ಎಲ್ಹೋದೆ ವಾಸಯ್ಯ… : ಲೈಲಾ ಪರ್ವೀನ್ ಬರಹ
ಸ್ವಲ್ಪ ದೊಡ್ಡವಳಾಗುತ್ತಾ ಬಂದಂತೆ ವಾಸಯ್ಯನಿಗೇನೋ ಅನ್ಯಾಯವಾಗಿದೆ, ಅದಕ್ಕೇ ಅವನು ಹಾಗಿರುವುದು ಎಂದು ಬಲವಾಗಿ ಅನಿಸತೊಡಗಿತ್ತು. ಅವತ್ತೆಲ್ಲ ಅಷ್ಟು ಸಾರಿ ಕೇಳಿದಾಗಲೂ ಅಮ್ಮ ಹೇಳಿರಲಿಲ್ಲ. ಅಮ್ಮನಿಗೂ ಗೊತ್ತಿಲ್ಲವೇನೋ ಅಂದುಕೊಂಡಿದ್ದೆ. ನನಗೂ ಮದುವೆಯಾಗಿ ಮಕ್ಕಳಾಗಿ ಶಾಲೆ ಮನೆ ಅಂತ ನಿಭಾಯಿಸುವಾಗ ಎದುರಾಗುವ ಕಷ್ಟಗಳನ್ನು ಹೇಳಿಕೊಳ್ಳಲು ಯಾರೂ ಇರದೆ ಮನಸ್ಸು ಭಾವುಕವಾಗಿ ರಾತ್ರಿ ಕತ್ತಲೆಯಲ್ಲಿ ಕಣ್ಣೀರು ಸುರಿಸಿ ಹಗಲು ಹೊತ್ತು ಮೌನ ಆವರಿಸಿಕೊಂಡಾಗ ಈ ಮಹಾಮೌನಿ ವಾಸಯ್ಯ ನೆನಪಾಗದೇ ಇರುತ್ತಿರಲಿಲ್ಲ.
ಲೈಲಾ ಪರ್ವೀನ್ ಬರಹ ನಿಮ್ಮ ಓದಿಗೆ
ನಂಬಿ ಕೆಟ್ಟವರಿಲ್ಲವೋ… ಇಲ್ಲ…ನಂಬಿ ಕೆಟ್ಟಿದ್ದಾರೆ: ಪ್ರೊ. ಪುಟ್ಟರಾಜು ಪಿ. ಬರಹ
ಸಾವಿರಾರು ವರುಷಗಳ ಹಿಂದೆ ಈ ಕತೆಗಳನ್ನೇ ನಿಜವೆಂದು ಧೃಡವಾಗಿ ನಂಬಿರುವ ಜನರನ್ನು ಏನೆನ್ನಬೇಕು? ಆ ನಂಬಿಕೆಯನ್ನೇ ಗಾಳವಾಗಿಸಿ ಜನರನ್ನು ಮರಳು ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಪಿತೂರಿಯಾದರೂ ಏನು? ಕಳೆದ ಒಂದು ದಶಕದಿಂದ ನಮ್ಮ ದೇಶವೂ ಈ ದಾರಿಯಲ್ಲಿ ನಿಧಾನವಾಗಿ ಸಾಗುತ್ತಿದೆ ಎಂಬ ಗುಮಾನಿ ಹುಟ್ಟುತ್ತಿದೆ. ನಾನು ಈ ಲೇಖನ ಬರೆಯುತ್ತಿರುವ ದಿನಗಳಲ್ಲೇ ಭಾರತದ ಸುಪ್ರೀಂ ಕೋರ್ಟಿನಲ್ಲಿ ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡಬೇಕೇ? ಅಥವಾ ಇಲ್ಲವೇ ಎಂಬ ವಿಚಾರಣೆ ನಡೆಯುತ್ತಿತ್ತು.
