ಘಾಂದ್ರುಕ್ ಮತ್ತು ಸೋಫಿಯ ಎನ್ನುವ ಸೂಜಿಮಲ್ಲಿಗೆ: ಎಚ್.ಆರ್. ರಮೇಶ್ ಬರಹ
ಕತೆಗಳು ಹಿಂದಕ್ಕು ಮುಂದಕ್ಕು ಹೋಗುವ ಶೈಲಿ ಹಿಂದುಸ್ತಾನಿ ಸಂಗೀತದ ಯಾವುದೋ ಹೊಸ ರಾಗವೊಂದು ಹೊಮ್ಮಿದಂತೆ ಸಾಗುತ್ತದೆ. ಅದು ಕಾಲದ ಚಲನೆಯಾಗಿ ಓದುಗರನ್ನು ತನ್ನ ಜೊತೆ ಎಳೆದುಕೊಳ್ಳುತ್ತದೆ. ಕ್ಯಾಂಟರ್ ಬರಿ ಟೇಲ್ಸ್‌ನಲ್ಲಿ ಥಾಮಸ್ ಬಕೆಟ್‌ನ ಪುಣ್ಯಕ್ಷೇತ್ರಕ್ಕೆ ಯಾತ್ರೆ ಕೈಗೊಂಡ ಯಾತ್ರಿಕರು ಒಬ್ಬೊಬ್ಬರು ಒಂದೊಂದು ಬದುಕಿನ ಅನನ್ಯ ಅನುಭವದ ಕತೆಯನ್ನು ಹೇಳುವಂತೆ ಇಲ್ಲಿ ಸಿದ್ಧಾರ್ಥ ಮತ್ತು ಸೋಫಿಯಾ ತಮ್ಮ ಬದುಕಿನ ಜೊತೆ ತಮ್ಮ ಬದುಕನ್ನು ಮತ್ತು ಅದನ್ನು ಆವರಿಸಿರುವ ವ್ಯಕ್ತಿಗಳ ಕತೆಯನ್ನು ಹೇಳುತ್ತ ಹೋಗಿರುವ ಪರಿ ಚುಂಬಕ ಶಕ್ತಿಯಂತೆ ಸೆಳೆಯುತ್ತದೆ.
ಸತೀಶ್ ಚಪ್ಪರಿಕೆ ಅವರ “ಘಾಂದ್ರುಕ್” ಕಾದಂಬರಿ ಕುರಿತು ಎಚ್.ಆರ್. ರಮೇಶ್ ಬರಹ ನಿಮ್ಮ ಓದಿಗೆ