”ಬಾಬ್ರಾಯನೇನೋ ಪಾರಾಗಿ ಬಂದ. ಬಂದು ತನ್ನವರು, ತನ್ನ ಜಾತಿಯವರು, ಮತದವರು ಎಂದು ತಿಳಿದುಕೊಂಡವರ ಬಳಿ ಬಂದು ಬಿದ್ದ. ಆದರೆ ಇದೇನು? ಯಾರೂ ಅವನನ್ನು ಕಣ್ಣೆತ್ತಿಯೂ ನೋಡಲಿಲ್ಲ! ಅವನ ದುಃಖ ದುರಂತಗಳನ್ನು ಯಾರೂ ವಿಚಾರಿಸಲಿಲ್ಲ. ಅವನನ್ನು ಮನುಷ್ಯ ಮನುಷ್ಯನೆಡೆಗೆ ನೋಡುವಂತೆಯೇ ನೋಡಲಿಲ್ಲ! ಅವನ ಭುಜದ ಮೇಲೆ ಕ್ರೂಜೆಯ ಚಿತ್ರವನ್ನು ಕಂಡಂತೂ ಎಲ್ಲರೂ ಹಾವನ್ನು ಕಂಡವರಂತೆ ಹೌಹಾರುವವರೇ”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು‘ ಸರಣಿಯ ನಾಲ್ಕನೆಯ ಕಥೆ ಈ ಭಾನುವಾರದ ನಿಮ್ಮ ಓದಿಗಾಗಿ.

 

ಸಹಜ. ನಾವಂತೂ ಸಿಕ್ಕಿಬಿದ್ದು ಮೂರು ದಿವಸ. ಹೇಗಾದರೂ ಇದರಿಂದೊಮ್ಮೆ ನಾವು ಪಾರಾಗಿದ್ದರೆ ಸಾಕಾಗಿತ್ತು.
ಆದರೆ ಪಾರಾಗುವ ಸಂಭವವೇ ನಮಗೆ ಕಂಡು ಬರುವುದಿಲ್ಲ. ನಮ್ಮ ಕೈ ಈವಾಗಲೇ ಗಾಣದುದ್ದಕ್ಕೂ ಸಿಕ್ಕಿಬಿದ್ದಾಗಿದೆ. ಇನ್ನು ಹೊರಗೆ ತೆಗೆಯುವ ಹಾಗೆಯೇ ಇಲ್ಲ.
ಅಲ್ಲಿ ನೋಡಿ. ಬರುವಾಗ ಎಷ್ಟು ಮೆತ್ತಗಾಗಿ ಬಂದಿದ್ದರಲ್ಲ. ನಮ್ಮೊಡನೆಲ್ಲ ಕೈಮುಗಿದು ಬೇಡಿಕೊಂಡಿದ್ದರು. ನಮ್ಮ ಹೋಬಳಿ ಒಡೆಯರ ಕೂಡೆ ಅಂಗಲಾಚಿಕೊಂಡಿದ್ದರು.
ಥೇಟ ದಗಲ್‍ಬಾಜ್, ಇಷ್ಟರ ಮಟ್ಟಿಗೆ ನಮ್ಮನ್ನು ಹೊಂಡದಲ್ಲಿ ಇಳಿಸುತ್ತಾರೆಂತ ನಾನೆಣಿಸಿದ್ದಿಲ್ಲ.
ಅಲ್ಲ –  ಯಾರೂ ಇಂಥ ಕೆಲಸ ಮಾಡಲಿಕ್ಕಿಲ್ಲ. ಒಂದೆರಡು ದಿನವೇ? ಈಗ ಎರಡು ತಿಂಗಳು ಕಳೆದು ಹೋಯಿತು. ಆ ಮುನ್ನೂರು ನಾನ್ನೂರು ಮಂದಿಯನ್ನು ಸಾಕಿದವರೇ ನಾವಲ್ಲವೆ? ಎಷ್ಟು ಖರ್ಚು!ಖರ್ಚಿನ ವಿಚಾರ? ನನ್ನೊಂದು ಅಂಗಡಿಗೇ ಮುನ್ನೂರು ವರಹ ಬರಬೇಕಾಗಿದೆ. ಇನ್ನು ಆ ಜವಳಿಯಂಗಡಿಯವರಿಗೆಲ್ಲ!
ಅವರು ಬೊಬ್ಬೆಯೇ ಹೊಡಿಯುತ್ತಾರೆ. ಪಾಪ!
ಆ ಮಂಡಿ ಮುದ್ದಣ್ಣ ಸೆಟ್ಟರು ಒಬ್ಬರೇ ಈ ತನಕ ಆರುನೂರು ಮುಡಿ ಅಕ್ಕಿ ಒದಗಿಸಿ ಕೊಟ್ಟಿದ್ದಾರಂತೆ!
ಅಕ್ಕಿ – ಬತ್ತ ವಸ್ತ್ರ – ದವಸಧಾನ್ಯ ಎಣ್ಣೆ – ಬೆಲ್ಲ ಇವುಗಳನ್ನೆಲ್ಲ ಎಣಿಸಿಕೊಂಡರೆ ಇದೇನು ಸಾಧಾರಣ ಲೆಕ್ಕಾಚಾರವಲ್ಲ!
ಈ ಲೆಕ್ಕಾಚಾರ ಬಿಡಿ. ನಮ್ಮ ಸಂಕಣ್ಣಾಚಾರಿ ಈ ಎರಡು ತಿಂಗಳಿಂದಲೂ ಇಪ್ಪತ್ತು ಜನರನ್ನು ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾನಲ್ಲ? ಅವನಿಗೂ ಲೆಕ್ಕಾಚಾರವಾಗಲಿಲ್ಲವಂತೆ! ಅಂತೂ ನಾವು ಈ ಹೊರಗಿನವರನ್ನು ನಂಬಿದ್ದೇ ಮೋಸ!

ಸಂಜೆಯ ಹೊತ್ತು. ಇಳಿ ಬೆಳಕಿನ ಸೂರ್ಯನ ಕಿರಣ ಅದೇ ಮುಂದುಗಡೆ ಹರಿಯುತಿದ್ದ ಕಂಡ್ಲೂರು ಹೊಳೆಯ ಕಿನಾರೆಗೆ ತುಸುದೂರ ಒಂದು ದೊಡ್ಡ ಹಡಗು ಲಂಗರು ಹಾಕಿ ನಿಂತಿದ್ದಿತು. ಹಡಗು ಈ ದೇಶದ್ದಲ್ಲ ಪೋರ್ಚುಗೀಸರದ್ದು. ಹದಿನಾರನೇ ಶತಮಾನದಲ್ಲಿ ಈ ಜಿಲ್ಲೆಯ ಕರಾವಳಿಯುದ್ದಕ್ಕೂ ಪೋರ್ಚುಗೀಸ ಹಡಗುಗಳ ಹಲ್ಲೆ ಅವ್ಯಾಹತವಾಗಿ ನಡೆಯುತ್ತ ಇದ್ದಿತ್ತು. ಪದೇ ಪದೇ ಅವರು ಕರಾವಳಿಯ ಪಟ್ಟಣಗಳಿಗೆ ದಾಳಿ ಮಾಡಿ ಲೂಟಿ ಮಾಡುತಿದ್ದುದು ತಪ್ಪಿದ್ದೇ ಅಲ್ಲ. ವಿಜಯನಗರದ ಪ್ರಭುಗಳ ಹತೋಟಿ ಅವರ ಮೇಲೆ ಬಿಗಿಯಾಗಿದ್ದಾಗಲೆಲ್ಲ ಅವರು ಬಹಳ ಮೆತ್ತಗಾಗಿರುತ್ತಿದ್ದರು. ಅದು ಸಡಿಲಾದಂತೆ ಕಾಲಕ್ರಮೇಣ ಅವರ ದಬ್ಬಾಳಿಕೆಯೂ ಅತಿಕ್ರಮಿಸತೊಡಗಿತು. ಗೋವೆಯಲ್ಲಿ ತಳವೂರಲು ವಿಜಯನಗರದರಸರು ಅನುಮತಿ ಕೊಟ್ಟದ್ದೇ ಈ ರಾಜ್ಯಕ್ಕೊಂದು ವಿಷವಾಯಿತು. ಆ ಸುಸಜ್ಜಿತ ಬಂದರದಿಂದ ಅವರು ಪದೇ ಪದೇ ತಮ್ಮ ಹಡಗು ಪಡೆಗಳನ್ನು ಸಮುದ್ರದ ಸುತ್ತೆಲ್ಲ ಅಟ್ಟಿ ಎಲ್ಲರಿಗೂ ಪೀಡೆ ಕೊಡುತ್ತಿದ್ದರು.

ಎಲ್ಲದಕ್ಕಿಂತಲೂ ಹೆಚ್ಚಾಗಿ ಅವರ ಧಾರ್ಮಿಕ ದಬ್ಬಾಳಿಕೆ ಮತ್ತು ಮತಾಂತರಗಳಿಂದಾಗಿ ಗೋವೆಯ ಜನಾಂಗವೇ ಊರುಬಿಟ್ಟು ಓಡಬೇಕಾಯಿತು. ಅಲ್ಲಿಯ ಕೊಂಕಣಸ್ಥರು ತಮ್ಮ ಮನೆ ಮಠಗಳ ಜಿಂದುಗೆಗಳನ್ನು ಹೊತ್ತುಕೊಂಡು ಅಕ್ಕಪಕ್ಕದ ಊರುಗಳಿಗೆ ವಲಸೆ ಹೊರಟರು. ಹೀಗಾಗಿ ಕಾರವಾರದಿಂದ ತೊಡಗಿ ಕೊಚ್ಚಿಯ ತನಕವೂ ಈ ವ್ಯಾಪಾರೀ ಜನಾಂಗ ಹರಡತೊಡಗಿತು. ಅದೇ ರೀತಿ ಅವರು ಪೋರ್ಚುಗೀಸರ ಕೈಯಿಂದ ಪಡೆದ ಹಾನಿ ಹಾವಳಿಯಾದರೂ ಅಲ್ಪವಾದುದಲ್ಲ. ಮನೆಮಾರುಗಳನ್ನೆಲ್ಲ ಗೋವೆಯಲ್ಲಿ ಬಿಟ್ಟುಬಂದ ಅವರ ಸ್ಥಿತಿಯಾದರೂ ಶೋಚನೀಯ. ಇನ್ನುಳಿದ ಹಲವು ಮಂದಿ ಅವರ ಬಲಾತ್ಕಾರದಿಂದಾಗಿ ಮತಾಂತರಹೊಂದದೆ ನಿರ್ವಾಹವಿಲ್ಲದೆ ಹೋಯಿತು. ಹೀಗೆ ಪೋರ್ಚುಗೀಸರ ಸಾಮ್ರಾಜ್ಯದಾಹಕ್ಕಿಂತಲೂ ಧರ್ಮಪೀಡೆಯೇ ಪ್ರಬಲವಾಗತೊಡಗಿತು.

ಈ ಜಿಲ್ಲೆಯ ಹಲವು ಆಳರಸರು ಪೋರ್ಚುಗೀಸರನ್ನು ಸದೆಬಡಿದು ಹಾವಳಿಯಡಗಿಸಲು ಯತ್ನಿಸಿದರೂ ಅದು ಕೈಸಾಗಲಿಲ್ಲ. ಒಂದನೆಯದಾಗಿ ಈ ಚಿಕ್ಕ ಪುಟ್ಟ ಅರಸರಲ್ಲಿ ಹೊಗೆಯಾಡುತಿದ್ದ ಪರಸ್ಪರ ವೈಷಮ್ಯವು ಒಂದು ಕಾರಣ. ಎರಡನೆಯದಾಗಿ – ಆ ಫರಂಗಿಗಳಲ್ಲಿದ್ದ ಸೈನಿಕ ಶಿಸ್ತು – ಉತ್ತಮವಾದ ಯುದ್ಧೋಪಕರಣ ನೌಕಾಯುದ್ಧದ ನೈಪುಣ್ಯ. ಇವುಗಳಿಂದಾಗಿ ಹಲಹಲವು ತಡವೆ ಈ ದೇಶೀಯರು ಅವರನ್ನು ಹಿಂದಕ್ಕಟ್ಟಿದರೂ ಅವರು ಮತ್ತೂ ಮತ್ತೂ ಮೇಲೆ ಬಿದ್ದು ಬರುತಿದ್ದರು. ಅವರು ಸಮುದ್ರದಲ್ಲೆ ಹಡಗುನಿಲ್ಲಿಸಿ ದೂರಗುರಿಯ ಫಿರಂಗಿಗಳಿಂದ ಗುಂಡಿನ ಮಳೆ ಸುರಿದಾಗ ಕರಾವಳಿಯ ಎಲ್ಲಾ ಪಟ್ಟಣಗಳೂ ತತ್ತರಿಸುತ್ತಿದ್ದುವು. ಆದುದರಿಂದಲೇ ಸಾಮಾನ್ಯವಾಗಿ ಎಲ್ಲಾ ಅರಸರೂ ಅವರ ಕೂಡೆ ಕಲಹ ಹೂಡದೆ ಅವರ ವಾಂಛಿತದಂತೆ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡುವ ಕರಾರು ಮಾಡಿಕೊಂಡಿದ್ದರು.

ಸಂಜೆಯ ಹೊತ್ತು. ಇಳಿ ಬೆಳಕಿನ ಸೂರ್ಯನ ಕಿರಣ ಅದೇ ಮುಂದುಗಡೆ ಹರಿಯುತಿದ್ದ ಕಂಡ್ಲೂರು ಹೊಳೆಯ ಕಿನಾರೆಗೆ ತುಸುದೂರ ಒಂದು ದೊಡ್ಡ ಹಡಗು ಲಂಗರು ಹಾಕಿ ನಿಂತಿದ್ದಿತು. ಹಡಗು ಈ ದೇಶದ್ದಲ್ಲ ಪೋರ್ಚುಗೀಸರದ್ದು. ಹದಿನಾರನೇ ಶತಮಾನದಲ್ಲಿ ಈ ಜಿಲ್ಲೆಯ ಕರಾವಳಿಯುದ್ದಕ್ಕೂ ಪೋರ್ಚುಗೀಸ ಹಡಗುಗಳ ಹಲ್ಲೆ ಅವ್ಯಾಹತವಾಗಿ ನಡೆಯುತ್ತ ಇದ್ದಿತ್ತು. ಪದೇ ಪದೇ ಅವರು ಕರಾವಳಿಯ ಪಟ್ಟಣಗಳಿಗೆ ದಾಳಿ ಮಾಡಿ ಲೂಟಿ ಮಾಡುತಿದ್ದುದು ತಪ್ಪಿದ್ದೇ ಅಲ್ಲ. ವಿಜಯನಗರದ ಪ್ರಭುಗಳ ಹತೋಟಿ ಅವರ ಮೇಲೆ ಬಿಗಿಯಾಗಿದ್ದಾಗಲೆಲ್ಲ ಅವರು ಬಹಳ ಮೆತ್ತಗಾಗಿರುತ್ತಿದ್ದರು.

ಆಗಲಾಗ ಈ ಜಿಲ್ಲೆಯಲ್ಲೂ ಯಾವ ಪ್ರಬಲವಾದ ಆಡಳಿತೆಯೂ ಇದ್ದಿಲ್ಲ. ವಿಜಯನಗರದ ಅರಸರ ಕೊನೆಯ ಕಾಲ ಸನ್ನಿಹಿತವಾಗಿದ್ದುದರಿಂದ ಅವರ ದರ್ಪದ ಕಾವು ಬಹಳವಾಗಿ ತಣ್ಣಗಾಗಿದ್ದಿತು. ಆದುದರಿಂದ ಇಲ್ಲಿಯ ಚಿಕ್ಕ ಚಿಕ್ಕ ಸಂಸ್ಥಾನಿಕರೇ ತಾವು ತಾವೆಂದು ತಲೆಯೆತ್ತುತ್ತಿದ್ದರು. ಆದರೂ ಉಳ್ಳಾಲದ ರಾಣಿ ಅಬ್ಬಕ್ಕ ದೇವಿ ಗಂಗೊಳ್ಳಿಯ ತನಕದ ಕರಾವಳಿಯ ಒಡತಿಯಾಗಿದ್ದು ಅದನ್ನು ಚೆನ್ನಾಗಿ ಕಾದುಕೊಳ್ಳುತಿದ್ದಳು. ಆ ಹದಿನಾರನೇ ಶತಕದ ಪೋರ್ಚುಗೀಸರಿಗೆ ಇಲ್ಲಿ ಏನಾದರೂ ಎದುರಾಡಿದವರಿದ್ದರೆ ಅದು ಆ ಧೀರ ಮಹಿಳೆಯೊಬ್ಬಳೇ ಸರಿ; ಇನ್ನು ಕಲ್ಲಿಕೋಟೆಯ ಝಮೋರಿನ್ನರ ಸಮರ್ಥ ಸೇನಾನಿ ಪೆಕ್ರುಕುಟ್ಟಿ ಈ ಫರಂಗಿಗಳನ್ನು ಕಂಡಕಂಡಲ್ಲೆಲ್ಲ ಬೆನ್ನಟ್ಟುತ್ತಿದ್ದನು.

