ನಿರಂಜನ ಕೇಶವ ನಾಯಕ ಬರೆದ ಈ ದಿನದ ಕವಿತೆ
“ನಿಲ್ಲದ ಈ ಓಡಾಟ,
ಸಮಯದೊಂದಿಗಿನ ಈ
ನಿಲ್ಲದ ಸೆಣೆಸಾಟ.
ದೀರ್ಘ ವಿರಾಮ,
ಪ್ರಕೃತಿ ಬರೆದ ನೀತಿ,
ಅನ್ವಯಿಸದು ಅಲೆಗಳಿಗೆ?” -ನಿರಂಜನ ಕೇಶವ ನಾಯಕ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಕೆಂಡಸಂಪಿಗೆ | Sep 4, 2025 | ದಿನದ ಕವಿತೆ |
“ನಿಲ್ಲದ ಈ ಓಡಾಟ,
ಸಮಯದೊಂದಿಗಿನ ಈ
ನಿಲ್ಲದ ಸೆಣೆಸಾಟ.
ದೀರ್ಘ ವಿರಾಮ,
ಪ್ರಕೃತಿ ಬರೆದ ನೀತಿ,
ಅನ್ವಯಿಸದು ಅಲೆಗಳಿಗೆ?” -ನಿರಂಜನ ಕೇಶವ ನಾಯಕ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Sep 2, 2025 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ನನ್ನ ಮಾತಲ್ಲಿ ಆತ್ಮವಿಶ್ವಾಸ, ಸತ್ಯ ಇಲ್ಲ ಅನ್ನುವುದು ತುಂಬಾ ಸ್ಪಷ್ಟವಾಗಿ ನನಗೇ ಗೊತ್ತಾಗುತ್ತಿತ್ತು, ಬಹುಶಃ ಅಮ್ಮನಿಗೂ ಗೊತ್ತಾಗಿದೆ. ನಾನು ಮಾತು ಮುಂದುವರೆಸಲಿಲ್ಲ, ಅಮ್ಮನೂ ಮುಂದುವರೆಸಲಿಲ್ಲ. ಇಬ್ಬರ ಮನದೊಳಗೂ ದುಃಖವೊಂದು ಹೊಯ್ದಾಡುತ್ತಿತ್ತು. ಅಲ್ಲಿ ನೆಲೆ ನಿಂತಿದ್ದ ಮೌನ ನಮ್ಮಬ್ಬರಲ್ಲೂ ಉಸಿರುಗಟ್ಟಿಸುವ ಭಾವ ಹುಟ್ಟಿಸುತ್ತಿತ್ತು. ಅಮ್ಮನ ಕಣ್ಣು ತುಂಬಿಕೊಳ್ಳುತ್ತಿತ್ತು. ನಾನು ತೀರಾ ನಿರ್ಭಾವುಕಳಂತೆ ಅಲ್ಲಿಂದ ಎದ್ದು ಹೋದೆ, ನನಗೆ ಹಾಗೆ ಹೋಗದೆ ಬೇರೆ ದಾರಿಯೇ ಇರಲಿಲ್ಲ. ಯಾಕೆಂದರೆ ಇನ್ನೆರಡೇ ಎರಡು ನಿಮಿಷ ನಾನಲ್ಲಿ ನಿಂತಿದ್ದರೂ ಅಳು ಭೋರ್ಗರೆಯುತ್ತಿತ್ತು.
ಫಾತಿಮಾ ರಲಿಯಾ ಅನುಭವ ಕಥನ “ಕೀಮೋ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ
Posted by ಕೆಂಡಸಂಪಿಗೆ | Aug 30, 2025 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ರವಿಶಂಕರ ಪಾಟೀಲ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದವರಾದ ರವಿಶಂಕರ ಅವರು ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರು. ಸಣ್ಣಕತೆ ಪದ್ಯ ಅವರ ಆಸಕ್ತಿಯ ಸಾಹಿತ್ಯ ಪ್ರಕಾರಗಳು. “ದೃಷ್ಟಿಕೋನ” (2012) ಇವರ ಪ್ರಕಟಿತ ಕಥಾ ಸಂಕಲನ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Aug 28, 2025 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಅಡಿಗೆಮನೆಯಲ್ಲಿ ಇದ್ದ ಕಾಶಿಬಾಯಿ ಒಮ್ಮೆ ಸೂಕ್ಷ್ಮವಾಗಿ ಲಂಕ್ಯಾನನ್ನು ದಿಟ್ಟಿಸಿದಳು. ಆ ನೋಟಕ್ಕೆ ವಶೀಕರಣಗೊಂಡವನಂತೆ ಎದ್ದವನೇ ಮಗ ಹಾಗೂ ಮಗಳನ್ನು ಎಳೆದೆಳೆದು ಸಿಕ್ಕಸಿಕ್ಕಲ್ಲಿ ಮೈಮೇಲೆ ದೆವ್ವ ಬಂದವನಂತೆ ಬಡಿಯತೊಡಗಿದ. ಆ ಇಬ್ಬರೂ ಮಕ್ಕಳು ಬೆನ್ನನ್ನು ಸವರಿಕೊಳ್ಳುತ್ತ ತನ್ನ ತಂದೆ ಯಾಕೆ ಹೊಡೆಯುತ್ತಿದ್ದಾನೆ ಅನ್ನುವ ಅರಿವಿಲ್ಲದೆ ಅಳುತ್ತ ದಿಕ್ಕಿಗೊಂದು ಓಡತೊಡಗಿದರೆ ಹಿಂದೆ ಹಿಂದೆ ಹೋಗಿ ಮನಸ್ಸೋ ಇಚ್ಛೆ ಬೈಯುತ್ತ ಹೊಡೆಯತೊಡಗಿದ. ತಮ್ಮ ಅಜ್ಜಿಯಾಗಲಿ ಇಲ್ಲ ತಮ್ಮ ತಾಯಿಯಾಗಲಿ ಆ ಮಕ್ಕಳ ಸಹಾಯಕ್ಕೆ ಬರದೆ ಸುಮ್ಮನೆ ತಮ್ಮ ಪಾಡಿಗೆ ತಾವಿದ್ದದು, ತಂದೆಯ ಕೈಯಲ್ಲಿ ಅನಾಮತ್ತಾಗಿ ಸಿಕ್ಕಿ ಹೊಡೆಸಿಕೊಂಡಿದ್ದು ನೆನೆಸಿಕೊಂಡು ದುಃಖಿಸುತ್ತ ಮತ್ತಷ್ಟೂ ಅಳತೊಡಗಿದವು.
ಮುದಿರಾಜ್ ಬಾಣದ್ ಕಾದಂಬರಿ “ಸಿಕ್ಕು” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ
Posted by ಕೆಂಡಸಂಪಿಗೆ | Aug 26, 2025 | ದಿನದ ಕವಿತೆ |
“ಬಾಂಬೆ ಬದುಕೆಂಬ
ರಣಭೀಕರ ಮಳೆಗೆ,
ನಾಳೆ ನಮ್ಮದೆನ್ನುವ
ಕನಸೇ ಛತ್ರಿ.
ಉತ್ತರವಿಲ್ಲದ ಪ್ರಶ್ನೆ
ಮರೆತು ನಿದ್ರೆ
ಬಂದರೆ ಸಾಕು,
ಈ ರಾತ್ರಿ!” -ಎಚ್. ವಿ. ಶ್ರೀನಿಧಿ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
