Advertisement

ಶ್ರೀಧರ್‌ ಎಸ್.‌ ಸಿದ್ದಾಪುರ

ಸ. ಹರೀಶ್‌ ಬರೆದ ಈ ಭಾನುವಾರದ ಕತೆ

ಎಲ್ಲವನ್ನು ಕೇಳಿಸಿಕೊಂಡಿದ್ದ ಅವಿನಾಶ್ ಡಾಕ್ಟರಿಗೆ ಕೈ ಮುಗಿದ. ಅಲ್ಲಿ ಮಾಧವಿಗೆ ಮನಸ್ಸು ತೀರಾ ತಲ್ಲಣಿಸಿ ಹೋಯಿತು. ಯಾವಾಗ ಕೇರ್ ಟೇಕರ್ ತನ್ನ ಸುತ್ತಾಟ ಮುಗಿಸಿ ಮನೆ ಒಳಗೆ ಕಾಲಿಟ್ಟಳೊ, ಅವಳಿಗೆ ಮನುಷ್ಯರ ಬಗ್ಗೆ ನಂಬಿಕೆಯೇ ಹೊರಟು ಹೋಯಿತು. ಅವಳ ಮುಖದ ಮೇಲೆ ದುಡ್ಡು ಬಿಸಾಕಿ, `ಮುಖ ತೋರಿಸಬೇಡ, ನಿನಗೆ ಪೊಲೀಸಿಗೆ ಕೊಡದೇ ಬಿಟ್ಟಿದ್ದೀನಿ, ಗೆಟ್ ಲಾಸ್ಟ್’ ಅಂತ ನರನಾಡಿ ಕಿತ್ತುಬರುವಂತೆ ಅರಚಿದಳು.
ಸ. ಹರೀಶ್‌ ಕಥಾ ಸಂಕಲನ “ಅಮ್ಮ ಅಂದ್ರೆ ಭೂಮಿ”ಯ ಶೀರ್ಷಿಕೆ ಕತೆ, ನಿಮ್ಮ ಈ ಭಾನುವಾರದ ಓದಿಗೆ

Read More

ಇನ್ಫೋಸಿಸ್ ಸಾಹಿತ್ಯ ಫೌಂಡೇಶನ್‌ ಪ್ರಶಸ್ತಿ ಪ್ರದಾನ ಸಮಿತಿ ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ -ಧಾರವಾಡ: ಪ್ರಶಸ್ತಿಗೆ ಪುಸ್ತಕ ಆಹ್ವಾನ

ಇನ್ಫೋಸಿಸ್ ಫೌಂಡೇಶನ್‌ ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರ ಕೃತಿಗಳನ್ನು ಆಹ್ವಾನಿಸಲಾಗಿದ್ದು ವಿವರಗಳು ಈ ಕೆಳಗಿನಂತಿವೆ....

Read More

ಆಶಾ ರಘು ಬರೆದ ಈ ಭಾನುವಾರದ ಕತೆ “ನೇಪಥ್ಯ”

ನಾನು ಬಣ್ಣ ಹಚ್ತಾ, ಮೊಳೆ ಹೊಡೀತಾ, ಲೈಟು ಕಟ್ತಾ ಬೆಳೆಯತೊಡಗಿದೆ. ಹರಿದ ಒಳ ಅಂಗಿಯ ಮೇಲೆ ರಾಜಕುಮಾರನ ಗರಿಗರಿ ಉಡುಪು..! ತಲ್ಲಣಗಳಲ್ಲಿ ಕುಸಿಯುವ ಮನಸ್ಸನ್ನು ಮೀರಿ ಹೊರಗೆ ಹಾಸ್ಯೋತ್ಸಾಹದ ಸಂಭಾಷಣೆಗಳ ಹೊನಲು..! ಒಮ್ಮೊಮ್ಮೆ ಇದು ತಿರುಗುಮುರುಗೂ ಆಗುವುದುಂಟು..! ನಾಟಕವಲ್ಲವೇ..!? ಎಷ್ಟೋ ಬಾರಿ ನಾನು ವಾಸ್ತವ ಸಂಗತಿಗಳಿಗೆ ಪ್ರತಿಕ್ರಿಯಿಸಿದರೆ, ಅದು ದಿಟವಾ ಅಥವಾ ನಾಟಕ ಆಡುತ್ತಿದ್ದೇನೆಯಾ ಅಂತ ನನಗೇ ಗುಮಾನಿ ಅನ್ನಿಸುವಷ್ಟು ಅಭಿನಯ ಕಲೆ ನನಗೆ ಒಲಿಯಿತು. ನಡೆಯುತ್ತಿದ್ದವನಿಗೆ ಸೈಕಲ್ ಬಂತು.
ಆಶಾ ರಘು ಬರೆದ “ಕೆಂಪು ದಾಸವಾಳ” ಕಥಾ ಸಂಕಲನದ ಕತೆ “ನೇಪಥ್ಯ” ಈ ಭಾನುವಾರದ ಬಿಡುವಿನ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವೈದೇಹಿ ಬರೆದ ಕತೆ

