಕು. ಅವಳು ಅದೂ ಇದೂ ಎಂದು ಗೊಣಗೊಣವೆನ್ನುತ್ತಿರಬೇಕು. ಅವನು ಯಾಂತ್ರಿಕವಾಗಿ ಹೂಂಗುಡುತ್ತಾ ಪೇಪರ್ ಓದುತ್ತಲೊ, ಟಿವಿ ನೋಡುತ್ತಲೊ, ಫೋನಿನಲ್ಲಿ ಮಾತಾಡುತ್ತಲೊ ಇರಬೇಕು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿನೈದನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