ಅಂತೆಯೇ ಹದಿನಾರನೇ ಶತಕದ ಮಧ್ಯಕಾಲದಲ್ಲಿ ಪೋರ್ಚುಗೀಸರ ಹಲ್ಲೆಯ ಹಡಗೊಂದು ಬಲಬದಿ ಮುರಿದುಕೊಂಡು ಹಾಯಿ ಹರಿದುಕೊಂಡು ಬಹಳ ದುಸ್ಥಿತಿಯಿಂದ ಕಂಗೆಟ್ಟು ಬಸ್ರೂರಿನ ಬಳಿ ಕಂಡ್ಲೂರಿನ ಹೊಳೆಯ ಅಳಿವೆ ಬಾಯಿಯಲ್ಲಿ ಬಂದುಬಿದ್ದಿತು. ಕಲ್ಲಿಕೋಟೆಯಿಂದ ಝಮೋರಿನ್ನರ ಹಡಗುಗಳು ಅವರನ್ನು ಬೆನ್ನಟ್ಟಿಕೊಂಡು ಬಂದಿದ್ದುವು. ಆ ಕಡೆ ತುಂಬಾ ಲೂಟಿ ಮಾಡಿ ಜನರನ್ನು ಬಲಾತ್ಕರಿಸುತಿದ್ದ ಇದರ ಕಪ್ತಾನ ಮಸ್ಕರೇಂಞನನ್ನು ಹಿಡಿದವರಿಗೆ ಆ ಅರಸು ಐನೂರು ವರಹಗಳ ಬಹುಮಾನವನ್ನು ಸಾರಿದ್ದ. ಈ ಹಡಗು ನುಸುಳಿ ತಪ್ಪಿಸಿಕೊಂಡು ಬಂದಿತು. ಆದರೆ ಉಳ್ಳಾಲದ ರಾಣಿ ಪೋರ್ಚುಗೀಸರಿಗೆ ವಿರುದ್ಧವಾಗಿದ್ದುದರಿಂದ ಅವಳ ರಾಜ್ಯದ ಗಡಿಯಲ್ಲಿ ತಂಗಲು ಈ ಹಡಗು ಹೆದರಿಕೊಂಡಿತು. ಆ ಕಾರಣದಿಂದಲೇ ತನ್ನ ಅಸಹಾಯಕ ಸ್ಥಿತಿಯಲ್ಲೆ ತಲೆಮರೆಸಿಕೊಂಡು ಅದು ಗಂಗೊಳ್ಳಿ ಗಡಿದಾಟಿ, ಬಸ್ರೂರಿಗೆ ಬಂದಿತ್ತು. ಬಸ್ರೂರು ಬಂದರವು ಸೂರಾಲು ತೋಳಹಾರ ದೊರೆಗಳ ಅಧೀನವಿದ್ದು ಆ ಸಮಯದಲ್ಲಿ ತೋಳಹಾರರಿಗೂ ಪೋರ್ಚುಗೀಸರಿಗೂ ನಡೆದ ಒಂದು ಒಪ್ಪಂದಕ್ಕನುಗುಣವಾಗಿ ಅವರ ಹಡಗುಗಳಿಗೆ ಅಗತ್ಯವಿರುವ ದುರಸ್ತಿ ಮತ್ತು ಸಾಮಾನು ಸಲಕರಣೆಗಳ ಖರೀದಿ ಬಗ್ಗೆ ಸಹ ನಿಲ್ಲಲು ಅವಕಾಶಕೊಟ್ಟುದರಿಂದ ಈ ಹಡಗೂ ಹೊಕ್ಕಿ ಲಂಗರು ಹಾಕಿತು. ಇದಕ್ಕೆ ಬಸ್ರೂರಿನ ಕೋಟೆಯ ಕೊತ್ತವಾಳರು ಸಹಜವಾಗಿಯೇ ಅನುಮತಿ ಕೊಟ್ಟರು.

ಹಡಗು ಎಷ್ಟು ನಾದುರಸ್ತಿಯಾಗಿತ್ತೆಂದರೆ ಆ ಬಗ್ಗೆ ಅದು ಎರಡು ತಿಂಗಳುಗಳೂ ಮಿಕ್ಕಿ ಅಲ್ಲೇ ಉಳಿಯಬೇಕಾಯಿತು. ಈ ದೀರ್ಘಾವಧಿಯ ಇರುವಿಕೆಗೆ ಬೇಕಾಗುವ ಸಾಮಾನು ಸರಂಜಾವು ಅಕ್ಕಿ ಕಾಳು ಬೇಳೆ – ಈ ಬಗ್ಗೆ ಕಪ್ತಾನ್ ಮಸ್ಕರೇಂಞ ಪಟ್ಟಣ ಸೆಟ್ಟರ ಬಳಿಬಂದು ಕೇಳಿಕೊಂಡ. ಹೋಬಳಿ ಒಡೆಯರ ಬಳಿಗೂ ಹೋಗಿ ಸಹಾಯ ಯಾಚಿಸಿದ. ವಸ್ತು ಸ್ಥಿತಿಯಲ್ಲಿ ಆ ಬಂದರಿನ ವ್ಯಾಪಾರ ಬಹಳವಾಗಿ ಹಿಂದೆ ಬಿದ್ದಿತ್ತು. ಊರೊಳಗೆ ಬೆಳೆಯೂ ಮಳೆಯ ಅಭಾವದಿಂದಾಗಿ ಕೆಟ್ಟಿತ್ತು. ಜನರ ಕೈಯೊಳಗೆ ಯಾವ ಲೇವಾದೇವಿಯ ಬಗ್ಗೆಯೂ ಹಣಕಾಸು ತಿರುಗುತ್ತಿದ್ದಿಲ್ಲ. ಅಷ್ಟೂ ಮುಗ್ಗಟ್ಟು. ಇಂತಹ ಸಂದರ್ಭದಲ್ಲಿ ಅಕಸ್ಮಾತ್ ಒಂದು ಪರದೇಶದ ಹಡಗು ಬಂದು ನಿಂತು ತನ್ನ ಮುನ್ನೂರಕ್ಕೂ ಮಿಕ್ಕಿದ ಜನರ ಬಗ್ಗೆ ಖರೀದಿ ಸಾಮಾನು ಕೇಳುವಾಗ ಯಾವನಿಗೆ ತಾನೇ ಸಂತೋಷವಾಗದೆ ಹೋದೀತು? ಸ್ವಲ್ಪ ಹೆಚ್ಚಿನ ಬೆಲೆಗೇ ಬೇಕಾದ ಸಾಮಾನುಗಳನ್ನು ಪಡೆಯಲು ಹಡಗಿನ ಕಪ್ತಾನ ಒಪ್ಪಿಕೊಂಡ, ಆದರೆ ಹಣದ ಪಾವತಿಯ ಬಗ್ಗೆ ಎರಡು ತಿಂಗಳುಗಳ ವಾಯಿದೆ ಬೇಕೆಂದು ಕೇಳಿಕೊಂಡ. ಬರೆ ಎರಡು ತಿಂಗಳು ಕಳೆಯುವುದರಿಂದ ಏನು ತೊಂದರೆ? – ಎಂದು ಊರಿನ ಮಾರಾಟಗಾರರು ಎಣಿಸಿಕೊಂಡರು. ಸಾಹುಕಾರರು ಹಡಗಿನವರಿಗೆ ಬೇಕಾದ ದವಸ ಧಾನ್ಯಗಳನ್ನು ಒದಗಿಸಿದ್ದು ಮಾತ್ರವಲ್ಲದೆ ಅವರ ದುರಸ್ತಿಯ ಬಗ್ಗೆ ಸಮರ್ಥ ಆಚಾರಿಗಳನ್ನು ಕೂಡಿಸಿಕೊಟ್ಟರು. ಆದರೆ ಯಾರಿಗೂ ಈತನಕ ಹಣ ಪಾವತಿಯಾದುದಿಲ್ಲ. ಏಕೆಂದರೆ ಮೊತ್ತ ಮೊದಲಿಗೇ ಕಪ್ತಾನ ಕೇಳಿಕೊಂಡಿದ್ದ – ಎರಡು ತಿಂಗಳುಗಳ ಮಟ್ಟಿಗೆ ತಡೆದುಕೊಳ್ಳಬೇಕೆಂದು! ಹೀಗಾಗಿ ಇವರ ಮಾತಿನಿಂದಲೇ ಇವರೆಲ್ಲ ಸಿಕ್ಕಿಬಿದ್ದರು!

ಅಂತೂ ಈಗ ಮಾತನಾಡಿ ಏನೂ ಉಪಯೋಗವಿಲ್ಲ. ಈಗ ನಾವು ಅವರ ಕೂಡೆ ಜಗಳ ಮಾಡಿದರೆ ನಮಗೇ ನಷ್ಟ. ಆದುದರಿಂದ ಬಹಳ ಸೌಜನ್ಯದಿಂದಲೇ ವರ್ತಿಸಬೇಕು. ಅಲ್ಲ ನನ್ನದೊಂದು ವಿಚಾರವಿದೆ. ಎರಡು ತಿಂಗಳು ಎಂತ ನಾವು ಒಪ್ಪಿಕೊಂಡದ್ದಾಯಿತು. ಈಗ ಅರುವತ್ತೈದು ದಿನಗಳು ಕಳೆದು ಹೋದವು. ಎಂದ ಮೇಲೆ ನಾವು ಅವರೊಡನೆ ಮುಖತಃ ಮಾತನಾಡುವುದೇ ಉತ್ತಮ.

ಏಕೆ? ನಾನು ಈ ದಿನ ಸಾಮಾನಿಗೆ ಬಂದ ಅವರ ಆಳಿನೊಡನೆ ಹೇಳಿಕಳುಹಿಸಿದ್ದೇನೆ. ಹಾಗೆಲ್ಲಾ ಹೇಳಿ ಕಳುಹಿಸಿ ಪ್ರಯೋಜನವಿಲ್ಲ. ಈಗ ಅವರ ಕೈ ಮೇಲಾಗಿದೆ. ಹಾಗಾದರೆ ಬೇಡ. ನಾವು ಕೋಟೆಯವರೊಡನೆ ಏಕೆ ದೂರು ಕೊಡಬಾರದು?

ಕೋಟೆಯವರೊಡನೆ ಕೇಳಿ ನಾವು ಈ ವ್ಯಾಪಾರ ತೊಡಗಿದ್ದೇವೆಯೆ? ಈಗ ಅವರೊಡನೆ ಕೇಳಿಕೊಂಡರೆ ನಿಮ್ಮ ಪಾಡಿಗೆ ನೀವು ಎಂತ ಹೇಳಿಯಾರು. ಅದೂ ಅಲ್ಲದೆ ಸೂರಾಲರಸರಿಗೂ ಪೋರ್ಚುಗೀಸರಿಗೂ ಸ್ನೇಹಾಚಾರವಿದೆ. ಆದುದರಿಂದ ಕೊತ್ತವಾಳರು ನಮ್ಮ ಈ ದೂರನ್ನು ತೆಗೆದುಕೊಂಡು ಹಡಗಿನವರೊಡನೆ ಕಲಹ ಮಾಡಲು ತಯಾರಿರಲಿಕ್ಕಿಲ್ಲ. ಅಂತೂ ಹೇಗೆ ಮಾಡಿದರೂ ಈ ಸಂದರ್ಭವೇನೂ ಸುಖವಾಗಿಲ್ಲ!

ಬಸ್ರೂರು ಪೇಟೆಯ ಮಧ್ಯೆ ಗೋಳಿಕಟ್ಟೆಯ ಮೇಲೆ ಕುಳಿತು ಪೇಟೆಯ ಮುಖಂಡರು ಮಾತಾಡುತ್ತಿದ್ದರು. ಇಷ್ಟು ಮಾತಾಡಿಯೂ ಏನು ಮಾಡಬೇಕೆಂದು ನಿರ್ಧಾರವಾಗದುದರಿಂದ ಎಲ್ಲರೂ ನಿಸ್ತೇಜರಾಗಿಯೇ ಕುಳಿತು ತಮ್ಮ ಕಣ್ಣ ಮುಂದಕ್ಕೆ ಹೊಳೆಯಲ್ಲಿ ಕಾಣುತ್ತಿರುವ ಹಡಗನ್ನೇ ನೋಡುತ್ತಿದ್ದರು. ಅಂದು ಎರಡು ತಿಂಗಳುಗಳ ಹಿಂದೆ ಬಂದ ಹಡಗೆಲ್ಲಿ – ಈ ಹಡಗೆಲ್ಲಿ! ಯಾರಿಗೂ ಆಶ್ಚರ್ಯವಾಗಬಹುದು. ಹೊಸಪಕ್ಕೆ ಹೊಸ ಚುಕ್ಕಾಣಿ – ಹೊಸ ಕೂವೆಮರ – ಹೊಸ ಹಾಯಿ. ಎಲ್ಲಾ ಹೊಸತು ಹಾಕಿದ್ದರಿಂದ ಹಡಗೇ ಹೊಸತಾಗಿ ಕಂಡು ಬರುತಿದ್ದಿತು. ಹೊಸತಾಗಿ ಎಣ್ಣೆ ಹಚ್ಚಿ ಮಾಲೀಸು ಮಾಡಿದ್ದರಿಂದ ಅದು ನೀರಿನ ಏರಿಳಿತಗಳಲ್ಲಿ ಸೂರ್ಯ ಪ್ರಕಾಶಕ್ಕೆ ಚಕಚಕನೆ ಹೊಳೆಯುತಿದ್ದಿತು.

ಎಷ್ಟು ಚಂದ ಹಡಗು?
ಜನರೂ ಅಷ್ಟೆ ಮಂದಿಯಿದ್ದಾರೆ. ಎಲ್ಲಾ ಸಿಪಾಯಿಗಳು. ಸಾಧಾರಣಕ್ಕೆ ಅದನ್ನು ಎದುರಿಸುವ ಹಾಗಿಲ್ಲ.
ಆದುದರಿಂದಲೇ ತೆಂಕಲಾಗಿನಿಂದ ಬಚಾವಾಗಿ ಬಂದಿದೆ! ಅದು ಸಾಯಲಿ – ನಾವು ಬಚಾವಾಗುವ ವಿಚಾರ ಏನಾದರೂ ಇದ್ದರೆ ಹೇಳಿರಿ ನೋಡುವ.
ಪುನಃ ನಿಶ್ಶಬ್ದ!
ಸ್ವಲ್ಪ ಹೊತ್ತಿನ ಮೇಲೆ ಪಟ್ಟಣ ಸೆಟ್ಟರು ಹೇಳಿದರು – ನಾನು ಹೇಳುವದಾದರೆ ಒಂದು ಭಲೇ ಜನ ಅವರ ಬಳಿಗೆ ಕಳುಹಿಸಬೇಕು. ನಮ್ಮ ಹಾಲು ಹವಾಲೆ ಚೆನ್ನಾಗಿ ಹೇಳಬೇಕು. ಹಾಗೆಂದರೇನು? ಅವರೂ ಮನುಷ್ಯರಲ್ಲವೆ?
ಹೌದು ಭಲೇ ಮನುಷ್ಯನೆಂದರೆ ನಮ್ಮ ಹಾಗೆ ಮಾತುಬಾರದವರು ಪ್ರಯೋಜನವಿಲ್ಲ. ನಮ್ಮ ಮಾತು ಅವರಿಗೆ ಅರ್ಥವಾಗುವುದಿಲ್ಲ. ಅವರದ್ದು ನಮಗಾಗುವದಿಲ್ಲ. ಇನ್ನು ಅವರೊಟ್ಟಿಗಿರುವ ಅವರ ಜಾತಿಗೆ ಸೇರಿದ ನಮ್ಮವರನ್ನು ನಂಬುವುದೇ ಕಷ್ಟ. ಇದಕ್ಕೇನು ಮಾಡುವುದು?