ಪ್ರೊ. ಪುಟ್ಟರಾಜು ಪಿ. ಬರಹ, ನಿಮ್ಮ ಓದಿಗೆ
“ಹಳೆಯ ಪುಟಗಳಿಂದ” ಸರಣಿಯಲ್ಲಿ ಅಬ್ದುಲ್ ರಶೀದ್ ಬರಹ
ಅದು ಸುಳ್ಳಲ್ಲ. ನಿಜವೂ ಕೂಡಾ. ಧರ್ಮ ಗ್ರಂಥಗಳಲ್ಲಿರುವ ಸ್ವರ್ಗದ ವಿವರಗಳಲ್ಲಿರುವ ಎಲ್ಲ ಸೌಂದರ್ಯವನ್ನೂ ನಾನೂ ಇಲ್ಲಿ ಸ್ವತಃ ಕಂಡಿದ್ದೆ. ಆದರೆ ಯಾಕೋ ಅಪ್ಸರೆಯರು ಕಾಣಿಸುತ್ತಿಲ್ಲವಲ್ಲಾ ಎಂದು ಯೋಚಿಸುತ್ತಿದ್ದೆ. ಒಂದು ಮಧ್ಯಾಹ್ನ ಬಿಸಿಲಲ್ಲಿ ತಿರುಗಿ ಬಸವಳಿದು ಒಂದು ನಿಂಬೂ ಪಾನಿಯ ಅಂಗಡಿಗೆ ಹೋಗಿದ್ದೆ. ಅದು ನಿಜವಾಗಿ ಒಂದು ದಿನಸಿ ಅಂಗಡಿ. ಆ ಅಂಗಡಿಯೊಳಗೇ ಒಂದು ಮೂಲೆಯಲ್ಲಿ ನಿಂಬೂ ಪಾನಿಯ ಅಂಗಡಿ. ಅದನ್ನು ನಡೆಸುತ್ತಿರುವವರು ದಿನಸಿ ಅಂಗಡಿಯ ಮಾಲಿಕರ ಮಡದಿಯೂ ಇರಬಹುದು.
“ಹಳೆಯ ಪುಟಗಳಿಂದ” ಸರಣಿಯಲ್ಲಿ ಅಬ್ದುಲ್ ರಶೀದ್ ಬರಹ
ಸ್ವ ಅರಿವಿನ ಸದ್ಭಾವವೇ ಗುರು ಕಾರುಣ್ಯದ ಮೂಲ ಮಂತ್ರ.: ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ
ನಮ್ಮನ್ನು ನಾವು ಅರಿತುಕೊಂಡಾಗ ಗುರುವನ್ನು ಅರಿತುಕೊಳ್ಳುವ ಪ್ರಜ್ಞೆ ಬಲಗೊಳ್ಳುತ್ತದೆ. ಗುರುವನ್ನು ಹೊರಗಡೆ ಹುಡುಕದೆ, ಒಳಗಡೆಯೇ ಹುಡುಕಬೇಕು. ಅಂದರೆ ಭೌತಿಕ ವಸ್ತುಗಳಲ್ಲಿ ಗುರುವನ್ನು ಕಾಣದೆ, ಅಂತರಾತ್ಮನಲ್ಲಿ ಬೆಳಕನ್ನು ಕಾಣಬೇಕು. ಗುರುವಿನ ಕೆಲಸ ಬೋಧಿಸುವುದು ಮಾತ್ರವಲ್ಲ, ನಮ್ಮಲ್ಲಿರುವ ಅಂತಃಶಕ್ತಿಯನ್ನು ಜಾಗೃತಗೊಳಿಸಿ ಗುರುವಿನೊಂದಿಗೆ ಅನುಸಂಧಾನದ ದಾರಿ ನಿರ್ಮಿಸಿಕೊಳ್ಳಬೇಕೆಂಬ ಆಲೋಚನೆಯೇ ದೊಡ್ಡದು.
