Advertisement

ಕೆ. ಸತ್ಯನಾರಾಯಣ

ನೆಮ್ಮದಿ ಎಂಬ ಕಾಂಚನ ಮೃಗದ ಬೆನ್ನಟ್ಟಿ

ನೆಮ್ಮದಿಯ ಬದುಕು ಎಲ್ಲರ ಕನಸೂ ಹೌದು. ಆದರೆ ನಾವು ಕಟ್ಟಿಕೊಂಡಿರುವ ಆಸೆಯ ಸೌಧದ ನಿರ್ಮಾಣ ಮುಗಿಯುವುದೇ ಇಲ್ಲ. ದಿನ ದಿನಕ್ಕೋ, ಇಲ್ಲ ಕ್ಷಣ ಕ್ಷಣಕ್ಕೋ ಅದರ ಗೋಡೆಗೆ ಇಟ್ಟಿಗೆ ಜೋಡಿಸುತ್ತಲೇ ಹೋಗುವವರು ನಾವು. ನಮ್ಮನೆಗೆ ಎರಡು ರೂಮು ಸಾಕೆನ್ನಿಸಿದರೂ, ಯಾವತ್ತೋ ಬಂದು ಹೋಗುವ ನೆಂಟರಿಗೊಂದು ಪ್ರತ್ಯೇಕ ಕೋಣೆ ಬೇಡವಾ ಎನ್ನುತ್ತದೆ ಮನಸ್ಸು. ರೂಪಶ್ರೀ ಕಲ್ಲಿಗನೂರ್‌ ಬರಹ

Read More

ಹುಲಿ ಚಿರತೆಗಳ ಹುಡುಕಾಡುತ್ತ ಕಬಿನಿ ಅರಣ್ಯದಲ್ಲಿ..

ಸಫಾರಿಯ ಹುಮ್ಮಸ್ಸು ಎಲ್ಲರಲ್ಲಿಯೂ ಇತ್ತು. ಗಾಡಿಯಲ್ಲಿ ಕುಳಿತವರಲ್ಲಿ ಒಂದಷ್ಟು ಜನ ಆಗಲೇ “ಟೈಗರ್… ಟೈಗರ್…” ಎಂಬ ಜಪ ಮಾಡಲು ಆರಂಭಿಸಿದ್ದರು. ನಾವು ಕುಳಿತಿದ್ದ ಗಾಡಿ ಕಾಡ ಗೇಟಿನ ಒಳಗೆ ನುಗ್ಗಿ ಕಾಲು ಕಿಲೋಮೀಟರ್‌ ಸಾಗಿತ್ತಷ್ಟೇ.. ದೂರದಲ್ಲಿ ಚಿರತೆಯೊಂದು ಕಾಣಿಸಿತು. ಗಾಡಿ ಅದರತ್ತ ಮೆಲ್ಲಗೆ ತೆರಳಿ ನಾವೆಲ್ಲ ಅದನ್ನು ಕಣ್ಣು-ಕ್ಯಾಮರಾ ಕಣ್ಣಿನೊಳಗೆ ತುಂಬಿಕೊಳ್ಳಬಹುದೇನೋ ಅಂತ ಆಸೆಪಟ್ಟುಕೊಳ್ಳುವಷ್ಟರಲ್ಲಿ ಗಾಡಿಯ ಚಾಲಕ ಅತೀ ಉತ್ಸಾಹದಲ್ಲಿ ಗಾಡಿ ಅದರತ್ತ ಚಲಾಯಿಸಿದ. ವನ್ಯಜೀವಿ ದರ್ಶನಕ್ಕಾಗಿ ಪ್ರವಾಸ ಹೊರಟ ಅನುಭವವನ್ನು ನವಿರಾಗಿ ಬರೆದಿದ್ದಾರೆ ರೂಪಶ್ರೀ ಕಲ್ಲಿಗನೂರ್