ಹದಿನಾರನೇ ಶತಕದ ಮಧ್ಯಕಾಲದಲ್ಲಿ ಪೋರ್ಚುಗೀಸರ ಹಲ್ಲೆಯ ಹಡಗೊಂದು ಬಲಬದಿ ಮುರಿದುಕೊಂಡು ಹಾಯಿ ಹರಿದುಕೊಂಡು ಬಹಳ ದುಸ್ಥಿತಿಯಿಂದ ಕಂಗೆಟ್ಟು ಬಸ್ರೂರಿನ ಬಳಿ ಕಂಡ್ಲೂರಿನ ಹೊಳೆಯ ಅಳಿವೆ ಬಾಯಿಯಲ್ಲಿ ಬಂದುಬಿದ್ದಿತು. ಕಲ್ಲಿಕೋಟೆಯಿಂದ ಝಮೋರಿನ್ನರ ಹಡಗುಗಳು ಅವರನ್ನು ಬೆನ್ನಟ್ಟಿಕೊಂಡು ಬಂದಿದ್ದುವು. ಆ ಕಡೆ ತುಂಬಾ ಲೂಟಿ ಮಾಡಿ ಜನರನ್ನು ಬಲಾತ್ಕರಿಸುತಿದ್ದ ಇದರ ಕಪ್ತಾನ ಮಸ್ಕರೇಂಞನನ್ನು ಹಿಡಿದವರಿಗೆ ಆ ಅರಸು ಐನೂರು ವರಹಗಳ ಬಹುಮಾನವನ್ನು ಸಾರಿದ್ದ. ಈ ಹಡಗು ನುಸುಳಿ ತಪ್ಪಿಸಿಕೊಂಡು ಬಂದಿತು. ಆದರೆ ಉಳ್ಳಾಲದ ರಾಣಿ ಪೋರ್ಚುಗೀಸರಿಗೆ ವಿರುದ್ಧವಾಗಿದ್ದುದರಿಂದ ಅವಳ ರಾಜ್ಯದ ಗಡಿಯಲ್ಲಿ ತಂಗಲು ಈ ಹಡಗು ಹೆದರಿಕೊಂಡಿತು. ಆ ಕಾರಣದಿಂದಲೇ ತನ್ನ ಅಸಹಾಯಕ ಸ್ಥಿತಿಯಲ್ಲೆ ತಲೆಮರೆಸಿಕೊಂಡು ಅದು ಗಂಗೊಳ್ಳಿ ಗಡಿದಾಟಿ, ಬಸ್ರೂರಿಗೆ ಬಂದಿತ್ತು.

ನನ್ನದೊಂದು ಅಭಿಪ್ರಾಯ. ನಮ್ಮ ಬಾಬ್ರಾಯನನ್ನು ಕಳುಹಿಸಿಕೊಟ್ಟರೆ ಹೇಗೆ?

ಎಲ್ಲರೂ ಒಮ್ಮೆ ಮುಖ ಮುಖ ನೋಡಿಕೊಂಡರು. ನಂತರ ಪಟ್ಟಣ ಸೆಟ್ಟರು – ಆಗಬಹುದಿತ್ತು. ಅವನಿಗೆ ಭಾಷೆ ವ್ಯವಹಾರ ಎಲ್ಲಾ ಗೊತ್ತಿದೆ. ಆದರೆ – ನಾವು ಈ ತನಕವೂ ಅವನನ್ನು ಯಾವುದಕ್ಕೂ ನಮ್ಮ ಕೂಡೆ ಸೇರಿಸಿಕೊಂಡದಿಲ್ಲ. ಈಗ ಈ ತಿಲದಾನಕ್ಕಾಗುವಾಗ ಹೇಗೆ ಮುಂದೆ ಕರೆಯುವುದು? ಅದೇ ಕಷ್ಟ.

ಏನು ಮಾಡುವುದು? ಅಂತೂ ಯಾರಾದರೊಬ್ಬರ ಕುತ್ತಿಗೆಗೆ ತಿಲದಾನ ಕಟ್ಟಲೇಬೇಕಲ್ಲ? ಎಂದ ಮೇಲೆ ಯೋಚಿಸಿ ಪ್ರಯೋಜನವಿಲ್ಲ. ಈಗ ನಾವೇ ಮುಂದೆ ಕರೆಯಬೇಕು.

ಕಟ್ಟೆ ಪುರಾಣ ಈ ರೀತಿ ಮುಂದುವರಿಯುತಿದ್ದಾಗಲೇ ಬಾಬ್ರಾಯ ರಸ್ತೆಯ ಆ ಕಡೆಯಿಂದ ಬರುತಿದ್ದ. ಸುಮಾರು ಇಪ್ಪತ್ತು ವರ್ಷದ ಹುಡುಗ. ನೀಟವಾಗಿ ಸುಟಿಯಾಗಿದ್ದಾನೆ. ಬಹಳ ಚುರುಕು ಕಣ್ಣು. ತಲೆಕೂದಲು ಕತ್ತರಿಸಿಕೊಂಡಿದ್ದಾನೆ. ಮುಖ್ಯವಾಗಿ ಕಾಣುತಿದ್ದುದು ಅವನ ಬಲ ಭುಜದ ಮೇಲೆ ಅಚ್ಚೊತ್ತಿದಂತಿದ್ದ ಕಿರಿಸ್ತಾನರ ಕ್ರೂಜೆಯ ಚಿತ್ರ! ಆದರೂ ಜನಿವಾರವಿದೆ!

ಅದೇ ಒಂದು ವಿಚಿತ್ರ. ಪ್ರಾಯಶಃ ಅವನ ಜೀವನವೂ ಅಷ್ಟೇ ವಿಚಿತ್ರವೆನ್ನಬೇಕು. ಅವನ ಹುಟ್ಟಿದೂರು ಗೋವೆ. ಗೋವೆಯಲ್ಲಿ ಪೋರ್ಚುಗೀಸರ ಮತಾಂತರದ ಬಲಾತ್ಕಾರ ಪ್ರಯೋಗ ನಡೆದಾಗ ಇವನು ಬರೇ ಹನ್ನೆರಡು ವರ್ಷದವ. ಇವನ ತಂದೆ ವಿನಾಯಕ ಪ್ರಭುವನ್ನು ಅವರು ಬಲಾತ್ಕಾರವಾಗಿ ಮತಾಂತರಗೊಳಿಸಿದರು. ಆದರೆ ಆ ಪುಣ್ಯಾತ್ಮ ಅದೇ ರಾತ್ರಿ ಆತ್ಮಹತ್ಯ ಮಾಡಿಕೊಂಡ. ತಾಯಿ ಬಾವಿಗೆ ಹಾರಿ ಸತ್ತಳು. ಇದ್ದ ಒಬ್ಬಳೇ ಒಬ್ಬಳು ಅಕ್ಕನನ್ನು ಆ ದೈತ್ಯರು ಬಲಾತ್ಕಾರವಾಗಿ ಕೆಡಿಸಿ ಹಾಳುಮಾಡಿದರು. ಆ ದುರಂತ ಚಿತ್ರ ಈಗಲೂ ಇವನ ಕಣ್ಣ ಮುಂದೆ ಕಟ್ಟಿದಂತಾಗಿದೆ. ರಕ್ತಮಯ ಆ ಕೋಮಲ ಕಳೇವರ ಕಳಚಿ ಬೀಳುವ ಮುಂಚೆ ತನ್ನ ಚಿಕ್ಕ ತಮ್ಮನನ್ನು ಕೂಗಿ ಕರೆದು ಹೇಳಿತು. ಬಾಬೂ! ಇದನ್ನೆಂದಿಗೂ ಮರೆಬೇಡ. ಇದರ ಹಗೆ ತೀರಿಸಲು ಉಳಿಯುವವನು ನೀನೊಬ್ಬನೇ! – ಎಂದು.

ಹುಡುಗನನ್ನು ಪಾದ್ರಿಗಳು ಕರೆದುಕೊಂಡು ಹೋಗಿ ತಮ್ಮ ಮಠಕ್ಕೆ ಸೇರಿಸಿದರು. ಅಲ್ಲಿ ಇವನಿಗೆ ಆರು ವರ್ಷಗಳ ವಿದ್ಯಾಭ್ಯಾಸ ಮತಬೋಧ ನಡೆಯಿತು.

ಒಂದು ದಿನ ಕನಸಿನಲ್ಲಿ ರಕ್ತಮಯ ಕಳೇವರವೊಂದು ಕಂಡು ಇವನೊಡನೆ ಹೇಳಿತು – ಬಾಬೂ! ನಾಯಿಯಂತೆ ಎಂಜಲಿನಾಸೆಗೆ ಬಲಿ ಬಿದ್ದೆಯಾ? ಹೊರಡು – ಹೊರಡು! ಒಂದು ಕ್ಷಣವೂ ನಿಲ್ಲಬೇಡ -!

ಹುಡುಗ ಮಧ್ಯರಾತ್ರಿಯಲ್ಲೆ ಎಚ್ಚರಗೊಂಡು ಅಲ್ಲಿಂದ ಹೊರಟೇಬಿಟ್ಟ. ಆದರೆ ಎಲ್ಲಿಗೆ? ಈ ದಾನವರ ಕೈಯಿಂದ ಪಾರಾಗುವುದಾದರೂ ಹೇಗೆ? – ಎಂಬುದು ಯಾವುದೂ ಅವನಿಗೆ ಅರಿಯದು. ಆದರೆ ಕನ್ನಿಕೆಯ ಕೈಯೊಂದು ಅವನಿಗೆ ಬೆರಳು ನೀಡಿ ದಾರಿ ತೋರಿಸುತ್ತಿದ್ದಿತು. ಅವನಂತೆಯೇ ಆ ದೇಶದಿಂದ ಓಡಿಹೋಗುತಿದ್ದ ದೇಶಭ್ರಷ್ಟರ ಗುಂಪಿನೊಡನೆ ಸೇರಿ ತಲೆಮರೆಸಿಕೊಂಡು ಹೇಗಾದರೂ ರಾತ್ರಿವೇಳೆ ಗೋವೆಯ ಗಡಿದಾಟಿ ಕಾರವಾರದ ಗಡಿಗೆ ಬಂದ. ಅಲ್ಲಿಯಾದರು ಪೋರ್ಚುಗೀಸರ ಪಹರೆಯಿದ್ದಿತ್ತು. ನುಸುಳಿದವರ ತಲೆಗೆ ಗುಂಡು ಬೀಳುತ್ತಿದ್ದಿತ್ತು. ಹಲವರು ಸತ್ತರು ಹಲವರು ಸೆರೆಸಿಕ್ಕಿದರು. ಪಾರಾದವರಲ್ಲಿ ಬಾಬ್ರಾಯನೂ ಒಬ್ಬ.

ಬಾಬ್ರಾಯನೇನೋ ಪಾರಾಗಿ ಬಂದ. ಬಂದು ತನ್ನವರು, ತನ್ನ ಜಾತಿಯವರು, ಮತದವರು ಎಂದು ತಿಳಿದುಕೊಂಡವರ ಬಳಿ ಬಂದು ಬಿದ್ದ. ಆದರೆ ಇದೇನು? ಯಾರೂ ಅವನನ್ನು ಕಣ್ಣೆತ್ತಿಯೂ ನೋಡಲಿಲ್ಲ – ಮಾತನಾಡಲಿಲ್ಲ! ಅವನ ದುಃಖ ದುರಂತಗಳನ್ನು ಯಾರೂ ವಿಚಾರಿಸಲಿಲ್ಲ. ಅವನನ್ನು ಮನುಷ್ಯ ಮನುಷ್ಯನೆಡೆಗೆ ನೋಡುವಂತೆಯೇ ನೋಡಲಿಲ್ಲ! ಅಯ್ಯೋ – ಇದೇನು ಆಶ್ಚರ್ಯ? ಎಲ್ಲರೂ ಅವನನ್ನು ಸಂಶಯದಿಂದಲೇ ನೋಡುವವರು – ತಾತ್ಸಾರದಿಂದ ನೋಡುವವರು ಬೇರೆ. ಅವನ ಭುಜದ ಮೇಲೆ ಕ್ರೂಜೆಯ ಚಿತ್ರವನ್ನು ಕಂಡಂತೂ ಎಲ್ಲರೂ ಹಾವನ್ನು ಕಂಡವರಂತೆ ಹೌಹಾರುವವರೇ – ಎಂದ ಮೇಲೆ ಇವನ ಅವಸ್ಥೆಯೇನು?

ಹುಡುಗ ಧೃತಿಗೆಡಲಿಲ್ಲ. ಅವನು ಅಲ್ಲಿ ಬಹುಕಾಲ ನಿಲ್ಲಲಿಕ್ಕೆ ಸಾಧ್ಯವೂ ಆಗಲಿಲ್ಲ. ಅವನು ಹೆಜ್ಜೆ ಮುಂದೆ ಹಾಕಿದ.  ಮುಂದೆ – ಮುಂದೆ ಮತ್ತೂ ಮುಂದೆ! ಹಾಗಾದರೆ ಆ ಹೆಜ್ಜೆಗೆ ಎಲ್ಲಿಯೂ ಸ್ಥಾನವಿಲ್ಲವೆ?

ಹಡಗು ಎಷ್ಟು ನಾದುರಸ್ತಿಯಾಗಿತ್ತೆಂದರೆ ಆ ಬಗ್ಗೆ ಅದು ಎರಡು ತಿಂಗಳುಗಳೂ ಮಿಕ್ಕಿ ಅಲ್ಲೇ ಉಳಿಯಬೇಕಾಯಿತು. ಈ ದೀರ್ಘಾವಧಿಯ ಇರುವಿಕೆಗೆ ಬೇಕಾಗುವ ಸಾಮಾನು ಸರಂಜಾವು ಅಕ್ಕಿ ಕಾಳು ಬೇಳೆ – ಈ ಬಗ್ಗೆ ಕಪ್ತಾನ್ ಮಸ್ಕರೇಂಞ ಪಟ್ಟಣ ಸೆಟ್ಟರ ಬಳಿಬಂದು ಕೇಳಿಕೊಂಡ. ಹೋಬಳಿ ಒಡೆಯರ ಬಳಿಗೂ ಹೋಗಿ ಸಹಾಯ ಯಾಚಿಸಿದ. ವಸ್ತು ಸ್ಥಿತಿಯಲ್ಲಿ ಆ ಬಂದರಿನ ವ್ಯಾಪಾರ ಬಹಳವಾಗಿ ಹಿಂದೆ ಬಿದ್ದಿತ್ತು. ಊರೊಳಗೆ ಬೆಳೆಯೂ ಮಳೆಯ ಅಭಾವದಿಂದಾಗಿ ಕೆಟ್ಟಿತ್ತು. ಜನರ ಕೈಯೊಳಗೆ ಯಾವ ಲೇವಾದೇವಿಯ ಬಗ್ಗೆಯೂ ಹಣಕಾಸು ತಿರುಗುತ್ತಿದ್ದಿಲ್ಲ. ಅಷ್ಟೂ ಮುಗ್ಗಟ್ಟು.

ಬಂದದ್ದೆ ಮೋಸವಾಯಿತು – ಎಂದು ಕೆಲವೊಮ್ಮೆ ಕಾಣತೊಡಗಿತು. ಆದರೂ ಅವನ ತರುಣ ಹೃದಯದಲ್ಲಿ ಉರಿಯುತಿದ್ದ ಪ್ರತೀಕಾರದ ಜ್ವಾಲೆ ಅವನನ್ನು ಹಿಮ್ಮೆಟ್ಟಲು ಬಿಡಲಿಲ್ಲ. ಅವನ ಅಕ್ಕನ ಆ ಕೊನೆಯ ಬಯಕೆಯ ಬೆಂಕಿ ಅವನ ಬೆಂಬತ್ತಿಯೇ ಬಂದಿದ್ದಿತು. ಅದೇ ಸುಡುತ್ತಿದೆ – ನಿರಂತರವೂ ಸುಡುತ್ತಿದೆ. ಅದು ಆ ದೌರ್ಜನ್ಯದ ಖಾಂಡವವನವನ್ನು ಸುಟ್ಟು ಬೂದಿಮಾಡದೆ ಎಂದೂ ತಣ್ಣಗಾಗುವಂತಿಲ್ಲ!

ಕಾರವಾರ – ಅಂಕೋಲೆ, ಹೊನ್ನಾವರ – ಬಟ್ಕಳ ಹಾಗೆಯೇ ಮುಂದೆ ಮುಂದೆ ಹೆಜ್ಜೆ ಹಾಕುತ್ತಾ ಬಂದ. ಕೊನೆಗೆ ಅವನ ಭಾರವಾದ ಹೆಜ್ಜೆ ಬಸ್ರೂರಿನ ಬಳಿಗೆ ಬಂದಿತು. ಎಲ್ಲ ಊರು ಒಂದೇ – ಎಲ್ಲಾ ಜನರೂ ಒಂದೇ -! ಮನುಷ್ಯ ಮನುಷ್ಯನನ್ನು ಒಪ್ಪಿಕೊಳ್ಳುವುದಿಲ್ಲ. ಮತಧರ್ಮಗಳ ಮುಸುಕು – ಸಮಾಜದ ಕೂಡುಕಟ್ಟಿನ ಹಿಸುಕು ಇವು ಎಲ್ಲಿಯೂ ತಪ್ಪಿದ್ದಲ್ಲ. ಗೋವೆಯಲ್ಲಿ ಒಂದು ತರದ ದಬ್ಬಾಳಿಕೆಯಾದರೆ ಇಲ್ಲಿ ಮತ್ತೊಂದು ವಿಧ. ಅದು ಪರಕೀಯರದ್ದಾದರೆ ಇದು ಸ್ವಕೀಯರದ್ದು! ಹಾಗಾದರೆ ಇದಕ್ಕೆ ಅಂತ್ಯವೆಲ್ಲಿ?