ಯಾಕೋ ನನಗೆ ಕೋರ್ಟುಮನೆ ಅಲೆದೇ ಸೋತು ಕುಸಿದುಹೋಗಿದ್ದ ಅಪ್ಪನ ಹೋರಾಟದ ಬಗ್ಗೆ ಹೇಳಲೇಬೇಕೆನಿಸಿತು. ಆಸ್ತಿಗಾಗಿ ಕುಟುಂಬದಲ್ಲೇ ಒಂದು ಆತ್ಮಹತ್ಯೆ ಆಯಿತು, ಒಂದು ಕೊಲೆ ಆಯಿತು, ಇದೆಲ್ಲ ನಮ್ಮ ಮಟ್ಟಿಗೆ ಎಂಥ ದೊಡ್ಡದು ಯೋಚಿಸಿ. ಅಪ್ಪ ಕಡೆಕಡೆಗೆ ತಮ್ಮದೇ ಕುಟುಂಬದೊಂದಿಗೆ ಕೋರ್ಟುಕಚೇರಿ ವ್ಯಾಜ್ಯ ಯಾಕಾದರೂ ಬೇಕಿತ್ತು ಅಂತ ಕೊರಗುತಿದ್ದರು ಅಷ್ಟಿಷ್ಟಲ್ಲ. ಹಾಗೆಂದು ‘ಜಗಳ ಬೇಡ, ಎಲ್ಲ ನಿಮಗೇ, ತಕೊಳ್ಳಿ’ ಅಂತ ಬಿಟ್ಟುಕೊಟ್ಟರೇನು? ಇಲ್ಲವಲ್ಲ. ಅದು ಸಾಧ್ಯವೂ ಇಲ್ಲ. ‘ಒಂದು ರೀತಿ ಮಹಾಭಾರತದಲ್ಲಿ ಬರುವ ಧರ್ಮವ್ಯಾಧನ ಕತೆಯಂತೆ ನಾವೆಲ್ಲ.
ನಾನು ಮೆಚ್ಚಿದ ನನ್ನ ಕಥಾ ಸರಣಿಯ ಕೊನೆಯ ಕಂತಿನಲ್ಲಿ ವೈದೇಹಿ ಬರೆದ ಕತೆ “ಅಮುದ ಹೇಳಿದ ಕತೆ”

Read More

ರಾಜ್ಕುಮಾರ್ ಅಂದ್ರ ಏನಂದ್ಕಂಡೆ?: ಎಂ. ಜವರಾಜ್‌ ಹೊಸ ಕಾದಂಬರಿಯ ಆಯ್ದ ಭಾಗ

ಪಂಚಾಯ್ತಿ ಆಫೀಸ್ ಮಗ್ಗುಲು ಬೀದಿಲಿದ್ದ ಕುಂಟ ಸಿದ್ದಪ್ಪನ ಮನೆಯ ಅಂಗಳದಲ್ಲಿ ಒಂದಷ್ಟು ಜನ ಮಾತಾಡ್ತ ನಿಂತಿದ್ದರು. ಅಲ್ಲಿಗೆ ನಾಕಾರು ಪೇಪರು ಬರುತ್ತಿದ್ದವು. ಕುಂಟ ಸಿದ್ದಪ್ಪ ಬಿಳಿಪಂಚೆ ಬಿಳಿ ಶರ್ಟು ಹಾಕೊಂಡು ಕ್ರಾಪ್ ತಲೆ ಬಾಚ್ಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು “ಇದು ಗೋಕಾಕ್ ಚಳುವಳಿ ಅಂತ. ಅವ್ರೊಬ್ಬ ದೊಡ್ ಕವಿ. ಅವ್ರು ಸರ್ಕಾರಕ್ಕೆ ಬರ್ದ ಪತ್ರನ ಇಟ್ಕೊಂಡು ನಡಿತಿರ ಹೋರಾಟ ಇದು. ಏಯ್‌ ನೋಡ್ರಪ್ಪ, ಬಾಯಿಲ್ಲಿ” ಅಂತ ಕರೆದು, “ನೀನು ಐದ್ನೆ ಕ್ಲಾಸಾ? ನಾಕ್ನೆ ಕ್ಲಾಸಾ?” ಅಂದ. ನಾನು, ʼಹುʼ” ಎನ್ನುವವನಂತೆ ತಲೆದೂಗಿದೆ. “ಹೌದಾ? ಹೋಗು, ಇನ್ಮೇಲ ಇಂಗ್ಲಿಸ್ ಗಿಂಗ್ಲಿಸ್ ಓದಂಗಿಲ್ಲ, ಬರೀ ಕನ್ನಡ. ನಿನ್ತವು ಇಂಗ್ಲಿಸ್ ಬುಕ್ಸ್ ಇದ್ರ ತೂದು ಬಿಸಾಕಿ ಕನ್ನಡ ಇಟ್ಗ” ಅಂದ. ಅಲ್ಲೊಬ್ಬ ಕೇಳ್ತಿದ್ದವನು “ಇದ್ಕ ರಾಜ್ಕುಮಾರ್ ಯಾಕ್ ಮದ್ಯಕ್ ಬಂದ?” ಅಂತ ಕೇಳಿದ.
ಎಂ. ಜವರಾಜ್‌ ಹೊಸ ಕಾದಂಬರಿ “ಪೋಸ್ಟ್‌ಮ್ಯಾನ್‌ ಗಂಗಣ್ಣ” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