ಗುರುಪೂರ್ಣಿಮೆಯ ನಿಮಿತ್ತ ಡಾ. ರಾಜೇಂದ್ರಕುಮಾರ್ ಕೆ. ಮುದ್ನಾಳ್ ಬರಹ ನಿಮ್ಮ ಓದಿಗೆ
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಕೃಪಾಕರ ಸೇನಾನಿ ಹೇಳಿದ ಕಾಡುನಾಯಿಗಳ ಕಥಾನಕ
ನಾವು ಹೇಳಿದ ಆ ದಿನ ಸಂಜೆ. ಬೇಟೆಗೆ ಹೋದವರಲ್ಲಿ ಅಲ್ಫಾ ಗಂಡು ಮಾತ್ರ ವಾಪಸ್ಸು ಬಂತು. ಮರಿಗಳು ಬೇಟೆ ಮುಗಿಸಿ ಬಂದ ಅದನ್ನು ಬಾಯಿ ನೆಕ್ಕಿ ಸ್ವಾಗತಿಸುವ ಬದಲು ಯಾಕೋ ಅಳಲು ತೊಡಗಿದವು. ನಮಗೆ ತಟ್ಟನೆ ಹೊಳೆಯಿತು. ಆ ಮರಿಗಳ ಅಚ್ಚುಮೆಚ್ಚಿನ ಆ ಎರಡು ಗಂಡು ನಾಯಿಗಳು ಇನ್ನೊಂದು ಹಿಂಡಿನ ಅತೃಪ್ತ ಹೆಣ್ಣು ನಾಯಿಗಳ ಹಿಂದೆ ಓಡಿ ಹೋಗಿದ್ದವು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಕೃಪಾಕರ ಸೇನಾನಿ ಹೇಳಿದ ಕಾಡುನಾಯಿಗಳ ಕಥಾನಕ ನಿಮ್ಮ ಓದಿಗೆ
ಹಳೆಯ ಪುಟಗಳಿಂದ…” ಸರಣಿಯಲ್ಲಿ ಚನ್ನಕೇಶವ ಬರಹ
“ನೀನಾಸಂ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲಾ ರಂಗ ತಾಂತ್ರಿಕ ಸಮಸ್ಯೆಗಳನ್ನು ಬಹಳ ಸಮಾಧಾನವಾಗಿ ನಿಭಾಯಿಸುವ ನಮ್ಮ ಸಮಾಧಾನಿ ಬಂಗಾರಣ್ಣ, ಒಂದು ರೀತಿಯಲ್ಲಿ ‘ಸಕಲಕಲಾವಲ್ಲಭನ್’. ಇವರು ‘ನೀನಾಸಂಗೇ ದೊಡ್ಡವರು’. ಇವರು ಯಾವಯಾವ ವರ್ಷದಲ್ಲಿ ಯಾರುಯಾರು ಏನೇನು ಮಾಡಿದರು ಎಂಬುದನ್ನೆಲ್ಲಾ ಬಲ್ಲ ನಿಧಾನಿ. ನಿಧಾನಿಯಾಗುವುದು ಪ್ರಧಾನಿಯಾಗುವುದಕ್ಕಿಂತಲೂ ಮಹತ್ತರವಾದುದೆಂಬುದನ್ನು ನನ್ನಂಥವರಿಗೆಲ್ಲಾ ಹೇಳದೇ ಕಲಿಸಿಕೊಟ್ಟ ದ್ರೋಣಾಚಾರ್ಯರು ಇವರು”
ಹಳೆಯ ಪುಟಗಳು ಸರಣಿಯಲ್ಲಿ ಚನ್ನಕೇಶವ ಬರಹ
ಆಲದ ಮರವೆಂಬ ಆಲಯದಲ್ಲಿ: ದೇವಿಕಾ ನಾಗೇಶ್ ಬರಹ
ವೈಜ್ಞಾನಿಕ, ಧಾರ್ಮಿಕ ಕಾರಣಗಳು ಏನೇ ಇರಲಿ. ಈ ಭೂಮಿಯಲ್ಲಿ ಇರುವ ಪ್ರತಿಯೊಂದು ಕ್ರಿಮಿಕೀಟ, ಮರ ಗಿಡ, ಪ್ರಾಣಿ ಪಕ್ಷಿಗಳು ಮನುಷ್ಯರಷ್ಟೇ ಪ್ರಮುಖರು. ಪ್ರಕೃತಿಯ ಸಮತೋಲನಕ್ಕಾಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲು ಕಾಡು ಬೇಕು ಎನ್ನುವ ಸತ್ಯ ಮನಗಂಡರೆ ಗಿಡ ಮರಗಳನ್ನು ನಾವು ಪ್ರೀತಿಸುತ್ತೇವೆ. ಹೀಗಾಗಿ ದೇವರ ಕಾಡುಗಳು, ನಾಗ ಬನಗಳು ಈ ಭೂಮಿಯಲ್ಲಿ ನಂಬಿಕೆಯ ಹೆಸರಿನಲ್ಲಿ ಬಹುಕಾಲ ಬಾಳಿ ಬಂದವು. ಆದರೆ ಇಂದು ಇವಿಷ್ಟು ಕಾಂಕ್ರೀಟ್ ಕಾಡುಗಳಾಗಿರುವುದು ನಾವು ಕಂಡ ದುರಂತ.