ಬಸ್ರೂರಲ್ಲಿ ಸಾಕಷ್ಟು ಕೊಂಕಣಸ್ಥರ ಕೂಟ ಅದಾಗಲೇ ಬಂದು ಸೇರಿ ಬಲವಾಗುತಿದ್ದಿತು. ಬಂದರದ ವ್ಯಾಪಾರ ಅವರ ಕೈಸೇರಿದ್ದಿತು. ಆದುದರಿಂದ ಅನುಕೂಲದ ಮಟ್ಟಿಗೆ ಚೆನ್ನಾಗಿಯೇ ಯಿದ್ದರು. ಅವರ ತಕ್ಕಡಿಯೊಟ್ಟಿಗೆ ಅವರ ಕಾಸು ಬಿಡದ ವೆಂಕಟ್ರಮಣನೂ ಹೊರಟುಬಂದಿದ್ದ! ಬಾಬ್ರಾಯ ಬಸ್ರೂರಿಗೆ ಬಂದು ಒಂದು ವರ್ಷವೂ ಮಿಕ್ಕಿದ್ದಿತು. ಆದರೂ ಅವನೊಡನೆ ಯಾರೂ ಹೊಂದಿಕೊಳ್ಳಲಿಲ್ಲ.

ಅವನ ಆತ್ಮಚರಿತ್ರೆಯ ಬಗ್ಗೆ ಅನುಕಂಪ ಸೂಚಿಸಿದರೂ, ಕರುಣೆಗೂ ಮಿಕ್ಕಿದ ಸಮಾಜ ಕಾರಣ ಅವರೆಲ್ಲರನ್ನು ಅಸಹಾಯಕರನ್ನಾಗಿ ಮಾಡಿದ್ದಿತು. ಅವನ ಪರಕೀಯ ವಿದ್ಯಾಭ್ಯಾಸ, ರೀತಿ ನೀತಿ, ಇವುಗಳೆಲ್ಲಾ ಅವರಿಗೆ ಅಸಮಂಜಸವಾಗಿ ಕಾಣುತ್ತಿದ್ದಿತು. ಎಲ್ಲದಕ್ಕೂ ಹೆಚ್ಚಿನದಾಗಿ ಅವನ ಬಲ ಭುಜದ ಮೇಲೆ ಮೂಡಿದ್ದ ಆ ಕ್ರೂಜೆ ಅವರ ಆತ್ಮೀಯತೆಗೇ ಒಂದು ಸವಾಲು ಹಾಕುತಿದ್ದಿತು.

ಆದರೂ ಬಾಬ್ರಾಯ ಯಾರೊಡನೆಯೂ ನಿಷ್ಟುರವಾಗಿ ನಡೆಯಲಿಲ್ಲ. ಯಾರೊಡನೆಯೂ ವಾದ ಹೂಡಲಿಲ್ಲ, ಬೇಡಲಿಲ್ಲ! ತನ್ನ ಕೈಕಾಲುಗಳ ಬಲದ ಮೇಲೆ ನಂಬಿಕೆಯಿಟ್ಟು ದುಡಿಯುತಿದ್ದ. ಅದು ಯಾವ ಕೆಲಸವೇಯಿರಲಿ ಅದನ್ನು ವಿಶ್ವಾಸದಿಂದ ಮುಗಿಸುತಿದ್ದ. ರಸ್ತೆ ಬದಿಯಲ್ಲಿ ಒಂದು ಜೋಪಡಿಯನ್ನು ತಾನೇ ಕಟ್ಟಿಕೊಂಡಿದ್ದ. ಅದರಲ್ಲೇ ಅವನ ವಾಸ್ತವ್ಯ. ಅದರ ಗೋಡೆಯ ಮೇಲೆ ವೆಂಕಟ್ರಮಣ ದೇವರ ಪಟ. ಅದರ ಮುಂದೆ ಕಾಲುದೀಪ. ಇದು ಅವನ ಆತ್ಮವಿಶ್ವಾಸವನ್ನು ಸೂಚಿಸುತ್ತಿದ್ದಿತು.

ಜನರು ಅದಕ್ಕೂ ಅಂದುಕೊಳ್ಳುತ್ತಿದ್ದರು. ಬಸ್ರೂರಲ್ಲಿ ಆ ಹೊತ್ತಿಗೆ ಕ್ರಿಸ್ತ ಧರ್ಮ ತಳವೂರಿದ್ದಿತು. ಅವರ ಬಗ್ಗೆ ಪೋರ್ಚುಗೀಸರು ಒಂದು ದೇವಾಲಯವ ಕಟ್ಟಲು ತೋಳಹಾರರಿಂದ ಅನುಮತಿಯನ್ನು ಪಡೆದಿದ್ದು ನಿರ್ಮಿಸಿದ್ದರು. ಇಲ್ಲಿಯ ಕ್ರೈಸ್ತ ಜನಾಂಗ ಬಾಬ್ರಾಯನ ಬಗ್ಗೆ ಕುತೂಹಲದಿಂದ ಕಣ್ಣರಳಿಸಿ ಕುಳಿತಿದ್ದಿತು. ನೀನು ಯಾಕೆ ನಮ್ಮ ಸಮಾಜಕ್ಕೆ ಬರಬಾರದೆಂದು ಸೂಚ್ಯವಾಗಿ ಸಲಹೆ ಕೊಡುತಿದ್ದಿತು. ಅಲ್ಲದೆ ಅವನನ್ನು ಬರ್ಸಲೋರ್ ಬಾಬ್ರಾಯನೆಂದೇ ಕರೆಯುತಿದ್ದಿತು. ಪೋರ್ಚುಗೀಸರು ಬಸ್ರೂರನ್ನು ಬರ್ಸಲೋರೆಂದೇ ಕರೆಯುತಿದ್ದರು. ಬಾಬ್ರಾಯನೂ ಇಲ್ಲಿಗೆ ಬಂದ ವೇಳೆ ಈ ಊರನ್ನು ತನ್ನ ವಿದ್ಯಾಭ್ಯಾಸಕ್ಕನುಗುಣವಾಗಿ ಬರ್ಸಲೋರೆಂದೇ ಕರೆಯುತಿದ್ದನು!

ಕಟ್ಟೆಯ ಮೇಲೆ ಕುಳಿತು ಊರ ಹಿರಿಯರು ಮಾತಾಡುತಿದ್ದುದನ್ನು ಬಾಬ್ರಾಯನೂ ಕಂಡನು. ಅವರ ಉದ್ವೇಗ ನಿರಾಶೆಗಳ ಕಾರಣ ಅವನಿಗೆ ಚೆನ್ನಾಗಿ ಗೊತ್ತಿದ್ದಿತು. ಇವನ ಹೃದಯದೊಳಗಣ ಬೆಂಕಿ ಮತ್ತೊಂದು ವಿಧ. ಅದು ಬರೇ ಬೆಂಕಿಯಲ್ಲ – ಹೊಟ್ಟೆಯ ಬೆಂಕಿ!

ಬೀದಿಯಲ್ಲಿ ಬರುತಿದ್ದಾಗ ಹಿರಿಯರೆಲ್ಲರೂ ಅವನನ್ನೇ ನೋಡತೊಡಗಿದರು. ಆ ನೋಟದಲ್ಲಿ ಸೋಲಿನ ಲಕ್ಷಣವಿದ್ದಿತು. ಆದರೆ ಅವನನ್ನು ಯಾರು ಕರೆಯಬೇಕೆಂದು ತಿಳಿಯದೆ ಅಂತೆಯೇ ನಿರುತ್ತರ ಕುಮಾರರಾಗಿದ್ದರು.

ಅವರು ನೋಡುವ ವಿಧದಿಂದ ಬಾಬ್ರಾಯನಿಗೂ, ಇವರಿಗೆ ತನ್ನ ಕೂಡೆ ಏನೋ ಕೇಳುವ ಮನಸ್ಸಿದೆ. ಆದರೆ ಅಂಜುತ್ತಾರೆ. ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ – ಎಂಬ ಹಾಗಿದೆ – ಎನ್ನುವುದು ತಿಳಿಯಿತು. ಆದುದರಿಂದ ತಾನಾಗಿಯೇ ಮುಂದೆ ಬಂದು ನಿಂತ.

ಪ್ರಾಯಶಃ ಅವನ ಜೀವನವೂ ಅಷ್ಟೇ ವಿಚಿತ್ರವೆನ್ನಬೇಕು. ಅವನ ಹುಟ್ಟಿದೂರು ಗೋವೆ. ಗೋವೆಯಲ್ಲಿ ಪೋರ್ಚುಗೀಸರ ಮತಾಂತರದ ಬಲಾತ್ಕಾರ ಪ್ರಯೋಗ ನಡೆದಾಗ ಇವನು ಬರೇ ಹನ್ನೆರಡು ವರ್ಷದವ. ಇವನ ತಂದೆ ವಿನಾಯಕ ಪ್ರಭುವನ್ನು ಅವರು ಬಲಾತ್ಕಾರವಾಗಿ ಮತಾಂತರಗೊಳಿಸಿದರು. ಆದರೆ ಆ ಪುಣ್ಯಾತ್ಮ ಅದೇ ರಾತ್ರಿ ಆತ್ಮಹತ್ಯ ಮಾಡಿಕೊಂಡ. ತಾಯಿ ಬಾವಿಗೆ ಹಾರಿ ಸತ್ತಳು. ಇದ್ದ ಒಬ್ಬಳೇ ಒಬ್ಬಳು ಅಕ್ಕನನ್ನು ಆ ದೈತ್ಯರು ಬಲಾತ್ಕಾರವಾಗಿ ಕೆಡಿಸಿ ಹಾಳುಮಾಡಿದರು. ಆ ದುರಂತ ಚಿತ್ರ ಈಗಲೂ ಇವನ ಕಣ್ಣ ಮುಂದೆ ಕಟ್ಟಿದಂತಾಗಿದೆ.

ಪಟ್ಟಣ ಸೆಟ್ಟರು ಮೆಲ್ಲಗೆ ಹೇಳಿದರು – ಬಾಬ್ರಾಯ …..
ಏನಪ್ಪಣೆ?
ಕೆಲಸವೆಲ್ಲಾ ಕೆಟ್ಟು ಹೋಯಿತಲ್ಲ. ಏನು ಮಾಡುವುದು.
ಹೌದು ನನಗೂ ಅರ್ಥವಾಗಿದೆ. ಅಂದೇ ನನಗೆ ಸಂಶಯವಿದ್ದಿತು. ಇದು ಹೀಗೆಯೇ ಆಗುವುದೆಂದು ಹೇಳಿದ್ದೆ. ಆದರೆ ನೀವುಗಳು –
ನೋಡು ಬಾಬ್ರಾಯ ಅದೆಲ್ಲಾ ಒಂದು ಸಂದರ್ಭ. ಆಗ ನಮ್ಮ ಪರಿಸ್ಥಿತಿಯೂ ಹಾಗೆಯೇ ಇದ್ದಿತ್ತು. ಹಣದ ಮುಗ್ಗಟ್ಟು, ಮಾಲಿಗೆ ಗಿರಾಕಿಯಿಲ್ಲ. ವ್ಯಾಪಾರ ನಡೆಯುವುದಿಲ್ಲ. ಬೆಳೆದು ಬಂದ ಹುಡುಗಿಯನ್ನು ಯಾರ ಕುತ್ತಿಗೆಗಾದರೂ ಕಟ್ಟಬೇಕಲ್ಲ. ಅದಕ್ಕೆ ಸರಿಯಾಗಿ ಈ ಗ್ರಹಚಾರದ ಹಡಗು ಬಂದಿತು. ನಾವು ಅವರನ್ನು ನಂಬಿದೆವು. ಅವರು ಕೇಳಿದರು. ನಾವು ಕೊಟ್ಟೆವು. ನಿನಗೆ ಮೊದಲೇ ಬುದ್ಧಿ ಬಂದಿದ್ದರೆ ನಮಗೆ ಈಗ ಬುದ್ಧಿ ಬಂದಿತು.

ಆಗಲಿ – ಈಗ ಏನು ಮಾಡಬೇಕೆನ್ನುತ್ತೀರಿ? ಜನ ಕಳುಹಿಸಿ ಕೇಳಬಹುದಲ್ಲ?
ಅದನ್ನೇ ಈಗ ಯೋಚಿಸುತ್ತಾ ಯಿದ್ದೇವೆ. ಯಾರ ಯಾರೊಡನೆ ಕೇಳಿ ಏನೂ ಉಪಯೋಗವಿಲ್ಲ.
ಆಗಲಿ. ಅರ್ಥವಾಯಿತು ಪಟ್ಟಣಸೆಟ್ಟರೆ. ನನಗೆ ಅಪ್ಪಣೆ ಕೊಡಿರಿ. ನಾನು ಹೋಗಿ ಬರುತ್ತೇನೆ. ಆದರೆ……
ಆದರೆ ಏನು ಬಾಬ್ರಾಯ? ನಿನ್ನ ಈ ಕೆಲಸವನ್ನು ನಾವು ಎಂದಿಗೂ ಮರೆಯುವುದಿಲ್ಲ. ನಮ್ಮ ನಮ್ಮ ಹಣದಲ್ಲಿ ನಿನಗೂ ……….

ಬೇಡ. ಅದೇನೂ ಬೇಡ ಸ್ವಾಮೀ. ಇದೊಂದು ದೊಡ್ಡ ಜವಾಬ್ದಾರಿಯ ಕೆಲಸ. ನಾನಂತೂ ಬಿಸಿರಕ್ತದ ಹುಡುಗ. ಇದು ಒಳ್ಳೆಯದೂ ಆಗಬಹುದು ಕೆಟ್ಟದೂ ಆಗಬಹುದು. ಹೇಗಿದ್ದರೂ ನಾನು ನನ್ನ ಆತ್ಮಸಾಕ್ಷಿಗೆ ಸರಿಯಾಗಿ ದೇವರು ಬುದ್ಧಿ ಕೊಟ್ಟಂತೆ ಮಾಡುತ್ತೇನೆ. ಹೇಗಾದರೂ ಮಾಡಿ ನಿಮ್ಮ ಹಣ ನಿಮಗೆ ಸಿಗುವಂತೆ ಮಾಡುತ್ತೇನೆ. ಆ ಕಳ್ಳರು ಈ ಊರಿನ ಹಣವನ್ನು ಅಷ್ಟು ಸುಲಭವಾಗಿ ತೆಗೆದುಕೊಂಡು ಹೋಗಬಾರದು. ಆದರೂ ……

ಆದರೂ ಏನಪ್ಪ? ನಿನ್ನ ಮನಸ್ಸಿನಲ್ಲಿದ್ದುದನ್ನು ಬಾಯಿಬಿಟ್ಟು ಹೇಳಿಬಿಡು. ನಾವು ಈ ತನಕ ನಿನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೆಂದು ಬೇಸರ ಮಾಡಬೇಡ. ಅದೆಲ್ಲಾ ನೋಡು ……

ಅದೆಲ್ಲಾ ಹೋಗಲಿ, ಬೇಡ. ಆದರೆ ….. ಎಲ್ಲಿಯಾದರೂ ಈ ಕೆಲಸ ಕೆಟ್ಟುಹೋದರೆ ನನ್ನ ನೆನಪೊಂದು ನಿಮ್ಮೆಲ್ಲರ ಮನಸ್ಸಿನಲ್ಲಿರಲಿ. ಈ ಊರು ಈ ಬಡವನ ಹೆಸರು ಹೇಳುವಂತಾಗಲಿ!

ಕುಳಿತವರಿಗೆಲ್ಲಾ ಮಾತುಕಟ್ಟಿದಂತಾಗಿ ಕಣ್ಣು ತುಂಬಿ ಬಂದಿತು. ಪಟ್ಟಣಸೆಟ್ಟರು ಕುಳಿತಲ್ಲಿಂದ ಜಗ್ಗನೆ ಎದ್ದುನಿಂತು ಬಾಬ್ರಾಯನ ಕೈಹಿಡಿದು ಹೇಳಿದರು – ಬಾಬ್ರಾಯ ಎಲ್ಲಾ ಮರೆತುಬಿಡು. ನಮ್ಮದು ಕುರುಡು ಜನಾಂಗ –  ಅಂಧಃಶ್ರದ್ಧೆ! ಆದರೂ ನಿನ್ನ ಹೆಸರು ಈ ಊರಲ್ಲಿ ಬಹುಕಾಲದ ತನಕವೂ ಉಳಿಯುತ್ತದೆ. ಅದನ್ನು ಯಾರೂ ಮರೆಯುವಂತಿಲ್ಲ! ಇದು ಸತ್ಯ – ಮೂರು ಮಾತಿಗೂ ಸತ್ಯ!

