Advertisement
ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

ಅಮೀರ್ ಬಾಯಿ ಕರ್ನಾಟಕಿ: ಸ್ಫೂರ್ತಿದಾಯಕ ಕೃತಿ

ಮಹಿಳೆಯರಿಗೆ ಬಹುತೇಕ ನಿರಾಕರಿಸಲ್ಪಟ್ಟಿರುವ ಕಲಾಕ್ಷೇತ್ರದ ವಲಯಕ್ಕೆ ಅಮೀರಬಾಯಿಯಂಥ ಅಭಿನಯ ತಾರೆ ಪ್ರವೇಶ ಪಡೆದದ್ದು ಒಂದು ಪವಾಡವೇ ಸರಿ.  ಸಂಪ್ರದಾಯದ ಗೆರೆ ದಾಟಿ, ಅಮೀರ್ ಬಾಯಿ, ಪ್ರತಿಭೆಯನ್ನು ಪೋಷಿಸಲು ಮುಂದಾದರು. ಮುಂಬೈಯ ಎಚ್.ಎಂ.ವಿ ಕಂಪನಿಯು ಅಮೀರಬಾಯಿಯ ಪ್ರತಿಭೆಯನ್ನು ಗುರುತಿಸಿ ಧ್ವನಿ ಮುದ್ರಣಕ್ಕೆ ಕರೆಸಿಕೊಂಡಿತು. ಹದಿನಾರು ವರ್ಷದ ಅಮೀರಬಾಯಿ ಅಲ್ಲಿ ಕವ್ವಾಲಿಯೊಂದನ್ನು ಹಾಡಿದ್ದರು. ನಂತರ ಅವಕಾಶಗಳು ಇವರನ್ನು ಹುಡುಕುತ್ತಾ ಬಂದವು. ಪ್ರೊ. ರಹಮತ್ ತರೀಕೆರೆ ಬರೆದ ಅಮೀರ್ ಬಾಯಿ ಕರ್ನಾಟಕಿ ಕೃತಿಯ ಕುರಿತು ಡಾ. ಸುಮಂಗಲಾ ಮೇಟಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ.

Read More

ಕಂಬಾರರಿಗೆ ಒದಗಿ ಬಂದ ಮತ್ತೊಂದು ಕತೆ ಚಾಂದಬೀ ಸರ್ಕಾರ

ದೇಶಪಾಂಡೆ ಅವರ ಮನೆಯಿಂದ ಖಾನ್ ಇದ್ದ ಸ್ಥಳಕ್ಕೆ ತಲುಪುವತನಕ ಚಾಂದಬೀ ಭೂಮಿಯ ಮೇಲೆ ಕಾಲೂರಲೇ ಇಲ್ಲ. ಕ್ಷಣಕ್ಕೊಮ್ಮೆ ಗರ್ಭವ ಮುಟ್ಟಿ ನೋಡಿಕೊಳ್ಳುತ್ತ ಪ್ರತಿಸಲವೂ ಹೊಸ ಹೊಸದಾಗಿ ಕೃಷ್ಣನ ತಾಯಿ ಯಶೋಧೆಯಾಗಿ ಕನಸು ಕಾಣತೊಡಗಿದಳು. ಖಾನನ ಬಳಿಗೆ ಹೋದೊಡನೆ ದೇಶಪಾಂಡೆ ದಂಪತಿಗಳ ಪ್ರೀತಿ, ಗೌರವಾದರಗಳನ್ನು ಹತ್ತು ಸಲ ಹೇಳಿದಳು. ಬಸಿರಾದ ವಿಷಯವನ್ನು ಹತ್ತು ಬಾರಿ ಹೇಳಿದಳು. ಪ್ರತಿಯೊಂದು ಸಲವೂ ಇದೇ ಮೊದಲನೇ ಸಲವೆಂಬಂತೆ ಪ್ರತಿಸಲವೂ ಹೊಸ ಹೊಸ ವಿವರಗಳೊಂದಿಗೆ ಹೇಳಿದಳು.
ಡಾ. ಚಂದ್ರಶೇಖರ ಕಂಬಾರರ ಹೊಸ ಕಾದಂಬರಿ ‘ಚಾಂದಬೀ ಸರ್ಕಾರ’ದ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