Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳು: ಎಂ.ವಿ ಶಶಿಭೂಷಣ ರಾಜು ಅಂಕಣ

ಹೀಗೆ ಹೊತ್ತಿಲ್ಲದ ಹೊತ್ತಿನಲ್ಲಿ ಕೆಲಸಮಾಡುವುದರಿಂದ, ಓಡಾಡಲು ಸ್ವಂತ ವಾಹನ ಇಲ್ಲದಿರುವುದರಿಂದ, ರೈಲು, ಬಸ್ಸುಗಳಲ್ಲಿ ಅಥವಾ ನಡೆದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಬೇಕಾಗಿರುವುದರಿಂದ, ಕೆಲವು ಅನಾಹುತಗಳಿಗೆ ತೆರೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದೇ ಹೆಚ್ಚಿನ ಅನಾಹುತಗಳಿಗೆ ಕಾರಣ. ಇದು ಭಾರತೀಯ ವಿದ್ಯಾರ್ಥಿಗಳೇ ಅಲ್ಲ, ಎಲ್ಲಾ ದೇಶಗಳ ವಿದ್ಯಾರ್ಥಿಗಳಿಗೂ ಜರುಗುತ್ತದೆ.
ಎಂ.ವಿ. ಶಶಿಭೂಷಣ ರಾಜು ಅಂಕಣ

Read More

ವಿದೇಶಿ ನೆಲದಲ್ಲಿ ಸ್ವದೇಶಿಗರ ಬದುಕಿನ ಪಾಡು: ಎಂ.ವಿ. ಶಶಿಭೂಷಣರಾಜು ಅಂಕಣ

ಕೆಲವರು, ಭಾರತಕ್ಕೆ ಬಂದಾಗ ತಾವು ಯಾವುದೇ ಕೆಲಸವೇ ಮಾಡದವರ ಹಾಗೇ ಕಾಣಿಸಿಕೊಂಡು ಮನೆಗಳಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ. ಇನ್ನು ಹೊರಗಡೆ ಬಂದಾಗ ತಾವು ಅಮೇರಿಕಾದಿಂದ ಬಂದವರು ಎಂದು ಹೇಗೆ ಎದುರಿನವರಿಗೆ ತಿಳಿಸುವುದು ಎಂದು ಹೆಣಗಾಡುತ್ತಾರೆ. ಇನ್ನು ಬಸ್ಸು ಅಥವಾ ರೈಲುಗಳಲ್ಲಿ ಪ್ರಯಾಣಮಾಡುವಾಗ ಸಹಪ್ರಯಾಣಿಕರ ಜೊತೆ ಸಂಭಾಷಣೆ ಶುರುವಾದರೆ, ತಮ್ಮ ಅಮೇರಿಕಾ ಜ್ಞಾನ ಹೊರಹಾಕುತ್ತಾರೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

Read More

ಗ್ರೀನ್ ಕಾರ್ಡ್ ಎನ್ನುವ ದೇವರು: ಎಂ.ವಿ. ಶಶಿಭೂಷಣ ರಾಜು ಅಂಕಣ

ಎಷ್ಟೋ ಸಲ ಸ್ವದೇಶಕ್ಕೆ ಹಿಂತಿರುಗುವ ಎನ್ನುವ ಅನಿಸಿಕೆ ಮೂಡುತ್ತದೆ, ಅದೊಂದು ಅನಿಸಿಕೆ ಅಷ್ಟೆ. ಅಮೇರಿಕಾದ ಜೀವನ ಶೈಲಿ, ಉತ್ತಮ ಜೀವನ, ತಮ್ಮ ಪಾಡಿಗೆ ತಾವು ಜೀವಿಸಲು ಇರುವ ಪ್ರಾಮುಖ್ಯತೆ, ಸರ್ಕಾರಿ ಕಚೇರಿಗಳಲ್ಲಿ ಇರದ ಲಂಚದ ಹಾವಳಿ, ಗುಣಮಟ್ಟದ ಆಹಾರ, ಎಲ್ಲಕಿಂತ ಹೆಚ್ಚಾಗಿ ತವರಲ್ಲಿ ಸಿಗುವ ಗೌರವ ಮುಂತಾದುವುಗಳನ್ನು ಬಿಡಲು ಮನಸಾಗದೆ ಅಮೆರಿಕೆಯಲ್ಲಿಯೇ ಕೊನೆಯವರೆಗೂ ಜೀವನ ಸಾಗುವುದು.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ”

Read More

ದುಡಿದಷ್ಟೂ ಖರ್ಚು…: ಶಶಿಭೂಷಣ ರಾಜು ಅಂಕಣ

ಭಾರತೀಯರಿಗೆ ಹೆಚ್ಚು ಕಾಟ ಕೊಡುವುದು ಇಲ್ಲಿನ ಹವಾಮಾನ. ತಂಪಿನ ರಾಜ್ಯಗಳಲ್ಲಿ ನೆಲೆಸುವವರಿಗೆ ಹೆಚ್ಚು ಹಿಂಸೆ. ಬೇಸಿಗೆಯಲ್ಲಿ ಬಿಸಿ ಹೆಚ್ಚಿದ್ದರೂ ತಾಳಬಹದು, ಆದರೆ ಚಳಿಗಾಲದಲ್ಲಿ ಅತೀ ಹೆಚ್ಚಿನ ಚಳಿ ಇರುತ್ತದೆ. ಕೆಲವು ರಾಜ್ಯಗಳಲ್ಲಿ ಹಿಮ ಸುರಿಯುತ್ತದೆ. ಮನೆಯಲ್ಲಿ, ಕಾರಿನಲ್ಲಿ, ಅಂಗಡಿಗಳಲ್ಲಿ, ಕಚೇರಿಗಳಲ್ಲಿ ಹೀಟರ್ ಇರುವುದರಿಂದ ಪರ್ವಾಗಿಲ್ಲ, ಆದರೆ ಹೊರಗಡೆ ಹೆಚ್ಚಿನ ಸಮಯ ಕಳೆಯುವುದು ಕಷ್ಟ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ”

Read More

ಕಾನೂನು ಮತ್ತು ಕಾಗದದ ಗಂಡ-ಹೆಂಡತಿ: ಎಂ.ವಿ. ಶಶಿಭೂಷಣ ರಾಜು

ಅವಳ ಅಮೇರಿಕೆಗೆ ಬರುವ ಹಿಂದೆ ಒಂದು ಕಥೆ ಇದೆ. ಅಮೇರಿಕಾಗೆ ತುಂಬಾ ಹಿಂದೆ ಬಂದು ಈಗ ನಾಗರೀಕನಾಗಿರುವ ಹುಡುಗ ಮೆಕ್ಸಿಕೋಗೆ ಬಂದು ಅಕ್ಕನನ್ನು ಮದುವೆಯಾಗಿ ಅಮೇರಿಕಾಗೆ ಕರೆತರುತ್ತಾನೆ. ಅಕ್ಕನಿಗೆ ಅವನ ಮೂಲಕ ಒಂದು ವರುಷದಲ್ಲಿ ಶಾಶ್ವತವಾಗಿ ನೆಲೆಸಲು ಗ್ರೀನ್ ಕಾರ್ಡ್ ಸಿಗುತ್ತದೆ . ಅದಾದನಂತರ ಅವ ಅಕ್ಕನಿಗೆ ವಿಚ್ಚೇದನ ನೀಡುತ್ತಾನೆ.
ಎಂ.ವಿ. ಶಶಿಭೂಷಣ ರಾಜು ಬರೆಯುವ “ಅನೇಕ ಅಮೆರಿಕಾ” ಅಂಕಣ

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