ಬಾಬ್ರಾಯ ಆ ಹಿರಿಯರೆಲ್ಲರಿಗೂ ಕೈಮುಗಿದು ತನ್ನ ಗುಡಿಸಲಿನ ಕಡೆಗೆ ಹೊರಟುಹೋದನು. ಸ್ವಲ್ಪ ಹೊತ್ತಿನ ಮೇಲೆ ಬಟ್ಟೆ ಬದಲಾಯಿಸಿ ಅಂಗಿ ಹಾಕಿಕೊಂಡು ಹೊಳೆಯ ಬದಿಗೆ ನಡೆದು ಅಲ್ಲಿ ಒಂದು ಚಿಕ್ಕ ದೋಣಿಯೇರಿ ಅವನು ಹಡಗಿನ ಕಡೆಗೆ ಹೋದುದನ್ನು ಎಲ್ಲರೂ ನೋಡಿದರು. ಬಾಬ್ರಾಯ ಹಡಗಿನ ಪಕ್ಕಕ್ಕೆ ಸರಿದು ಪೋರ್ಚುಗೀಸರ ಭಾಷೆಯಲ್ಲಿ ಕೂಗಿ ಹೇಳಿದ – ನಾನು ಸ್ನೇಹಿತ. ಮೇಲೆ ಮಾಡಿಕೊಳ್ಳಿರಿ. ಹಡಗಿನ ಏಣಿ ಕೆಳಗಿಳಿಯಿತು. ಕಾವಲುಗಾರ ಅವನನ್ನು ಮೇಲೇರಿಸಿಕೊಂಡು ಏನುಬೇಕು? ಎಂದು ಕೇಳಿದ.
ಕಪ್ತಾನರು ಬೇಕು.
ಕೇಳುವವರು ಯಾರು ಎಂದು ಹೇಳಲಿ?
ಬರ್ಸಲೋರಿನ ಪ್ರತಿನಿಧಿ!
ಸ್ವಲ್ಪ ಹೊತ್ತಿನ ಮೇಲೆ ಕಾವಲುಗಾರ ಮರಳಿ ಬಂದು ಇವನನ್ನು ಬೇರೊಬ್ಬ ಸಿಪಾಯಿಯೊಡನೆ ಮುಂದೆ ಕಳುಹಿಸಿಕೊಟ್ಟ.

ದೊಡ್ಡ ಹಡಗು. ಯಾವ ಯುದ್ಧಕ್ಕೂ ಅಂಜದಿರುವಂತಹ, ಬಾಳಿಕೆಯದು. ಅಂತೆಯೇ ಸಂಪೂರ್ಣ ಸುಸಜ್ಜಿತವಾಗಿದ್ದಿತ್ತು. ನಾಲ್ಕು ದೊಡ್ಡ ಫಿರಂಗಿಗಳು ಪೀಠದ ಮೇಲಿದ್ದುವು. ಎರಡು ಪಕ್ಕದಲ್ಲೂ ಬೇರೆ ಸಣ್ಣ ಫಿರಂಗಿಗಳು ಬೇರೆ. ಒಂದು ಕಡೆ ತುಫಾಕಿಗಳನ್ನು ಕೂಡಹಾಕಿದ್ದರು. ಇತ್ತೀಚೆಗೆ ಹಡಗು ಸಂಪೂರ್ಣ ದುರಸ್ತಿಯಾಗಿದ್ದುದರಿಂದ ಬಹಳ ಅಚ್ಚುಕಟ್ಟಾಗಿ ಭದ್ರವಾಗಿ ಕಾಣುತಿದ್ದಿತು. ಇನ್ನೂರೈವತ್ತಕ್ಕೂ ಮಿಕ್ಕಿ ಶಿಸ್ತಿನ ಸೈನಿಕರು, ನಾವಿಕರು ಹಡಗಿನ ಕೆಲಸಗಾರರು ಇವರೆಲ್ಲಾ ಬೇರೆ ನೂರು ಮಂದಿ. ಉಗ್ರಾಣ – ಬೊಕ್ಕಸ – ಹಾಗೆಯೇ ಆಯುಧಶಾಲೆ ಇವುಗಳೆಲ್ಲ ಅಡಗಿರಬಹುದು. ಇವುಗಳನ್ನೆಲ್ಲ ಎಣಿಸಿಕೊಳ್ಳುತ್ತ ಸಿಪಾಯಿಯೊಂದಿಗೆ ಕಪ್ತಾನರ ಕೋಣೆಗೆ ಹೋದನು. ಕಪ್ತಾನ್ ಮಸ್ಕರೇಂಞ ಆರಾಮವಾಗಿ ಕಾಲುನೀಡಿ ಕುರ್ಚಿಯ ಮೇಲೆ ಕುಳಿತಿದ್ದ. ಅವನ ಪೊಗರು ಗಡ್ಡ ಮೀಸೆ ಅವನ ಆರಡಿ ಎರಡಂಗುಲದ ದೈತ್ಯ ದೇಹಕ್ಕೊಂದು ಭಯಂಕರ ಅಲಂಕಾರವಾಗಿ ಕಂಡುಬರುತಿದ್ದಿತು.

ಬಸ್ರೂರಲ್ಲಿ ಆ ಹೊತ್ತಿಗೆ ಕ್ರಿಸ್ತ ಧರ್ಮ ತಳವೂರಿದ್ದಿತು. ಅವರ ಬಗ್ಗೆ ಪೋರ್ಚುಗೀಸರು ಒಂದು ದೇವಾಲಯವ ಕಟ್ಟಲು ತೋಳಹಾರರಿಂದ ಅನುಮತಿಯನ್ನು ಪಡೆದಿದ್ದು ನಿರ್ಮಿಸಿದ್ದರು. ಇಲ್ಲಿಯ ಕ್ರೈಸ್ತ ಜನಾಂಗ ಬಾಬ್ರಾಯನ ಬಗ್ಗೆ ಕುತೂಹಲದಿಂದ ಕಣ್ಣರಳಿಸಿ ಕುಳಿತಿದ್ದಿತು. ನೀನು ಯಾಕೆ ನಮ್ಮ ಸಮಾಜಕ್ಕೆ ಬರಬಾರದೆಂದು ಸೂಚ್ಯವಾಗಿ ಸಲಹೆ ಕೊಡುತಿದ್ದಿತು. ಅಲ್ಲದೆ ಅವನನ್ನು ಬರ್ಸಲೋರ್ ಬಾಬ್ರಾಯನೆಂದೇ ಕರೆಯುತಿದ್ದಿತು. ಪೋರ್ಚುಗೀಸರು ಬಸ್ರೂರನ್ನು ಬರ್ಸಲೋರೆಂದೇ ಕರೆಯುತಿದ್ದರು. ಬಾಬ್ರಾಯನೂ ಇಲ್ಲಿಗೆ ಬಂದ ವೇಳೆ ಈ ಊರನ್ನು ತನ್ನ ವಿದ್ಯಾಭ್ಯಾಸಕ್ಕನುಗುಣವಾಗಿ ಬರ್ಸಲೋರೆಂದೇ ಕರೆಯುತಿದ್ದನು!

ಬಾಬ್ರಾಯ ಅವನಿಗೆ ಸಲಾಂಕೊಟ್ಟು ಯೋಗಕ್ಷೇಮ ವಿಚಾರಿಸಿದ.
ಕಪ್ತಾನ ಆಶ್ಚರ್ಯದಿಂದ ಅವನ ಮುಖವನ್ನೇ ನೋಡುತಿದ್ದಾಗ ಹೇಳಿದ – ಸಾಹೇಬರು ತಮ್ಮ ಭಾಷೆಯಲ್ಲಿ ಮಾತಾಡಬಹುದು. ಈ ಜನಕ್ಕೆ ಸ್ವಲ್ಪ ಸ್ವಲ್ಪ ಅದರ ಪರಿಚಯವಿದೆ.
ಏನು ನಮ್ಮ ಭಾಷೆಯ ಪರಿಚಯ! ಅದು ಹೇಗೆ? ನೀನು ಎಲ್ಲಿ ಅಭ್ಯಾಸ ಮಾಡಿದ್ದು?
ಅಲ್ಲಿಯಿಲ್ಲಿ ಸಾಹೇಬರ ಅನುಗ್ರಹದಿಂದ ಹೆಕ್ಕಿಕೊಂಡದ್ದು.
ಸುಳ್ಳುಸುಳ್ಳು, ಹೆಕ್ಕಿಕೊಂಡರೆ ಹೀಗೆ ಮಾತಾಡಲು ಬರುವುದಿಲ್ಲ. ನಮ್ಮ ಭಾಷೆ ಕಲಿಸುವ ಸ್ಥಳ ಗೋವೆ ಮಾತ್ರ – ಆದುದರಿಂದ ನೀನು ಇಲ್ಲಿಯವನಲ್ಲ ಗೋವೆಯವ.

ಬಾಬ್ರಾಯ ಒಂದುಕ್ಷಣ ಮೌನವಾಗಿದ್ದ. ಆ ಗೋವೆಯ ನೆನಪಿನೊಂದಿಗೇ ಅವನ ರಕ್ತ ಕುದಿಯತೊಡಗಿತು. ಅವನು ಸುಮ್ಮನಿದ್ದುದನ್ನು ನೋಡಿ ಕಪ್ತಾನ ಕೇಳಿದ –

ಈಗ ಬಂದದ್ದೇನು?

ಈ ಬರ್ಸಲೋರಿನ ಬಡವರ ಬಗ್ಗೆ ಸಾಹೇಬರಲ್ಲಿ ಬೇಡಿಕೊಳ್ಳಲು ಬಂದಿದ್ದೇನೆ. ಪೋರ್ಚುಗಲ್ಲು ಹಡಗುಗಳ ರಾಣಿ.  ತಾವು ಅದರ ಪ್ರತಿನಿಧಿಗಳು.

ಏನು ಏನು, ಹಡಗುಗಳ ರಾಣಿ! ಶಹಬಾಸ್ ಚಲೋ ಮಾತಾಡಿದಿ. ನೀನು ಬಹಳ ಹುಶಾರಿದ್ದಿ. ನೀನು ಈ ಗಾಂಪರ ಊರಿಗೆ ಯೋಗ್ಯನೇ ಅಲ್ಲ. ನಮ್ಮ ದೇಶವೇ ನಿನಗೆ ಯೋಗ್ಯ!

ಅಂತಹ ಯೋಗ್ಯತೆ ನನಗೆಲ್ಲಿ? ಅದೆಲ್ಲ ತಮ್ಮಂತಹ ಬಿಳಿ ಸರದಾರ ಸಾಹೇಬರಿಗೆ ಹೇಳಿಸಿದ್ದು. ನಾವೆಲ್ಲ ಗುಲಾಮರು.

ಹ್ಹ ಹ್ಹ ಹ್ಹ! ಬೇಷ್ ಬೇಷ್ ಏನು ಹೇಳಿದಿ? ಗುಲಾಮರು. ಹೌದು. ಇದು ಗುಲಾಮರ ರಾಜ್ಯ. ಇದನ್ನು ಆಳಲಿಕ್ಕಾಗಿಯೇ ಏಸುಕ್ರಿಸ್ತ ನಮ್ಮನ್ನಿಲ್ಲಿಗೆ ಕಳುಹಿಸಿದ್ದಾನೆ!
ಸಹಜ. ಏಸುಕ್ರಿಸ್ತರು ದೇವದೂತರು. ದಯಾಳುಗಳು. ಅವರ ರಾಜ್ಯದಲ್ಲಿ ಮೋಸ ವಂಚನೆಗಳಾವುವೂ ಇರಲಾರದು!
ಮೋಸ ವಂಚನೆ? ಏನದು?
ಏನಿಲ್ಲ ಮಹಾಸ್ವಾಮಿ! ಈ ಬರ್ಸಲೋರಿನ ಜನರು ಬಡವರು. ಚಿಕ್ಕ ಚಿಕ್ಕ ವ್ಯಾಪಾರಿಗಳು. ಆದರೂ ಈ ತನಕವೂ ತಮ್ಮನ್ನು ತಮ್ಮ ಪರಿವಾರವನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರೆ.
ಅದು ಹೌದು. ಅವರಲ್ಲಿ ನಮ್ಮದೇನೂ ಆಕ್ಷೇಪಣೆಯಿಲ್ಲ, ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ಅದಕ್ಕಾಗಿ ನಮ್ಮದು ಹಾರ್ದಿಕ ಧನ್ಯವಾದ!

ಅದು ತಮ್ಮ ದೊಡ್ಡ ಮನಸ್ಸು. ಆದರೆ ಅವರೆಲ್ಲ ಬರೇ ಬಡವರು. ಅವರು ಇನ್ನೂ ಬಡವರಾದರೆ ಅವರಿಗೆಲ್ಲ ಏಸು ಸ್ವಾಮಿಯ ನೆನಪು ಮರೆತುಹೋಗುತ್ತದೆ. ಲುಚ್ಚರಾಗುತ್ತಾರೆ ಮಹಾಸ್ವಾಮಿ. ಏಸು ಪ್ರಭುವಿನ ಗೌರವಕ್ಕಾಗಿ ತಾವು ಈ ಜನರನ್ನು ಬಡವರನ್ನಾಗಿ ಮಾಡಬಾರದು. ತಮ್ಮ ಹೆಸರು ಹೇಳಿ ಅವರು ಬದುಕಬೇಕು.

ಓಹೋ! ನೀನು ಅವರ ಬಗ್ಗೆ ವಕಾಲತು ಮಾಡಲು ಇಲ್ಲಿಗೆ ಬಂದಂತಿದೆ!

ನಾನೇನು ವಕಾಲತು ಮಾಡಿಯೇನು? ನಾನು ಬಹಳ ಅಲ್ಪ, ಅದೂ ತಮ್ಮ ಈ ದಿವ್ಯ ಸನ್ನಿಧಾನದಲ್ಲಿ ತಮ್ಮಂತಹ ಪ್ರಜ್ಞಾವಂತರಿಗೆ ನಾನೇನೂ ಹೇಳುವಂತಿಲ್ಲ. ಆದರೂ ಸ್ವಲ್ಪ ಮರೆತುದನ್ನು ನೆನಪುಮಾಡಲು ಮಾತ್ರ ಬಂದಿದ್ದೇನೆ.

ಅದೇನು ಮರೆತುಹೋದದ್ದು?

ಸ್ವಲ್ಪ ಆ ಬಡ ಜನರ ಲೆಕ್ಕಾಚಾರ – ದವಸ ಜೀನಸುಗಳ ಕ್ರಯ ತಮ್ಮ ನಿಗಾದಿಂದ ತಪ್ಪಿ ಹೋಗಿರಬಹುದು. ಅದನ್ನು ತಮ್ಮ ಬೊಕ್ಕಸದಿಂದ ಏಸು ಮಹಾತ್ಮನ ಆಶೀರ್ವಾದಪೂರ್ವಕವಾಗಿ ಕೊಟ್ಟರೆ ಅವರೆಲ್ಲ ಧನ್ಯರಾದಾರು.

ಓಹೋ ಹಾಗೋ! ಹೌದು ನಮ್ಮ ಬೊಕ್ಕಸದಲ್ಲೇನೂ ಕಡಿಮೆಯಿಲ್ಲ. ನಾವು ಕೇರಳದಿಂದ ಈ ಗುಲಾಮರ ಎರಡು ದೇವಸ್ಥಾನಗಳನ್ನು ಲೂಟಿಮಾಡಿ ತಂದಿದ್ದೇವೆ. ಆದುದರಿಂದಲೇ ಆ ಮೂರ್ಖ ಝಮೋರಿನ್ ನಮ್ಮ ಬೆನ್ನಟ್ಟಿಕೊಂಡು ಬಂದ. ಬರೇ ಮುಠಾಳ. ಅವನಿಗೊಂದು ಪಾಲು ಕೊಡುತ್ತೇನೆಂದರೂ ಕೇಳಲಿಲ್ಲ. ಅದೇ ನಮ್ಮ ಬೊಕ್ಕಸ.

ಬಾಬ್ರಾಯನಿಗೆ ಈ ಕೊಳ್ಳೆಯ ವಿಚಾರ ಕೇಳಿ ರಕ್ತ ಕುದಿಯತೊಡಗಿತು. ಆದರೂ ಅದನ್ನು ತೋರಿಸಿ ಕೊಡದೆ – ಆದರೂ ಈ ಬರ್ಸಲೋರಿನ ಜನರು ಸಾಹೇಬರ ಪಾಲಿಗೆ ಏನೂ ತೊಂದರೆ ಕೊಟ್ಟದ್ದಿಲ್ಲ. ಅವರ ಮೇಲೆ ಸಾಹೇಬರು ಕೋಪಿಸಿಕೊಳ್ಳಬಾರದು. ಪ್ರಸನ್ನರಾಗಬೇಕು – ಎಂದು ವಿನಯದಿಂದ ಕೇಳಿದನು.

