ಕಪ್ಪುಬಿಳುಪಿನ ಉತ್ತರ ಕೊಡಲಾಗದ ಪ್ರಶ್ನೆಗಳು
ಬಸ್ಸಿನ ಕಿಟಕಿ ಸರಿಸಿದೆ. ಮಳೆಯ ಬಿಡಿಬಿಡಿ ಹನಿ ಈ ಬಾರಿ ಅಷ್ಟು ಕಿರಿಕಿರಿಗೊಳಿಸಲಿಲ್ಲ. ಆದರೂ ಗಂಡನ ಗೆಳೆಯ ಮತ್ತು ಆ ಮಂಗಳಮುಖಿಯ ಬಗ್ಗೆ ಯಾವುದೋ ಅವ್ಯಕ್ತ ಭಯ ಆಳದಲ್ಲಿತ್ತು. ಗಂಡ ನೂತನನಿಗೆ ಬೇರೆ ಯಾವ ಆಯ್ಕೆಗಳೂ ಇರಲಿಲ್ಲವಾ? ನೂತನ್ ನನ್ನನ್ನು ನಿಜಕ್ಕೂ ಇಷ್ಟ ಪಡುತ್ತಿದ್ದಾನಾ? ಅಥವಾ ಕೇವಲ ತನ್ನ ಕರ್ತವ್ಯವನ್ನಷ್ಟೇ ನಿಭಾಯಿಸುತ್ತಿದ್ದಾನಾ? ಎಲ್ಲವೂ ಗೋಜಲು ಗೋಜಲಿಗೆ ಇಟ್ಟುಕೊಂಡಿತು. ನನ್ನ ಗಂಡ ಬೈಸೆಕ್ಷುಯಲ್ ಅನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ಯಾಕಿಷ್ಟು ಭಯಪಟ್ಟುಕೊಳ್ಳುತ್ತಿದ್ದೇನೆ? ಯಾವುದೇ ಭಿಡೆಯಿಲ್ಲದೆ ಮುಕ್ತವಾಗಿ ಪ್ರಶ್ನೆಗಳಿಗೆ ಉತ್ತರಿಸುವ ನಾನು ಇರುವುದನ್ನು ಇರುವ ಹಾಗೆ ಒಪ್ಪಿಕೊಳ್ಳಲು ಯಾಕಿಷ್ಟು ಭಯ ಪಟ್ಟುಕೊಳ್ಳುತ್ತಿದ್ದೇನೆ?
ದಾದಾಪೀರ್ ಜೈಮನ್ ಬರೆಯುವ “ಜಂಕ್ಷನ್ ಪಾಯಿಂಟ್” ಅಂಕಣದಲ್ಲಿ ಹೊಸ ಬರಹ