ಈ ಮಾಣಿ ಎಂತಕ್ಕೂ ಪ್ರಯೋಜನವಿಲ್ಲ…
ಅಜ್ಜ ಬಲಿಪರು ಪದ್ಯ ಹೇಳಿಕೊಡುತ್ತಿದ್ದ ಶೈಲಿ ಅನನ್ಯವಾದದ್ದು, ಇನ್ನೊಬ್ಬರು ಅನುಸರಣೆ ಮಾಡಲಾಗದ್ದು. ಪದ್ಯವನ್ನು ಬಾಯಿಯಲ್ಲಿ ಹೇಳುತ್ತಾ ಎರಡೂ ಕೈಯ್ಯಲ್ಲಿ ಪದ್ಯದ ಛಂದೋಗತಿಯನ್ನು ತೋರಿಸುತ್ತಾ ಇರುವಂತೆಯೋ ಎನ್ನುವಂತೆ ಅಥವಾ ಪದ್ಯ ನಿಬದ್ಧವಾದ ತಾಳದ ಘಾತಗಳನ್ನು ಹಸ್ತದ ಬೀಸುವಿಕೆಯಿಂದ ತೋರಿಸುತ್ತಾ ಹೇಳಿಕೊಡುತ್ತಿದ್ದರು.
ಇದರಿಂದ ಸಹಜವಾಗಿ ಅವರ ಶರೀರದ ಭಾಷೆಯೂ ಶಾರೀರದ ಭಾಷೆಯೂ ಕಲಿಯುತ್ತಿರುವ ಮೊಮ್ಮಗ ಕಿರಿಯ ಬಲಿಪರಲ್ಲಿ ಹಾಡಿನ ಅಂತರ್ಯವಾದ