ದೊಡ್ಡ ಹಡಗು. ಯಾವ ಯುದ್ಧಕ್ಕೂ ಅಂಜದಿರುವಂತಹ, ಬಾಳಿಕೆಯದು. ಅಂತೆಯೇ ಸಂಪೂರ್ಣ ಸುಸಜ್ಜಿತವಾಗಿದ್ದಿತ್ತು. ನಾಲ್ಕು ದೊಡ್ಡ ಫಿರಂಗಿಗಳು ಪೀಠದ ಮೇಲಿದ್ದುವು. ಎರಡು ಪಕ್ಕದಲ್ಲೂ ಬೇರೆ ಸಣ್ಣ ಫಿರಂಗಿಗಳು ಬೇರೆ. ಒಂದು ಕಡೆ ತುಫಾಕಿಗಳನ್ನು ಕೂಡಹಾಕಿದ್ದರು. ಇತ್ತೀಚೆಗೆ ಹಡಗು ಸಂಪೂರ್ಣ ದುರಸ್ತಿಯಾಗಿದ್ದುದರಿಂದ ಬಹಳ ಅಚ್ಚುಕಟ್ಟಾಗಿ ಭದ್ರವಾಗಿ ಕಾಣುತಿದ್ದಿತು. ಇನ್ನೂರೈವತ್ತಕ್ಕೂ ಮಿಕ್ಕಿ ಶಿಸ್ತಿನ ಸೈನಿಕರು, ನಾವಿಕರು ಹಡಗಿನ ಕೆಲಸಗಾರರು ಇವರೆಲ್ಲಾ ಬೇರೆ ನೂರು ಮಂದಿ. ಉಗ್ರಾಣ – ಬೊಕ್ಕಸ – ಹಾಗೆಯೇ ಆಯುಧಶಾಲೆ ಇವುಗಳೆಲ್ಲ ಅಡಗಿರಬಹುದು. ಇವುಗಳನ್ನೆಲ್ಲ ಎಣಿಸಿಕೊಳ್ಳುತ್ತ ಸಿಪಾಯಿಯೊಂದಿಗೆ ಕಪ್ತಾನರ ಕೋಣೆಗೆ ಹೋದನು.

ಕಪ್ತಾನ ಮಸ್ಕರೇಂಞ ಒಮ್ಮೆ ಗಹಗಹಿಸಿ ನಕ್ಕು ತನ್ನ ಗಡ್ಡವನ್ನು ಸವರುತ್ತ ಹೇಳಿದ – ಹೋ! ಆ ಮಾತು ಬಿಟ್ಟು ಬಿಡು. ಈ ಬೊಕ್ಕಸವನ್ನು ನಾವು ಮುಟ್ಟುವ ಹಾಗೆಯಿಲ್ಲ. ಅದು ರಾಜಧನ. ಅದರ ಲೆಕ್ಕಾಚಾರವೇ ಬೇರೆ. ಆದರೂ ನಿನ್ನ ವಿಚಾರವಾಗಿ ನನಗೆ ತುಂಬಾ ಕನಿಕರವಾಗುತ್ತದೆ. ನೀನು ಇನ್ನು ಮುಂದೆ ಈ ಪಶುಗಳೊಂದಿಗೆ ಇರುವುದು ಬೇಡ. ನಮ್ಮೊಡನೆಯೇ ನೌಕರಿ ಮಾಡಬಹುದು.

ಬಾಬ್ರಾಯ ಹತಾಶನಾದನು. ಈ ಒಣ ಮಾತುಗಳಿಂದೆಲ್ಲಾ ಅವನ ಗಂಟಲು ಬಿಗಿದು ಬರತೊಡಗಿತು. ಇನ್ನು ಏನು ಪ್ರಯೋಗ ನಡೆಸಬೇಕೆಂದು ಅರ್ಥವಾಗಲಿಲ್ಲ. ಆ ಕಡೆ ಸೂರ್ಯ ಕೆಳಕೆಳಗೆ ಇಳಿಯತೊಡಗಿ ಸಂಜೆ ಕಳೆಯತೊಡಗಿತ್ತು. ಈ ಕಡೆ ಹೊಳೆಯ ದಡದ ಮೇಲೆ ಹಲಹಲವು ಮುಖಗಳು ಇವನನ್ನೇ ನಿರೀಕ್ಷಿಸುತ್ತ ನಿಂತು ನೋಡುತ್ತಿದ್ದುವು. ಆದರೆ ಈ ಕಳ್ಳ ಸಾಹೇಬ ಯಾವ ಸೂಚನೆಯನ್ನೂ ಒಪ್ಪಿಕೊಳ್ಳುವಂತೆ ಕಂಡು ಬರಲ್ಲ. ಆದುದರಿಂದ ಒಮ್ಮೆ ಪಶ್ಚಿಮದ ಕಡೆ ನೋಡಿ ಸಾಹೇಬನೊಡನೆ ಹೇಳಿದನು – ಹಾಗಾದರೆ ಖಾವಂದರಿಗೆ ಒಂದಿಷ್ಟೂ ಕನಿಕರ ಬಾರದಿದ್ದರೆ ಏನು ಮಾಡಬಹುದು? ಈ ಕುರಿಜನಗಳ ಗ್ರಹಚಾರವೆನ್ನಬೇಕು. ಆದರೂ ಚಿಂತಿಲ್ಲ, ನಾನು ನೌಕರಿ ಮಾಡಿಯಾದರೂ ಋಣ ತೀರಿಸಿಯೇನು. ಈ ಜನಗಳಿಗೆ ಸ್ವಲ್ಪ ಹಣವನ್ನಾದರೂ, ಕೊನೆಯ ಪಕ್ಷ ಲೆಕ್ಕಾಚಾರದ ಅರ್ಧಾಂಶವನ್ನಾದರೂ ಕಳುಹಿಸಿ ಕೊಡೋಣವಾಗಲಿ!

ಆಗಲಿ. ನೀನು ನಮ್ಮ ಗೋವೆಗೇ ಬಾ. ಲೆಕ್ಕಾಚಾರವನ್ನೆಲ್ಲಾ ಅಲ್ಲಿ ನೋಡೋಣವಂತೆ! ಎಂದು ಹೇಳಿದವನೇ ಕಪ್ತಾನ ಒಬ್ಬ ಸಿಪಾಯಿಯನ್ನು ಕರೆದು ಈ ಹುಡುಗನನ್ನು ಕೆಳಗೆ ಕರೆದುಕೊಂಡು ಹೋಗು – ಎಂದನು.
ಬಾಬ್ರಾಯ ಅಲ್ಲಿಯೇ ನಿಂತಿದ್ದ – ಅದೂ ಆಗಬಹುದಲ್ಲ. ಆದರೆ ಈ ವಿಚಾರವನ್ನು ನಮ್ಮ ಜನಕ್ಕೆ ತಿಳಿಸಿಬರಬೇಕು. ಅವರು ನನ್ನ ಹಾದಿಯನ್ನೇ ಕಾಯುತ್ತಿರಬಹುದು. ಮತ್ತೆ ನಿಮ್ಮ ಹಡಗು ಇಲ್ಲಿಂದ ಹೊರಡುವ ದಿನ ಹೇಳಿದರೆ –

ದಿನ ಹೇಳುವುದೇನಿದೆ? ನಮ್ಮ ಹಡಗು ಈ ರಾತ್ರಿ ಕಳೆದು ಬೆಳಗಿನ ಜಾವದಲ್ಲೆ ಹೊರಡುತ್ತದೆ. ನಿನ್ನನ್ನು ಈಗ ನಾನು ಹೋಗಬಿಟ್ಟರೆ ಮತ್ತೆ ನಿಮ್ಮ ಆ ಕೋಟೆಯ ಫಿರಂಗಿಯನ್ನು ನಮ್ಮ ಕಡೆ ತಿರುಗಿಸಿ ಗಲಾಟೆ ಮಾಡುವ ಯೋಚನೆ ನಿಮಗಿರುವುದಾದರೆ ಅದಕ್ಕೆ ನಾನು ಸಂದರ್ಭವನ್ನೆ ಕೊಡುವ ಮನುಷ್ಯನಲ್ಲ – ಎಂದು ಹೇಳಿ ಕಪ್ತಾನನು ಗಹಗಹಿಸಿ ನಕ್ಕನು.

ಸಿಪಾಯಿ ಬಾಬ್ರಾಯನನ್ನು ಕೈಹಿಡಿದು ಕರೆದುಕೊಂಡು ಹೋಗಿ ಕೆಳಗಡೆ ಒಂದು ಕೋಣೆ ಸೇರಿಸಿದನು. ಮತ್ತೆ ಬೇರೊಬ್ಬ ಸಿಪಾಯಿಯನ್ನು ಕರೆದು ಇವನನ್ನು ಸ್ವಲ್ಪ ನೋಡಿಕೋ – ಎಂದು ಹೇಳಿ ಹೊರಟು ಹೋದನು.

ಬಾಬ್ರಾಯನಿಗೆ ತಾನೀಗ ಬಂದಿ ಎಂಬುದು ಅರ್ಥವಾಯಿತು. ಅವನ ಎದೆಯಲ್ಲಿ ದ್ವೇಷದ ಬೆಂಕಿ ಪ್ರಜ್ವಲಿಸತೊಡಗಿತು. ಕತ್ತಲೆಯ ಕರಿಛಾಯೆ ಆ ಕೋಣೆಯೊಳಗೆ ಹಬ್ಬುತ್ತಿದ್ದಂತೆ ಯಾವುದೋ ಒಂದು ಉಜ್ವಲ ಮೂರ್ತಿ ಅವನ ಮುಂದೆ ನಿಂತು – ನೋಡು! ಇದೇ ಸಮಯ, ಹೇಡಿಯಾಗಬೇಡ, ಧೈರ್ಯವಾಗಿರು – ಎಂದು ಹೇಳಿದಂತೆ ಭಾಸವಾಯಿತು. ಅವಳೇ ಅವನ ಅಕ್ಕ! ಆ ದಿನ ಇದೇ ಜನಾಂಗದ ಪಶು ಕೃತ್ಯದಿಂದಾಗಿ ಕುಸಿದುಬಿದ್ದ ಪ್ರಭಾತ ಕುಸುಮ.

ಹೌದು. ಇದೇ ಸಮಯ. ಇಂತಹ ಸಮಯ ಇನ್ನೆಂದಿಗೂ ಸಿಗಲಾರದು – ಎಂದು ಬಾಬ್ರಾಯ ತನ್ನ ಮನಸ್ಸಿನಲ್ಲೆ ಹೇಳಿಕೊಂಡನು.
ಬಹಳ ಭದ್ರವಾದ ಕೋಣೆ. ಕೋಣೆಯ ತುಂಬೆಲ್ಲ ಭರಣಿಗಳು, ಪೀಪಾಯಿಗಳು ತುಂಬಿದ್ದುವು. ಕೋಣೆಯ ಮುಕ್ಕಾಲುವಾಸಿ ಅದೇ ತುಂಬಿತ್ತು. ಕೋಣೆಗೆ ಮೇಲಟ್ಟದಿಂದ ಗಾಳಿ ಕಂಡಿಯಿದ್ದಿತು. ಬಾಗಿಲೂ ಅದೇ ರೀತಿ. ಮುಚ್ಚಿದ ಸರಳಿನ ಬಾಗಿಲ ಬಳಿ ದೀಪವಿರಿಸಿಕೊಂಡು ಪಹರೇದಾರ ಕುಳಿತಿದ್ದನು.

ಬಾಬ್ರಾಯ ಮೆಲ್ಲನೆ ಹಿಂದೆ ಸರಿದು ಒಂದು ಭರಣಿಯೊಳಗೆ ಕೈತುರುಕಿಸಿ ನೋಡಿದನು. ಅದು ಕಪ್ಪಾಗಿ ಕೈಗೆ ಹಿಡಿಯಿತು. ಮೂಸಿ ನೋಡಿದನು. ಅದೇನು? ಸಿಡಿಮದ್ದು! ಈ ಎಲ್ಲಾ ಭರಣಿಗಳಲ್ಲಿ ಪೀಪಾಯಿಗಳಲ್ಲೂ ಅದೇ ಇರುವುದೆ? ಓಹೋ!

ಹಡಗಿನ ಮೇಲಟ್ಟದಲ್ಲಿ ತುಂಬಾ ಗಡಿಬಿಡಿಯಾದಂತೆ ಸಪ್ಪಳ ಕೇಳುತಿದ್ದಿತು. ಜನರೆಲ್ಲ ಆ ಕಡೆ ಈ ಕಡೆ ಓಡಾಡುತಿದ್ದರು. ಆಗ ಬಾಬ್ರಾಯನಿಗೆ – ಹಡಗ ಇದೇ ರಾತ್ರಿ ಕಳೆದು ಮುಂಜಾವದಲ್ಲಿ ಹೊರಟು ಹೋಗುವುದೆಂದು ಕಪ್ತಾನನು ಹೇಳಿದ ಮಾತು ನೆನಪಾಯಿತು. ಅದಕ್ಕಾಗಿಯೇ ಸನ್ನಾಹವಾಗುತಿದ್ದಿತು. ಆದುದರಿಂದ ಏನು ಮಾಡಬೇಕೋ ಅದನ್ನು ಈ ಕೂಡಲೇ ಮಾಡಬೇಕು. ಆದರೆ ಮಾಡುವುದೇನನ್ನು?

ಬಾಬ್ರಾಯ ಹತಾಶನಾದನು. ಈ ಒಣ ಮಾತುಗಳಿಂದೆಲ್ಲಾ ಅವನ ಗಂಟಲು ಬಿಗಿದು ಬರತೊಡಗಿತು. ಇನ್ನು ಏನು ಪ್ರಯೋಗ ನಡೆಸಬೇಕೆಂದು ಅರ್ಥವಾಗಲಿಲ್ಲ. ಆ ಕಡೆ ಸೂರ್ಯ ಕೆಳಕೆಳಗೆ ಇಳಿಯತೊಡಗಿ ಸಂಜೆ ಕಳೆಯತೊಡಗಿತ್ತು. ಈ ಕಡೆ ಹೊಳೆಯ ದಡದ ಮೇಲೆ ಹಲಹಲವು ಮುಖಗಳು ಇವನನ್ನೇ ನಿರೀಕ್ಷಿಸುತ್ತ ನಿಂತು ನೋಡುತ್ತಿದ್ದುವು. ಆದರೆ ಈ ಕಳ್ಳ ಸಾಹೇಬ ಯಾವ ಸೂಚನೆಯನ್ನೂ ಒಪ್ಪಿಕೊಳ್ಳುವಂತೆ ಕಂಡು ಬರಲ್ಲ. ಆದುದರಿಂದ ಒಮ್ಮೆ ಪಶ್ಚಿಮದ ಕಡೆ ನೋಡಿ ಸಾಹೇಬನೊಡನೆ ಹೇಳಿದನು – ಹಾಗಾದರೆ ಖಾವಂದರಿಗೆ ಒಂದಿಷ್ಟೂ ಕನಿಕರ ಬಾರದಿದ್ದರೆ ಏನು ಮಾಡಬಹುದು? ಈ ಕುರಿಜನಗಳ ಗ್ರಹಚಾರವೆನ್ನಬೇಕು.

ಅವನಿಗೊಂದು ಯೋಚನೆ ಹೊಳೆಯಿತು. ಆ ಯೋಚನೆಯನ್ನು ಸ್ವಲ್ಪಹೊತ್ತು ಮನನಮಾಡುತ್ತ ಕುಳಿತ. ನಂತರ ನಿರ್ಧಾರಕ್ಕೆ ಬಂದವನಂತೆ ಒಮ್ಮೆ ದೀರ್ಘವಾಗಿ ಉಸಿರು ಬಿಟ್ಟನು. ಅಯ್ಯಯ್ಯೋ ಸತ್ತೆ ಸತ್ತೆ! ಚೇಳು –  ಚೇಳು ಕಚ್ಚಿತು! ಅಯ್ಯೋ ದೇವರೆ! – ಎಂದು ಬೊಬ್ಬೆ ಹಾಕುತ್ತ ಒಂದು ಕಾಲನ್ನು ಎತ್ತಿ ಹಿಡಿದುಕೊಂಡು ಬಾಬ್ರಾಯ ಕೋಣೆಯೆಲ್ಲಾ ಓಡಾಡತೊಡಗಿದನು. ಪಹರೇದಾರ ದೇಶೀಯ ಕ್ರೈಸ್ತ. ಇವನೂ ಅದೇ ಭಾಷೆಯಲ್ಲಿ – ಸತ್ತೆನಲ್ಲ ಸತ್ತೆ! ಸ್ವಲ್ಪ ದೀಪ ಈ ಕಡೆ ತಾರಪ್ಪ. ದೊಡ್ಡ ಕೊಂಬು ಚೇಳು. ಇಲ್ಲೇ ಅಡಗಿ ಕೂತಿದೆ – ಎಂದು ಕೂಗಿದನು. ಪಹರೇದಾರ ಮೆಲ್ಲನೆ ಬಾಗಿಲು ತೆರೆದು ಒಳಗೆ ಬಂದು ನೋಡಿದಾಗ ಬಾಬ್ರಾಯನ ಕಾಲಿನಿಂದ ರಕ್ತ ಸುರಿಯುತಿದ್ದಿತು. ಆದುದರಿಂದ ಚೇಳು ಕಚ್ಚಿರಬಹುದೆಂದು ಭಾವಿಸಿ – ನೀನು ಸ್ವಲ್ಪ ಸುಮ್ಮನಿರು ವೈದ್ಯರನ್ನು ಕರೆಯುತ್ತೇನೆ – ಎಂದು ಹೇಳಿ ಬಾಗಿಲು ಹಾಕಿಕೊಂಡು ಹೊರಟುಹೋದನು.