Read More

ಹಾರಲು ತವಕಿಸುವ ಮನಸ್ಸಿಗೆ ಪ್ರವಾಸವೆಂಬ ರೆಕ್ಕೆಯಿರಲಿ

ಎಲ್ಲ ಹಕ್ಕಿಗಳಂತೆಯೇ ನನ್ನ ಕಣ್ಣಿಗೆ ಕಾಣಿಸಿದ ಆ ಹಕ್ಕಿ ವಿಶೇಷವಾದುದು ಎಂದು ನನಗೇನೂ ಗೊತ್ತಿರಲಿಲ್ಲ. ಜೀವನದಲ್ಲಿ ಎಷ್ಟೋ ಬಾರಿ ಹೀಗೆಯೇ ಆಗುತ್ತದೆ. ನಮ್ಮೊಡನೆ ಇರುವ ಯಾವುದೋ ವಿಷಯದ ವಿಶೇಷತೆ, ಇನ್ಯಾರೋ ಹೇಳಿದಾಗಲೇ ಅರಿವಾಗುವುದು. ಹಕ್ಕಿಗಳೋ ಸದಾ ವಿಶೇಷ ಕತೆಗಳನ್ನು ತಿಳಿದಿರುತ್ತವೆ. ಯಾಕೆಂದರೆ ಪ್ರವಾಸ ಎಂಬುದು ಅವುಗಳಿಗೆ ವಿಶೇಷವೇ ಅಲ್ಲ. ಆದರೆ ಮನುಷ್ಯರು ಮಾತ್ರ ಪ್ರವಾಸ ಹೋಗಬೇಕಾದರೆ..

Read More

ಅವರವರ ತಟ್ಟೆ ಅವರವರ ಹೊಟ್ಟೆ..

ದಿನ ಬೆಳಗಾದರೆ ನಮ್ಮ ಮನೆಗೆ ಹಾಜರಾಗಲು ಕಾತರದಿಂದ ಕಾಯುವ ಪುಟಾಣಿಗಳಿಬ್ಬರೂ ಆವತ್ತು ಮನೆಯೊಳಗೆ ಬರಲು ಹಿಂದುಮುಂದು ನೋಡುತ್ತಿದ್ದರು. ಹೊರಗೆ ನಿಂತುಕೊಂಡೇ ಮಾತಾಡ್ತೀವಿ ಅನ್ನೋ ತರ ಅವರ ದೇಹಭಾಷೆ ಇತ್ತು.. ನಮಗೆ ಅನುಮಾನ ಬರುವಷ್ಟರಲ್ಲಿ ಅವರೇ, ‘ಅಮ್ಮಾ ಹೇಳಿದಾರೆ, ಇವತ್ತು ನಾವು ಪೋರ್ಕ್‌ ತಿಂದಿದ್ದೀವಿ, ಅದಕ್ಕೆ ನಿಮ್ಮನೆಯೊಳಗೆ ಬರ್ಬಾರ್ದುʼ ಅನ್ನುತ್ತ ಹಲ್ಲುಬಿಟ್ಟರು. ‘ಏ.. ಹಾಗೆಲ್ಲ ಹೇಳ್ಬಾರ್ದು.. ಬನ್ನಿ ಒಳಗೆʼ ಅಂತಂದೆವು.”

Read More

ಸ್ವಾಭಿಮಾನಕ್ಕೆ ಅಂತಸ್ತಿನ ಗಡಿರೇಖೆಗಳುಂಟೆ!

“ಆಕೆಯದ್ದು ವಿಚಿತ್ರ ಸ್ವಭಾವ. ಅಮ್ಮ ಹೇಳಿರುತ್ತಿದ್ದ ಸಮಯಕ್ಕೆ ಯಾವತ್ತೂ ಬಂದಿದ್ದು ನನಗೆ ನೆನಪಿಲ್ಲ. ತನಗೆ ಬಿಡುವಾದಾಗಲೇ ಆಕೆ ಕೆಲಸಕ್ಕೆ ಬರೋದು. ಹಾಗಂತ ಕಡಿಮೆ ದುಡ್ಡಿಗೆ, ಚೌಕಾಸಿಗೆ ಬರುವ ಹೆಂಗಸೂ ಆಕೆಯಲ್ಲ. ಹಾಗೇನಾದ್ರೂ ಕೇಳಿದ್ರೆ ‘ಆಯ್ತು, ಎಲ್ಡು ಬಟ್ಟೆ ಕಮ್ಮಿ ಒಕ್ಕೊಡ್ತೀನಿ.. ಸುಮ್ಮನಿರ್ತಾರಾ…ʼ ಅಂತ ಸೀದಾ ಕೇಳಿಬಿಡುವವಳು. ಹಾಗಾಗಿ ಅವಳ ಈ ಸ್ವಭಾವ ಸಹಿಸಿಕೊಳ್ಳುವವರು ಅಥವಾ ಅನಿವಾರ್ಯವಿದ್ದವರು ಮಾತ್ರವೇ ಅವಳನ್ನು ಕೆಲಸಕ್ಕೆ ಕರೆಯುತ್ತಿದ್ದರು. …”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