ಭಾವನೆಗಳ ಬಿರುಕ ಹೊಲಿಯಲಾರ ಸಿಂಪಿಗ: ಚಂದ್ರಶೇಖರ ಪೂಜಾರ ಬರಹ
ಪ್ರೇಮ ಮೋಹ ವ್ಯಾಮೋಹಗಳ ನಡುವೆ ಇದ್ದ ಗಜ಼ಲ್ ಕಾಲ ಹೊರಳಿದಂತೆ ಜೀವನದ ಎಲ್ಲ ಆಯಾಮಗಳನ್ನು ಹೊಂದಿ ಬದುಕಿನ ಸಮಗ್ರ ಕಾವ್ಯವಾಯಿತು. ಗಜ಼ಲ್ ಬರಿ ಶಬ್ಧಾಲಂಕಾರಗಳ ಸರಪಳಿಯಲ್ಲ, ಅಲ್ಲೊಂದು ಕಾವ್ಯದ ಗುಣವಿರಬೇಕು. ಪ್ರತಿಮೆ, ರೂಪಕಗಳ ಮೂಲಕ ಮಾತನಾಡಬೇಕು. ಬೇಟೆಗೆ ಸಿಲುಕಿದ ಜಿಂಕೆಯ ಆಕ್ರಂದನದಂತೆ ಕಾಣುವ ಗಜ಼ಲ್ ಹೃದಯದ ಬಡಿತವಾಗಬೇಕು. ಓದಿದ ಕೂಡಲೇ ಹೃದಯವನ್ನು ಚಕಿತಗೊಳಿಸುವ ಗುಣ, ಓದುಗನೊಬ್ಬನಿಗೆ ನಿಲುಕದ ಅನುಭವಗಳನ್ನು ಒಂದುಗೂಡಿಸುವ ಶಕ್ತಿ ಪಡೆದಿರಬೇಕು. ವ್ಯಕ್ತಿಯೊಬ್ಬನ ಯೋಚನಾ ಲಹರಿಯನ್ನೇ ಬದಲಿಸುವ ಗುಣವನ್ನು ಅದು ಒಳಗೊಂಡಿರಬೇಕು.
ಶಿವಕುಮಾರ ಮೋ. ಕರನಂದಿ ಗಜ಼ಲ್ ಸಂಕಲನ “ನೆರಳಿಗಂಟಿದ ನೆನಪು” ಕುರಿತು ಚಂದ್ರಶೇಖರ ಯ. ಪೂಜಾರ ಬರಹ