ಅವನು ಹೋದೊಡನೆಯೇ ಬಾಬ್ರಾಯ ಮೆಲ್ಲನೆ ಬಾಗಿಲು ಬಳಿ ಹೋಗಿ ಅಲ್ಲಿದ್ದ ದೀಪವನ್ನು ಒಳಗೆ ತಂದುಕೊಂಡನು. ಅದನ್ನು ಸ್ವಲ್ಪ ದೂರದಲ್ಲಿರಿಸಿ ಭರಣಿಯಲ್ಲಿದ್ದ ಸಿಡಿಮದ್ದನ್ನು ಎಲ್ಲ ಪೀಪಾಯಿಗಳಿಗೂ ಧಾರೆ ಹಿಡಿದು ಹಾಕಿ ಆ ಧಾರೆಯನ್ನು ಕೋಣೆಯ ಮಧ್ಯೆ ತಂದು ನಿಲ್ಲಿಸಿದನು. ಅಷ್ಟರಲ್ಲಿ ವೈದ್ಯನನ್ನು ಕರೆದುಕೊಂಡು ಬಂದು ಪಹರೆದಾರನು ಇದನ್ನು ನೋಡಿ ಗಾಬರಿಯಿಂದ ಕೇಳಿದನು – ಇದೇನು ಮಾಡುತ್ತಾಯಿದ್ದಿ ಹುಚ್ಚ? ಅದೇನು ಗೊತ್ತೆ?

ಎಲ್ಲಾ ಗೊತ್ತು. ನೀನು ಹೋಗಿ ನಿನ್ನ ಕಪ್ತಾನರನ್ನು ಕರೆದುಕೊಂಡು ಬಾ – ಎಂದನು ಬಾಬ್ರಾಯ. ದೀಪ ಅವನ ಕೈಯಲ್ಲಿದ್ದಿತ್ತು.
ಕಪ್ತಾನ ಮಸ್ಕರೇಂಞ ತನ್ನ ಜನ್ಮದಲ್ಲಿ ಇಷ್ಟು ಗಾಬರಿಯಾದುದಿಲ್ಲ – ಇಷ್ಟು ಅವಸರವಾಗಿ ಓಡಿ ಬಂದುದಿಲ್ಲ. ಬಂದವನೇ ಬಾಗಿಲ ಬಳಿ ನಿಂತು ಬಾಬ್ರಾಯನೊಡನೆ ಹೇಳಿದ. ಹೇ ಹುಡುಗ! ನಿನಗೆ ಒಂದಿಷ್ಟೂ ಬುದ್ಧಿಯಿಲ್ಲವೆ?

ಈ ತನಕ ಬುದ್ಧಿಯಿರಲಿಲ್ಲ. ಈಗ ತಾನೇ ಬುದ್ಧಿ ಬಂದಿತು. ಆದುದರಿಂದಲೇ ನಿನಗೆ ಬುದ್ಧಿ ಕಲಿಸತೊಡಗಿದ್ದೇನೆ. ನೋಡು – ನೀನು ನಮ್ಮ ಈ ಬಡ ಜನರನ್ನು ಮೋಸ ಮಾಡಿ ಅವರ ಹಣವನ್ನು ದಕ್ಕಿಸಿಕೊಳ್ಳಬೇಕೆಂದು ಯೋಚಿಸಿದಿ. ಆದರೆ ಅವರ ಹಣ ಅವರಿಗೆ ಸಿಕ್ಕಿಯೆ ಸಿಕ್ಕುತ್ತದೆ. ನಿನ್ನ ಹಡಗು ಕಂಡ್ಲೂರು ಹೊಳೆಯನ್ನು ಬಿಟ್ಟು ಹೊರಗೆ ಹೋಗುವುದಿಲ್ಲ! ನಿನ್ನ ಪಾಪಗಳ ಲೆಕ್ಕಾಚಾರ ಇಂದಿಗೇ ಮುಗಿಯುತ್ತದೆ!

ಕಪ್ತಾನ ಬಹಳ ಮೃದುಸ್ವರದಿಂದ ಸಮಜಾಯಿಸುತ್ತ ಹೇಳಿದ – ಹುಚ್ಚು ಹುಡುಗ! ನಾನೇನಾದರೂ ತಮಾಷೆಗೆಂದು ಹೇಳಿದರೆ ಅದನ್ನು ನಂಬುವುದೇ ? ನಿಮ್ಮ ಜನರ ಹಣ ನನಗೆ ಬೇಕಾಗಿದೆಯೇ? – ಸುಮ್ಮನಾದರೂ – ಎನ್ನುತಿದ್ದಂತೆಯೇ ಅವನ ಬಲಗೈ ಮೇಲೇರುತಿದ್ದಿತು. ಒಡನೆಯೇ ಬಾಬ್ರಾಯ – ನಿನ್ನ ಕೈಯಲ್ಲಿ ಪಿಸ್ತೂಲಿದೆಯೆಂಬುದು ನನಗೂ ಗೊತ್ತಿದೆ. ಆದರೆ ….. ಆದರೆ ಇದು ದೇವರ ಶಾಪದ ಗುಂಡು – ಎನ್ನುತಿದ್ದಂತೆಯೇ ದೀಪದ ಬತ್ತಿಯನ್ನು ಕಾಲಬುಡದ ಸಿಡಿಮದ್ದಿನ ಧಾರೆಯ ಮೇಲೆ ಹಾಕಿ ನೆಲದ ಮೇಲೆ ಕವುಚಿ ಕೈಮುಗಿದು ಬಿದ್ದುಕೊಂಡು – ಅಕ್ಕ! ನನ್ನ ಋಣ ತೀರಿತು – ಋಣ ತೀರಿತು! ಎಂದನು.

ರಾತ್ರಿ ಹೊತ್ತು ಭಯಂಕರವಾದ ಅಂತಹ ಸ್ಫೋಟವನ್ನು ಈ ತನಕ ಯಾರೂ ಕೇಳಿದ್ದಿಲ್ಲ. ಅದಕ್ಕೆ ಬಸ್ರೂರು ಪೇಟೆಯೇ ನಡುಗಿತು. ಹಡಗಿನ ಕೆಲವು ಚೂರುಗಳು ಗುಂಡಿನಂತೆ ಸಿಡಿದು ಪೇಟೆಯ ಮಧ್ಯ ಭಾಗಕ್ಕೂ ಬಂದು ಬಿದ್ದಿದ್ದುವು. ಎಲ್ಲರೂ ದಿಗಿಲುಗೊಂಡು ಹೊಳೆಯ ಕಿನಾರೆಯ ಕಡೆ ಓಡಿದರು. ಬೆಂಕಿಯ ಕಾವಿಗೆ ಹೊಳೆಯ ನೀರೂ ಕುದಿಯುತಿದ್ದಿತು. ಆದರೆ ಹೊಳೆಯ ಮಧ್ಯದಲ್ಲಿ ಈಗ ಎರಡು ತಿಂಗಳುಗಳಿಂದಲೂ ಹಾಯಿ ಬಿಟ್ಟು ಅವರ ಪಾಲಿಗೆ ಒಂದು ದೊಡ್ಡ ದುಸ್ವಪ್ನದಂತೆ ಮಡಗಿದ್ದ ಹಡಗು ನುಚ್ಚು ನೂರಾಗಿದ್ದಿತು. ಹೊಸ ಬಣ್ಣ ಹಾಕಿ ಎಣ್ಣೆ ತಾಗಿಸಿದ್ದ ಅದರ ಭಾಗಗಳೆಲ್ಲ ಕರ್ಪೂರದಂತೆ ಭಗಭಗನೆ ಸುಡುತಿದ್ದವು. ಇನ್ನು ಅದರಲ್ಲಿದ್ದ ಜನರ ವಿಚಾರ – ಯಾರೂ ಉಳಿದಿರುವಂತೆ ಕಂಡು ಬರಲಿಲ್ಲ.

ಬೆಳಿಗ್ಗೆ ಅದರ ಅವಶೇಷದ ಲೇಶವೂ ಉಳಿಯಲಿಲ್ಲ. ಆದರೆ ಕಿನಾರೆಯ ಮೇಲೆ ಬೆಳ್ಳಿ ಬಂಗಾರದ ನಗನಾಣ್ಯಗಳು ಅಲ್ಲಲ್ಲಿ ಸಿಡಿದು ಬಿದ್ದಿದ್ದುವು. ಸಮುದ್ರದ ಭರತದ ವೇಳೆ ಕರೆ ಹಿಡಿದ ಕೈಕಾಲು ಕಳೆದುಕೊಂಡು ಅಂಗಾಂಗ ವಿಹೀನರಾದವರ ಹೆಣಗಳು ಹಲವಾರು!

ಕೋಟೆಯಿಂದ ದಳವಾಯಿಗಳೂ ನೂರಾರು ಸೈನಿಕರೂ ಬಂದು ಅವುಗಳನ್ನೆಲ್ಲ ಸ್ವಾಧೀನ ಪಡಿಸಿಕೊಂಡರು. ಕೊನೆಗೆ ಅರಸರು ಸ್ವತಃ ಬಂದು ಆ ಹಡಗಿನ ವ್ಯಾಪಾರದಲ್ಲಿ ನಷ್ಟಗೊಂಡವರಿಗೆ ಅವರವರ ಲೆಕ್ಕದ ಪ್ರಕಾರ ಹಣ ಸಲ್ಲಿಸಿದರೆಂದು ಹೇಳಲಾಗಿದೆ.

ಪಾಪ ! ಬಾಬ್ರಾಯನ ಹೆಣವೂ ಸಿಕ್ಕಲಿಲ್ಲ. ಅದು ಸಿಡಿಮದ್ದಿನ ಕೋಣೆಯಲ್ಲೇ ಇದ್ದುದರಿಂದ ಸಂಪೂರ್ಣವಾಗಿ ಸುಟ್ಟುಹೋಗಿರಬೇಕು. ಆದರೂ ಅವನ ಕೋರಿಕೆಯನ್ನು ಬಸ್ರೂರವರು ಮರೆಯಲಿಲ್ಲ. ಅವನನ್ನು ಬೀಳ್ಕೊಟ್ಟ ಕಟ್ಟೆಯ ಮೇಲೆ ಒಂದು ಅಶ್ವತ್ಥದ ಗಿಡವನ್ನು ನೆಟ್ಟು ಅದಕ್ಕೆ ಉಪನಯನ ಮಾಡಿಸಿದರು. ಮತ್ತೊಂದು ಗಿಡ ನೆಟ್ಟು ಮದುವೆ ಮಾಡಿಸಿದರು. ಆ ಎರಡು ಮರಗಳೂ ಈಗ ಸತ್ತು ಹೋಗಿರಬಹುದು. ಆದರೆ ಅದರ ಸಂತತಿ ಈಗಲೂ ಇದೆ. ಅದೇ ಈಗಿನ ಬಾಬ್ರಾಯರ ಕಟ್ಟೆ !

(ವೀರಭೂಮಿ : 15.11.1965)

 

ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ

ಸಾಂತ್ಯಾರು ವೆಂಕಟರಾಜ

‘ಕವಿರಾಜ ಹಂಸ’ಎಂಬ ಬಿರುದು ಪಡೆದಿದ್ದ ಉಡುಪಿ ಜಿಲ್ಲೆಯ ಬಹುಮುಖ್ಯ ಸಾಹಿತಿಗಳಲ್ಲೊಬ್ಬರಾದ ಎಸ್. (ಸಾಂತ್ಯಾರು) ವೆಂಕಟರಾಜರು (1913-1988) ಮೂವತ್ತರ ದಶಕದಿಂದಲೇ ಕತೆಗಳನ್ನು ಬರೆಯಲು ಪ್ರಾರಂಭಿಸಿದ್ದರು; ಅಂದಿನ ಅವಿಭಜಿತ ದಕ್ಷಿಣ ಕನ್ನಡದ ಶ್ರೇಷ್ಠ ಕತೆಗಾರರೆಂದು ಮಾನ್ಯರಾಗಿದ್ದರು. ‘ಆಕಾಶಗಂಗೆ’ (1945) ಮತ್ತು ‘ಸಪ್ತಸಾಗರ’ (1947) ಅವರ ಪ್ರಕಟಿತ ಕಥಾಸಂಕಲನಗಳು. ಅವರ ಹಲವು ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ, ಸಂಕಲಿತವಾಗದೆ ಉಳಿದಿವೆ. ಪ್ರಸ್ತುತ ಕತೆ ಅವರದೇ ಆದ ‘ವೀರಭೂಮಿ’ಮಾಸಿಕದಲ್ಲಿ ಪ್ರಕಟವಾಗಿತ್ತು.
ಸಂಸ್ಕೃತದಲ್ಲಿ ಶಿರೋಮಣಿ ಪದವಿ ಪಡೆದು ಸಂಸ್ಕೃತದಲ್ಲೂ ಕಾವ್ಯ ರಚಿಸುತ್ತಿದ್ದ ಎಸ್. ವೆಂಕಟರಾಜರು ಕನ್ನಡದ ವಿಶಿಷ್ಟ ಪ್ರತಿಭೆಯ ಕವಿಯಾಗಿದ್ದರೂ ಅವರ ಬಗ್ಗೆ ಈಗಿನ ಕನ್ನಡ ಸಾಹಿತ್ಯಾಭಿಮಾನಿಗಳು ಅರಿತುದು ಇಲ್ಲವೆಂಬಷ್ಟು ಕಡಿಮೆ. ತಮ್ಮ ‘ಮಾನಸಗಂಗೆ’ ಕವನ ಸಂಕಲನಕ್ಕಾಗಿ ರಾಜ್ಯಪ್ರಶಸ್ತಿ ಪಡೆದಿದ್ದ ಅವರು 7 ಕವನಸಂಕಲನಗಳು, 3 ಕಾದಂಬರಿಗಳು, 8 ನಾಟಕಗಳು, 54 ಕತೆಗಳು, ಸಂಪಾದಕೀಯ ಲೇಖನಗಳು, ಲಲಿತಪ್ರಬಂಧಗಳು, ಅಂಕಣ ಬರಹಗಳು ಮುಂತಾಗಿ ಎಲ್ಲ ಬಗೆಯ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ವೀರಭೂಮಿ’ ಎಂಬ ಉನ್ನತಮಟ್ಟದ ಮಾಸಿಕವನ್ನು ಉಡುಪಿಯಿಂದ ಏಳುವರ್ಷಗಳ ಕಾಲ ಸಂಪಾದಿಸಿ ಪ್ರಕಟಿಸುತ್ತಿದ್ದರು.
ಉಡುಪಿಯ ಗಾಂಧಿ ಎಂದೇ ಕರೆಯಲ್ಪಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ಸಾಂತ್ಯಾರು ಅನಂತಪದ್ಮನಾಭ ಭಟ್ಟರ ಮಗನಾಗಿದ್ದ ವೆಂಕಟರಾಜರು ಸ್ವಾತಂತ್ರ್ಯ ಬಂದಮೇಲೆ ತಂದೆ ಸ್ವಾತಂತ್ರ್ಯ ಹೋರಾಟದ ಕಾರಣ ಕಳೆದುಕೊಂಡಿದ್ದ ಆನುವಂಶಿಕ ಪಟೇಲಿಕೆಯನ್ನು ಸ್ವತಂತ್ರ ಭಾರತ ಸರಕಾರದಿಂದ ಗಳಿಸಿಕೊಂಡರು. ಅವರು ಸಾಂತ್ಯಾರು, ಬೈರಂಪಳ್ಳಿ, ಬೆಳ್ಳರ್ಪಾಡಿ ಗ್ರಾಮಗಳ ಪಟೇಲರಾಗಿದ್ದರು.
ವೆಂಕಟರಾಜರು ಬ್ರಿಟಿಷರ ವಸಾಹತುಶಾಹಿಯ ವಿರುದ್ಧ ಧೈರ್ಯವಾಗಿ ಬರೆಯುತ್ತಿದ್ದ ಬೆರಳೆಣಿಕೆಯ ಸಾಹಿತಿಗಳಲ್ಲಿ ಒಬ್ಬರು. ಅವರ ಅಧ್ಯಯನ ಚಿಂತನೆಗಳಲ್ಲಿ ದೇಶದ ಇತಿಹಾಸ, ವರ್ತಮಾನ, ರಾಜಕೀಯ, ಸಾಮಾಜಿಕ ಸಮಸ್ಯೆಗಳೆಲ್ಲ ಸ್ಥಾನ ಪಡೆದಿದ್ದುದರಿಂದ ಅವರ ಬರಹಗಳು ಇಂದಿಗೂ ಮುಖ್ಯವಾಗಿವೆ. ಸ್ಥಳೀಯ ಐತಿಹ್ಯಗಳಲ್ಲಿಯೂ ಅವರಿಗೆ ಆಸಕ್ತಿಯಿದ್ದುದರಿಂದ ‘ಬರ್ಸಲೋರ್ ಬಾಬ್ರಾಯ’ದಂತಹ ಅಪೂರ್ವ ಕತೆಯನ್ನು ಬರೆಯಲು ಅವರಿಗೆ ಸಾಧ್ಯವಾಗಿದೆ.

