Advertisement

ಮಾಲಾ ಮ. ಅಕ್ಕಿಶೆಟ್ಟಿ

ಸುಂದರ ಕಾಡಿನ ರೋ‌ಚಕ ಕಥೆಗಳು-೭: ರೂಪಾ ರವೀಂದ್ರ ಜೋಶಿ ಸರಣಿ

ಆ ಎಮ್ಮೆಗಳೇನಾದರೂ ಅದನ್ನು ಓಡಿಸಿರದಿದ್ದರೆ ಆಯಿಯ ಗತಿ ಏನಾಗುತ್ತಿತ್ತೋ ಏನೋ. ನೆನೆಸಿಕೊಂಡರೆ, ಈಗಲೂ ಮೈ ಅದುರುತ್ತದೆ. ಆಯಿ ಯಾವಾಗಲೂ ಎಮ್ಮೆ, ದನಗಳನ್ನು ಅಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. “ಆಯಿಗೆ ನಮಗಿಂತಲೂ ಎಮ್ಮೆಯ ಮೇಲೆ ಹೆಚ್ಚು ಪ್ರೀತಿ” ಎಂದು ನಾವು ಯಾವಾಗಲೂ ತಮಾಷೆ ಮಾಡಿದರೆ, ಆಯಿ “ಹೌದು, ಅವು ಮೂಕ ಪ್ರಾಣಿಗಳು. ನಿಮ್ಮಂತೆ ಬಾಯಿ ಬಿಟ್ಟು ಬೇಕಾದ್ದನ್ನು ಕೇಳಲಿಕ್ಕೆ ಆಗೋದಿಲ್ಲ. ನಾವೇ ತಿಳಿದು ಕೊಟ್ಟರೆ ತಿಂತಾವೆ ಪಾಪ” ಎನ್ನುತ್ತಿದ್ದಳು. ಹೀಗೆ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಂದ ಎಮ್ಮೆಗಳನ್ನು ಸಾಕಿದ್ದಕ್ಕೂ ಸಾರ್ಥಕವಾಯ್ತು ಎನ್ನುವಂತೇ ಅವತ್ತು ಅವು ಆಯಿಯ ಪ್ರಾಣ ಕಾಪಾಡಿದ್ದವು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನಾರನೆಯ ಕಂತು

Read More

ಸುಂದರ ಕಾಡಿನ ರೋಚಕ ಕಥೆಗಳು (೬): ರೂಪಾ ರವೀಂದ್ರ ಜೋಶಿ ಸರಣಿ

ಬೆಟ್ಟದ ಬಲಬದಿಯ ಕಿರುದಾರಿ ಹಿಡಿದು ಸಾಗಿದರೆ, ಅಲ್ಲೊಂದು ನೆಲ್ಲಿ ಮರ. ಅದರ ಬುಡದಲ್ಲಿ ನಮ್ಮ ನಾಯಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದುಕೊಂಡಿದೆ. ನಾನು ಗಾಬರಿಯಿಂದ ಜೋರಾಗಿ ಅಳತೊಡಗಿದೆ. ಯಾರೋ ರಾತ್ರಿ ಅಲ್ಲಿರುವ ಪೊದೆಯಲ್ಲಿ ನಾಡ ಬಾಂಬು ಇಟ್ಟಿದ್ದಾರೆ! ಮಾಂಸದ ವಾಸನೆಗೆ ಮರುಳಾಗಿ, ಅದು ಆ ಬಾಂಬನ್ನು ಬಯಲಲ್ಲಿ ತಂದಿಟ್ಟುಕೊಂಡು ಇಡಿದಾಗಿ ಕಚ್ಚದೆ, ಮೆಲ್ಲಗೆ ಒಂದು ಮೂಲೆಯನ್ನು ಬಿಡಿಸಿದೆ. ಅದಕ್ಕೇ ಸ್ವಲ್ಪಭಾಗ ಸಿಡಿದು, ಅದರ ಮೇಲ್ದವಡೆ ಸ್ವಲ್ಪ ಸೀಳಿತ್ತು. ಬಾಯೆಲ್ಲ ರಕ್ತ ಸಿಕ್ತ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನೈದನೆಯ ಕಂತು

