ಮನೆ ಕಟ್ಟುವಾಗ ‘ಸೆಂಟರ್ ಲೈನ್’
ಮನೆ ಕಟ್ಟುವ ಕಾರ್ಯಕ್ರಮ ಪ್ರಾರಂಭವಾಯಿತು. ಒಂದು ದಿನ ಮೇಸ್ತ್ರಿ ಬಂದವನೇ, ‘ಸೆಂಟರ್ ಲೈನ್’ ಕೊಡಿ ಎಂದ.
ನನಗೋ ಹಾಗಂದರೆ ಏನು ಎಂದು ಗೊತ್ತಿಲ್ಲ. ತೇಜಸ್ವಿಯವರನ್ನು ಕೇಳಿದೆ. ‘ನನಗೂ ಗೊತ್ತಿಲ್ಲ ಶಿವ’ ಎಂದರು. ಬೇರೆಯವರನ್ನು ಕೇಳಿದರೆ ಎಲ್ಲಿ ಏನಂದುಕೊಳ್ಳುತ್ತಾರೋ ಎಂಬ ನಾಚಿಕೆ. ಮೇಸ್ತ್ರಿಯನ್ನು ಕರೆದು ಕೂರಿಸಿಕೊಂಡು ಒಂದು ವಾರ ತಡೆಯಿರಿ ಎಂದೆ. ಸಾಕಷ್ಟು ಪುಸ್ತಕ ರೆಫರ್ ಮಾಡಿಕೊಂಡೆ. ನಾನು ಕೂಡ ಎಂಜಿನಿಯರ್ ಓದಿದ್ದರಿಂದ ಬೇಗ ಕಂಡು ಹಿಡಿದುಕೊಂಡೆ. ಅವರ ಕಲ್ಪನೆಯಂತೆ ಮನೆ ಶುರು ಮಾಡಿ ಬೇಗವೇ ಮುಗಿಸಿದೆವು.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್ ಹೆತ್ತೂರು ಕೃತಿ “ಶಿವ ಮೇಡ್ ಬೈ ತೇಜಸ್ವಿ”ಯ ಆಯ್ದ ಭಾಗ