ಕತೆಯ ಹಿನ್ನೆಲೆ:

 ಪೋರ್ಚುಗೀಸರ ಹಾವಳಿ
ವಿಜಯನಗರದ ಆಳ್ವಿಕೆಯ ಕಾಲದಲ್ಲಿಯೇ ಕರಾವಳಿ ಜಿಲ್ಲೆಯಲ್ಲಿ ಪೋರ್ಚುಗೀಸರ ಕಿರುಕುಳ ಪ್ರಾರಂಭವಾಯಿತು. ಅವರು ನಗರ, ಕಾಡುಗಳಿಗೆ ಬೆಂಕಿಯಿಟ್ಟು ಭಯೋತ್ಪಾದನೆ ಮಾಡುತ್ತಿದ್ದರು. 1530 ರಲ್ಲಿ ಅವರು ಮಂಗಳೂರಿಗೆ ಬೆಂಕಿ ಹಾಕಿದ್ದರು. 1568 ರಲ್ಲಿ ಮಂಗಳೂರನ್ನು, 1569 ರಲ್ಲಿ ಕುಂದಾಪುರವನ್ನು ವಶಪಡಿಸಿಕೊಂಡರು. 1524 ರಿಂದ 1714 ರವರೆಗೆ ಅವರು ಪ್ರತಿವರ್ಷ ಮಂಗಳೂರು ಬಂಗರಸನಿಂದ 2400 ಮುಡಿ ಅಕ್ಕಿ ಮತ್ತು 1000 ಬುದ್ದಲಿ ಎಣ್ಣೆ, ಮಂಜೇಶ್ವರದಿಂದ 700 ಮುಡಿ, ಕುಂಬಳೆಯಿಂದ 800 ಮುಡಿ, ಮುಲ್ಕಿಯಿಂದ 800 ಮುಡಿ, ಬಾರಕೂರಿನಿಂದ 1000 ಮುಡಿ, ಸೂರಾಲಿನ ತೊಳಹಾರರಿಂದ 500 ಮುಡಿ ಕಪ್ಪವನ್ನು ಸಂಗ್ರಹಿಸುತ್ತಿದ್ದರು. ಈ ಅರಸರು ಇದರ ಜತೆಗೆ ವಿಜಯನಗರ ಮತ್ತು ಕೆಳದಿ ಅರಸರಿಗೆ ಕೊಡಬೇಕಾಗಿದ್ದ ಕಪ್ಪವನ್ನು ಒಪ್ಪಿಸಲೇ ಬೇಕಾಗಿತ್ತು. ತಾವು ಪಡೆಯುತ್ತಿದ್ದ ಕಪ್ಪಕ್ಕೆ ಪ್ರತಿಯಾಗಿ ಇಲ್ಲಿನವರಿಗೆ ರಕ್ಷಣೆ ಕೊಡುವ ಬಾಧ್ಯತೆಯನ್ನು ಆ ಘಟ್ಟದ ಮೇಲಿನ ಅರಸೊತ್ತಿಗೆಗಳು ತೋರಿಸಲಿಲ್ಲ. ಹೀಗಾಗಿ ಒಂದು ಸಂಕ್ಷಿಪ್ತ ಅವಧಿಯಲ್ಲಿ ಕರಾವಳಿ ಜಿಲ್ಲೆಯು ಪೋರ್ಚುಗೀಸರ ವಶದಲ್ಲಿತ್ತು ಎಂದೇ ಹೇಳಬಹುದು.
ಪೋರ್ಚುಗೀಸರು ಮತ್ತು ಬ್ರಿಟಿಷರಿಗೆ ಇದ್ದ ವ್ಯತ್ಯಾಸವೆಂದರೆ ಪೋರ್ಚುಗೀಸರಿಗೆ ತಾವು ಒಂದು ರಾಜ್ಯವನ್ನು ಕಟ್ಟಿ ಆಳಬೇಕು, ತಾವು ಪಡೆಯುವ ಕಪ್ಪಕ್ಕೆ ಪ್ರತಿಯಾಗಿ ಇಲ್ಲಿನವರಿಗೆ ಉತ್ತಮ ಪ್ರಭುತ್ವವನ್ನು ಕೊಡಬೇಕು ಎಂಬ ಯೋಚನೆಯೇ ಇರಲಿಲ್ಲ. ಅವರು ಸಿಕ್ಕಿದ್ದನ್ನು ದೋಚುವ ದರೋಡೆಗಾರರ ಮನೋಭಾವದಿಂದ ಕಪ್ಪವನ್ನು ವಸೂಲಿಮಾಡಿಕೊಂಡು ಹೋಗಿಬಿಡುತ್ತಿದ್ದರು. ಆದುದರಿಂದ ಅಬ್ಬಕ್ಕ ರಾಣಿಯಂಥವರು ಅವರು ಕಪ್ಪ ಕೇಳಲು ಬಂದಾಗ ಪ್ರತಿಭಟಿಸುತ್ತಿದ್ದರು.
ಬ್ರಿಟಿಷರ ಪೂರ್ವದಲ್ಲಿ ಇದ್ದ ಅಭದ್ರತೆ
1800 ರಲ್ಲಿ ಬ್ರಿಟಿಷರು ಕರಾವಳಿ ಜಿಲ್ಲೆಯ ಮೇಲೆ ಸಂಪೂರ್ಣ ಹತೋಟಿ ಸಾಧಿಸುವ ಮುನ್ನ ಇಲ್ಲಿನ ಹೇರಳ ಸಂಪತ್ತನ್ನು ದೋಚುವುದಕ್ಕಾಗಿ ರಾಜರುಗಳೂ, ತುಂಡರಸರೂ, ವಿದೇಶೀಯರೂ, ಕಡಲ್ಗಳ್ಳಲೂ, ದಾರಿಗಳ್ಳರೂ, ದರೋಡೆಗಾರರೂ ಮೇಲಾಟ ನಡೆಸುತ್ತಿದ್ದರು. ಇದರಿಂದಾಗಿ ಇಲ್ಲಿನ ಜನ ನೆಮ್ಮದಿಯಿಂದ ತಮ್ಮ ಫಲವತ್ತಾದ ಗದ್ದೆಗಳಲ್ಲಿ ದುಡಿದು ತಿನ್ನಲು ಸಾಧ್ಯವಿರಲಿಲ್ಲ. ಬೆಳೆದದ್ದರ ಬಹುಪಾಲು ಪಟೇಲರಿಗೂ, ಅವರ ಮೂಲಕ ದಾಳಿಕೋರರಿಗೂ ಸಲ್ಲುತ್ತಿತ್ತು.
ತುಲಾಜಿ ಆಂಗ್ರೆ ಎಂಬ ಕಡಲ್ಗಳ್ಳ 1746 ರಲ್ಲಿ ಮಂಗಳೂರನ್ನು ಮತ್ತು ಆಲಿ ರಾಜ ಎಂಬ ಕಡಲ್ಗಳ್ಳ 1756 ರಲ್ಲಿ ಕೊಲ್ಲೂರು ದೇವಸ್ಥಾನವನ್ನು ದೋಚಿದ್ದರು. ಪೆÇೀರ್ಚುಗೀಸ್ ಹಡಗುಗಳು ಆಗಾಗ ಇಂತಹ ಕೃತ್ಯಗಳನ್ನು ಎಸಗುತ್ತಿದ್ದವು. ಅಂತಹ ಒಂದು ಸಂದರ್ಭವನ್ನು ಸಾಂತ್ಯಾರು ವೆಂಕಟರಾಜರು ತಮ್ಮ ‘ಬರ್ಸಲೋರ್ ಬಾಬ್ರಾಯ’ ಎಂಬ ನೀಳ್ಗತೆಯಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಪೋರ್ಚುಗೀಸರ ಧಾರ್ಮಿಕ ಕ್ರೌರ್ಯ, ದರೋಡೆ ಹಾಗೂ ಲೂಟಿಕೋರ ಪ್ರವೃತ್ತಿಯನ್ನು ಸಮಗ್ರವಾಗಿ ಗ್ರಹಿಸುವ ಕತೆ ಇದು.
‘ಬರ್ಸಲೋರ್ ಬಾಬ್ರಾಯ’ ಕತೆಯಲ್ಲಿ ಬಸರೂರಿಗೆ (ಪೋರ್ಚುಗೀಸರು ‘ಬರ್ಸಲೋರ್’ ಎಂದು ಕರೆಯುತ್ತಿದ್ದರು) ಬಂದ ಪೋರ್ಚುಗೀಸರ ಲೂಟಿಕೋರ ಹಡಗೊಂದು ಎರಡು ತಿಂಗಳುಗಳ ಕಾಲ ಅಲ್ಲಿ ಲಂಗರು ಹಾಕಿ, ಹಡಗನ್ನು ರಿಪೇರಿ ಮಾಡಲು ಸ್ಥಳೀಯ ಬಡಗಿಗಳ ಸೇವೆಯನ್ನು ಬಳಸಿಕೊಂಡು, ಸ್ಥಳೀಯ ವ್ಯಾಪಾರಿಗಳಿಂದ ಸಾವಿರಗಟ್ಟಲೆ ಅಕ್ಕಿ ಮುಡಿಗಳನ್ನು ಹಡಗಿಗೆ ತರಿಸಿಕೊಂಡು ಹಣ ಕೊಡದೆ ಹೊರಡುವ ಅಂದಾಜು ಮಾಡುವ ಸನ್ನಿವೇಶ ಬರುತ್ತದೆ.
ಹಡಗಿನ ಕಪ್ತಾನ ಮಸ್ಕರೇಂಞಸ್ ಬಸರೂರು ಪಟ್ಟಣದ ಪಟ್ಟಣಸೆಟ್ಟರಲ್ಲಿ, ಎರಡು ತಿಂಗಳುಗಳ ಕಾಲ ಹಡಗಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಒದಗಿಸಿಕೊಟ್ಟು, ರಿಪೇರಿಗೆ ಬಡಗಿಗಳನ್ನು ಕಳಿಸಿಕೊಡಲು ಕೇಳಿಕೊಳ್ಳುತ್ತಾನೆ. ಅವರು ಒಳ್ಳೆಯ ವ್ಯಾಪಾರದ ನಿರೀಕ್ಷೆಯಲ್ಲಿ ಅವನು ಕೇಳಿದ್ದೆಲ್ಲ ಒದಗಿಸಿಕೊಟ್ಟು, ವ್ಯಾಪಾರವೆಂದು ದೊಡ್ಡ ಪ್ರಮಾಣದ ಅಕ್ಕಿಯನ್ನು ಹಡಗಿಗೆ ಕಳಿಸಿಕೊಡುತ್ತಾರೆ. ಆದರೆ ಕೊನೆಗೆ ಆ ಹಡಗು ವ್ಯಾಪಾರಿಗಳಿಗಾಗಲಿ, ಬಡಗಿಗಳಿಗಾಗಲಿ ಹಣ ಕೊಡದೆ ಹೊರಟುಹೋಗುವರೆನ್ನುವುದು ಖಚಿತವಾಗುತ್ತದೆ. ಆಗ ವ್ಯಾಪಾರಿಗಳು ಬಾಬ್ರಾಯ ಎನ್ನುವ ಸಮಾಜ ಬಾಹಿರ ಒಂಟಿ ಯುವಕನನ್ನು ತಮ್ಮ ಪ್ರತಿನಿಧಿಯಾಗಿ ಹಡಗಿಗೆ ಕಳಿಸಿಕೊಡುತ್ತಾರೆ. ಮೂಲತಃ ಕೊಂಕಣಿ ಬ್ರಾಹ್ಮಣನಾದ ಅವನನ್ನು ಪೋರ್ಚುಗೀಸರು ಗೋವಾದಲ್ಲಿ ಮತಾಂತರಿಸಿರುತ್ತಾರೆ, ಅವನು ಅಲ್ಲಿಂದ ತಪ್ಪಿಸಿಕೊಂಡು ಬಸರೂರಿಗೆ ಬಂದು ಅಲ್ಲಿ ಒಂಟಿಯಾಗಿ ಬದುಕುತ್ತಿರುತ್ತಾನೆ. ಅವನಿಗೆ ಪೋರ್ಚುಗೀಸ್ ಭಾಷೆ ಬರುತ್ತಿತ್ತು. ಅವನು ಹಡಗಿಗೆ ಹೋಗಿ ಮಸ್ಕರೇಂಞಸ್‍ನ ಬಳಿ ವ್ಯಾಪಾರಿಗಳ ಹಣ ಕೊಡಬೇಕೆಂದು ವಿನಂತಿಸಿಕೊಳ್ಳುತ್ತಾನೆ. ಆದರೆ ಮಸ್ಕರೇಂಞಸ್ ಅವನನ್ನೇ ಬಂಧಿಸಿ ಲಂಗರು ಎತ್ತುತ್ತಾನೆ. ಆ ರಾತ್ರಿ ಬಾಬ್ರಾಯ ತನ್ನನ್ನು ಬಂಧಿಸಿಟ್ಟ ನೆಲಮಾಳಿಗೆಯಲ್ಲಿ ಕೋವಿಗಳಿಗೆ ಬಳಸುವ ಸ್ಫೋಟಕದ ಸಂಗ್ರಹವಿದ್ದುದನ್ನು ಗಮನಿಸಿ ಉಪಾಯವಾಗಿ ಅದಕ್ಕೆ ಬೆಂಕಿ ಹಚ್ಚಿ ಇಡೀ ಹಡಗನ್ನು ಸ್ಫೋಟಿಸಿಬಿಡುತ್ತಾನೆ. ಹಡಗಿನಲ್ಲಿದ್ದ ಅಪಾರ ಸಂಪತ್ತು ನದಿಯಲ್ಲಿ ಮುಳುಗಿದ್ದಲ್ಲದೆ ಕೆಲವು ನಾಣ್ಯಗಳು ಬಸರೂರು ಪೇಟೆಯಲ್ಲಿಯೂ ಬಿದ್ದಿದವಂತೆ. ಬಾಬ್ರಾಯನಿಗೆ ಮಾತುಕೊಟ್ಟಂತೆ ವ್ಯಾಪಾರಿಗಳು ಪೇಟೆಯ ನಡುವಿನ ಒಂದು ಕಟ್ಟೆಗೆ ಬಾಬ್ರಾಯನ ಹೆಸರಿಡುತ್ತಾರೆ. ಅದು ಈಗಲೂ ಇದೆ. ಈ ರೋಚಕ ಮತ್ತು ಭೀಕರ ಇತಿಹಾಸವನ್ನು ಅರಿತವರು ಇಂದಿನ ಬರ್ಸಲೋರಿನಲ್ಲಿ (ಬಸರೂರಿನಲ್ಲಿ) ಕಾಣಸಿಗುವುದಿಲ್ಲ. ಬಾಬ್ರಾಯನ ಕಟ್ಟೆಯನ್ನು ಸಂರಕ್ಷಿಸುವ ಕೆಲಸವೂ ಅಲ್ಲಿ ನಡೆದಿಲ್ಲ.
ಸಾಂತ್ಯಾರು ವೆಂಕಟರಾಜರ ‘ಬರ್ಸಲೋರ್ ಬಾಬ್ರಾಯ’ಬ್ರಿಟಿಷ್ ಪೂರ್ವದ ವಸಾಹತುಕಾಲೀನ ಇತಿಹಾಸವನ್ನು ಹೇಳುವ ಒಂದು ಮುಖ್ಯ ಕತೆಯಾಗಿದೆ.

(ಮುಂದಿನ ಕಂತಿನಲ್ಲಿ: ’ಉಳ್ಳಾಲದ ರಾಣಿ’ – ಬೇಕಲ ರಾಮನಾಯಕರ ಕಥೆ)