Read More

ಸುಂದರ ಕಾಡಿನ ರೋಚಕ ಕಥೆಗಳು-5: ರೂಪಾ ರವೀಂದ್ರ ಜೋಶಿ ಸರಣಿ

ನಮ್ಮಲ್ಲಿ ತಂಪು ಜಾಸ್ತಿಯಾದ್ದರಿಂದ ಹಾವುಗಳು ಹೆಚ್ಚಾಗಿ ಇರಲಿಲ್ಲವೆನ್ನಿಸುತ್ತದೆ. ಒಂದು ನಿರುಪದ್ರವಿ ಹಾವಿನ ಬಗ್ಗೆ ಹೇಳಬೇಕು ಅದೆಂದರೆ ಹಸಿರು ಹಾವು. ಹಸಿರು ದಂಟಿಗೆ ಸುತ್ತಿಕೊಂಡು, ಸಪೂರ ಕೋಲಿನಂತೇ ಡೊಂಕಾಗಿ ನಿಂತು ಹುಳ ಹುಪ್ಪಡಿ ಹಿಡಿಯುವ ಈ ಹಾವನ್ನು ಗುರುತಿಸುವುದೇ ಕಷ್ಟ. ನಾವೇ ಅದೆಷ್ಟೋ ಸಲ, ಮುಳ್ಳಣ್ಣು ಕೊಯಿದು ಕೊಳ್ಳುವಾಗಲೋ, ಜಾಜಿ ಹೂ ಕೊಯ್ಯುವಾಗಲೋ ಟೊಂಗೆಯ ಜೊತೆಗೇ ಎಳೆದು ಬಿಡುತ್ತಿದ್ದೆವು. ಆಗ ಅದು ಗಾಬರಿಬಿದ್ದು, ಸರಕ್ಕನೆ ಕೆಳಗಿಳಿದು ಓಡುತ್ತಿತ್ತು. ಅದು ಹೋಗಿ ಎಷ್ಟು ಹೊತ್ತಿನ ತನಕ, ನಾವು ಜೀವ ಬಾಯಿಗೆ ಬಂದವರಂತೇ ಭಯದಿಂದ ಇಷ್ಟಗಲ ಕಣ್ಣುಮಾಡಿ ಮಾತು ಮರೆತು ನಿಂತಿರುತ್ತಿದ್ದೆವು!!
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಸುಂದರ ಕಾಡಿನ ರೋಚಕ ಕಥೆಗಳು-4: ರೂಪಾ ರವೀಂದ್ರ ಜೋಶಿ ಸರಣಿ

ಇನ್ನೊಂದು ಎಂಟು ಹತ್ತು ಮಾರು ದೂರ ಸಾಗಿದರೆ, ಆ ದಾರಿ ಸಿಗುತ್ತಿತ್ತು. ನಾನು ರಸ್ತೆಗುಂಟ ಓಡುತ್ತ ಬರುತ್ತಿದ್ದೆ. ಮಬ್ಬುಗತ್ತಲು ಬೇರೆ. ಸುಮಾರು ನಾಲ್ಕುಮಾರು ದೂರದಲ್ಲಿ, ರಸ್ತೆಯ ನಡುವೆ ಒಂದು ಕಪ್ಪು ಆಕಾರ ಕೆಟ್ಟರೂಪದಲ್ಲಿ ಕೂಗುತ್ತ ಇಷ್ಟೆತ್ತರ ಎದ್ದು ನಿಂತಿತು. ಅದು ಕರಡಿ ಎಂದು ಒಂದು ಅಂದಾಜಿನಲ್ಲಿ ನಾನು ಗುರುತಿಸಿ, ನಡುಗಿ ಹೋದೆ. ಒಂದು ಕ್ಷಣ ಏನೂ ಮಾಡಲೂ ತೋಚಲಿಲ್ಲ. ನನ್ನ ಎಡಕ್ಕೆ ಒಂದು ಚಿಕ್ಕ ಕಾಲುದಾರಿ ಕಂಡಿತು. ಅದು ನಮ್ಮನೆಗೆ ಹೋಗುವ ದಾರಿ ಅಲ್ಲವೆಂದು ಗೊತ್ತಿದ್ದರೂ ಅನಿವಾರ್ಯವಾಗಿ ಅದೇ ದಾರಿ ಹಿಡಿದು ಓಡತೊಡಗಿದೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಸುಂದರ ಕಾಡಿನ ರೋಚಕ ಕಥೆಗಳು ಭಾಗ -೩: ರೂಪಾ ರವೀಂದ್ರ ಜೋಶಿ ಸರಣಿ

ಈ ಹೂವು ಪಾರಿಜಾತದಂತೇ ತಾನೇ ತಾನಾಗಿ ಮರದಿಂದ ಉದುರುವಂಥದ್ದು. ಅದಕ್ಕೇ ನಾವೆಲ್ಲಾ ಬೆಳಗ್ಗೆ ಬೇಗನೆ ಎದ್ದು, ಮುಖ ತೊಳೆದವರೇ, ಆ ಮರದತ್ತ ಓಡುತ್ತಿದ್ದೆವು. ಕಾರಣ, ಬೇರೆಯವರು ಬಂದು ಆರಿಸಿಕೊಂಡರೆ? ಎಂಬ ಆತಂಕ ಒಂದು ಇರುತ್ತಿತ್ತಲ್ಲಾ… ಓಡುತ್ತ ಹೋದವರೇ, ಮರದ ಬುಡಕ್ಕೆ ಬಿದ್ದ ಹೂವನ್ನು ಆರಿಸಿ, ಕಾಡು ಎಲೆಗಳ ಕೊಟ್ಟೆ ಮಾಡಿ ಅದರಲ್ಲಿ ತುಂಬಿಕೊಳ್ಳುತ್ತಿದ್ದೆವು. ಪುಟ್ಟ ವೃತ್ತಕಾರದ ಈ ಹೂವಿಗೆ ಸುತ್ತಲೂ ಕಣ್ಣು ರೆಪ್ಪೆಯಂಥ ಸೂಕ್ಷ್ಮವಾದ ಬೆಳ್ಳನೆಯ ಚೂಪನೆಯ ಎಸಳುಗಳು. ಮಧ್ಯದಲ್ಲಿ ಒಂದು ರಂದ್ರ. ಹಿಂಭಾಗ ಗುಮ್ಮಟೆಯಂತೆ ಇರುತ್ತದೆ. ಅದರ ಸುಗಂಧ ಅದ್ಭುತ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹನ್ನೆರಡನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