ಆಲದ ಮರದ ಕುರಿತು ದೇವಿಕಾ ನಾಗೇಶ್ ಬರಹ
ಯುದ್ಧಕಾಲದಲ್ಲಿ ಸಂಜಿತ್ ಸಂಗೀತ ಸಂಜೆ: ಯೋಗೀಂದ್ರ ಮರವಂತೆ ಬರಹ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಲಿಕೆ, ಜಾನಪದ ಮತ್ತು ಭಾವಗೀತೆಗಳ ಪ್ರಭಾವ ಎಲ್ಲವೂ ಸೇರಿ ತಾನೇ ಮೈಗೂಡಿಸಿಕೊಂಡ ಉಲ್ಲಾಸಭರಿತ ತಾಜಾ ಶೈಲಿ, ಯಾರಂತೆಯೂ ಅಲ್ಲದ ಆದರೆ ಮತ್ತೆ ಮತ್ತೆ ಕೇಳಬೇಕೆನಿಸುವ ಆಕರ್ಷಕ ಧ್ವನಿ ಮತ್ತು ಸ್ವರಸಂಚಾರ, ಸಿನಿಮಾ ಹಾಡುಗಾರಿಕೆಗೆ ಅತಿ ಅಗತ್ಯವಾದ ವಿಶಿಷ್ಟ ಭಾವ ರಸ ಸ್ಪುರಣೆ, ಎಲ್ಲದಕ್ಕಿಂತ ಮುಖ್ಯವಾಗಿ ಚಲನಚಿತ್ರ ಹಿನ್ನೆಲೆ ಗಾಯನದ ಸಾಂಪ್ರದಾಯಿಕ ಜಾಡಿನ ಜೊತೆಗೆ, ತನ್ನದೇ ನಿರ್ಮಾಣದ ಹಾಡುಗಳಲ್ಲಿ ಕಥನ ಮಾದರಿಯ ಸೃಜನಶೀಲ ನಿರೂಪಣೆಯ ಬಗೆಗಿನ ಕಾಳಜಿ ಮತ್ತು ಜಗತ್ತಿನ ಬೇರೆಬೇರೆ ಸಂಗೀತ ಪ್ರಕಾರಗಳ ಸೂಕ್ಷ್ಮ ಗಮನಿಸುವಿಕೆಯಿಂದ ಹುಟ್ಟಿದ ಪ್ರಯೋಗಗಳು ಸಮ್ಮಿಳಿತವಾಗಿ ಸಂಜಿತ್ ಹೆಗ್ಡೆ ಸಂಗೀತವನ್ನು ವೈಶಿಷ್ಟ್ಯಪೂರ್ಣ ನೆಲೆಯಲ್ಲಿ ನಿಲ್ಲಿಸುತ್ತದೆ.
ಯೋಗೀಂದ್ರ ಮರವಂತೆ ಬರಹ ನಿಮ್ಮ ಓದಿಗೆ
ಬರಹದ ಭಾವನೆ: ಓದಿನ ಕುರಿತು ಕಿಟ್ಟು ಬರಹ
ಬರಹ ಬರೆದವನ ತಿಳುವಳಿಕೆಯ, ಅವನ ಅನಿಸಿಕೆಯ, ಅವನ ಬಯಕೆಯ, ಭಾವನೆಯ ಪ್ರತಿಬಿಂಬವಲ್ಲವೇ? ಅವನ ಸಂತಸ, ಅವನ ದುಗುಡ, ಅವನ ನೆಮ್ಮದಿ, ಅವನ ಆತಂಕ, ಅವನ ಎದೆಗಾರಿಕೆ, ಅವನ ಪುಕ್ಕಲುತನ, ಅವನ ಪ್ರೇಮ ಕಾಮಗಳೆಲ್ಲ ಅದರಲ್ಲಿ ಪದಗಳಾಗಿರುವುದಿಲ್ಲವೇ? ಹಾಗಾದರೆ ಕವಿತೆ ಅಥವಾ ಬರಹ ಬರೆದವನಿಂದಲೇ ಅರ್ಥ ಪಡೆಯುವುದು ಎಂದಾಯಿತಲ್ಲವೇ? ಹಾಗೆ ಬರೆದವನಿಂದಲೇ ಪಡೆದುಕೊಂಡ ಅರ್ಥ ಓದುಗನಿಗೆ ಸರಿಯಾಗಿ ಅರ್ಥವಾಗಬೇಕಾದರೆ ಪ್ರತಿ ಬರಹದ ಇಲ್ಲಾ ಕಾವ್ಯದ ಜೊತೆಗೊಂದು ಬರೆದವನ ಹಿನ್ನೆಲೆ ಮತ್ತು ಬರಹದ ಹಿನ್ನೆಲೆಯನ್ನೂ ಬರೆಯಬೇಕಾಯಿತಲ್ಲವೇ?
ಓದಿನ ಕುರಿತು ಕಿಟ್ಟು ಬರಹ ನಿಮ್ಮ ಓದಿಗೆ










